Ramachari: ಚಾರು ಮದುವೆಗೆ ಸಿದ್ಧತೆ; ಚಾರು ಮನೆಗೆ ಬಂದ ರಾಮಾಚಾರಿ
ರಾಮಾಚಾರಿ ಚಾರು ಮನೆಗೆ ಹೋಗುತ್ತಿದ್ದಾನೆ. ಈ ಕಡೆ ಚಾರು ರಾಮಾಚಾರಿಯನ್ನು ಮೀಟ್ ಮಾಡಿಕೊಂಡು ಮನೆಗೆ ಬಂದಿದ್ದಾಳೆ. ಚಾರು ಬಂದಿದ್ದನ್ನು ನೋಡಿದ ಜೈ ಶಂಕರ್ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ್ದಾರೆ. ಆದರೆ ಚಾರು ಮಾತ್ರ ಮನೆಯಲ್ಲಿ ನಡೆಯುತ್ತಿರುವ ಪ್ರಿಪರೇಷನ್ ಬಗ್ಗೆ ಜೈ ಶಂಕರ್ ಬಳಿ ಕೇಳಿದ್ದಾಳೆ. ಅಲ್ಲಿಗೆ ಬಂದಂತಹ ಚಾರು ತಾತ ಇದೆಲ್ಲವೂ ನಿನ್ನ ಮದುವೆ ಸಂಭ್ರಮ ಎಂದಿದ್ದಾರೆ.
ಬರೀ ಮದುವೆಗೆ ದಿನಾಂಕ ನಿಗದಿ ಮಾಡುವ ಕಾರ್ಯಕ್ರಮಕ್ಕೆ ಇಷ್ಟೊಂದು ಸಿದ್ಧತೆ ಬೇಕಿತ್ತಾ ಎಂದು ಚಾರು ಕೇಳಿದ್ದಾಳೆ. ಅಲ್ಲಿಗೆ ಬಂದ ಮಾನ್ಯತಾ ನನ್ನ ಮಗಳ ಮದುವೆ ಎಂದರೆ ಹೀಗೆ ಇವತ್ತು ಹೂವು ಮೂಡಿಸುವ ಶಾಸ್ತ್ರವೂ ಸಹ ಇದೆ ಅದಕ್ಕಾಗಿ ಎಷ್ಟು ಗ್ರ್ಯಾಂಡ್ ಆಗಿ ಅರೇಂಜ್ಮೆಂಟ್ ಮಾಡಲಾಗಿದೆ ಎಂದು ಹೇಳಿದ್ದಾಳೆ.

ಇದೆಲ್ಲವನ್ನು ಕೇಳಿಸಿಕೊಂಡ ಚಾರು ನೋ ಎಂದು ಕಿರುಚಿದ್ದಾಳೆ ಇದಕ್ಕೆ ಮನೆಯಲ್ಲಿದ್ದವರೆಲ್ಲ ಒಂದು ಕ್ಷಣ ಗಾಬರಿಯಾಗಿದ್ದಾರೆ. ಯಾಕೆ ಚಾರು ನಿನಗೆ ಇಷ್ಟವಾಗಲಿಲ್ಲವ ಎಂದು ಕೇಳಿದ್ದಾರೆ ಇದಕ್ಕೆ ಅಪ್ಪ ಸುಮ್ಮನೆ ಯಾಕೆ ಇಷ್ಟೊಂದು ಗ್ರಾಂಡ್ ಆಗಿ ಎಲ್ಲ ವ್ಯವಸ್ಥೆ ಮಾಡಿಸಿದ್ದೀರಿ ಎಂದು ಕೇಳಿದ್ದಾಳೆ.
ಚಾರು ಮನೆಗೆ ವಿಕಾಸ್ ಬಾನೇರಿ ಕುಟುಂಬದವರು ಬಂದಿದ್ದಾರೆ ಹೂ ಮುಡಿಸುವ ಶಾಸ್ತ್ರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚಿಂಟು ತನ್ನ ಅಕ್ಕನಿಗೆ ಗಂಡಿನ ಕಡೆಯವರು ಬಂದರೂ ಎಂದು ತಿಳಿಸಲು ಓಡಾಡಿ ಬಂದಿದ್ದಾನೆ. ಚಿಂಟು ರೂಮಿಗೆ ಬಂದು ಗಂಡಿನ ಕಡೆಯವರು ಬಂದರೂ ಎಂದು ಹೇಳಿದರು ಸಹ ಚಾರು ಮುಖದಲ್ಲಿ ಯಾವುದೇ ಸಂಭ್ರಮವಾಗಲಿ ನಾಚಿಕೆಯಾಗಲಿ ಇಲ್ಲ.
ಇದನ್ನು ಗುರುತಿಸಿದ ಚಿಂಟು ಯಾಕೆ ಅಕ್ಕ ನೀನು ಖುಷಿ ಪಡುತ್ತಿಲ್ಲ ಎಂದು ಕೇಳಿದ್ದಾನೆ. ಇದೇ ವೇಳೆ ಚಾರು ಚಿಂಟುಗೆ ಬೈದು ರೂಮಿನಿಂದ ಹೊರಗೆ ಕಳಿಸಿದ್ದಾಳೆ. ಸಾನ್ವಿ ಸಹ ಚಿಕ್ಕ ಹುಡುಗನಿಗೆ ಯಾಕೆ ಬೈದೆ ಎಂದು ಚಾರುಗೆ ಕೇಳಿದ್ದಾಳೆ ನನ್ನ ಟೆನ್ಶನ್ ನಲ್ಲಿ ನಾನು ಇದ್ದೀನಿ ಎಂದು ಸಾನ್ವಿಗೆ ಚಾರು ಹೇಳಿದ್ದಾಳೆ. ಹೂ ಮುಡಿಸಿ ಬಿಟ್ಟರೆ ಏನು ಮಾಡುತ್ತೀಯಾ ಎಂದು ಸಾನ್ವಿ ಚಾರುಗೆ ಕೇಳಿದ್ದಕ್ಕೆ ಅದೆಲ್ಲವೂ ಸಾಧ್ಯವಿಲ್ಲ ಎಂದು ಚಾರು ಸಾನ್ವಿಗೆ ಹೇಳಿದ್ದಾಳೆ.
ರಾಮಾಚಾರಿ ಬರೆದು ದೇವರ ಹುಂಡಿಗೆ ಹಾಕಿರುವ ಪತ್ರ ಕೋದಂಡನ ಕೈ ಸೇರಿತ್ತು ನಂತರ ತನ್ನ ತಂದೆಗೆ ಆ ಪತ್ರವನ್ನು ತಂದು ಕೊಟ್ಟಿದ್ದಾನೆ. ಇದನ್ನು ಮನೆಯವರೆಲ್ಲರ ಮುಂದೆಯೂ ಸಹ ನಾರಾಯಣ ಆಚಾರ್ಯರು ಓದಿದ್ದಾರೆ. ರಾಮಾಚಾರಿ ನಮ್ಮ ಬಳಿ ಹೇಳಿಕೊಳ್ಳದೆ ಯಾಕೆ ಈ ರೀತಿ ಪಶ್ಚಾತಾಪವನ್ನು ಅನುಭವಿಸುತ್ತಿದ್ದಾನೆ ಎಂದು ಮನೆಯವರೆಲ್ಲರೂ ಸಹ ಚಿಂತೆ ಮಾಡುತ್ತಿದ್ದಾರೆ.
ಅಜ್ಜಿ ಸಹ ನಮ್ಮ ಬಳಿ ಹೇಳಿಕೊಳ್ಳಲಿಲ್ಲ ಎಂದರೆ ಏನೋ ದೊಡ್ಡ ತಪ್ಪನ್ನೇ ಮಾಡಿರಬೇಕು ಏನು ದೊಡ್ಡ ಅನಾಹುತ ಸಂಭವಿಸಿದೆ ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿ ಮಾತಿಗೆ ಕೋದಂಡ ಸಹ ಧನಿ ಸೇರಿಸಿ ನನಗೂ ಆಗೆ ಅನ್ನಿಸುತ್ತಿದೆ ಎಂದು ಹೇಳಿದ್ದಾನೆ. ಇದಕ್ಕೆ ನಾರಾಯಣ ಆಚಾರ್ಯರು ನೀವು ಮಾತನಾಡುತ್ತಿರುವ ಊಹಾ ಪೋಹವನ್ನು ಮೊದಲು ನಿಲ್ಲಿಸಿ ಎಂದು ಹೇಳಿದ್ದಾರೆ.
ಚಾರು ಮನೆಗೆ ರಾಮಾಚಾರಿ ಬಂದಿದ್ದಾನೆ ಮುರಾರಿ ಸಹ ಗೀತೋಪದೇಶವನ್ನು ರಾಮಾಚಾರಿಗೆ ಮಾಡಿದ್ದಾನೆ. ಮೊದಲು ನೀನು ಯಾರನ್ನು ಶತ್ರು ಅಂದುಕೊಂಡೆಯೋ ಅವರೇ ಈಗ ಮಿತ್ರರಾಗುತ್ತಿದ್ದಾರೆ. ಯಾರನ್ನು ದ್ವೇಷಿಸಿ ದೂರ ಮಾಡಿಕೊಳ್ಳಬೇಕು ಎನ್ನುತ್ತಿದ್ದೆಯೋ ಅವರೇ ನಿನ್ನ ಬಾಳ ಸಂಗಾತಿಯಾಗಿದ್ದಾರೆ ಇದೇ ವಿಪರೀತ , ವಿಧಿ ವಿಲಾಸ ಎಂದು ಮುರಾರಿ ರಾಮಾಚಾರಿಗೆ ಹೇಳಿದ್ದಾನೆ. ರಾಮಾಚಾರಿ ಸ್ವಿಮ್ಮಿಂಗ್ ಪೂಲ್ ಬಳಿ ಚಾರುವನ್ನ ಭೇಟಿಯಾಗಲು ಹೋಗಿದ್ದಾನೆ.
ಚಿಂಟು ಬಂದು ರಾಮಾಚಾರಿ ಬಂದರು ಎಂದು ಹೇಳಿದಾಗ ಅಲ್ಲಿಂದ ಚಾರು ಸಹ ರಾಮಾಚಾರಿಯನ್ನ ಮೀಟ್ ಮಾಡಲು ಹೋಗಿದ್ದಾಳೆ ಮುಂದೆ ಚಾರುಗೆ ಹೂ ಮುಡಿಸುವ ಶಾಸ್ತ್ರ ನಡೆಯುತ್ತದಾ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











