Ramachari: ಚಾರು ಮದುವೆ ನಿಗದಿ ಮಾಡಿದ ರಾಮಾಚಾರಿ!

By ಶೃತಿ ಹರೀಶ್ ಗೌಡ

ರಾಮಾಚಾರಿ ಚಾರು ಮನೆಗೆ ಬಂದಿದ್ದಾನೆ ಈ ಕಡೆ ಸ್ವಿಮ್ಮಿಂಗ್ ಪೂಲ್ ಬಳಿ ರಾಮಾಚಾರಿ ಗೆ ಚಾರು ಮನೆಯಲ್ಲಿ ನನಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ರಾಮಾಚಾರಿ ನೀವು ತಾಳ್ಮೆಯಿಂದಿರಿ ಎಂದು ಹೇಳಿದ್ದಾನೆ ಇದಕ್ಕೆ ಚಾರು ನೀನು ತಾಳ್ಮೆಯ ಪಾಠವನ್ನು ಪದೇ ಪದೇ ಹೇಳಬೇಡ ಎಂದು ಎಂದಿದ್ದಾಳೆ.

ಮನೆಯಲ್ಲಿ ಇವತ್ತು ಹೂ ಮೂಡಿಸುವ ಶಾಸ್ತ್ರವನ್ನು ಏರ್ಪಾಟು ಮಾಡಿದ್ದಾರೆ ಇದು ನನಗೂ ಸಹ ತಿಳಿದಿರಲಿಲ್ಲ ನಾನು ಮನೆಗೆ ಬಂದ ನಂತರವೇ ತಿಳಿದಿದ್ದು ಎಂದು ರಾಮಾಚಾರಿಯ ಬಳಿ ಚಾರು ಹೇಳುತ್ತಿದ್ದಾಳೆ. ಚಾರು ಹೇಳುತ್ತಿರುವುದನ್ನು ಕೇಳುತ್ತಿರುವ ರಾಮಾಚಾರಿಗೆ ತುಂಬಾ ಶಾಕ್ ಆಗಿದೆ.

Colors Kannada Ramachari serial Written Update on March 15th episode

ನಿನ್ನ ಎದುರುಗಡೆಯೇ ಇನ್ನೊಬ್ಬ ವ್ಯಕ್ತಿ ನನಗೆ ಹೂ ಮೂಡಿಸುವುದು ನಿನಗೆ ಇಷ್ಟ ಇದೆಯಾ ಎಂದು ಚಾರು ಪ್ರಶ್ನೆ ಮಾಡಿದ್ದಾಳೆ.‌ ಚಾರು ಕೇಳುತ್ತಿರುವ ಪ್ರಶ್ನೆಗಳಿಗೆ ರಾಮಾಚಾರಿ ತಲೆ ತಗ್ಗಿಸಿ ನಿಂತಿದ್ದಾನೆ. ಇನ್ನು ಎಲ್ಲವೂ ನಿನ್ನ ಕೈಲಿದೆ ಸುಳ್ಳು ಹೇಳಿ ಮದುವೆಯನ್ನ ಮುಂದೂಡು ಎಂದು ಚಾರು ಹೇಳಿದ್ದಾಳೆ.

ರಾಮಾಚಾರಿ ಬಗ್ಗೆ ಜೈ ಶಂಕರ್ ತುಂಬಾ ಒಳ್ಳೆಯ ಮಾತುಗಳನ್ನು ಆಡಿದ್ದಾರೆ ಅವರು ಒಂದು ಮುಹೂರ್ತವನ್ನು ಇಟ್ಟು ಕೊಟ್ಟರೆ ಅದು ಸಕ್ಸಸ್ ಆಗುತ್ತದೆ ಎಂದು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ಬಾನೇರಿ ಸಹ ತುಂಬಾ ಖುಷಿಯಿಂದ ಎಲ್ಲವನ್ನು ಕೇಳುತ್ತಿದ್ದಾನೆ.

ಮನೆಯ ಒಳಗೆ ಬಂದ ರಾಮಾಚಾರಿಯನ್ನು ನೋಡಿದ ವಿಕಾಸ್ ಬಾನೇರಿ ಶಾಕ್ ಆಗಿದ್ದಾನೆ ಇವನು ಯಾಕೆ ಇಲ್ಲಿಗೆ ಬಂದ ಎಂದು ನಡೆದ ಎಲ್ಲಾ ಘಟನೆಗಳನ್ನು ವಿಕಾಸ್ ನೆನಪಿಸಿಕೊಳ್ಳುತ್ತಿದ್ದಾನೆ. ನನ್ನ ಮೇಲಿರುವ ದ್ವೇಷಕ್ಕೆ ಮದುವೆಯನ್ನ ಮುಂದೂಡಬಹುದು ಎಂದು ಯೋಚನೆ ಮಾಡುತ್ತಿದ್ದಾನೆ.

ರಾಮಾಚಾರಿ ಎಲ್ಲರಿಗೂ ನಮಸ್ಕಾರವನ್ನು ಮಾಡಿ ನಿಶ್ಚಿತಾರ್ಥದ ಡೇಟ್ ಫಿಕ್ಸ್ ಮಾಡಲು ಪಂಚಾಂಗದ ಬುಕ್ಕನ್ನು ನೋಡುತ್ತಿದ್ದಾನೆ ಹಳೆದು ತೂಗಿ ಒಂದು ಮುಹೂರ್ತವನ್ನು ಕೊಟ್ಟಿದ್ದಾನೆ. ಇದೇ ವೇಳೆ ಮನೆಯವರೆಲ್ಲರೂ ಸಹ ಖುಷಿಯಾಗಿ ಇದ್ದಾರೆ ಒಬ್ಬರಿಗೊಬ್ಬರು ಕಂಗ್ರಾಜುಲೇಷನ್ಸ್ ಹೇಳಿಕೊಂಡು ಸಂಭ್ರಮಪಟ್ಟಿದ್ದಾರೆ .ಪ್ರಕಾಶ್ ಬಾನೇರಿ ಮದುವೆಯ ಮುಹೂರ್ತವನ್ನು ಸಹ ಫಿಕ್ಸ್ ಮಾಡಲು ಹೇಳಿದ್ದಾರೆ.

ರಾಮಾಚಾರಿ ಆಗಬಹುದು ಎಂದು ಹತ್ತಿರದಲ್ಲೇ ಇರುವ ಡೇಟನ್ನು ಮನೆಯವರಿಗೆ ತಿಳಿಸಿದ್ದಾನೆ. ವಿಕಾಸ್ ಬಾನೇರಿ ರಾಮಾಚಾರಿ ಹೇಳಿದ ಮಾತಿನಿಂದ ತುಂಬಾ ಖುಷಿಯಾಗಿ ಇದ್ದಾನೆ. ರಾಮಾಚಾರಿ ಸುಳ್ಳು ಹೇಳುತ್ತಾನೆ ಎಂದುಕೊಂಡಿದ್ದ ಚಾರುಗೆ ತುಂಬಾ ಶಾಕ್ ಆಗಿದೆ. ಹೇಳದೆ ಕೇಳದೆ ಕುಳಿತ ಸ್ಥಳದಿಂದ ಓಡಾಡಿ ರೂಮಿಗೆ ಹೋಗಿದ್ದಾಳೆ. ಚಾರು ಮಾಡಿದ್ದನ್ನು ನೋಡಿದ ರಾಮಾಚಾರಿ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾನೆ.

ಚಾರು ಓಡೋಡಿ ರೂಮಿಗೆ ಬಂದಿದ್ದಕ್ಕೆ ಎಲ್ಲರೂ ಸಹ ಶಾಪ್ ಗೆ ಒಳಗಾಗಿದ್ದಾರೆ. ಮಾನ್ಯತಾ ಬೇಬಿ ಬೇಬಿ ಎಂದು ಕೂಗುತ್ತಿದ್ದರೂ ಸಹ ಚಾರು ಕಣ್ಣೀರು ಹಾಕಿಕೊಂಡು ರೂಮಿಗೆ ಬಂದು ಅಳುತ್ತಾ ಕುಳಿತಿದ್ದಾಳೆ. ಪ್ರಕಾಶ್ ಬಾನೇರಿ ಕುಟುಂಬದವರಿಗೆ ಮಾನ್ಯತಾ ನಾನು ಹೋಗಿ ಮಗಳನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾಳೆ.ಅಲ್ಲೇ ಇದ್ದ ಸಾನ್ವಿ ಆಂಟಿ ನಾನೇ ಹೋಗಿ ಸಮಾಧಾನ ಮಾಡಿ ಚಾರವನ್ನು ಕರೆದುಕೊಂಡು ಬರುತ್ತೇನೆ ಎಂದು ಅಂದಿದ್ದಾಳೆ.

ಚಾರು ರೂಮಿಗೆ ಬಂದ ಸಾನ್ವಿ ನೀನು ಈ ರೀತಿ ಆಡಿದರೆ ವಿಷಯ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾಳೆ. ಚಾರು ಗೊತ್ತಾಗ್ಲಿ ಬಿಡು ಎಂದು ಹೇಳಿದ್ದಕ್ಕೆ ವಿಷಯ ತಿಳಿದ ಕೂಡಲೇ ಈ ಮನೆ ರಣರಂಗವಾಗಿ ನಿರ್ಮಾಣವಾಗಲಿದೆ ಅದು ನಿನಗೆ ಗೊತ್ತಿದೆ ತಾನೇ ಎಂದಿದ್ದಾಳೆ ಸಾನ್ವಿ. ನನಗೆ ಹೂ ಮೂಡಿಸುವ ಶಾಸ್ತ್ರ ಇಷ್ಟವಾಗುತ್ತಿಲ್ಲ ಎಂದು ಚಾರು ಸಾನ್ವಿಗೆ ಹೇಳಿದ್ದಾಳೆ. ಸಾನ್ವಿ ಹಾಗೂ ಚಾರು ಮಾತನಾಡುತ್ತಿರುವುದನ್ನು ಚಿಂಟು ಕೇಳಿಸಿಕೊಂಡಿದ್ದಾನೆ.

More from Filmibeat

English summary
Colors Kannada serial Ramachari here details about ramachari fix the date charulatha marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X