Ramachari: ರಾಮಾಚಾರಿ ಮನೆಗೆ ಬಂದ ಚಾರು ಸಿಕ್ಕಿ ಬೀಳ್ತಾಳಾ?

ಮನೆಯವರೆಲ್ಲರೂ ರಾಮಾಚಾರಿ ಎಂದು ಕರೆಯುತ್ತಿದ್ದರೆ ರಾಮಾಚಾರಿಗೆ ಏನು ಮಾಡಬೇಕು ಎಂದು ತಿಳಿಯದೆ ರೂಮಿನ ಬಾಗಿಲನ್ನ ತೆಗೆದಿರಲಿಲ್ಲ. ಕೋದಂಡ ಬಂದು ಜೋರಾಗಿ ಬಾಗಿಲನ್ನು ಬಡೆಯುವಾಗ ಇವನು ಬಾಗಿಲನ್ನೇ ಮುರಿದು ಹಾಕುತ್ತಾನೆ ಎಂದುಕೊಂಡು ಚಾರುಲತಾಳನ್ನು ತನ್ನ ರೂಮಿನಲ್ಲಿ ದೊಡ್ಡದಾಗಿ ಇದ್ದ ಒಂದು ಬಿದಿರಿನ ಬುಟ್ಟಿಯ ಒಳಗೆ ಅಡಗಿಸಿ ಇಟ್ಟಿದ್ದಾನೆ.
ನಂತರ ಈಗ ತಾನೇ ನಿದ್ದೆಯಿಂದ ಎಚ್ಚರ ಆದವರ ತರಹ ಮನೆಯವರ ಮುಂದೆ ನಾಟಕ ಆಡಿದ್ದಾನೆ. ಮನೆಯವರು ನಿನ್ನನ್ನು ಸುಮ್ಮನೆ ನಾವು ಅನುಮಾನಿಸಿದೆವು ದಯವಿಟ್ಟು ನಮ್ಮನ್ನೆಲ್ಲ ಕ್ಷಮಿಸು ಎಂದು ರಾಮಾಚಾರಿ ಬಳಿ ಕೇಳಿಕೊಂಡಿದ್ದಾರೆ. ನಂತರ ರಾಮಾಚಾರಿಗೆ ಮಾತ್ರೆಯನ್ನ ನೀಡಿ ಅಲ್ಲಿಯೇ ಎಲ್ಲರೂ ಕುಳಿತುಕೊಂಡಿದ್ದಾರೆ. ರಾಮಾಚಾರಿಯ ದೃಷ್ಟಿ ಮಾತ್ರ ರೂಮಿನ ಕಡೆಗೆ ನಿಂತಿದೆ.
ನಾನು ಎಲೆಯನ್ನು ಕೊಟ್ಟು ಬರಬೇಕು ಎಂದು ರಾಮಾಚಾರಿ ಮೇಲೆ ಎದ್ದಿದ್ದಾನೆ. ಆದರೆ ಕೋದಂಡನಿಗೆ ಈ ಕೆಲಸವನ್ನ ಜಾನಕಿಗೆ ನೇಮಿಸಿದ್ದಾರೆ. ನಿನ್ನ ಅಣ್ಣನೇ ಎಲ್ಲೆ ಕೊಡುವ ಕೆಲಸವನ್ನು ಮಾಡಿ ಬರುತ್ತಾನೆ ಇವತ್ತು ನೀನು ರೆಸ್ಟ್ ಮಾಡು ಎಂದು ಜಾನಕಿ ಹೇಳಿದ್ದಾರೆ. ಇದರಿಂದಾಗಿ ರಾಮಾಚಾರಿ ಗೆ ಮತ್ತಷ್ಟು ಗಾಬರಿಯಾಗಿದೆ.
ಕೋದಂಡ ರಾಮಾಚಾರಿ ರೂಮಿಗೆ ಹೋಗಿ ಒಂದೊಂದೇ ಊಟದ ಎಲೆಗಳನ್ನ ತೆಗೆದು ಕೆಳಗೆ ಹಾಕುತ್ತಿದ್ದಾನೆ ನಂತರ ಅವುಗಳನ್ನು ಜೋಡಿಸಿ ಕೊಳ್ಳುತ್ತಿದ್ದಾನೆ. ಇದರಿಂದಾಗಿ ಚಾರು ಆತಂಕ ಮತ್ತಷ್ಟು ಹೆಚ್ಚಾಗಿದೆ ನಾನೇನಾದರೂ ಕೋದಂಡನ ಕೈಗೆ ಸಿಕ್ಕಿದರೆ ನನ್ನನ್ನ ಕೊಂದೆ ಬಿಡುತ್ತಾನೆ ಎಂದು ಚಾರು ಅಂದುಕೊಂಡು ದೇವರ ಬಳಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾಳೆ.
ಈ ಕಡೆ ರಾಮಾಚಾರಿ ಮುರಾರಿಗೆ ದಯವಿಟ್ಟು ಹೇಗಾದರೂ ಮಾಡಿ ಬಚಾವ್ ಮಾಡು ಎಂದು ಸನ್ನೆಯ ಮೂಲಕ ಬೇಡಿಕೊಳ್ಳುತ್ತಿದ್ದಾನೆ. ರಾಮಾಚಾರಿ ಮಾಡುತ್ತಿರುವ ಸನ್ನೆಯಿಂದಾಗಿ ಚಾರು ಬಿದರಿನ ಬುಟ್ಟಿಯಲ್ಲಿ ಅಡಗಿ ಕುಳಿತಿದ್ದಾಳೆ ಎಂದು ಅರ್ಥವಾಗಿದೆ. ಕೋದಂಡ ಒಂದೊಂದೇ ಎಲೆಗಳನ್ನು ತೆಗೆಯುತ್ತಿರುವಂತೆ ರಾಮಾಚಾರಿಗೆ ಟೆನ್ಷನ್ ಹೆಚ್ಚಾಗಿದೆ.
ರಾಮಾಚಾರಿ ಮತ್ತು ಚಾರುವನ್ನು ರಕ್ಷಣೆ ಮಾಡಲು ಮುರಾರಿ ಹೊಟ್ಟೆ ನೋವಿನ ನಾಟಕವನ್ನು ಆಡಿದ್ದಾನೆ. ಎಲೆಗಳನ್ನು ಒಂದೊಂದಾಗಿ ತೆಗೆಯುತ್ತಿದ್ದ ಕೋದಂಡ ಸಹ ಮುರಾರಿ ಹೊಟ್ಟೆನೋವು ಎಂದು ಕೆಳಗೆ ಬಿದ್ದು ಹೊರಳಾಡುವುದನ್ನು ನೋಡಿ ವಾಪಸ್ ಬಂದಿದ್ದಾನೆ.
ಮುರಾರಿಗೆ ನೀರನ್ನು ಕುಡಿಸಿ ಸಮಾಧಾನವನ್ನು ಮನೆಯವರೆಲ್ಲರೂ ಮಾಡಿದ್ದಾರೆ.
ಆದರೆ ಮುರಾರಿ ಮಾತ್ರ ಚಾರುಗೆ ತನ್ನ ಹೊಟ್ಟೆ ನೋವಿನ ಜೊತೆಯಲ್ಲಿ ತಪ್ಪಿಸಿಕೊಳ್ಳಬೇಕು ಎಂದು ಡೈರೆಕ್ಷನ್ನನ್ನ ಹೇಳುತ್ತಿದ್ದಾನೆ. ಯಾವ ಮಾರ್ಗದಲ್ಲಿ ಹೋಗಬಹುದು ಎಂಬ ಬಗ್ಗೆಯೂ ಸಹ ಮಾಹಿತಿಯನ್ನು ರವಾನೆ ಮಾಡಿದ್ದಾನೆ. ಈ ಕಡೆ ಕೋದಂಡನಿಗೆ ಮುರಾರಿ ವರ್ತನೆ ಅನುಮಾನವನ್ನು ಹುಟ್ಟಿ ಹಾಕುತ್ತಿದೆ.
ಮಾನ್ಯತಾ ಗೆ ವಿಕಾಸ್ ಬಾನೇರಿ ಕರೆಯನ್ನು ಮಾಡಿದ್ದಾನೆ ಇದೇ ವೇಳೆ ಚಾರು ನಿಮ್ಮ ಮನೆಗೆ ಬಂದಿದ್ದಾಳೆ ನನ್ನ ಮಗಳು ನಿಮ್ಮನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದಾಳೆ ಎಂಬುದನ್ನು ಹೇಳಲು ನೀವು ನನಗೆ ಫೋನ್ ಮಾಡಿದ್ರಾ ಎಂದು ಒಂದೇ ಸಮನೆ ಮಾನ್ಯತಾ ವಿಕಾಸ್ ಬಾನೇರಿಗೆ ಪ್ರಶ್ನೆ ಕೇಳುತ್ತಿದ್ದಾಳೆ. ಇದಕ್ಕೆ ವಿಕಾಸ್ ಕೋಪ ಮಾಡಿಕೊಂಡು ಆಮೇಲೆ ಕಾಲ್ ಮಾಡುತ್ತೇನೆ ಎಂದು ಕಟ್ ಮಾಡಿದ್ದಾನೆ.
ತನ್ನ ಅಪ್ಪನನ್ನು ಕರೆದ ವಿಕಾಸ್ ಚಾರು ಮೇಲೆ ನನಗೆ ಅನುಮಾನವಿತ್ತು ಎಲ್ಲೋ ಸುತ್ತಾಡಲು ಹೋಗಿದ್ದಾಳೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಅವರ ಅಮ್ಮ ಅಂದುಕೊಂಡಿದ್ದಾರೆ ಎಂದು ಹೇಳಿದ್ದಾನೆ ಇದಕ್ಕೆ ಪ್ರಕಾಶ್ ಬಾನೇರಿ ಹೌದು ನೀನು ಅವಳನ್ನು ಫ್ರೀಯಾಗಿ ಬಿಟ್ಟು ನಂತರ ಇಡಿ ಎಂದು ಹೇಳಿದ್ದಾರೆ ಅವಳನ್ನು ಕರೆದುಕೊಂಡು ಅವರ ಮನೆಗೆ ಹೋಗು ಎಂದಿದ್ದಾನೆ.
ರಾಮಾಚಾರಿ ಎದೆಯಲ್ಲಿ ಢವಢವ ಶುರುವಾಗಿದೆ ಯಾಕೆಂದರೆ ವಿಕಾಸ್ ಬಾನೇರಿ ಚಾರುಗೆ ಕರೆ ಮಾಡಿದ್ದಾನೆ ಇದರಿಂದ ಫೋನ್ ರಿಂಗ್ ಆಗಿದೆ. ಎಲ್ಲರ ಗಮನ ಅಲ್ಲಿರುವ ಬುಟ್ಟಿಯ ಬಳಿ ಹೋಗಿದೆ. ಅದಕ್ಕೆ ಶ್ರುತಿ ಇದು ಅಣ್ಣನ ಫೋನ್ ಇರಬೇಕು ಎಲೆ ಜೋಡಿಸುವಾಗ ಬಿದ್ದು ಹೋಗಿದೆ ಎಂದಿದ್ದಾಳೆ. ಈಗ ಕೋದಂಡ ಅಲ್ಲಿಗೆ ಹೋಗಿದ್ದು ಎಲೆ ಎಲ್ಲವನ್ನು ತೆಗೆಯುತ್ತಿದ್ದಾನೆ ಚಾರು ಸಿಕ್ಕಿ ಬೀಳುವ ಚಾನ್ಸಸ್ ಹೆಚ್ಚಾಗಿದೆ.


Click it and Unblock the Notifications











