Ramachari: ವೈಶಾಖ ತೋಡಿದ ಹಳ್ಳಕ್ಕೆ ಬಿದ್ದ ರಾಮಾಚಾರಿ: ಖುಷಿ ಮೊಬೈಲ್‌ನಲ್ಲಿದೆ ರಹಸ್ಯ

By ಶೃತಿ ಹರೀಶ್ ಗೌಡ

ಚಾರು ಈಗ ರಾಮಾಚಾರಿಗೆ ಫೋನ್ ಮಾಡಿ ಮಂಜುನಾಥ ದೇವಸ್ಥಾನಕ್ಕೆ ನಾಲ್ಕು ಗಂಟೆಗೆ ಬರಬೇಕು ಎಂದು ತಾಕೀತು ಮಾಡಿದ್ದಾಳೆ. ರಾಮಾಚಾರಿ ಫೋನ್‌ನಲ್ಲೇ ಅದೇನು ವಿಷಯ ಹೇಳಿ ಎಂದರೂ ಸಹ ಚಾರು ಮಾತ್ರ ರಾಮಾಚಾರಿ ಬಳಿ ಏನು ಹೇಳುತ್ತಿಲ್ಲ. ನೀನು ದೇವಸ್ಥಾನದ ಬಳಿ ನಾಲ್ಕು ಗಂಟೆಗೆ ಬಾ ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ್ದಾಳೆ.

ರಾಮಾಚಾರಿಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಿದ್ದನ್ನು ಕೇಳಿಸಿ ಕೊಂಡು ಅದಕ್ಕೆ ಬಂದ ಶ್ರುತಿ ಏನು, ಯಾರದು? ಫೋನ್ ಎಂದು ಕೇಳಿದ್ದಾಳೆ. ಇದಕ್ಕೆ ಚಾರು ಫೋನ್ ಮಾಡಿದ್ದಾಳೆ ಎಂದು ಹೇಳಿದ್ದಾನೆ. ನೀನು ಯಾವುದೇ ಕಾರಣಕ್ಕೂ ಚಾರು ಜೊತೆ ಸಂಬಂಧ ಮುಂದುವರಿಸಬೇಡ, ಆ ಸಂಬಂಧ ಕಡಿದುಕೋ ಎಲ್ಲರಿಗೂ ನೋವು ಮಾಡುವ ಸಂಬಂಧವನ್ನು ಕಳೆದುಕೊಂಡರೆ ಯಾವುದೇ ರೀತಿಯಲ್ಲಿ ಕರ್ಮ ಬರುವುದಿಲ್ಲ ಎಂದು ತನ್ನ ಅಣ್ಣನಿಗೆ ಶ್ರುತಿ ಹೇಳಿದ್ದಾಳೆ.

Colors Kannada Ramachari serial Written Update on june 6th episode

ಆದರೆ ರಾಮಾಚಾರಿ ಮನಸ್ಸಿನಲ್ಲಿ ನಾನು ಯಾವುದೇ ಭಾವನೆ ಇಲ್ಲದೇ ತಾಳಿಯನ್ನ ಕಟ್ಟಿರಬಹುದು ಆದರೆ ಹೆಂಡತಿ ಎಂದು ಒಪ್ಪಿಕೊಂಡು ಆಗಿದೆ. ಯಾವುದೇ ಕಾರಣಕ್ಕೂ ನಾನು ಚಾರು ಕೈ ಬಿಡುವುದಿಲ್ಲ ತಾಳಿ ಸಂಬಂಧವನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾನೆ. ನಾನು ಚಾರು ಕೈ ಬಿಟ್ಟು ಬಿಟ್ಟರೆ ಅದು ಶೋಭೆ ತರುವುದಿಲ್ಲ. ನನ್ನ ಹೆಂಡತಿ ಚಾರುನೇ ಎಂದುಕೊಂಡು ಅಲ್ಲಿಂದ ಹೊರಟಿದ್ದಾನೆ.

ವೈಶಾಖ ಪ್ಲ್ಯಾನ್‌ನಲ್ಲಿ ಬಿದ್ದ ರಾಮಾಚಾರಿ

ರಾಮಾಚಾರಿ ಈಗ ವೈಶಾಖ ಮಾಡಿದ ಪ್ಲಾನ್‌ಗೆ ಬಲಿಕಾ ಬಕ್ರಾ ಆಗಿದ್ದಾನೆ. ಏನು ತಿಳಿಯದೇ ಹಿಂದು ಮುಂದು ಯೋಚನೆ ಕೂಡ ಮಾಡದೇ ಚಾರು ಹೇಳಿರುವ ಸ್ಥಳಕ್ಕೆ ರಾಮಾಚಾರಿ ಹೋಗುತ್ತಿದ್ದಾನೆ. ಈ ಕಡೆ ಕೊರವಂಜಿ ಮಾತು ನಂಬಿದ ಚಾರುಲತಾ, ಕೊರವಂಜಿ ಹೇಳಿದಂತೆ ಅಗ್ನಿಕುಂಡಕ್ಕೆ ಸಿದ್ಧತೆಯನ್ನೆಲ್ಲ ಮಾಡುತ್ತಿದ್ದಾಳೆ. ವಿಡಿಯೋ ಮಾಡಲು ಕಾದಿರುವ ಖುಷಿ ದೇವಸ್ಥಾನವನ್ನ ತಲುಪಿ ಚಾರು ಮಾಡುತ್ತಿರುವ ಸಿದ್ಧತೆ ನೋಡಿ ಖುಷಿಪಡುತ್ತಿದ್ದಾಳೆ.

Colors Kannada Ramachari serial Written Update on june 6th episode

ಚಾರುಗೆ ತನ್ನ ಮದುವೆ ಜೀವನ ರಾಮಾಚಾರಿ ಜೊತೆ ಸುಖವಾಗಿರಬೇಕು ಎಂದುಕೊಂಡು ಕೊರವಂಜಿ ಹೇಳಿದಂತೆ ಪ್ರತಿಯೊಂದು ಮಾಡುತ್ತಿದ್ದಾಳೆ. ಪೂಜೆಗೆ ಸಾಮಗ್ರಿಗಳನ್ನೆಲ್ಲ ಸಿದ್ದ ಮಾಡಿಕೊಂಡಿದ್ದಾಳೆ, ಇದರ ಜೊತೆಗೆ ರಾಮಾಚಾರಿಯ ಕಾಲನ್ನು ತೊಳೆಯಲು ತಟ್ಟೆ ಹಾಗೂ ಮಣಿಯನ್ನು ತಂದಿದ್ದು ಅಗ್ನಿಕುಂಡಕ್ಕೆ ಸೌದೆಯನ್ನು ಹಾಕಿ ಬೆಂಕಿಯನ್ನು ಹಚ್ಚಿದ್ದಾಳೆ. ಇನ್ನೇನು ರಾಮಾಚಾರಿ ಬರುವ ದಾರಿಯನ್ನೇ ಕಾದು ಕುಳಿತಿದ್ದಾಳೆ.

ಕೊನೆಗೂ ಗೆದ್ದಿತು ಚಾರು ಹಠ

ಚಾರು ಹಠ ಮಾಡಿ ರಾಮಾಚಾರಿಯನ್ನು ಒಪ್ಪಿಸಿ ಪೂಜೆಯನ್ನು ಮಾಡುತ್ತಿದ್ದಾಳೆ. ಮೊದಲು ಪಾದ ಪೂಜೆಯನ್ನ ಮಾಡಿದ ನಂತರ ತಾಳಿಗೆ ಅರಿಶಿಣ ಕುಂಕುಮವನ್ನು ಹೆಚ್ಚಿಸಿಕೊಂಡು ಕಣ್ಣಿಗೆ ಒತ್ತಿಕೊಂಡಿದ್ದಾಳೆ. ಅಗ್ನಿಕುಂಡದ ಸುತ್ತಲೂ ಸಪ್ತಪದಿಯನ್ನ ತುಳಿದು ಏಳು ಹೆಜ್ಜೆ ಇಟ್ಟಿದ್ದಾಳೆ.

ರಾಮಾಚಾರಿ ಸಪ್ತಪದಿ ತುಳಿಯುವಾಗ ನನ್ನ ಮನಸ್ಸಿನಲ್ಲಿ ಯಾವುದೇ ಭಾವನೆ ಇಲ್ಲ ನಾನು ನಿಮ್ಮನ್ನ ಹೆಂಡತಿ ಎಂದು ಮನಸ್ಸು ಪೂರ್ತಿಯಾಗಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಚಾರು ಸಹ ನನ್ನ ಬಾಳ ಸಂಗಾತಿಯಾಗಿ ನೀನೇ ಬರಬೇಕು ಎಂದುಕೊಂಡಿದ್ದೆ. ಜೀವನಪೂರ್ತಿ ನಿನ್ನ ಜೊತೆಗೆ ನಾನು ಇರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡು ಅಗ್ನಿಕುಂಡವನ್ನು ಸುತ್ತಿದ್ದಾರೆ. ಅಷ್ಟರಲ್ಲಿ ಚಾರು, ರಾಮಾಚಾರಿನಾ ತಬ್ಬಿಕೊಂಡು ಸರ್ವ ಕಾರ್ಯ ಸಿದ್ದಿರಸ್ತು ಎಂದು ಮಂತ್ರವನ್ನ ಮೂರು ಬಾರಿ ಹೇಳಿದ್ದಾಳೆ.

ಸಾಕ್ಷಿಗಾಗಿ ವಿಡಿಯೋ ಸೆರೆ

ರಾಮಾಚಾರಿ ಮಾನ ತೆಗೆಯಬೇಕು ಎಂದುಕೊಂಡಿರುವ ವೈಶಾಖ ಕೊನೆಗೂ ಸಾಕ್ಷಿಗಾಗಿ ವಿಡಿಯೋವನ್ನು ಸೆರೆ ಹಿಡಿಸಿದ್ದಾಳೆ. ಈ ಕಡೆ ಖುಷಿ ನನಗೆ ಬೇಕಾದಂತಹ ವಿಡಿಯೋ ಸಿಕ್ಕಿದೆ ಎಂದು ಖುಷಿಯಿಂದ ಮನೆಗೆ ಹೊರಟಿದ್ದಾಳೆ. ಚಾರು ನಿಶ್ಚಿತಾರ್ಥದ ದಿನವೇ ವಿಡಿಯೋ ವೈರಲ್ ಮಾಡಲು ವೈಶಾಖ ಪ್ಲ್ಯಾನ್ ಮಾಡಿಕೊಂಡಿದ್ದಾಳೆ.

More from Filmibeat

English summary
Colors Kannada Ramachari serial Written Update on june 6th episode. here is details about Ramachari in trouble, Charu and Ramachari marriage recreation, kushi recording the video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X