Ramachari: ನಡೆದೇ ಹೋಗುತ್ತಾ ಚಾರು ಮದುವೆ? ವೈಶಾಖ ವಿಡಿಯೋ ರಿವೀಲ್ ಮಾಡಿದ್ರೆ ಗತಿ ಏನು?

By ಶೃತಿ ಹರೀಶ್ ಗೌಡ

ರಾಮಾಚಾರಿ ಚಾರುವನ್ನು ಮದುವೆಯಾದ ದಿನದಿಂದಲೂ ಸಹ ಒಂದಲ್ಲ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾ ಇದ್ದಾನೆ. ವಿಕಾಸ್ ಬಾನೇರಿಯಾ ಮನೆಯವರು ಜಾತಕವನ್ನೇ ಅದಲು ಬದಲು ಮಾಡಿ ಚಾರು ಜಾತಕಕ್ಕೆ ಹೊಂದುವಂತಹ ಜಾತಕ ಮಾಡಿಸಿಕೊಂಡು ಬಂದು ಜೈ ಶಂಕರ್ ಆಸ್ತಿಯನ್ನು ಹೊಡೆಯಲು ಸಂಚನ್ನ ಹಾಕಿದ್ದಾರೆ. ಈ ಬಗ್ಗೆ ವಿಕಾಸ್ ಬಾನೇರಿಯಾ ಅಮ್ಮ ಸಹ ರಾಮಾಚಾರಿಗೆ ಹೇಗಾದರೂ ಮಾಡಿ ಈ ಮದುವೆಯನ್ನು ತಪ್ಪಿಸು ಎಂದು ಹೇಳಿದ್ದರು.

ಈಗ ರಾಮಾಚಾರಿ ಮದುವೆಯನ್ನ ಜಗಜಾಹೀರು ಮಾಡಬೇಕು ಎಂದು ವೈಶಾಖ ಮಾತ್ರ ಶತ ಪ್ರಯತ್ನವನ್ನ ಮಾಡುತ್ತಿದ್ದಾಳೆ. ಖುಷಿ ಫೋನ್ನಲ್ಲಿರುವ ವಿಡಿಯೋವನ್ನು ರಿಸ್ಟೋರ್ ಮಾಡಿಸಿಕೊಂಡು ಬರಲು‌ ಹೋಗಿದ್ದಾರೆ. ರಾಮಾಚಾರಿ ಈಗ ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ತಲುಪಿದ್ದಾನೆ. ಎಂಗೇಜ್ಮೆಂಟ್ ಮಾಡಲು ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾನೆ. ವಿಕಾಸ್ ಬಾನೇರಿಯ ಕುಟುಂಬಸ್ಥರು ಸಹ ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಬಂದಿದ್ದಾರೆ.

Colors Kannada Ramachari serial Written Update on june 9th episode

ಚಾರು ಮಾತ್ರ ತುಂಬಾ ನಿರಾಳಳಾಗಿ ಸಾನ್ವಿ ಯಾರು ಜೊತೆಯಲ್ಲಿ ಮಾತನಾಡುತ್ತಾ ಇದ್ದಾಳೆ. ಸಾನ್ವಿ ಯಾವುದೇ ಟೆನ್ಶನ್ ಇಲ್ವಾ ಎಂದಿದ್ದಕ್ಕೆ ನಾನು ರಾಮಾಚಾರಿಯನ್ನೆ ಮದುವೆಯಾಗಿದ್ದೇನೆ ಅವನ ಜೊತೆಯೇ ಬಾಳುತ್ತೇನೆ ಈ ಎಂಗೇಜ್ಮೆಂಟ್ ಎಲ್ಲಾ ಕೆಡಿಸಿಕೊಳ್ಳುವುದಿಲ್ಲ ಎಂದು ಸಾನ್ವಿ ಬಳಿ ಚಾರು ಹೇಳಿದ್ದಾಳೆ. ಸದ್ಯಕ್ಕೆ ರಾಮಾಚಾರಿ ಗೆ ಆದಷ್ಟು ಬೇಗ ಎಂಗೇಜ್ಮೆಂಟ್ ಎಲ್ಲಾ ಮುಗಿದು ಹೋಗಲಿ ಎಂಬುದೇ ಚಿಂತೆಯಾಗಿದೆ.

ಮಾನ್ಯತಾ ನಾಟಕವಾಡಿ ಮಗಳಿಂದ ನೀರನ್ನು ತರಿಸಿಕೊಳ್ಳುವ ವೇಳೆ ರಾಮಾಚಾರಿ ಚಾರುನೆ ಮಾತನಾಡುತ್ತಿದ್ದಾಳೆ ಎಂದು ಕೆಲವೊಂದು ಮಾತುಗಳನ್ನು ಆಡಿದ್ದಾನೆ. ಅಷ್ಟರಲ್ಲಿ ಮಾನ್ಯತಾ ಫೋನನ್ನು ಇಟ್ಟಿದ್ದಾಳೆ. ಇನ್ನು ಎಂಗೇಜ್ಮೆಂಟ್ ನಡೆಯುವ ಸ್ಥಳದಲ್ಲಿ ಚಾರು ಸಾನ್ವಿ ಮಾತನಾಡುತ್ತಾ ಇದ್ದಾರೆ. ಅಲ್ಲಿಗೆ ಬಂದ ಮಾನ್ಯತಾ ಮಗಳಿಗೆ ರೆಡಿಯಾಗು ಎಂದು ಹೇಳಿದ್ದಾಳೆ. ಚಾರು ರೆಡಿಯಾಗಲು ಹೋದಾಗ ಮಾನ್ಯತಾ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾಳೆ.

ನಿನ್ನ ಹಾಗೂ ರಾಮಾಚಾರಿಯ ಬಗ್ಗೆ ನನಗೊಂದು ಸಣ್ಣ ಸುಳಿವು ಸಿಕ್ಕಿದೆ ನೀನು ನಾನು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ ಎಂದುಕೊಂಡಿದ್ದೀಯಾ ಆದರೆ ಇಲ್ಲಿ ನಡೆಯುವುದೇ ಬೇರೆ ಎಂದು ಮಾನ್ಯತಾ ಮನಸ್ಸಿನಲ್ಲೆ ಅಂದುಕೊಂಡಿದ್ದಾಳೆ. ನಿನ್ನ ಹಾಗೂ ವಿಕಾಸ್ ಬಾನೇರಿಯಾ ಮದುವೆಯನ್ನ ನಾನು ಹಿಂದೆ ಮಾಡುತ್ತೇನೆ ಎಂದು ಮಾನ್ಯತಾ ಹೇಳಿಕೊಂಡಿದ್ದಾಳೆ. ಆದರೆ ಚಾರುಗೆ ತನ್ನ ಅಮ್ಮನ ಮನಸ್ಸಿನಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಮಾತ್ರ ತಿಳಿದಿಲ್ಲ.

ರಾಮಾಚಾರಿಯ ಕುಟುಂಬಸ್ಥರು ಎಂಗೇಜ್ಮೆಂಟ್ ಗೆ ಆಗಮಿಸಿದ್ದಾರೆ. ನಾರಾಯಣ ಆಚಾರ್ಯರ ಕುಟುಂಬದವರನ್ನು ಸ್ವತಃ ಜೈಶಂಕರೇ ಹೋಗಿ ಸ್ವಾಗತವನ್ನು ಕೋರಿ ಕರೆದುಕೊಂಡು ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ನಾರಾಯಣ ಆಚಾರ್ಯರು ಮೆಟ್ಟಿಲನ್ನು ಹತ್ತುವಾಗ ಇನ್ನೇನು ಬೀಳಲಿದ್ದರೂ ರಾಮಾಚಾರಿ ಓಡೋಡಿ ಬಂದು ತಂದೆಯನ್ನ ಬೀಳದಂತೆ ತಡೆದಿದ್ದಾನೆ.

ಇನ್ನು ರಾಮಾಚಾರಿಯನ್ನು ನಾರಾಯಣ ಆಚಾರ್ಯರು ಇದು ನೀನೇ ಇಟ್ಟುಕೊಟ್ಟ ಮುಹೂರ್ತ ತಾನೇ ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಇದಕ್ಕೆ ಅಪ್ಪನ ಬಳಿ ರಾಮಾಚಾರಿ ಹೌದು ಎಂದು ತಲೆ ಅಲ್ಲಾಡಿಸಿದ್ದಾನೆ. ಜಾನಕಿ ಮಧ್ಯ ಪ್ರವೇಶ ಮಾಡಿ ರಾಮಾಚಾರಿ ಎಲ್ಲವನ್ನು ಸರಿಯಾದ ಕ್ರಮದಲ್ಲಿ ನಡೆಸಿಕೊಡುತ್ತಾನೆ ಎಂದು ನಾರಾಯಣ ಆಚಾರ್ಯರ ಬಳಿ ಹೇಳಿದ್ದಾಳೆ. ಬೀಳುವುದನ್ನೇ ಎಷ್ಟು ಬೇಗ ಬಂದು ತಡೆದಿದ್ದಾನೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಜಾನಕಿ ಹೇಳಿದ್ದಕ್ಕೆ ಅಲ್ಲೇ ಇದ್ದ ಕೋದಂಡನಿಗೆ ತುಂಬಾ ಬೇಸರವಾಗಿದೆ.

ಖುಷಿ ಮೊಬೈಲ್ನಲ್ಲಿದ್ದ ವಿಡಿಯೋವನ್ನು ರಿಸ್ಟೋರ್ ಮಾಡಿಸಿಕೊಂಡು ಬರಲು ಹೋದ ವೈಶಾಖ ಹಾಗೂ ಖುಷಿ ಇಬ್ಬರು ಇನ್ನೂ ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಬಂದಿಲ್ಲ. ಹೇಗಾದರೂ ಮಾಡಿ ಎಲ್ಲರ ಎದುರು ಮಾನ ಕಳೆಯಬೇಕು ಎಂದುಕೊಂಡಿರುವ ವೈಶಾಖಳ ಪ್ಲಾನ್ ಉಲ್ಟಾ ಆಗಿದೆಯಾ ನೋಡಬೇಕಿದೆ. ಇಲ್ಲವೇ ಮಾನ್ಯತಾಳ ಪ್ಲಾನ್ ಏನಾದರು ಸಕ್ಸಸ್ ಆಗಿ ವಿಕಾಸ್ ಬಾನಿಯಲ್ಲಿ ಚಾರು ಕುತ್ತಿಗೆಗೆ ತಾಳಿ ಕಟ್ಟತಾನ ಅಥವಾ ರಾಮಾಚಾರಿ ಹಾಗೂ ಚಾರು ಮದುವೆ ಕುತೂಹಲವಾಗಿದೆ.

More from Filmibeat

English summary
Colors Kannada serial Ramachari here details about charu engagement, narayana achar doubt about Ramachari's muhurtham, manyatha planning doing charu marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X