Ramachari: ಚಾರುಗೆ ಹೂ ಮುಡಿಸಿದ ರಾಮಾಚಾರಿ
ಚಾರುಲತಾ ಹೇಗೋ ರಾಮಾಚಾರಿ ಪಕ್ಕದಲ್ಲಿ ಹೋಗಿ ಕುಳಿತುಕೊಂಡಿದ್ದಾಳೆ ಇದರಿಂದಾಗಿ ರಾಮಾಚಾರಿಗೂ ಸಹ ಖುಷಿಯಾಗಿದೆ. ಚಾರು ಕೈಯಲ್ಲಿ ಕಳಶ ಪೂಜೆ ಎಲ್ಲವನ್ನು ಮಾಡಿಸುತ್ತಿದ್ದಾನೆ ಚಾರುಗೆ ರಾಮಾಚಾರಿ ಪೂಜೆ ಮಾಡಿಸುತ್ತಿದ್ದರೆ ಮುರಾರಿ ವಿಕಾಸ್ ಬಾನೇರಿ ಕೈಯಲ್ಲಿ ಪೂಜೆ ಮಾಡಿಸುತ್ತಿದ್ದಾನೆ. ವಿಕಾಸ್ ಬಾನೇರಿ ಕೋಪ ಮಾಡಿಕೊಂಡು ಪೂಜೆ ಮಾಡುತ್ತಿದ್ದಾನೆ.
ಚಾರು ಮಾತ್ರ ತುಂಬಾ ಖುಷಿಯಾಗಿ ರಾಮಾಚಾರಿಯನ್ನ ನೋಡಿಕೊಂಡು ಪೂಜೆ ಮಾಡುತ್ತಿದ್ದಾಳೆ. ರಾಮಾಚಾರಿ ಚಾರು ಸರಿಯಾಗಿ ಪೂಜೆ ಮಾಡದೇ ಇರುವುದಕ್ಕೆ ತಾನೇ ಗಂಧದಕಡ್ಡಿ ಹಾಗೂ ಮಂಗಳ ಅರತಿಯನ್ನು ಬೆಳಗಿಸುತ್ತಿದ್ದಾನೆ. ನಂತರ ಚಾರು ಬೆರಳನ್ನು ಹಿಡಿದುಕೊಂಡು ಅರಿಶಿಣ ಹಾಗೂ ಕುಂಕುಮವನ್ನು ಹಚ್ಚಿದ್ದಾನೆ.

ಇದೇ ವೇಳೆ ಜಾರು ಫೋನ್ ಬಂದಂತೆ ನಾಟಕವಾಡಿ ರಾಮಾಚಾರಿ ನಿನ್ನ ಫೋನ್ ಸ್ವಿಚ್ ಆಫ್ ಆಗಿದೆಯಂತೆ ಆಫೀಸ್ ನಿಂದ ಕಾಲ್ ಬಂದಿದೆ ಎಂದು ಕಿವಿಯ ಹತ್ತಿರ ಹೋಗಿ ನೀನು ನನಗೆ ಹೂವನ್ನ ಮೂಡಿಸಬೇಕು ಅರ್ಥವಾಯಿತು ತಾನೇ ಎಂದು ಹೇಳಿದ್ದಾಳೆ. ಅವರು ಹೇಳಿದ ಮಾತಿಗೆ ಓಕೆ ತಾನೇ ಎಂದು ಚಾರು ಕೇಳಿದ್ದಕ್ಕೆ ಅಲ್ಲಿದ್ದವರನ್ನು ನೋಡಿದ ರಾಮಾಚಾರಿ ಓಕೆ ಮೇಡಂ ಎಂದಿದ್ದಾನೆ.
ವಿಕಾಸ್ ಬಾನೇರಿಯನ್ನು ಚಾರು ಬಳಿ ಕರೆದಿರುವ ರಾಮಾಚಾರಿ ಸರ್, ನೀವು ಈಗ ಹೂವನ್ನು ಮುಡಿಸಿ ಎಂದು ಹೇಳಿದ್ದಾನೆ. ಸರಿಯಾದ ರೀತಿಯಲ್ಲಿ ವಿಕಾಸ್ ಬಾನೇರಿಗೆ ಹೂವು ಮೂಡಿಸಲು ಆಗಿಲ್ಲ ಈ ವೇಳೆ ರಾಮಾಚಾರಿ ಹೂವನ್ನ ಮೂಡಿಸಿದ್ದಾನೆ. ಸರ್ ಈ ರೀತಿ ಹಿಡಿದುಕೊಂಡು ಈ ರೀತಿ ಹೂವನ್ನ ಮೂಡಿಸಬೇಕು ಎಂದು ಹೇಳಿದ್ದಾನೆ.
ನಂತರ ರಾಮಾಚಾರಿ ಹೂ ಮುಡಿಸಿದ್ದಾನೆ ಈ ವೇಳೆ ವಿಕಾಸ್ ನಾನು ಹೂ ಮುಡಿಸಿಲ್ಲ ಎಂದು ಹೇಳುವಾಗ ಮುರಾರಿ ಬೇರೆ ಕಡೆಗೆ ಗಮನ ಸೆಳೆದು ಗಟ್ಟಿಮೇಳ ಗಟ್ಟಿಮೇಳ ಎಂದು ಹೇಳಿದ್ದಾನೆ. ಇದಕ್ಕೆ ರಾಮಾಚಾರಿ ಇದು ಮದುವೆಯಲ್ಲ ಹೂ ಮುಡಿಸುವ ಶಾಸ್ತ್ರ ಎಂದು ಹೇಳಿದಾಗ ಎಲ್ಲರೂ ಬಂದು ಅಕ್ಷತೆ ಹಾಕಿ ಎಂದು ಹೇಳಿದ್ದಾನೆ. ಈ ವೇಳೆ ವಿಕಾಸ್ ಕೈಗೂ ಸಹ ಅಕ್ಷತೆ ಕೊಟ್ಟಿದ್ದಾನೆ ವಿಕಾಸ್ ಕೋಪದಲ್ಲಿ ಅಕ್ಷತೆಯನ್ನು ಹಾಕಿ ಅವರ ಅಪ್ಪನ ಬಳಿ ಹೋದಾಗ ಎಲ್ಲರೂ ಸಹ ಕಂಗ್ರಾಜುಲೇಷನ್ ಹೇಳಿದ್ದಾರೆ.
ಚಾರು ಮತ್ತು ರಾಮಾಚಾರಿ ನಡೆದುಕೊಳ್ಳುತ್ತಿರುವ ರೀತಿಗೆ ವಿಕಾಸ್ ಬಾನೇರಿಗೆ ಒಂದು ಕಡೆ ಅನುಮಾನ ಬಂದಿದೆ. ಇದರಿಂದ ಕೋಪದಲ್ಲಿ ಕುದಿದು ಹೋಗುತ್ತಿದ್ದಾನೆ ಮುಂದೆ ನಿನ್ನನ್ನ ನೋಡಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದಾನೆ.
ಚಾರುಗೆ ರಾಮಾಚಾರಿಯೇ ಹೂವು ಮೂಡಿಸಿದ ಎಂದು ಸಾನ್ವಿ ಹೇಳಿದ ಮಾತನ್ನು ಕೇಳಿದ ಚಾರುಗೆ ತುಂಬಾ ಖುಷಿಯಾಗಿದೆ. ಇದೇ ವೇಳೆ ಪ್ರೀತಿಯಿಂದ ರಾಮಾಚಾರಿ ಕಡೆ ತಿರುಗಿ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾಳೆ. ನಾನು ಹೇಳಿದ ಕೆಲಸವನ್ನು ರಾಮಾಚಾರಿ ಮಾಡಿದ ಎಂದು ಸಾನ್ವಿ ಬಳಿ ಹೇಳಿಕೊಂಡು ಸಂಭ್ರಮ ಪಡುತ್ತಿದ್ದಾಳೆ.
ರಾಮಾಚಾರಿ ಎಲ್ಲಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದಾನೆ ಮನೆಯಲ್ಲಿ ಇರುವ ಯಾರು ಸಹ ರಾಮಾಚಾರಿ ಬಳಿ ಮಾತನಾಡುತ್ತಿಲ್ಲ. ಇದರಿಂದ ಏನಾದರೂ ಸತ್ಯ ಗೊತ್ತಾಯಿತಾ ಎಂಬ ಗೊಂದಲದಲ್ಲಿ ರಾಮಾಚಾರಿ ಇದ್ದಾನೆ. ಇದೇ ವೇಳೆ ನಾರಾಯಣ ಆಚಾರ್ಯರು ನನ್ನ ಕಣ್ಣಲ್ಲಿ ಕಣ್ಣಿಟ್ಟು ಸತ್ಯವನ್ನ ಹೇಳು ಎಂದು ಕೇಳಿದ್ದಾರೆ.
ಇದೇ ವೇಳೆ ರಾಮಾಚಾರಿ ತಾನು ಚಿಕ್ಕಮಗಳೂರಿಗೆ ಯಾಕೆ ಹೋದೆ ಎಂಬ ವಿಷಯದ ಬಗ್ಗೆ ನಾರಾಯಣ ಆಚಾರ್ಯರ ಬಳಿ ಹೇಳಿದ್ದಾನೆ ಇದಕ್ಕೆ ನಾರಾಯಣ ಸರಿ ಈಗ ಇನ್ನೊಂದು ವಿಷಯ ಕೇಳುತ್ತೇನೆ ತಡಬಡಾಯಿಸದೇ ಉತ್ತರವನ್ನು ಕೊಡಬೇಕು ಎಂದು ಹೇಳಿದ್ದಾರೆ. ಅಲ್ಲಿಗೆ ರಾಮಾಚಾರಿ ಗಾಬರಿಯಾಗಿ ನಿಂತಿದ್ದಾನೆ.


Click it and Unblock the Notifications











