Ramachari: ರಾಮಾಚಾರಿ ‌ಗೊಂದಲಕ್ಕೆ ಸಿಕ್ಕಿತು ಪರಿಹಾರ!

By ಶೃತಿ ಹರೀಶ್ ಗೌಡ
Colors Kannada Ramachari serial Written Update on March 10th episode

ರಾಮಾಚಾರಿ ನಿದ್ರೆ ಬರದೆ ರಾತ್ರಿಯನ್ನು ಕಳೆದಿದ್ದಾನೆ ಈ ಕಡೆ ದೀಪಾ ಮದುವೆಯಾಗಬೇಕಾ ಅಥವಾ ಚಾರುವಿನಿಂದ ದೂರ ಇರಬೇಕಾ ಎಂದು ಯೋಚನೆ ಮಾಡಿ ಒಂದು ಒಳ್ಳೆಯ ನಿರ್ಧಾರಕ್ಕೆ ಬರಲಾಗದೆ ಒದ್ದಾಡುತ್ತಿದ್ದಾನೆ.‌ಈ ಬಗ್ಗೆ ನಾರಾಯಣ ಆಚಾರ್ಯರ ಮಾತನ್ನು ಒಮ್ಮೆ ಕೇಳಬೇಕು ಎಂದುಕೊಂಡಿದ್ದಾನೆ.

ಮನೆಯವರೆಲ್ಲರೂ ಸಹ ಒಂದೆ ಕಡೆ ಸೇರಿದ್ದಾರೆ ಇದೇ ವೇಳೆ ಅಲ್ಲಿಗೆ ಬಂದ ರಾಮಾಚಾರಿ ಅಪ್ಪ ಎಂದು ನನ್ನ ಫ್ರೆಂಡ್ ಒಬ್ಬನಿಗೆ ಮದುವೆಯಾಗಿದೆ. ಅವನು ಯಾವುದೋ ಪರಿಸ್ಥಿತಿಗೆ ಸಿಲುಕಿ ಮದುವೆಯನ್ನು ಆಗಿದ್ದಾನೆ. ಎರಡು ಕುಟುಂಬಗಳ ನಡುವೆ ದ್ವೇಷ‌ ತುಂಬಿಕೊಂಡಿದೆ. ಅಂತಸ್ತಿನಲ್ಲೂ‌ ಸಹ ಹೊಂದಾಣಿಕೆ‌ ಇಲ್ಲ ಎಂದೆಲ್ಲ ಹೇಳುತ್ತಿದ್ದಾನೆ.

ರಾಮಾಚಾರಿ ಹೇಳಿದ ಎಲ್ಲ ಮಾತನ್ನು ಕೇಳಿದ ನಾರಾಯಣ ಆಚಾರ್ಯರು ಯಾವುದೇ ಪರಿಸ್ಥಿತಿಯಲ್ಲಿ ‌ಇದ್ದರೂ ಸಹ ಒಮ್ಮೆ ಮದುವೆಯಾದರೆ ಮುಗಿಯಿತು ಎಂದು ಮದುವೆಯ ಸಂಬಂಧವನ್ನು ಹೇಳಿದ್ದಾರೆ. ಇದಕ್ಕೆ ರಾಮಾಚಾರಿ ಸಹ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದ್ದಾನೆ.

ಚಾರು ರಾಮಾಚಾರಿಗೆ ಫೋನ್ ಮಾಡಿ ಮಾಮ್ ನನ್ನ ಕತ್ತಿನಲ್ಲಿರುವ ಅರಿಶಿಣದ ಕೊಂಬಿನ ದಾರವನ್ನು ನೋಡಿದರು ಎಂದು ಹೇಳಿದ್ದಾಳೆ. ಇದಕ್ಕೆ‌ ರಾಮಾಚಾರಿ ಶಾಕ್ ಆಗಿ ನಮ್ಮ ಮನೆಯವರಿಗೆ ವಿಷಯ ತಿಳಿಯುತ್ತದೆ ನಾನು ಮನೆಯವರ ಮುಂದೆ ಕೆಟ್ಟವನಾಗುತ್ತೇನೆ ತಂದೆ, ಅಣ್ಣನ ಸಂಬಂಧ ದೂರವಾಗುತ್ತದೆ ಎಂದು ಹೇಳಿದ್ದಾನೆ ಇದಕ್ಕೆ ಚಾರು ನಾನು ಹೇಳುವುದನ್ನು ಸರಿಯಾಗಿ ಕೇಳು‌ ಎಂದು ಹೇಳಿದ್ದಾಳೆ.

ಚಾರು ತಾಳಿಯನ್ನು ತಾಯತ ಎಂದು ಹೇಳಿ ಮ್ಯಾನೇಜ್ ಮಾಡಿದ್ದೇನೆ ಎಂದು ಹೇಳಿದಾಗ ರಾಮಾಯಣ ನಿಟ್ಟುಸಿರು ಬಿಟ್ಟಿದ್ದಾನೆ. ನಮ್ಮ ಮನೆಯವರ ಪರಿಸ್ಥಿತಿ ಎಲ್ಲ ಸಹ ಕಣ್ಮುಂದೆ ಬಂತು ನೀವು ಆದಷ್ಟು ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದಾನೆ.‌ ಇದಕ್ಕೆ ಚಾರು ನಾನು ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸುತ್ತೇನೆ ಎಂದು ಹೇಳಿದ್ದಾಳೆ.

ರಾಮಾಚಾರಿಗೆ ಕರೆ ಮಾಡಿದ ಜೈಶಂಕರ್ ಮಗಳ ಮದುವೆ ಹಾಗೂ ನಿಶ್ಚಿತಾರ್ಥಕ್ಕೆ ದಿನಾಂಕ ನಿಗಧಿ ಮಾಡಬೇಕು ಎಂದು ಹೇಳಿದ್ದಾರೆ.‌ಈ ಮಾತನ್ನು‌ ಕೇಳಿಸಿಕೊಂಡ ರಾಮಾಚಾರಿ ಒಂದು ಕ್ಷಣ ಹಾಗೇ ನಿಂತುಕೊಂಡು‌ ಚಾರು ಈ ಮದುವೆಯಾದರೆ ಸತ್ತು ಹೋಗುತ್ತೇನೆ ಎಂದು ಹೇಳಿದ್ದನ್ನು ನೆನಪು ಮಾಡಿಕೊಳ್ಳುತ್ತಿದ್ದಾನೆ .

ನನಗೆ ಯಾಕೆ ಸಾರ್ ಫೋನ್ ಮಾಡಿದ್ದೀರಾ ನಮ್ಮ ತಂದೆಯವರಿಗೆ ಫೋನ್ ಮಾಡಿ ಎಂದು ಹೇಳಿದ್ದಾನೆ ಅಷ್ಟರಲ್ಲಿ ಅಲ್ಲಿಗೆ ಬಂದ ನಾರಾಯಣ ಆಚಾರ್ಯರು ನಾನೇ ನಿಮಗೆ ಕರೆ ಮಾಡಲು ಹೇಳಿದ್ದು ಎಂದಿದ್ದಾರೆ. ಇದಕ್ಕೆ ರಾಮಾಚಾರಿ ಸರಿ ಆಯಿತು ಬರುತ್ತೇನೆ ಎಂದು ಹೇಳಿದ್ದಾನೆ.

ರಾಮಾಚಾರಿ ಚಾರು ಮದುವೆಗೆ ದಿನಾಂಕ‌ ನಿಗಧಿ ಮಾಡಲು ಹೊರಟಿದ್ದಾನೆ ಇದೇ ವೇಳೆ ದೇವಿಯ ಮುಂದೆ ನಿಂತುಕೊಂಡು ದೇವರೇ ನನಗೆ ಇದು ಎಂತಹ ಅಗ್ನಿಪರೀಕ್ಷೆ ನೀಡುತ್ತಿದ್ದೀಯಾ ನಾನು ದ್ವೇಷ ಮಾಡುವ ಹೆಣ್ಣಿನ ಕಣ್ಣನ್ನು ತಗೆಸಿದೆ, ನಂತರ ನನ್ನ ಕೈಲಿ ತಾಳಿಯನ್ನು ಕಟ್ಟಿಸಿದೆ, ಈಗ ಕಣ್ಣು ಕೊಟ್ಟಿದ್ದೀಯಾ ಇದೆಲ್ಲ ಎನು ನಿನ್ನ ಮಾಯೆ ಎಂದು ಕಣ್ಣೀರು ಹಾಕುತ್ತಿದ್ದಾನೆ.

ಮುಂದೆ ನಾನು ಎನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಮತ್ತೆಷ್ಟು ಅಗ್ನಿ ಪರೀಕ್ಷೆಯನ್ನು ಜೀವನದಲ್ಲಿ ನೀನು ನೀಡುತ್ತಿಯಾ ಎಂದು ರಾಮಾಚಾರಿ ದೇವಿಯ ಬಳಿ ಕೇಳಿದ್ದಾನೆ. ನಾನು ದ್ವೇಷ ಮಾಡುತ್ತಿದ್ದ ಹೆಣ್ಣನ್ನು ನೀನು ಮದುವೆ ಮಾಡಿಸಿದೆ ಎರಡು ಕುಟುಂಬದ ಮಧ್ಯೆ ದ್ವೇಷವಿದೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂದು ತನಗೆ ಬಂದಿರುವ ಕಷ್ಟದ ಬಗ್ಗೆ ದೇವರ ಬಳಿ ಹೇಳಿಕೊಳ್ಳುತ್ತಿದ್ದಾನೆ.

More from Filmibeat

English summary
Colors Kannada Ramachari serial Written Update on March 10th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X