Ramachari: ವಿಡಿಯೋ ನೋಡಿ ವೈಶಾಖ ಪುಲ್ ಖುಷ್: ರಟ್ಟಾಗುತ್ತಾ ಗುಟ್ಟಿನ ಮದುವೆ?

By ಶೃತಿ ಹರೀಶ್ ಗೌಡ

ರಾಮಾಚಾರಿಯ ಗುಟ್ಟಿನ ಮದುವೆ ಈಗ ರಟ್ಟಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ವೈಶಾಖ ಬೇಕಾದಂತಹ ಸಾಕ್ಷಿಯನ್ನು ಒದಗಿಸಿಕೊಂಡಿದ್ದಾಳೆ. ತನ್ನ ತಂಗಿಯ ಕಡೆಯಿಂದ ವೈಶಾಖ ಬುದ್ದಿಯನ್ನು ಉಪಯೋಗಿಸಿ ರಾಮಾಚಾರಿ ಹಾಗೂ ಚಾರು ಇಬ್ಬರು ಪೂಜೆ ಮಾಡುತ್ತಿರುವ ವಿಡಿಯೋವನ್ನು ಮಾಡಿಕೊಂಡಿದ್ದಾಳೆ ಈಗ ಅದು ವೈಶಾಖಳ ಕೈಯನ್ನು ಸೇರಿದೆ ರಾಮಾಚಾರಿಗೆ ಇದ್ಯಾವುದರ ಪರಿವೆಯೂ ಇಲ್ಲ.

ರಾಮಾಚಾರಿ ಎಲ್ಲವನ್ನ ಮುಗಿಸಿ ಮನೆಗೆ ಬಂದಿದ್ದಾನೆ ನಾಳೆ ಹೇಗಿದ್ದರೂ ಸಹ ಚಾರು ಎಂಗೇಜ್ಮೆಂಟ್ ಗೆ ಮನೆಯವರೆಲ್ಲರೂ ಸಹ ಹೋಗುತ್ತಿದ್ದು ಅಲ್ಲಿ ಯಾವುದೇ ಅನಾಹುತ ಆಗದಿರಲಿ ಎಂಬುದೇ ರಾಮಾಚಾರಿಯ ಮನಸಿನಲ್ಲಿ ಕುಳಿತುಕೊಂಡಿದೆ. ಇದಕ್ಕಾಗಿ ತುಂಬಾ ಟೆನ್ಷನ್‌ನಲ್ಲಿ ಇದ್ದಾನೆ ಶೃತಿಗೆ ಮಾತ್ರ ಚಾರು ಎಂಗೇಜ್ಮೆಂಟ್‌ಗೆ ಹೋಗುವುದು ಸ್ಪಲ್ಪವೂ ಸಹ ಇಷ್ಟವಿಲ್ಲ.

Colors Kannada Ramachari serial written update on June 7th episode

ವೈಶಾಖ ಮಾತ್ರ ಬಹಳ ಖುಷಿಯಲ್ಲಿ ಇದ್ದಾಳೆ ತನ್ನ ತಂಗಿ ಖುಷಿ ಬರುವ ದಾರಿಯನ್ನು ಕಾಯುತ್ತಾ ಇದ್ದಾಳೆ. ಆದಷ್ಟು ಬೇಗ ಖುಷಿ ಬಂದರೆ ಮೊಬೈಲ್ ನಲ್ಲಿ ಇರುವ ವಿಡಿಯೋವನ್ನು ನಾನು ನೋಡಿ ಕಣ್ತುಂಬಿಕೊಳ್ಳಬೇಕು ಎಂದು ವೈಶಾಖ ಕಾಯುತ್ತಾ ಇದ್ದಾಳೆ. ಈ ಕಡೆ ಚಾರು ಮನೆಯಲ್ಲಿ ಎಂಗೇಜ್ಮೆಂಟ್ ತಯಾರಿಗಳು ನಡೆಯುತ್ತಿದ್ದು ಮಾಡಿಕೊಳ್ಳಲಾಗುತ್ತಿದೆ.

ಖುಷಿ ವಿಡಿಯೋ ನಾ ತಂದು ತನ್ನ ಅಕ್ಕನ ಮುಂದೆ ಇಟ್ಟಿದ್ದಾಳೆ ವಿಡಿಯೋ ನೋಡಿದ ವೈಶಾಖಗೆ ತುಂಬಾನೇ ಖುಷಿಯಾಗುತ್ತಿದೆ. ಹೇಗಾದರೂ ಮಾಡಿ ನಾಳೆ ಈ ವಿಡಿಯೋವನ್ನು ಎಲ್ಲರ ಮುಂದೆ ತೋರಿಸಿ ರಾಮಾಚಾರಿಯನ್ನ ತಪ್ಪಿಸುತ್ತಾ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ವೈಶಾಖ ಅಂದುಕೊಂಡಿದ್ದು ನಾನು ಆ ಕೆಲಸವನ್ನು ಮಾಡಿರುತ್ತೇನೆ ಎಂದು ಶಪಥ ಮಾಡಿದ್ದಾಳೆ.

ರಾಮಾಚಾರಿ ಗೆ ಮಾತ್ರ ಚಾರು ಯಾವುದೇ ರೀತಿಯಲ್ಲಿ ಹಠವನ್ನು ಮಾಡದೆ ವಿಕಾಸ್ ಬಾನೇರಿ ಕೈಯಲ್ಲಿ ಉಂಗುರವನ್ನು ಹಾಕಿಸಿಕೊಳ್ಳುತ್ತಾಳೆ ಎಂಬುದೇ ಸಮಾಧಾನವಾಗಿದೆ. ಬೀಸುವ ದೊಣ್ಣೆಯಿಂದ ತಪ್ಪಿಸಿ ಕೊಂಡರೆ ಸಾಕು ಎಂಬ ಸ್ಥಿತಿಗೆ ರಾಮಾಚಾರಿ ತಲುಪಿದ್ದಾನೆ. ಈ ಕಡೆ ಶೃತಿ ಸಹ ಚಾರು ಎಂಗೇಜ್ಮೆಂಟ್ ಆದರೆ ಸಾಕು ಎಂದು ಅಂದುಕೊಂಡಿದ್ದಾಳೆ. ಎಂಗೇಜ್ಮೆಂಟ್ ಆದರೆ ವಿಕಾಸ್ ಬಾನೇರಿಯನ್ನ ಮದುವೆಯಾಗಿ ರಾಮಾಚಾರಿಯಿಂದ ದೂರವಾಗುತ್ತಾಳೆ ಎಂದು ಶ್ರುತಿ ನಂಬಿಕೊಂಡಿದ್ದಾಳೆ.

ಖುಷಿಯಿಂದ ಜಾರು ಹಾಗೂ ರಾಮಾಚಾರಿ ಇಬ್ಬರು ಶಾಸ್ತ್ರವನ್ನು ಮಾಡಿಕೊಳ್ಳುತ್ತಿದ್ದ ವಿಡಿಯೋವನ್ನು ನೋಡುತ್ತಿದ್ದ ವೈಶಾಖ ಕೈ ಜಾರಿ ಮೊಬೈಲ್ ನೀರಿನ ಒಳಗೆ ಬಿದ್ದುಬಿಟ್ಟಿದೆ ನಂತರ ಅದನ್ನ ಎತ್ತಿ ಒರಸಿ ಎಲ್ಲವನ್ನ ಮಾಡಿದರು ಸಹ ಮೊಬೈಲ್ ಆನ್ ಆಗುತ್ತಿಲ್ಲ. ಖುಷಿ ಹಾಗೂ ವೈಶಾಖ ಇಬ್ಬರು ಅದನ್ನು ಅಕ್ಕಿ ಡಬ್ಬದ ಒಳಗಡೆ ಇಟ್ಟಿದ್ದಾರೆ ಆದರೂ ಸಹ ಮೊಬೈಲ್ ಆನ್ ಆಗದ ಕಾರಣ ವೈಶಾಖಗೆ ಮಾತ್ರ ಬಾರಿ ನಿರಾಸೆಯಾಗಿ ಖುಷಿ ಮೇಲೆ ರೇಗಾಡುತ್ತಿದ್ದಾಳೆ.

ಈ ಕಡೆ ರಾಮಾಚಾರಿ ಅಡುಗೆ ಮನೆಯಲ್ಲಿ ಇನ್ನೂ ಲೈಟ್ ಉರಿಯುತ್ತಿದೆ ಎಂದುಕೊಂಡು ಅಲ್ಲಿಗೆ ಬಂದಿದ್ದಾನೆ. ರಾಮಾಚಾರಿ ಮರ್ಯಾದೆ ತೆಗೆಯಬೇಕು ಎಂದುಕೊಂಡು ಮಾತನಾಡುತ್ತಿದ್ದ ವೈಶಾಖಗೆ ರಾಮಾಚಾರಿಯ ದನಿಯನ್ನ ಕೇಳಿ ಶಾಕ್ ಆಗಿದೆ. ಅತ್ತಿಗೆ ಇಷ್ಟು ಹೊತ್ತಿನಲ್ಲಿ ಏನು ಮಾಡುತ್ತಿದ್ದೀರಾ ಎಂದು ಕೇಳಿದ ರಾಮಾಚಾರಿಗೆ ವೈಶಾಖ ಎಂದಿನಂತೆ ಚೆನ್ನಾಗಿ ಬೈದಿದ್ದಾಳೆ. ನಾವಿಬ್ಬರೂ ಮಾತನಾಡಿದರೆ ನಿನಗೆ ಏನು ನಾವಿಬ್ಬರು ಮಾತನಾಡಬಾರದು ಎಂದೆಲ್ಲ ಬೈದಿದ್ದಕ್ಕೆ ಏನಾದರೂ ಮಾಡಿಕೊಳ್ಳಿ ಎಂದು ರಾಮಾಚಾರಿ ಸ್ಥಳದಿಂದ ಹೋಗಿದ್ದಾನೆ.

ವೈಶಾಖ ಬಳಿ ಖುಷಿ ಮೊಬೈಲ್ ರಿಪೇರಿಯನ್ನ ಮಾಡಿಸೋಣ ನನ್ನ ಫ್ರೆಂಡ್ ಮೊಬೈಲ್ ರಿಪೇರಿ ಮಾಡುತ್ತಾನೆ ಎಂದು ಹೇಳಿದ್ದಾಳೆ. ಇದಕ್ಕೆ ನಿನ್ನ ಮೈದುನನ ಒಪ್ಪಿಸಿ ನನ್ನ ಜೊತೆ ಕಳುಹಿಸಿ ಕೊಡು ನಾನು ನನ್ನ ಫ್ರೆಂಡ್ ಬಳಿ ಹೋಗಿ ಮೊಬೈಲ್ ರಿಪೇರಿಯನ್ನ ಮಾಡಿಸಿಕೊಂಡು ಬರುತ್ತೇನೆ ಎಂದು ಖುಷಿ ಹೇಳಿದ್ದಾಳೆ ಈಗ ರಾಮಾಚಾರಿಯನ್ನ ಒಪ್ಪಿಸಿ ಖುಷಿಯ ಜೊತೆ ಕಳಿಸಿ ಕೊಡುವ ಅನಿವಾರ್ಯತೆ ವೈಶಾಖಗೆ ಎದುರಾಗಿದೆ.

More from Filmibeat

English summary
Colors Kannada serial Ramachari here details about kushi Mobile fall down to water, vaishaka tension about Ramachari and charu marriage video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X