ಬಬ್ಲು ಸರ್‌ಗೆ ಮಕ್ಕರ್ ಮಾಡಿದ ಚಾರು-ಚಾರಿ: ಚಾರು ಬುದ್ದಿ ಕಲಿಸೋದು ಯಾರಿಗೆ?

By ಶೃತಿ ಹರೀಶ್ ಗೌಡ

ಬಬ್ಲು ಸರ್ ರಾಮಾಚಾರಿ ಹಾಗೂ ಚಾರು ಇಬ್ಬರು ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದಾರೆ . ಇನ್ನು ರಾಮಾಚಾರಿ ಕಾಲಿಗೆ ಬಿದ್ದು ಚಾರು ಆಶೀರ್ವಾದ ಪಡೆದಿದ್ದನ್ನು ನೋಡಿದ್ದಾರೆ. ನಂತರ ಸುಪುತ್ರ ಪ್ರಾಪ್ತಿರಸ್ತು ಎಂದು ರಾಮಾಚಾರಿ ಆಶೀರ್ವಾದ ಮಾಡಿದ್ದನ್ನು ನೋಡಿದ ಬಬ್ಲು ಸರ್ ತಲೆ ಸುತ್ತಿ ಬಿದ್ದಿದ್ದಾರೆ. ಅಲ್ಲಿ ಇದ್ದಂತಹ ಆಫೀಸಿನ ಸ್ಟಾಫ್ ಎಲ್ಲಾ ಸೇರಿಕೊಂಡು ಬಬ್ಲು ಸರ್ ಅನ್ನು ಕರೆದುಕೊಂಡು ಬಂದಿದ್ದಾರೆ.

ಮುಖಕ್ಕೆ ನೀರನ್ನು ಎರಚಿ, ಬಬ್ಲು ಸರ್‌ಗೆ ಎಚ್ಚರ ಮಾಡಿದ್ದಾರೆ. ಆಗ ಬಬ್ಲು ಸರ್ ನನಗೆ ಏನಾಗಿತ್ತು ಎಂದು ಕೇಳಿದ್ದಾರೆ. ಅಲ್ಲಿದ್ದವರು ಕೋಮಾಗೆ ಹೋಗಿದ್ರಿ ಎಂದು ತಮಾಷೆ ಮಾಡಿದ್ದಾರೆ. ಇನ್ನು ನೀವೆಲ್ಲರೂ ಒಂದು ಹದಿನೈದು ನಿಮಿಷ ಹೊರಗಡೆ ಇರಿ ನನಗೆ ರಾಮಾಚಾರಿ ಮತ್ತು ಚಾರು ಹತ್ತಿರ ಪರ್ಸನಲ್ ಆಗಿ ಮಾತನಾಡುವುದು ಇದೆ ಎಂದು ಅಲ್ಲೇ ಇದ್ದ ಆಫೀಸ್ ಸ್ಟಾಪ್ ಎಲ್ಲ ಕೈ ಹಿಡಿದುಕೊಂಡು ಹೊರಗಡೆ ಕರೆದುಕೊಂಡು ಹೋಗಿದ್ದಾರೆ.

Colors Kannada Ramachari serial Written Update on March 28th episode

ಬಬ್ಲು ಸಾರ್ ವರ್ತನೆ ನೋಡಿದ ರಾಮಾಚಾರಿ ಹಾಗೂ ಚಾರುಗೆ ಶಾಕ್ ಆಗಿದೆ. ಬಬ್ಲು ಸರ್ ರಾಮಾಚಾರಿ ಹಾಗೂ ಚಾರುಗೆ ನೀವಿಬ್ಬರು ಮದುವೆಯಾಗಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದಾರೆ. ನಂತರ ಚಾರು ನಿನ್ನ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡಿದ್ದನ್ನು ಸಹ ನಾನು ನನ್ನ ಕಣ್ಣಾರೆ ಕಂಡೆ ಎಂದು ಹೇಳಿದ್ದಾರೆ.‌ ಈ ಮಾತನ್ನು ಕೇಳಿದ‌ ರಾಮಾಚಾರಿ ಹಾಗೂ ಚಾರುಗೆ ಶಾಕ್ ಆಗಿದೆ ಹೇಗಾದರೂ ಮಾಡಿ‌ ವಿಷಯವನ್ನು ಡೈವರ್ಟ್ ಮಾಡಬೇಕು ಎಂದು ಇಬ್ಬರು ಪ್ಲ್ಯಾನ್ ಮಾಡಿದ್ದಾರೆ.

Colors Kannada Ramachari serial Written Update on March 28th episode

ಇದೇ ವೇಳೆ ಚಾರು ಮತ್ತು ರಾಮಾಚಾರಿ ನಿಮಗೆ ಎಲ್ಲೋ ಭ್ರಮೆ ಎಂದಿದ್ದಾರೆ. ಅದಕ್ಕೆ ಸುಳ್ಳು ಹೇಳಬೇಡಿ ನಾನು ಕಣ್ಣಾರೆ ನೋಡಿದ್ದೇನೆ ಎಂದರು, ಸಹ ಇಬ್ಬರು ಸೇರಿ ಮಕ್ಕರ್ ಮಾಡಿದ್ದಾರೆ. ನಂತರ ಬಬ್ಲು ಸಾರ್ ಕತ್ತಿನಲ್ಲಿರುವ ಮಾಂಗಲ್ಯ ಸರವನ್ನು ತೋರಿಸು ಎಂದಿದ್ದಾರೆ. ಆಗ ಚಾರು ಬರೀ ಚೈನ್ ತೋರಿಸಿದ್ದಾಳೆ.‌ ಈ ವೇಳೆ ಶಾಕ್ ಆಗುವ ಸರದಿ ಬಬ್ಲು ಅವರದ್ದಾಗಿದೆ. ಮಾನ್ಯತಾ ಇನ್ಮುಂದೆ ನೀನು ಕೆಲಸಕ್ಕೆ ಹೋಗಬೇಡ ಎಂದು ಚಾರುಗೆ ಹೇಳಿದ್ದಾಳೆ.

ಯಾಕೆ ಎಂದು ಕೇಳಿದ್ದಕ್ಕೆ ಪ್ರಕಾಶ್ ಬಾನೇರಿ ಕಾಲ್ ಮಾಡಿದ್ದರು. ನಮ್ಮ ಸೊಸೆ ಬೇರೆ ಕಂಪನಿಗೆ ಹೋಗೋದು ಬೇಡ ಎಂದು ಅವರು ಹೇಳಿದ್ದರು ಎಂದಿದ್ದಾರೆ. ಹೋ ಈಗಲೇ ಕಂಟ್ರೋಲ್ ಮಾಡೋಕೆ ಸ್ಟಾರ್ಟ್ ಮಾಡಿದ್ದಾರಾ ? ನಾನು‌ ಸರಿಯಾದ ರೀತಿಯಲ್ಲೇ ಅವರಿಗೆ ಬುದ್ದಿ ಕಲಿಸುತ್ತೇನೆ ಎಂದು ಚಾರು ಅಂದುಕೊಂಡಿದ್ದಾಳೆ. ವಿಕಾಸ್ ಬಾನೇರಿಗೆ ಚಾರುಗೆ ಫೋನ್ ಮಾಡಿ ನಿಮ್ಮ ಮೀಟ್ ಮಾಡಬೇಕು ಬನ್ನಿ ಎಂದು ಕರೆದಿದ್ದಾಳೆ.

ವಿಕಾಸ್ ತುಂಬಾ ಖುಷಿಯಾಗಿ ಚಾರು ಫೋನ್ ಮಾಡಿದ್ದಾಳೆ ಎಂದು ಖುಷಿ ಪಟ್ಟಿದ್ದಾನೆ. ಚಾರು ನಾನು‌ ಕಳಿಸುವ ಲೋಕೇಷನ್‌ಗೆ ಬಂದರೆ ಸಾಕು ಎಂದು ವಿಕಾಸ್ ಬಾನೇರಿಗೆ ತಿಳಿಸಿ ಫೋನ್ ಕಟ್ ಮಾಡಿದ್ದಾಳೆ. ವಿಕಾಸ್ ಚಾರುವನ್ನು ಭೇಟಿಯಾಗಿದ್ದಾನೆ. ಬಾ ಚಾರು ಎಲ್ಲಿಗಾದರೂ ಲಾಂಗ್ ಡ್ರೈವ್ ಹೋಗಿ ಡೇಟಿಂಗ್ ಮಾಡಿಕೊಂಡು ಬರೋಣ ಎಂದು ಹೇಳಿದ್ದಾನೆ. ಇದಕ್ಕೆ ಚಾರು ನಿನ್ನ ಕಂಡರೆ ನಂಗೆ ಸಾಯಿಸುವಷ್ಟು ಕೋಪ‌ ಬಂದಿದೆ ಎಂದು ಹೇಳಿದ್ದಾಳೆ.

ಚಾರು ಹೇಳುವ ಮಾತು ಕೇಳಿದ ವಿಕಾಸ್‌ಗೆ ಶಾಕ್ ಆಗಿದೆ. ಮದುವೆ ಇಲ್ಲ ಏನಿಲ್ಲ ನನ್ನ ಕಂಟ್ರೋಲ್ ಮಾಡೋಕೆ ಬರ್ತೀರಾ, ನಾನು ಎಲ್ಲಾದರೂ ಹೋಗುತ್ತೇನೆ, ನೀವು ಯಾರು ಕೇಳೋಕೆ ಎಂದು ಚಾರು ವ್ಯಕ್ತಪಡಿಸಿದ್ದಾಳೆ. ಇದನ್ನು ನೋಡಿದ ವಿಕಾಸ್ ತತ್ತರಿಸಿ ಹೋಗಿದ್ದಾನೆ.

More from Filmibeat

English summary
Colors Kannada serial Ramachari here details about bublu sir in confusion about ramachari and charu marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X