Ramachari: ಚಾರು ಎಂಗೇಜ್ಮೆಂಟ್ ಮುರಿದು ಬೀಳುತ್ತಾ? ವೈಶಾಖಗೆ ವಿಡಿಯೋ ವಾಪಸ್ ಸಿಗುತ್ತಾ?
ವೈಶಾಖ ಈಗ ಕೈನಲ್ಲಿದ್ದ ವಿಡಿಯೋವನ್ನು ಕಳೆದುಕೊಂಡು ಹಾವು ಕಿತ್ತ ಅಲ್ಲಿನ ಪರಿಸ್ಥಿತಿಯನ್ನ ತಲುಪಿದ್ದಾಳೆ ತನ್ನ ತಂಗಿ ಖುಷಿ ಮೊಬೈಲ್ ರಿಪೇರಿ ಮಾಡುವ ತನ್ನ ಸ್ನೇಹಿತನ ಬಳಿ ಮೊಬೈಲ್ ಅನ್ನ ಕೊಟ್ಟು ಬಂದಿದ್ದಾಳೆ. ಚಾರು ಎಂಗೇಜ್ಮೆಂಟ್ ಕೆ ತೆರಳುವ ವೇಳೆ ಆ ಮೊಬೈಲ್ ನಲ್ಲಿರುವ ವಿಡಿಯೋ ರಿಸ್ಟೋರ್ ಆದರೆ ಮಾತ್ರ ವೈಶಾಖಾಳಿಗೆ ತಾನು ಏನು ಮಾತನಾಡಬೇಕು ತಿಳಿದಿದೆ.
ಎಲ್ಲರೂ ಸಹ ಚಾರು ಎಂಗೇಜ್ಮೆಂಟ್ ಗೆ ಹೋಗಲು ತಯಾರಿಯನ್ನ ಮಾಡಿಕೊಂಡಿದ್ದಾರೆ. ಮೊದಲಿಗೆ ರಾಮಾಚಾರಿ ಹಾಗೂ ಮುರಾರಿ ಇಬ್ಬರು ಬೈಕ್ ನಲ್ಲಿ ತೆರಳಿದ್ದಾರೆ ನಂತರ ವೈಶಾಖ ಹಾಗೂ ಆಕೆಯ ತಂಗಿ ಇಬ್ಬರು ನಾವು ನಂತರ ಬರುತ್ತೇವೆ ಎಂದು ಮನೆಯವರ ಬಳಿ ಹೇಳಿದ್ದಾರೆ. ಆಚಾರ್ಯರು ಅವರ ಹೆಂಡತಿ ಜಾನಕಿ ಮಗಳು ಶೃತಿ ಹಾಗೂ ಅವರ ತಾಯಿ ಎಲ್ಲರೂ ಎಂಗೇಜ್ಮೆಂಟ್ ಗೆ ಹೊರಟಿದ್ದಾರೆ.

ರಾಮಾಚಾರಿ ಮನಸ್ಸಿನಲ್ಲಿ ಗೊಂದಲ ಶುರುವಾಗಿದೆ ಅಕಸ್ಮಾತ್ ಏನಾದರೂ ಚಾರು ಹಠವನ್ನ ಮಾಡಿ ನೀನೇ ಉಂಗುರವನ್ನು ತೋರಿಸಬೇಕು ಎಂದರೆ ಮಾತ್ರ ನನಗೆ ಬ್ಯಾಟ್ ಟೈಮ್ ಶುರುವಾಗಲಿದೆ ಎಂದು ಮನಸ್ಸಿನಲ್ಲಿ ಯೋಚನೆಯನ್ನು ಮಾಡುತ್ತಿದ್ದಾನೆ. ವಿಕಾಸ್ ಬಾನೇರಿಯ ಕುಟುಂಬದವರು ಈಗಾಗಲೇ ಹೋಟೆಲ್ ತಲುಪಿದ್ದು ಎಂಗೇಜ್ಮೆಂಟ್ ಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಮಾನಿತಗೆ ಮಾತ್ರ ರಾಮಾಚಾರಿ ಎಂಗೇಜ್ಮೆಂಟ್ ಅನ್ನ ನಡೆಸಿ ಕೊಡಕೂಡದು ಎಂಬುದು ಮನಸ್ಸಿನಲ್ಲಿ ಬೇರೂರಿದೆ.
ಮೊಬೈಲ್ ನೀರಿಗೆ ಬಿದ್ದು ಹಾಳಾಗಿದ್ದು ಅದರಲ್ಲಿರುವ ವಿಡಿಯೋವನ್ನ ರಿಸ್ಟೋರ್ ಮಾಡಿ ಕೊಡುವಂತೆ ವೈಶಾಖಳ ತಂಗಿ ಖುಷಿ ತನ್ನ ಫ್ರೆಂಡ್ ಬಳಿ ಮೊಬೈಲ್ ಕೊಟ್ಟು ಬಂದಿದ್ದಾಳೆ ಅದನ್ನ ತರಲು ಆಟೋದಲ್ಲಿ ಖುಷಿ ಹಾಗೂ ವೈಶಾಖ ಇಬ್ಬರು ಸಹ ಹೊರಟಿದ್ದಾರೆ. ದಾರಿ ಮಧ್ಯದಲ್ಲಿ ವೈಶಾಖ ಖುಷಿಯ ಬಳಿ ತಂದಿದ್ದ ಸಾಕ್ಷಿ ಆಳಾಗಿ ಹೋಯಿತು ಅದು ನನ್ನ ಕೈವಶವಾದರೆ ಸಾಕು ನಾನು ಎಲ್ಲರನ್ನು ಬುಗುರಿ ಆಡಿಸಿದಂತೆ ಆಡಿಸುತ್ತೇನೆ ಎಂದು ಹೇಳುತ್ತಿದ್ದಾಳೆ.
ಇದಕ್ಕೆ ಖುಷಿ ನನ್ನ ಫ್ರೆಂಡ್ ಯಾವುದೇ ಕೆಲಸವನ್ನಾದರೂ ಅಚ್ಚುಕಟ್ಟಾಗಿ ಮಾಡಿಕೊಡುತ್ತಾನೆ ಅವನಿಗೆ ಕೊಟ್ಟ ಕೆಲಸವನ್ನು ಮಾಡೇ ಮಾಡುತ್ತಾನೆ. ನಮಗೆ ಮೊಬೈಲ್ ನಲ್ಲಿರುವ ವಿಡಿಯೋ ಸಿಕ್ಕೇ ಸಿಗುತ್ತದೆ ನೀನು ಅಲ್ಲಿ ಹೋದ ಬಳಿಕ ಏನು ಮಾತನಾಡಬೇಕು ಎಂಬುದಷ್ಟಕ್ಕೆ ನಿಗಾವಹಿಸು ಎಂದು ಅಕ್ಕನಿಗೆ ಹೇಳಿದ್ದಾಳೆ. ವೈಶಾಖ ಸಹ ಅಲ್ಲಿಗೆ ಹೋದ ಮೇಲೆ ಒಬ್ಬೊಬ್ಬರ ಜನ್ಮವನ್ನ ನಾನು ಜಾಲಾಡುತ್ತೇನೆ ಎಂದು ಖುಷಿಯ ಬಳಿ ಹೇಳಿಕೊಳ್ಳುತ್ತಿದ್ದಾಳೆ.
ರಾಮಾಚಾರಿ ಹಾಗೂ ಮುರಾರಿ ಇಬ್ಬರು ಸಹಚಾರ ಎಂಗೇಜ್ಮೆಂಟ್ ಗೆ ತೆರಳುತ್ತಿದ್ದಾರೆ ದಾರಿ ಮಧ್ಯದಲ್ಲಿ ಮುರಾರಿ ರಾಮಾಚಾರಿ ಗೆ ನಿನಗೆ ಟೆನ್ಶನ್ ಆಗುತ್ತಿಲ್ವ ಎಂದು ಪ್ರಶ್ನೆಯನ್ನು ಕೇಳಿದ್ದಾನೆ. ಕೆ ರಾಮಾಚಾರಿ ಚಾರುಬಳಿ ನಾನು ಪ್ರಾಮಿಸ್ ಮಾಡಿಸಿಕೊಂಡಿದ್ದೇನೆ ನೀನು ಆಟವನ್ನ ಮಾಡದೆ ವಿಕಾಸ್ ಜೊತೆ ಎಂಗೇಜ್ಮೆಂಟ್ ಮಾಡಿಕೋ ಎಂದು ನಾನೇ ಹೇಳಿದ್ದೇನೆ ಇದಕ್ಕೆ ಚಾರು ಉಪ್ಪಿಕೆಯನ್ನು ಕೊಟ್ಟಿದ್ದಾಳೆ ಎಂದು ಹೇಳಿದ್ದಾನೆ.
ಆದರೂ ಸಹ ಮುರಾರಿ ಮತ್ತೆ ಪ್ರಶ್ನೆಯನ್ನು ಕೇಳಿದ್ದಕ್ಕೆ ಚಾರು ಏನಾದರು ವಿಷ ಕುಡಿಯುತ್ತೇನೆ ಎಂದರೆ ನನಗೆ ಟೆನ್ಶನ್ ಆಗುತ್ತದೆ ಅದು ಬಿಟ್ಟು ನನಗೆ ಬೇರೆ ಯಾವುದೇ ಟೆನ್ಶನ್ ಇಲ್ಲ ಮನೆಯವರನ್ನೆಲ್ಲಾ ಒಪ್ಪಿಸಿ ನಾನು ಮನೆಗೆ ಕರೆದುಕೊಂಡು ಹೋಗುತ್ತೇನೆ ನಾನು ಅವರನ್ನು ಹೆಂಡತಿ ಎಂದು ಒಪ್ಪಿಕೊಂಡು ಆಗಿದೆ ಎಂದು ಮುರಾರಿಯ ಬಳಿ ರಾಮಾಚಾರಿ ಹೇಳಿದ್ದಾನೆ. ಮನೆಯವರು ಚಾರುವನ್ನು ದ್ವೇಷ ಮಾಡುತ್ತಾರೆ ಆ ದ್ವೇಷವನ್ನು ಹೊಗಲಾಡಿಸಿ ಪ್ರೀತಿಯಿಂದ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ರಾಮಾಚಾರಿ ಆತ್ಮವಿಶ್ವಾಸದ ಮಾತನ್ನು ಆಡಿದ್ದಾನೆ.


Click it and Unblock the Notifications











