Ramachari Serial: ರಾಮಾಚಾರಿಗೆ ಶಾಕ್ ಕೊಟ್ಟ ಚಾರು
ಚಾರು ರೂಮಿನಲ್ಲಿ ಅಳುತ್ತಾ ಕುಳಿತಿದ್ದಾಳೆ ಮಾನ್ಯತಾ ಏನಾಯಿತು ಎಂದು ಯೋಚನೆ ಮಾಡುತ್ತಿರುವಾಗ ಸಾನ್ವಿ ಎಲ್ಲರೂ ಇರುವ ಜಾಗಕ್ಕೆ ಬಂದಿದ್ದಾಳೆ. ಎನಾಯ್ತು ಎಂದು ಎಲ್ಲರೂ ಸಹ ಕೇಳಿದ್ದಕ್ಕೆ ಸಾನ್ವಿ ಸುಳ್ಳು ಹೇಳಿದ್ದಾಳೆ. ಇಷ್ಟು ಬೇಗ ಮದುವೆ ಫಿಕ್ಸ್ ಆಯಿತು ಎಂದು ಚಾರು ಡ್ಯಾನ್ಸ್ ಮಾಡುತ್ತಿದ್ದಾಳೆ ಎಂದು ಮ್ಯಾನೇಜ್ ಮಾಡಿದ್ದಾಳೆ.
ರಾಮಾಚಾರಿ ಚಾರು ಮನೆಯಲ್ಲಿ ಹೂ ಮೂಡಿಸುವ ಶಾಸ್ತ್ರಕ್ಕೆ ಸಕಲ ಸಿದ್ಧತೆಯನ್ನ ಮಾಡಿಕೊಂಡಿದ್ದಾನೆ. ಅಲ್ಲೇ ಇರುವ ಮುರಾರಿ ನಿನ್ನ ಹೆಂಡತಿಗೆ ಬೇರೆ ಒಬ್ಬರು ಹೂ ಮುಡಿಸಿದರೆ ಸರಿಯಾಗಿ ಎಂದು ಕೇಳಿದ್ದಾನೆ. ಇದಕ್ಕೆ ರಾಮಾಚಾರಿ ತಲೆತಗ್ಗಿಸಿದ್ದಾನೆ. ಸಾನ್ವಿ ರೂಮಿನಿಂದ ಚಾರುವನ್ನ ಕರೆದುಕೊಂಡು ಬಂದಿದ್ದಾಳೆ.

ರಾಮಾಚಾರಿ ಮಣೆಯ ಮೇಲೆ ಚಾರುವನ್ನು ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಚಾರು ಕೈಯಲ್ಲಿ ಕಳಸಕ್ಕೆ ಪೂಜೆಯನ್ನ ಮಾಡಿಸಿದ್ದಾನೆ ಇದೇ ವೇಳೆ ಚಾರು ರಾಮಾಚಾರಿಯನ್ನೇ ನೋಡುತ್ತಿದ್ದಾಳೆ. ಪೂಜೆ ಮುಗಿಸಿದ ನಂತರ ವಿಕಾಸ್ ಬಾನೇರಿಯನ್ನು ಚಾರು ಪಕ್ಕದಲ್ಲಿ ಕುಳಿತುಕೊಳ್ಳುವಂತೆ ರಾಮಾಚಾರಿ ಹೇಳಿದ್ದಾನೆ.
ಚಾರು ವಿಕಾಸ್ ಬಾನೇರಿ ತನ್ನ ಪಕ್ಕ ಕುಳಿತುಕೊಂಡಾಗ ತಾನು ಮೇಲಕ್ಕೆ ಎದ್ದಿದ್ದಾಳೆ. ಇದರಿಂದಾಗಿ ಎಲ್ಲರಿಗೂ ಕೂಡ ಶಾಕ್ ಆಗಿದೆ ಚಾರುವನ್ನು ಯಾಕೆ ಹೀಗೆ ಮಾಡಿದೆ ಎಂದು ಕೇಳುತ್ತಿದ್ದಾರೆ ಇದೆಲ್ಲವೂ ರಾಮಾಚಾರಿಗೆ ಗೊತ್ತು ಎಂದು ರಾಮಾಚಾರಿಯ ಮೇಲೆ ಎತ್ತಿ ಹಾಕಿದ್ದಾಳೆ. ಚಾರು ಮಾತನಾಡಿದ್ದನ್ನು ಕೇಳಿ ಸತ್ಯ ಇಂದು ಹೊರಬೀಳಲಿದೆ ಎಂದು ರಾಮಾಚಾರಿ ಅಂದುಕೊಂಡಿದ್ದಾನೆ.
ಮುರಾರಿ ಸಹ ಮೇಡಂ ಇವತ್ತು ನಮ್ಮ ಕುತ್ತಿಗೆಗೆ ಕತ್ತಿ ಇಟ್ಟು ಬಿಟ್ಟರು ಎಂದು ಅಂದುಕೊಂಡಿದ್ದಾನೆ ಇದನ್ನು ರಾಮಾಚಾರಿ ಬಳಿ ಸಹ ಹೇಳಿದ್ದಾನೆ. ನೋಡ ನೋಡುತ್ತಿದ್ದಂತೆ ರಾಮಾಚಾರಿ ಯ ಟೆನ್ಶನ್ ಹೆಚ್ಚಾಗಿದೆ ಇದನ್ನು ಅರಿತುಕೊಂಡ ಚಾರು ನನ್ನ ಫ್ರೆಂಡ್ ಮದುವೆಯನ್ನು ರಾಮಾಚಾರಿ ಮಾಡಿಸಿದ ಆ ವೇಳೆ ಶಾಸ್ತ್ರದಲ್ಲಿ ಗಂಡು ಹೆಣ್ಣನ್ನ ಎದುರು ಬದುರಾಗಿ ಕುಳಿಸಲಾಗಿತ್ತು ಎಂದು ಹೇಳಿದ್ದಾಳೆ. ಈ ರೀತಿ ಹೇಳಿದ ನಂತರ ಎಲ್ಲರ ಮುಖದಲ್ಲೂ ನಗು ಚೆಲ್ಲಿದೆ.
ಅಜ್ಜಿ ಮನೆಯೊಳಗೆ ಗಾಬರಿಯಿಂದ ಓಡೋಡಿ ಬಂದಿದ್ದಾರೆ ನಾರಾಯಣ ಆಚಾರ್ಯರು ಹಾಗೂ ಜಾನಕಿಯನ್ನು ಬೇಗ ಬರುವಂತೆ ಕರೆದಿದ್ದಾರೆ. ಮನೆಯೊಳಗೆ ಬಂದ ಆಚಾರ್ಯರು ಏನಾಯಿತು ಎಂದು ಕೇಳಿದ್ದಾರೆ. ಅಂಗಳದಲ್ಲಿ ಬಂದು ಕಾಗೆ ಕುಳಿತುಕೊಂಡಿದೆ ಇದು ಅಪಶಕುನ ಎಂದು ಅಜ್ಜಿ ಗಾಬರಿಯಾಗಿದ್ದಾರೆ. ನಾರಾಯಣ ಆಚಾರ್ಯರು ಎಲ್ಲರಿಗೂ ಧೈರ್ಯವನ್ನ ಹೇಳಿದ್ದಾರೆ ಏನು ಅಪಶಕುನ ಆಗುವುದಿಲ್ಲ ಎಂದು ಹೇಳಿದ್ದಾರೆ ಆದರೂ ಸಹ ಅಜ್ಜಿಯ ಮನಸ್ಸು ಒಪ್ಪುತ್ತಿಲ್ಲ.
ಮನೆಯಲ್ಲಿ ಎಲ್ಲರೂ ಕುಳಿತುಕೊಂಡು ಮಾತನಾಡುತ್ತಿದ್ದಾರೆ ಇದೇ ವೇಳೆ ಮನೆಗೆ ಓಡೋಡಿ ಬಂದ ಕೋದಂಡನಿಗೆ ರಾಮಾಚಾರಿಯ ಬಗ್ಗೆ ಮಹತ್ವದ ಸುಳಿವೊಂದು ಸಿಕ್ಕಿದೆ. ರಾಮಾಚಾರಿ ಚಿಕ್ಕಮಗಳೂರಿಗೆ ಚಾರುವನ್ನು ಕರೆದುಕೊಂಡು ಹೋದ ಬಗ್ಗೆ ಕೋದಂಡ ಮನೆಯಲ್ಲಿರುವ ಎಲ್ಲರಿಗೂ ತಿಳಿಸಿದ್ದಾನೆ. ಇದೇ ವೇಳೆ ಅಜ್ಜಿ ನಾನು ಹೇಳುತ್ತಿದ್ದೆ ತಾನೇ ಏನೋ ಒಂದು ಆಗಬಾರದು ಆಗಿದೆ ಯಾವುದೋ ಒಂದು ಕೆಟ್ಟ ಘಟನೆ ನಡೆದಿದೆ ಎಂದಿದ್ದಾರೆ.
ಇದನ್ನೆಲ್ಲಾ ಕೇಳಿಸಿಕೊಂಡ ನಾರಾಯಣ ಆಚಾರ್ಯರು ನಾನು ರಾಮಾಚಾರಿ ಬಂದ ಮೇಲೆ ಎಲ್ಲವನ್ನು ವಿಚಾರ ಮಾಡುತ್ತೇನೆ ಅಲ್ಲಿಯವರೆಗೂ ನೀವೆಲ್ಲರೂ ಸುಮ್ಮನೆ ಇರಿ ಎಂದು ಮನೆಯವರಿಗೆ ಧೈರ್ಯವನ್ನು ತುಂಬಿದ್ದಾರೆ. ಚಾರುಗೆ ಕಣ್ಣು ಹೋದಾಗ ಮಾನ್ಯತಾ ಮಾಡಿದ ಎಲ್ಲಾ ವಿಚಾರವನ್ನು ನಾರಾಯಣ ಆಚಾರ್ಯರ ಮುಂದೆ ಜಾನಕಿ ಹೇಳಿದ್ದಾರೆ. ಕೇಡು ಬಯಸಿದವರಿಗೆ ರಾಮಾಚಾರಿ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ ಎಂದು ಕೋದಂಡ ಬೇಸರ ಮಾಡಿಕೊಂಡಿದ್ದಾನೆ.


Click it and Unblock the Notifications











