ರಾಮಾಚಾರಿ ಮನೆಯವರಿಂದ ಬಚಾವ್ ಆದ ರಾಮಾಚಾರಿ-ಚಾರು!
ಮುರಾರಿ ಮಾಡಿದ ಪ್ಲ್ಯಾನ್ ನಿಂದ ರಾಮಾಚಾರಿ ಹಾಗೂ ಚಾರು ಬಚಾವಾಗಿದ್ದಾರೆ. ರಾಮಾಚಾರಿ ಮನೆಯಲ್ಲಿ ಚಾರು ಸಂಕಷ್ಟಕ್ಕೆ ಸಿಲುಕಿದ್ದಳು. ಇನ್ನೇನು ಕೋದಂಡ ಚಾರುವನ್ನು ನೋಡಬೇಕು ಅಷ್ಟರಲ್ಲಿ ಮುರಾರಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಮುರಾರಿಯ ಪ್ಲ್ಯಾನ್‌ನಿಂದ ಚಾರು ಹೇಗೋ ಬಚಾವಾಗಿದ್ದಾಳೆ.
ಮುರಾರಿ ಹಾವು ಬಂತು ಎಂದು ಮನೆಯವರೆಲ್ಲರನ್ನು ಗಾಬರಿ ಪಡಿಸಿದ್ದಾನೆ. ಅಷ್ಟರಲ್ಲಿ ನಾರಾಯಣ ಆಚಾರ್ಯರು ಹಾವುಗಳು ದೇವರ ಸ್ವರೂಪ ಅದು ಹಾಗೆಲ್ಲ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಜಾನಕಿ ಹಾವು ಎಲ್ಲಿ ಹೋಯಿತು ಎಂದು ನೋಡುತ್ತಿದ್ದಾಳೆ. ಅಷ್ಟರಲ್ಲಿ ಅಜ್ಜಿ ಹಾರುವ ಹಾವುಗಳು ಇರುತ್ತವೆ ನೀನು ಈ ಕಡೆ ಬಾ ಎಂದು ಕರೆದುಕೊಂಡಿದ್ದಾರೆ. ಮುರಾರಿ ರಾಮಾಚಾರಿ ಗೆ ಚಾರುವನ್ನು ಹೊರಗಡೆ ಕರೆದುಕೊಂಡು ಹೋಗಿ ಬಿಡು ಎಂದು ಹೇಳಿದ್ದಾನೆ.

ನಂತರ ಎಲ್ಲರು ಕಣ್ಣು ಮುಚ್ಚಿ ಧ್ಯಾನ ಮಾಡುವಂತೆ ಹೇಳಿ ನಾರಾಯಣ ಆಚಾರ್ಯರಿಗೆ ಮಂತ್ರವನ್ನು ಹೇಳಿ ಎಂದಿದ್ದಾನೆ. ಹಾವಿನ ನೆಪದಲ್ಲಿ ಬುಟ್ಟಿಯ ಒಳಗೆ ಹಾವು ಹೋಗಿದೆ ಎಂದು ಚಾರುವನ್ನು ಮನೆಯಿಂದ ಆಚೆ ರಾಮಾಚಾರಿ ಬಿಟ್ಟು ಬಂದಿದ್ದಾನೆ. ಇದೇ ವೇಳೆ ರಾಮಾಚಾರಿಗೆ ಚಾರು ಐ ಲವ್ ಯು ಎಂದು ಹೇಳಿದ್ದಾಳೆ.
ರಾಮಾಚಾರಿ ಹಾಗೂ ಚಾರು ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ಬ್ರೋಕರ್ ಭರಣಿ ತೆಗೆದು ವಿಕಾಸ್ ಫೋನಿಗೆ ವಾಟ್ಸಪ್ ಮಾಡಿದ್ದಾನೆ. ಇದೇ ವೇಳೆ ಕರೆ ಮಾಡಿದ ಭರಣಿ ನಾನು ನಿಮ್ಮ ತಂದೆಗೆ ಬೇಕಾದವನು ನೀವು ಮದುವೆಯಾಗುವ ಹುಡುಗಿ ರಾಮಾಚಾರಿಯ ಮನೆಗೆ ಬಂದಿದ್ದಳು ಎಂಬ ವಿಷಯವನ್ನ ವಿಕಾಸ್ ಗೆ ಹೇಳಿದ್ದಾನೆ. ಫೋಟೋ ನೋಡಿದ ಕೂಡಲೇ ವಿಕಾಸ್‌ಗೆ ಕೋಪ ಬಂದಿದೆ.

ರಾಮಾಚಾರಿ ಮನೆಯಿಂದ ಬಂದ ಚಾರುಗೆ ಸಾನ್ವಿ ಬುದ್ಧಿಯನ್ನು ಹೇಳುತ್ತಿದ್ದಾಳೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನೀನು ಅವರ ಮನೆಗೆ ಹೋಗಿ ಅವನಿಗೆ ಕಷ್ಟವನ್ನು ಕೊಡಬೇಕಾಗಿತ್ತ ಎಂದು ಕ್ಲಾಸ್ ತೆಗೆದುಕೊಂಡಿದ್ದಾಳೆ. ಇದಕ್ಕೆ ಚಾರು ಗಂಡನನ್ನು ನೋಡಬೇಕು ಎಂದರೆ ಮಧ್ಯರಾತ್ರಿಯಲ್ಲೇ ಹೋಗಬೇಕು ಇದು ಒಂಥರಾ ಥ್ರಿಲ್ ಆಗಿದೆ ನಾನು ಅವರ ಮನೆಯಿಂದ ಬಂದಿದ್ದೆ ಒಂದು ರೀತಿಯಲ್ಲಿ ಖುಷಿಯಾಗಿದೆ ಎಂದು ಸಾನ್ವಿ ಬಳಿ ರಾಮಾಚಾರಿ ಮನೆಯಲ್ಲಿ ನಡೆದ ಎಲ್ಲ ಸಂಗತಿಗಳನ್ನು ಹೇಳಿದ್ದಾಳೆ.
ಚಾರುಲತಾಗೆ ವಿಕಾಸ್ ಬಾನೇರಿ ಶಾಕ್ ಅನ್ನು ಕೊಟ್ಟಿದ್ದಾನೆ ನೀವು ಎಲ್ಲಿಗೆ ಹೋಗಿ ಬರುತ್ತಿದ್ದೀರಿ ಎಂದು ನನಗೆ ಗೊತ್ತಿದೆ ನೀವು ರಾಮಾಚಾರಿ ಮನೆಗೆ ಹೋಗಿದ್ದೀರಿ ಅದು ಸಹ ಗೊತ್ತಿದೆ ಎಂದು ಚಾರುಗೆ ವಿಕಾಸ್ ಬಾನೇರಿ ಶಾಕ್ ನೀಡಿದ್ದಾನೆ. ಆದರೆ ಈ ವಿಷಯವನ್ನು ನಾನು ನಿಮ್ಮ ಮನೆಯವರ ಬಳಿ ಹೇಳೋದಿಲ್ಲ ನಾವಿಬ್ಬರು ಈಗ ಜೊತೆಗೆ ಹೋಗೋದೆ ಇದೆಲ್ಲವಕ್ಕೂ ಪರಿಹಾರ ಎಂದು ಹೇಳಿದಾಗ ಚಾರುಗೆ ಇನ್ನೂ ಸಹ ಶಾಕ್ ಆಗಿದೆ.
ಸಾನ್ವಿ ಚಾರು ಬಗ್ಗೆ ಸಮರ್ಥನೆ ನೀಡಲು ಬಂದಾಗ ಅದರ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದಾನೆ. ಆಗ ಚಾರುಗೆ ಸ್ಪಲ್ಪ ಹೋದ ಉಸಿರು ಬಂದಂತೆ ಆಗಿದೆ.ಚಾರು ಹಾಗೂ ವಿಕಾಸ್ ಬಾನೇರಿ ಒಟ್ಟಿಗೆ ಕಾರಿನಲ್ಲಿ ಚಾರು ಮನೆಯ ಕಡೆ
ಪ್ರಯಾಣವನ್ನು ಬೆಳೆಸಿದ್ದಾರೆ. ಇದೇ ವೇಳೆ ಚಾರು ವಿಕಾಸ್‌ಗೆ ಥ್ಯಾಂಕ್ಸ್ ಹೇಳಿದ್ದಾಳೆ ಮದುವೆಯಾಗುವ ಹುಡುಗಿ ಥ್ಯಾಂಕ್ಸ್ ಎಲ್ಲಾ ಹೇಳಬಾರದು ಎಂದು ವಿಕಾಸ್ ಹೇಳಿದ್ದಾನೆ ಚಾರುಗೆ ಕೋಪ ಬಂದಿದೆ.


Click it and Unblock the Notifications











