Ramachari: ಧರ್ಮಕ್ಕೆ ಹೆದರುತ್ತಿರುವ ರಾಮಾಚಾರಿಗೆ ಧರ್ಮಸಂಕಟ

By ಶೃತಿ ಹರೀಶ್ ಗೌಡ

ರಾಮಾಚಾರಿ ದೇವರ ಮುಂದೆ ನಿಂತುಕೊಂಡು ಕಣ್ಣೀರನ್ನ ಹಾಕುತ್ತಿದ್ದಾನೆ ನಾನು ಮಾಡಿರುವ ತಪ್ಪಿನಿಂದ ನನ್ನ ಮನೆಯವರನ್ನು ದೂರ ಮಾಡಿಕೊಳ್ಳಬೇಕಾಗುತ್ತದೆ ನೀನೇ ಮದುವೆಯನ್ನು ಮಾಡಿಸಿದ್ದೀಯಾ ಏನಾದರೂ ದಾರಿ ತೋರಿಸು ಎಂದು ದೇವರ ಬಳಿ ಬೇಡಿಕೊಳ್ಳುತ್ತಿದ್ದಾನೆ. ಅಲ್ಲಿಗೆ ಬಂದ ಚಾರು ದೇವರು ದಾರಿ ತೋರಿಸುವುದಿಲ್ಲ ನೀನು ದಾರಿ ತೋರಿಸಬೇಕು ಎಂದಿದ್ದಾಳೆ.

ಇದಕ್ಕೆ ರಾಮಾಚಾರಿ ಹಾಗಂದರೆ ಹೇಗೆ ಮೇಡಂ ಇನ್ನು ಆರು ತಿಂಗಳುಗಳ ಕಾಲ ನನಗೆ ಸಮಯ ಬೇಕು ಎಲ್ಲವನ್ನು ಸಹ ನಿಧಾನವಾಗಿ ಹೇಳಬೇಕು ಸಡನ್ನಾಗಿ ಹೇಳಿದರೆ ನಾನು ನನ್ನ ಕುಟುಂಬವನ್ನೇ ಕಳೆದುಕೊಳ್ಳುತ್ತೇನೆ ಎಂದಿದ್ದಾನೆ. ಇದಕ್ಕೆ ಚಾರು ತನ್ನ ಹೆಂಡತಿಗೆ ಮದುವೆ ಮಾಡಿಸಲು ದಿನಾಂಕ ನಿಗದಿ ಮಾಡಲು ಬರುತ್ತಿದ್ದೀಯ ಇದು ನಿನಗೆ ಸರಿ ಇದ್ಯಾ ಎಂದು ಕೇಳಿದ್ದಾಳೆ.‌

Colors Kannada Ramachari serial Written Update on March 13th episode

ಮದುವೆಗೆ ಯಾವುದೇ ದಿನಾಂಕ ಸದ್ಯಕ್ಕೆ ಇಲ್ಲ ಎಂದು ಮುಂದೂಡು ಎಂದು ಸುಳ್ಳು ಹೇಳು ಎಂದು ರಾಮಾಚಾರಿಗೆ ಹೇಳಿ ಕೊಡುತ್ತಿದ್ದಾಳೆ. ಆದರೆ ರಾಮಾಚಾರಿ ನೀವು ಸ್ವಲ್ಪ ತಾಳ್ಮೆಯಿಂದ ಇರಿ ತಾಳ್ಮೆಯಿಂದ ಇದ್ದರೆ ಎಲ್ಲವೂ ಸಾಧ್ಯ ಎಂದು ಚಾರುಗೆ ತಾಳ್ಮೆಯ ಪಾಠವನ್ನು ಮಾಡುತ್ತಿದ್ದಾನೆ. ಆದರೆ ಚಾರು ಮಾತ್ರ ರಾಮಾಚಾರಿ ನೀನು ನನಗೆ ತಾಳ್ಮೆಯ ಪಾಠ ಮಾಡಲು ಬರಬೇಡ ನಾನು ಬೆಟ್ಟದ ಮೇಲಿಂದ ಬಿದ್ದು ಸತ್ತಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಹೇಳಿ ಅಲ್ಲಿಂದ ಹೊರಟಿದ್ದಾಳೆ.

ಚಾರು ಹಾಗೂ ರಾಮಾಚಾರಿ ಮಾತನಾಡುತ್ತಿದ್ದನ್ನು ಕೇಳಿಸಿಕೊಂಡ ಮುರಾರಿಗೆ ತುಂಬಾ ಶಾಕ್ ಆಗಿದೆ. ಈ ಕಡೆ ಮುರಾರಿ ಎಲ್ಲವನ್ನು ಕೇಳಿಸಿಕೊಂಡಿದ್ದಾನೆ ಎಂಬುದನ್ನು ತಿಳಿದ ರಾಮಾಚಾರಿ ಕೂಡ ಶಾಕ್ ಆಗಿದೆ. ರಾಮಾಚಾರಿ ಬೇಕು ಅಂತಲೇ ನೀನು ಯಾವಾಗ ಬಂದೆ ಎಂದು ಮುರಾರಿಗೆ ಕೇಳಿದ್ದಾನೆ. ಅದಕ್ಕೆ ನೀನು ಚಾರು ಇಬ್ಬರು ಮಾತನಾಡುತ್ತಿರುವಾಗಲೇ ಬಂದೆ, ನಾನು ಎಲ್ಲವನ್ನು ಕೇಳಿಸಿಕೊಂಡಿದ್ದೇನೆ ಎಂದು ಮುರಾರಿ ಹೇಳಿದ್ದಾನೆ.

ಇದಕ್ಕೆ ರಾಮಾಚಾರಿ ಚಿಕ್ಕಮಗಳೂರಿನಲ್ಲಿ ನಡೆದಂತಹ ಎಲ್ಲಾ ವಿಷಯವನ್ನು ಮುರಾರಿ ಬಳಿ ಹೇಳಿದ್ದಾನೆ. ಚಾರು ಚಿಕ್ಕಮಗಳೂರಿನಿಂದ ವಾಪಸ್ ಬರುವಾಗ ನನಗೆ ಇನ್ನೂ ಯಾರು ದಿಕ್ಕು ಕಣ್ಣು ಕಾಣದವಳನ್ನು ಯಾರು ಮದುವೆಯಾಗುತ್ತಾರೆ ಎಂದು ಸಾಯಲು ನಿರ್ಧಾರ ಮಾಡಿದ್ದಳು ಆಗ ನಾನು ಮದುವೆಯಾದೆ ಎಂದು ನಡೆದ ಎಲ್ಲಾ ವಿಚಾರವನ್ನು ರಾಮಾಚಾರಿ ಮುರಾರಿಗೆ ಹೇಳಿದ್ದಾನೆ. ಇದರಿಂದಾಗಿ ಮುರಾರಿ ಬೇಸರ ಮಾಡಿಕೊಂಡು ನಿನ್ನ ಮದುವೆಯಿಂದ ಮನೆಯಲ್ಲಿ ಯಾರಿಗೂ ಸಂತೋಷ ಇಲ್ಲ ಎಂದು ಹೇಳಿದ್ದಾನೆ.

ಜೈ ಶಂಕರ್ ಮನೆಯಲ್ಲಿ ಮದುವೆಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಾನ್ಯತಾಳೇ ಮುಂದೆ ನಿಂತು ದಿನಾಂಕ ಫಿಕ್ಸ್ ಮಾಡುವ ಕಾರ್ಯಕ್ಕೆ ಸಿದ್ಧತೆಯನ್ನು ಮಾಡುತ್ತಿದ್ದಾಳೆ. ಆದಷ್ಟು ಬೇಗ ಚಾರುಗೆ ಮದುವೆ ಮಾಡಿಸಬೇಕು ಎಂದು ಮಾನ್ಯತಾ ಅಂದುಕೊಂಡಿದ್ದಾಳೆ. ಜೈ ಶಂಕರ್ ಅಪ್ಪ-ಅಮ್ಮ ಸಹ ಮಗನ ಮನೆಗೆ ಬಂದಿದ್ದಾರೆ.

ಸರ್ವೇಶ ಮನೆಯಲ್ಲಿ ಬೇಕಾದ ಸಿದ್ಧತೆಗಳನ್ನ ಮಾಡಿದ್ದಾನೆ. ಹಣ್ಣು ಹೂವು ತಾಂಬೂಲ ಸೇರಿದಂತೆ ಎಲ್ಲವೂ ಸಿದ್ಧವಾಗಿದೆ.‌ ರಾಮಾಚಾರಿ ಎಂಗೇಜ್ಮೆಂಟ್ ಹಾಗೂ ಮದುವೆಗೆ ಮುಹೂರ್ತವನ್ನ ಸಿದ್ಧಪಡಿಸುವುದು ಮಾತ್ರ ಬಾಕಿ ಇದೆ. ಎಲ್ಲರೂ ರಾಮಾಚಾರಿ ಬರುವಿಕೆಗಾಗಿ ಕಾಯುತ್ತಾ ಇದ್ದಾರೆ.

ರಾಮಾಚಾರಿ ವೃತ್ತಿ ಧರ್ಮಕ್ಕೆ ಮೋಸ ಮಾಡಬಾರದು ಎಂಬ ಧರ್ಮ ಸಂಕಟಕ್ಕೆ ಸಿಲುಕಿದ್ದಾನೆ. ಚಾರುಗೆ ಮಾತ್ರ ಏನು ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಡೆ ಈಗಾಗಲೇ ಚಾರುಗೆ ಮದುವೆಯಾಗಿದೆ ಸ ಹೇಗೆ ಚಾರು ಬೇರೆಯವರ ಕೈಯಲ್ಲಿ ಹೂವನ್ನು ಮೂಡಿಸಿಕೊಳ್ಳುತ್ತಿದ್ದಾಳೆ ಎಂದು ಸಾನ್ವಿ ಟೆನ್ಶನ್ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಎಲ್ಲರೂ ಸಹ ಚಾರು ಮದುವೆಯ ಸಂಭ್ರಮದಲ್ಲಿದ್ದಾರೆ. ರಾಮಾಚಾರಿ ಚಾರುನಾ ಉಳಿಸಿಕೊಳ್ಳುತ್ತಾನ ನೋಡಬೇಕಿದೆ.

More from Filmibeat

English summary
Colors Kannada serial Ramachari here details about murari knows about charulatha and ramachari marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X