Ramachari: ಇಕ್ಕಟ್ಟಿಗೆ ಸಿಲುಕಿದ ಜೋಡಿ: ರಾಮಾಚಾರಿ ಮನೆಯಲ್ಲಿ ಚಾರು, ಮುಂದೇನು?
ರಾಮಾಚಾರಿ ಎದ್ದ ತಕ್ಷಣವೇ ತಾನು ಮುಖವನ್ನು ನೋಡಿದ್ದಾನೆ. ಇದರಿಂದಾಗಿ ಕೊಂಚ ಕಾಲ ಇದು ಕನಸು ನನಸೋ ಎಂದು ಅಂದುಕೊಂಡಿದ್ದಾನೆ. ಚಾರು, ರಾಮಾಚಾರಿಯ ಕೈ ಚಿವುಟಿ ಇದು ಕನಸಲ್ಲ ನನಸು ಎಂದು ಹೇಳಿದ್ದಾಳೆ. ರಾಮಾಚಾರಿಗೆ ಮನೆಯವರು ನೋಡಿದರೇ ಎಂಬ ಚಿಂತೆ ಕಾಡುತ್ತಿದೆ.
ಚಾರುಗೆ ರಾಮಾಚಾರಿ ನೀವು ಬರುವ ಮುನ್ನ ಕಾಲ್ ಮಾಡಿ ಬರಬೇಕಿತ್ತು ಎಂದು ಹೇಳಿದ್ದಾನೆ. ಇದಕ್ಕೆ ಚಾರು ನಾನು ಕಾಲ್ ಮಾಡಿ ಬಂದಿದ್ದರೆ ನೀನು ಬರಬೇಡ ಎಂದು ಹೇಳುತ್ತಿದ್ದೆ ಎಂದಿದ್ದಾಳೆ. ಈಗಲೇ ನಾನು ಸತ್ಯ ಹೇಳಲು ಆಗದೇ ಇರುವ ಪರಿಸ್ಥಿತಿಯಲ್ಲಿ ಇದ್ದೇನೆ, ನೀನು ಬೇರೆ ಬಂದಿದ್ದೀಯಾ ಎಂದು ಚಾರು ಬಳಿ ರಾಮಾಚಾರಿ ಹೇಳಿದ್ದಾನೆ.
ಹೆಂಡತಿಯಾದವಳಿಗೆ ಗಂಡನಿಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕಿದೆ, ಅದಕ್ಕಾಗಿ ನಾನು ಎಲ್ಲರ ಕಣ್ಣನ್ನು ತಪ್ಪಿಸಿ ಬಂದೆ ನೋಡು ನನಗೆ ಬಿದ್ದ ಕನಸ್ಸಿಗೂ ನಿನ್ನ ಕೈಗೆ ಗಾಯ ಆಗಿರುವುದಕ್ಕೂ ಎಲ್ಲಿಯ ಸಂಬಂಧವಿದೆ ಎಂದು ಗಾಯಕ್ಕೆ ಚಾರು ಔಷಧಿಯನ್ನು ಹಚ್ಚಿದ್ದಾಳೆ. ಆದರೆ ರಾಮಾಚಾರಿಗೆ ತುಂಬಾ ಗಾಬರಿಯಾಗುತ್ತಿದೆ.

ಚಾರು ಇರುವುದನ್ನು ನೋಡಿದ ಮುರಾರಿ
ಯಾವತ್ತೂ ರಾಮಾಚಾರಿ ರೂಮಿನ ಕಡೆ ಬಾರದ ನಾರಾಯಣ ಆಚಾರ್ಯರು ಇಂದು ರಾಮಾಚಾರಿ ರೂಮಿನ ಬಳಿ ಬಂದಿದ್ದಾರೆ. ರಾಮಾಚಾರಿ.. ರಾಮಾಚಾರಿ ಎಂದು ಜೋರಾಗಿ ಕರೆದಿದ್ದಾರೆ. ಈ ವೇಳೆ ನಾರಾಯಣ ಆಚಾರ್ಯರ ಧ್ವನಿ ಕೇಳಿದ ಚಾರು ಮತ್ತು ರಾಮಾಚಾರಿಗೆ ತುಂಬಾ ಗಾಬರಿ ಆಗಿದೆ. ನಾರಾಯಣ ಆಚಾರ್ಯರ ಧ್ವನಿಯನ್ನು ಕೇಳಿದ ಮನೆ ಮಂದಿಯಲ್ಲ ರಾಮಾಚಾರಿಯ ರೂಮಿನ ಬಳಿ ಬಂದಿದ್ದಾರೆ. ಎಲ್ಲರೂ ಎಷ್ಟು ಕೂಗಿದರು ಸಹ ರಾಮಾಚಾರಿ ಮಾತ್ರ ಬಾಗಿಲನ್ನು ತೆಗೆದಿಲ್ಲ

ಚಾರು ಎಲ್ಲಿ ಎಂದು ಹೇಳಿದ ಚಿಂಟು
ಬೆಳಗ್ಗೆ ಎದ್ದು ಮಾನ್ಯತಾ ಚಾರುವನ್ನು ಹುಡುಕುತ್ತಿದ್ದಾಳೆ. ಚಾರು ಮಾತ್ರ ಮನೆಯಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಇದರಿಂದಾಗಿ ಮನೆಯಲ್ಲಿ ಇರುವ ಎಲ್ಲರಿಗೂ ಗಾಬರಿ ಆಗಿದೆ. ಪ್ರತಿಯೊಬ್ಬರು ಚಾರುವನ್ನು ಹುಡುಕುತ್ತಿದ್ದಾರೆ ಸರ್ವೇಶ ಸಹ ಪಾರ್ಕಿಗೆ ಹೋಗಿ ನೋಡಿಕೊಂಡು ಬಂದಿದ್ದಾನೆ. ಚಿಂಟು ನನಗೆ ಗೊತ್ತು ಅಕ್ಕ ಎಲ್ಲಿ ಹೋಗಿದ್ದಾಳೆಂದು, ಆಯಿಟ್‌ಮೆಂಟ್ ತಗೊಂಡು ಎಲ್ಲೋ ಹೋದಳು ಎಂದಿದ್ದಾನೆ.

ಪ್ರಕಾಶ್ ಬಾನೇರಿಗೆ ಕರೆ ಮಾಡಿದ ಮಾನ್ಯತಾ
ಚಾರು, ಪ್ರಕಾಶ್ ಬಾನೇರಿಯ ಮನೆಗೆ ಹೋಗಿದ್ದಾಳೆ ಎಂದು ತಿಳಿದ ಮಾನ್ಯತಾ ಪ್ರಕಾಶ್ ಬಾನೇರಿಗೆ ಕರೆ ಮಾಡಿದ್ದಾಳೆ. ಈ ಕಡೆ ಪ್ರಕಾಶ್ ಬಾನೇರಿ ನಾಟಕದ ಮಾತುಗಳನ್ನ ಆಡಿ ಮಾನ್ಯತಾ ನಂಬುವಂತೆ ಮಾಡಿದ್ದಾನೆ. ಕೂಡಲೇ ಮಾನ್ಯತಾ, ಚಾರು ಕರೆದುಕೊಂಡು ಬರಲು ಪ್ರಕಾಶ್ ಬಾನೆರಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದಾಳೆ.

ರಾಮಾಚಾರಿಗೆ ಬೇರೆ ದಾರಿ ಇಲ್ಲ
ಚಾರುಗೆ ರಾಮಾಚಾರಿ ಮನೆಯಿಂದ ಹೊರಗೆ ಬಾರಲು ಆಗದಂತಂಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮಾಚಾರಿ ಸಹ ಏನು ಮಾಡಬೇಕು ಎಂದು ತಿಳಿಯದೇ ಪೇಚಿಗೆ ಸಿಲುಕಿದ್ದಾನೆ. ರಾಮಾಚಾರಿ ಕೈ ಸುಟ್ಟಿಕೊಂಡಿದ್ದು ಅದರಿಂದ ಜ್ವರ ಬಂದಿದೆ ಎಂದು ಹೇಳಿದ್ದಾನೆ. ಇದರಿಂದ ಮನೆಯವರು ಮತ್ತಷ್ಟು ಗಾಬರಿಯಾಗಿದ್ದಾನೆ. ಕೋದಂಡ ಬಂದು ಬಾಗಿಲನ್ನು ಬಡೆಯುತ್ತಿದ್ದಾನೆ ಇಲ್ಲದಿದ್ದರೆ ಬಾಗಿಲು ಹೊಡೆಯಲು ಮನೆಯವರು ಮಾತನಾಡಿಕೊಂಡಿದ್ದಾರೆ. ಈಗ ಬಾಗಿಲನ್ನು ತೆಗೆಯಲೇಬೇಕಾದ ಅನಿವಾರ್ಯತೆ ರಾಮಾಚಾರಿಗೆ ಎದುರಾಗಿದೆ.


Click it and Unblock the Notifications











