Ramachari: ಮರು ಮಾಂಗಲ್ಯಧಾರಣೆ ಮಾಡಿದ ರಾಮಾಚಾರಿ
ಚಾರು ಆಫೀಸ್ ಗೆ ಬಂದು ಬಬ್ಲು ಸರ್ ಗೆ ವಾಚ್ ಮ್ಯಾನ್ ಕೆಲಸವನ್ನ ನೀಡಿದ್ದಾಳೆ. ರಾಮಾಚಾರಿ ಕ್ಯಾಬಿನ್ ನ ಒಳಗೆ ಯಾರನ್ನು ಬಿಡಬೇಡಿ ಎಂದು ಹೇಳಿದ್ದಾಳೆ. ಬಬ್ಲು ಸರ್ ಯಾಕಮ್ಮ ಎಂದು ಅಂದಿದ್ದಕ್ಕೆ ಸರ್ ಇಲ್ಲೇ ನಿಂತುಕೊಳ್ಳಿ ಯಾರನ್ನು ಸಹ ಒಳಗೆ ಬಿಡಕೂಡದು ಎಂದು ಹೇಳಿ ರಾಮಾಚಾರಿ ಕ್ಯಾಬಿನ್ ಗೆ ಹೋಗಿದ್ದಾಳೆ.
ರಾಮಾಚಾರಿಯ ಕ್ಯಾಬಿನ್‌ಗೆ ಹೋದ ಚಾರು ಗುಡ್ ಮಾರ್ನಿಂಗ್ ಯಜಮಾನ್ರೆ ಎಂದು ಹೇಳಿದ್ದಾಳೆ. ಇದಕ್ಕೆ ರಾಮಾಚಾರಿ ಏನು ಮೇಡಂ ಎಷ್ಟು ಸಲ ಹೇಳಲಿ ಇದು ಆಫೀಸ್ ಯಾರಾದರೂ ಕೇಳಿಸಿಕೊಂಡರೆ ಏನು ಗತಿ ಅಂದಿದ್ದಾನೆ ಇದಕ್ಕೆ ಯಾರು ಕೇಳಿಸಿಕೊಂಡಿಲ್ಲ ನೀನು ಸಹ ಹೆಂಡತಿಯ ತರ ಮಾತನಾಡಿಸಿದರೆ ಸರಿ ಎಂದು ರಾಮಾಚಾರಿಗೆ ಹೇಳಿದ್ದಾಳೆ.

ಇದೇ ವೇಳೆ ಚಾರು ರಾಮಾಚಾರಿಯ ಮುಂದೆ ತಾಳಿಯನ್ನು ಕಟ್ಟುವ ಬೇಡಿಕೆಯನ್ನ ಇಟ್ಟಿದ್ದಾಳೆ. ರಾಮಾಚಾರಿ ಮೇಡಂ ತಾಳಿಯನ್ನು ಎಲ್ಲೆಂದರಲ್ಲಿ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಚಾರು ನಾನು ಆಫೀಸ್ ಅನ್ನು ಖಾಲಿ ಮಾಡಿಸುತ್ತೇನೆ. ದೇವರ ಫೋಟೋ ಮುಂದೆ ನೀನು ನನಗೆ ಮರು ಮಾಂಗಲ್ಯ ಧಾರಣೆ ಮಾಡು ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ರಾಮಾಚಾರಿ ಸಹ ಒಪ್ಪಿಕೊಂಡಿದ್ದಾನೆ.
ಚಾರು ಆಫೀಸಿನಲ್ಲಿ ಇದ್ದವರನ್ನು ಕರೆದುಕೊಂಡು 15 ನಿಮಿಷ ಹೊರಗಡೆ ಇರುವಂತೆ ಬಬ್ಲು ಸರ್ ಬಳಿ ಮನವಿ ಮಾಡಿಕೊಂಡಿದ್ದಾಳೆ. ಇದಕ್ಕೆ ಬಬ್ಲು ಸರ್ ಎಲ್ಲರನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ನಂತರ ದೇವರ ಫೋಟೋದ ಮುಂದೆ ನಿಂತ ರಾಮಾಚಾರಿ ಹಾಗೂ ಚಾರು ಒಬ್ಬರಿಗೊಬ್ಬರು ನೋಡಿಕೊಂಡಿದ್ದಾರೆ. ಚಾರು ಕೈಯಲ್ಲಿದ್ದ ಚಿನ್ನದ ತಾಳಿ ಸರಕ್ಕೆ ರಾಮಾಚಾರಿ ಪೂಜೆಯನ್ನು ನೆರವೇರಿಸಿದ್ದಾನೆ.

ಇಬ್ಬರು ಸೇರಿಕೊಂಡು ಪೂಜೆ ನೆರವೇರಿಸಿದ್ದಾರೆ ಚಾರುಲತಾ ಕೊರಳಿಗೆ ರಾಮಾಚಾರಿ ಚಿನ್ನದ ಸರವನ್ನು ಕಟ್ಟಿದ್ದಾನೆ. ರಾಮಾಚಾರಿ ಚಿನ್ನದ ಸರ ಕಟ್ಟಿದ ಕೂಡಲೇ ಚಾರುಗೆ ತುಂಬಾ ಸಂತೋಷವಾಗಿದೆ. ತಾಳಿಯನ್ನು ಕಣ್ಣಿಗೆ ಹೊತ್ತಿಕೊಂಡು ನನಗೆ ಚಿನ್ನದ ತಾಳಿ ಕಟ್ಟಿದ ಚಿನ್ನದಂತ ಹುಡುಗನನ್ನು ಎದೆಯಲ್ಲೇ ಬಚ್ಚಿಟ್ಟುಕೊಳ್ಳುತ್ತೇನೆ ಎಂದು ರಾಮಾಚಾರಿಯ ಮುಂದೆ ಹೇಳಿದ್ದಾಳೆ. ನಂತರ ರಾಮಾಚಾರಿಯು ಚಾರುಗೆ ಕುಂಕುಮವನ್ನು ಹಚ್ಚಿದ್ದಾನೆ.
ರಾಮಾಚಾರಿ ಚಾರು ಕುತ್ತಿಗೆಗೆ ತಾಳಿಯನ್ನು ಕಟ್ಟುತ್ತಿರುವುದನ್ನು ನೋಡಿದಂತಹ ಬಬ್ಲು ಸರ್ ಗೆ ನಿಜವಾಗಿಯೂ ಶಾಕ್ ಆಗಿದೆ ಇದು ಕನಸೋ ನನಸೋ ಎಂದು ಕಸಿವಿಸಿಗೊಂಡಿದ್ದಾರೆ. ಅಷ್ಟರಲ್ಲಿ ರಾಮಾಚಾರಿಯ ಕಾಲಿಗೆರಗಿದ ಚಾರುಲತಾ ರಾಮಾಚಾರಿ ನನಗೆ ಆಶೀರ್ವಾದ ಮಾಡು ಕೇಳಿದ್ದಾಳೆ ಇದನ್ನು ನೋಡಿದಾಗ ನಿಜವಾಗಿಯೂ ಇಲ್ಲಿ ಏನು ನಡೆಯುತ್ತಿದೆ ಎಂಬುವುದೇ ತಿಳಿಯುತ್ತಿಲ್ಲ ಎಂದು ತಮ್ಮ ಸಿಬ್ಬಂದಿ ಜೊತೆ ಹೇಳಿದ್ದಾರೆ. ಆಫೀಸ್ ಒಳಗೆ ನಡೆದ ಎಲ್ಲವನ್ನು ನೋಡಿ ಮೂಕ ಪ್ರೇಕ್ಷಕನಾಗಿದ್ದಾರೆ.
ಚಾರು ಮೇಲೆ ವಿಕಾಸ್ ಬಾನೇರಿಗೆ ತುಂಬಾ ಸಿಟ್ಟು ಬಂದಿದೆ ಮನೆಯಲ್ಲಿ ಬಂದು ಬೇಸರವನ್ನು ಮಾಡಿಕೊಳ್ಳುತ್ತಿದ್ದಾನೆ. ಅಲ್ಲಿಗೆ ಬಂದಂತಹ ಪ್ರಕಾಶ್ ಬಾನೇರಿ ಏನಾಯಿತು ಎಂದು ಕೇಳಿದ್ದಕ್ಕೆ ಚಾರು ಅದ್ಯಾವುದೋ ಆಫೀಸ್‌ಗೆ ಹೋಗುತ್ತಿದ್ದಾಳೆ. ನನ್ನ ಕೈಗೂ ಸಿಗುತ್ತಿಲ್ಲ ಅವಳ ಮೀಟ್ ಮಾಡೋಣ ಅಂದ್ರು ಬ್ಯುಸಿ ಅನ್ನುತ್ತಾಳೆ ಎಂದು ತನ್ನ ಕೋಪವನ್ನು ಪ್ರದರ್ಶನ ಮಾಡಿದ್ದಾನೆ.ಪ್ರಕಾಶ್ ಬಾನೇರಿ ಜೈ ಶಂಕರ್ ಫೋನ್ ಗೆ ಕರೆ ಮಾಡಿದ್ದಾನೆ.
ಚಾರು ಕೆಲಸಕ್ಕೆ ಹೋಗೋದು ಬೇಡ ಯಾಕಾಗಿ ದುಡಿಯಬೇಕು ಎಂದು ನಯವಾಗಿಯೇ ಮಾತನಾಡಿದ್ದಾನೆ. ಇದಕ್ಕೆ ಮಾನ್ಯತಾ ಕೂಡ ಇನ್ಮುಂದೆ ಚಾರುಲತಾ ಕೆಲಸಕ್ಕೆ ಹೋಗೋದಿಲ್ಲ ನಾನು ಅವಳಿಗೆ ಹೇಳುತ್ತೇನೆ ಎಂದು ಹೇಳಿದ್ದಾಳೆ. ಪ್ರಕಾಶ್ ಬಾನೇರಿ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿದ್ದು ವಿಕಾಸ್‌ಗೆ ತುಂಬಾ ಖುಷಿಯಾಗಿದೆ.ಚಾರು ಜೊತೆಗೆ ಸುತ್ತಾಡಬಹುದು ಎಂದುಕೊಂಡು ವಿಕಾಸ್ ತುಂಬಾ ಖುಷಿಯಾಗಿ ಇದ್ದಾನೆ.


Click it and Unblock the Notifications











