Ramachari: ರಾಮಾಚಾರಿ ಮೇಲೆ ಚಾರುಗೆ ಹೆವಿ ಲವ್
ರಾಮಾಚಾರಿ ಮೇಲೆ ಚಾರುಲತಾಗೆ ಸಿಕ್ಕಾಪಟ್ಟೆ ಪ್ರೀತಿ ಶುರುವಾಗಿದೆ. ಇದಕ್ಕಾಗಿ ವಿಕಾಸ್ ಬಾನೇರಿಗೆ ಸರಿಯಾಗಿ ಬುದ್ದಿಕಲಿಸಬೇಕು ಎಂದು ಅವನನ್ನು ಹೊರಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ನಾನು ಎನು ಮಾಡಬೇಕು ಮಾಡಬಾರದು ಎಂಬುದು ನಂಗೆ ಬಿಟ್ಟಿದ್ದು, ಕೆಲಸ ಮಾಡುವುದು ನಂಗೆ ಇಷ್ಟ ನೀನು ಈಗಲೇ ನಿನ್ನ ಗುಲಾಮಳಾಗಿ ನನ್ನ ನೋಡಲು ಬರಬೇಡ ಎಂದು ಚಾರು ಹೇಳಿದ್ದಾಳೆ.
ವಿಕಾಸ್ ಬಾನೇರಿಗೆ ಮಾತನಾಡಲು ಸಹ ಅವಕಾಶವನ್ನ ಕೊಡದೇ ಬೈಯುತ್ತಾ ಇದ್ದಾಳೆ. ನನ್ನ ಮನೆಗೆ ಫೋನ್ ಮಾಡಿ ನೀನು ಕೆಲಸಕ್ಕೆ ಹೋಗಬೇಡ ಎಂದು ಹೇಳಿಸಿದರೆ ನಾನು ಅದನ್ನು ಕೇಳೋದಿಲ್ಲ ಎಂದೆಲ್ಲಾ ವಿಕಾಸ್ ಬಾನೇರಿಗೆ ಹೇಳಿದ್ದಾಳೆ ಈ ವೇಳೆ ವಿಕಾಸ್‌ಗೆ ತುಂಬಾ ಸಿಟ್ಟು ಬಂದಿದೆ ಅದನ್ನು ತೋರಿಸಿಕೊಳ್ಳುತ್ತಿಲ್ಲ.

ಈ ಕಡೆ ಚಾರು ಡೇಟಿಂಗ್‌ಗೆ ಕರೆದಿದ್ದಾಳೆ ಎಂದು ಖುಷಿಪಟ್ಟಿದ್ದ ವಿಕಾಸ್‌ಗೆ ನಿರಾಸೆಯಾಗಿದೆ.ಅವಳು ಅಲ್ಲಿಂದ ಹೋದ ಮೇಲೆ ನಿನ್ನ ನೋಡುವ ಮೊದಲು ಜೈಶಂಕರ್ ಆಸ್ತಿ ಮೇಲೆ ಮಾತ್ರ ನಂಗೆ ಕಣ್ಣಿತ್ತು. ನಿನ್ನ ನೋಡಿದ ಮೇಲೆ ನಿನ್ನ ಸೌಂದರ್ಯದ ಮೇಲೆ ಕಣ್ಣು ಬಿದ್ದಿದೆ. ಈಗ ನಿನ್ನ ಬಿಡುವ ಮಾತೇ ಇಲ್ಲ ನಿನ್ನ ಕೈಯಲ್ಲಿ ಐ ಲವ್ ಯೂ ವಿಕಾಸ್ ಎಂದು ಅನಿಸಿಕೊಳ್ಳುತ್ತೇನೆ ಎಂದುಕೊಂಡಿದ್ದಾನೆ.
ಚಾರು ಪ್ರೀತಿ ರಾಮಾಚಾರಿಗೆ ಉಸಿರನ್ನು ಕಟ್ಟಿಸುವಂತೆ ಮಾಡುತ್ತಿದೆ. ಆಫೀಸ್‌ನಲ್ಲಿ ಸಹ ರಾಮಾಚಾರಿ ಜೊತೆಗೆ ಓಡಾಟವನ್ನು ಚಾರು ನಡೆಸಿದ್ದಾಳೆ ಇದು ರಾಮಾಚಾರಿಗೆ ಕಸಿವಿಸಿಯನ್ನು ತಂದಿದೆ.ಎಷ್ಟೇ ಹೇಳಿದರೂ ಸಹ ರಾಮಾಚಾರಿಯನ್ನು ಹಗ್ ಮಾಡಿಕೊಂಡೇ ಇದ್ದಾಳೆ ಇದಕ್ಕೆ ರಾಮಾಚಾರಿ ದಯವಿಟ್ಟು ಇದು ಆಫೀಸ್ ಎಂದು ಕೈ ಬಿಡಿಸಿ ಗೆಟ್‌ಔಟ್ ಎಂದು ಚಾರುವನ್ನು ಹೊರಗೆ ಬಿಡಲು ಹೋದಾಗ ಅಲ್ಲಿಗೆ ವಿಕಾಸ್ ಬಾನೇರಿ ಬಂದಿದ್ದಾನೆ.
ವಿಕಾಸ್ ಬಾನೇರಿ ಚಾರು ರಾಮಾಚಾರಿ ಜೊತೆಗೆ ಹೋಗಿದ್ದಕ್ಕೆ ರಾಮಾಚಾರಿ ಬಳಿಯೇ ಸಲಹೆ ಪಡೆಯಬೇಕು ಎಂದು ಆಫೀಸ್ ವರೆಗೂ ಪಯಣವನ್ನು ಬೆಳೆಸಿದ್ದಾನೆ.ಚಾರುವನ್ನು ಕರೆದುಕೊಂಡು ಕ್ಯಾಬಿನ್‌ನಿಂದ ಹೊರಗೆ ಹೋಗುವಾಗ ವಿಕಾಸ್ ಬಾನೇರಿ ಎಂಟ್ರಿ ಕೊಟ್ಟಿದ್ದಾನೆ ವಿಕಾಸ್ ನೋಡಿ ರಾಮಾಚಾರಿ ಹಾಗೂ ಚಾರು ಇಬ್ಬರಿಗೂ ಶಾಕ್ ಆಗಿದೆ.
ಚಾರು ಟೇಬಲ್ ಕೆಳಗೆ ಅವಿತುಕೊಂಡು ರಾಮಾಚಾರಿಗೆ ಕಾಟವನ್ನು ಕೊಟ್ಟಿದ್ದಾಳೆ. ಇದಕ್ಕೆ ರಾಮಾಚಾರಿಗೆ ಮತ್ತಷ್ಟು ಕಸಿವಿಸಿಯಾಗಿದ್ದು, ಬನ್ನಿ ಎಂದು ವಿಕಾಸ್ ಬಾನೇರಿಯನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದಾನೆ ಇದರಿಂದ ಚಾರುಗೆ ತುಂಬಾ ನಗು ಬಂದಿದೆ. ರಾಮಾಚಾರಿ ಕ್ಯಾಬಿನ್‌ನಲ್ಲಿ ಚಾರು ಇರೋದನ್ನು ನೋಡಿ ಬಬ್ಲು ಸಾರ್‌ಗೆ ಆಶ್ಚರ್ಯವಾಗಿದೆ.
ಎಕ್ಕದ ಗಿಡದ ಬುಡದಲ್ಲಿ ಬಿದ್ದಿದ್ದ ಜನಿವಾರವನ್ನು ನೋಡಿದ ನಾರಾಯಣ ಆಚಾರ್ಯರು ಕೋದಂಡನನ್ನು ಪ್ರಶ್ನೆ ಮಾಡಿದ್ದಾರೆ ನೀನು ಜನಿವಾರ ಬಿಚ್ಚಿ ಹಾಕಿದ ಎಂದು ಕೇಳಿದ್ದಾರೆ. ಇದಕ್ಕೆ ಇಲ್ಲ ಅಂದಿದ್ದಾರೆ ಇನ್ನೂ ಮುರಾರಿಯನ್ನು ಸಹ ಕೇಳಿದ್ದಾರೆ ಇದಕ್ಕೆ ಮುರಾರಿ ನಾನು ಸಹ ಇಲ್ಲ ಎಂದು ಅಂದಿದ್ದಾನೆ ರಾಮಾಚಾರಿ ಮಾಡಿದ್ನಾ ಎನಾಯ್ತು ಎಂದುಕೊಂಡಿದ್ದಾರೆ.
ಇದಕ್ಕೆ ಶೃತಿ ಸಹ ಅಣ್ಣ ಚೇಂಜ್ ಮಾಡಿದ್ನ ಅಂದರೆ ಎಂದು ರಾಗ ಎಳೆದಿದ್ದಾಳೆ ಅಲ್ಲಿಗೆ ಬಂದ ಜಾನಕಿ ರಾಮಾಚಾರಿ ಆಫೀಸ್‌ನಿಂದ ಬಂದ ಮೇಲೆ ಕೇಳೋಣ ಎಂದು ಎಲ್ಲರಿಗೂ ಹೇಳಿದ್ದಾಳೆ. ನಂತರ ಮುರಾರಿ ರಾಮಾಚಾರಿ ಮೂರು ಎಳೆಯಿಂದ ಆರು ಎಳೆಯ ಜನಿವಾರ ಹಾಕಿಕೊಂಡಿರಬೇಕು ಎಂದು ಅಂದುಕೊಂಡಿದ್ದಾನೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾನೆ ಎಂದು ಅಂದುಕೊಂಡಿದ್ದಾನೆ ಮುರಾರಿ.


Click it and Unblock the Notifications











