Ramachari: ಬೆಂಬಿಡದೇ ಕಾಡುತ್ತಿದ್ದ ವಿಕಾಸ್ ಬಾನೇರಿಗೆ ಐಡಿಯಾ ಕೊಟ್ಟ ಚಾರಿ
ವಿಕಾಸ್ ಬಾನೇರಿ ರಾಮಾಚಾರಿಯ ಬೆನ್ನು ಬಿಡದೆ ಕಾಡುತ್ತಿದ್ದಾನೆ ನಿನ್ನ ಬಳಿ ಚಾರು ತುಂಬಾ ಚೆನ್ನಾಗಿ ಮಾತನಾಡುತ್ತಾಳೆ ನನ್ನನ್ನ ಕಂಡರೆ ಕೋಪ ಮಾಡಿಕೊಳ್ಳುತ್ತಾಳೆ ಎಂದು ಹೇಳಿದ್ದಾನೆ ಇದಕ್ಕೆ ರಾಮಾಚಾರಿ ಮನಸ್ಸಿನಲ್ಲಿಯೇ ಅವಳು ನನ್ನ ಹೆಂಡತಿ ಎಂದುಕೊಂಡಿದ್ದಾನೆ. ಇದೇ ವೇಳೆ ಒಂದೊಳ್ಳೆ ಐಡಿಯಾವನ್ನ ಕೊಡು ಎಂದು ರಾಮಾಚಾರಿ ಬಳಿಯೇ ಕೇಳಿದ್ದಾನೆ.
ಈ ಕಡೆ ರಾಮಾಚಾರಿ ವಿಕಾಸ್ ಬಾನೇರಿಗೆ ನೀವು ಆಫೀಸಿನ ತನಕ ಬಂದಿರುವುದು ಸಹ ಚಾರುಗೆ ಗೊತ್ತಾದರೆ ಬೇಸರ ಪಟ್ಟುಕೊಳ್ಳುತ್ತಾಳೆ ಏಕೆಂದರೆ ನೀವು ಅವಳನ್ನು ಹಿಂಬಾಲಿಸುತ್ತಿದ್ದೀರಿ ಎಂದು ಕೊಳ್ಳುತ್ತಾಳೆ. ನನ್ನ ಮೇಲೆ ಇವನಿಗೆ ಅನುಮಾನ ಬಂದಿದೆ ಎಂದು ಮತ್ತಷ್ಟು ಕೋಪ ಮಾಡಿಕೊಂಡು ದೂರ ಸರಿಯುತ್ತಾಳೆ ಎಂದು ರಾಮಾಚಾರಿ ಹೇಳಿದ್ದಾನೆ.

ಇದೇ ವೇಳೆ ಚಾರು ಮೇಡಂ ಗೆ ಬಡವರನ್ನ ಕಂಡರೆ ಇಷ್ಟ ನೀವು ಅವರಿಗೆ ಇಷ್ಟವಾಗುವ ರೀತಿ ನಡೆದುಕೊಳ್ಳಿ ಬಡವರಿಗೆ ಒಂದಿಷ್ಟು ಸಹಾಯ ಮಾಡಿ ಈ ರೀತಿ ಮಾಡಿದರೆ ನೀವು ಚಾರುವನ್ನು ಇಂಪ್ರೆಸ್ ಮಾಡಬಹುದು ಎಂದು ರಾಮಾಚಾರಿ ವಿಕಾಸ್ ಬಾನೇರಿಗೆ ಐಡಿಯಾವನ್ನು ಕೊಟ್ಟಿದ್ದಾನೆ.
ರಾಮಾಚಾರಿ ಗೆ ದಿನದಿಂದ ದಿನಕ್ಕೆ ಚಾರು ಪ್ರೀತಿಯಿಂದ ಕಾಟವನ್ನು ಕೊಡಲು ಶುರು ಮಾಡಿದ್ದಾಳೆ. ಗಾಡಿಯಲ್ಲಿ ಡ್ರಾಪ್ ತೆಗೆದುಕೊಳ್ಳುವುದು ಆಫೀಸಿನಲ್ಲಿ ಕಾಡಿಸುವುದು ಹೀಗೆಲ್ಲಾ ಮಾಡುತ್ತಿರುವುದಕ್ಕೆ ರಾಮಾಚಾರಿ ಗೆ ತುಂಬಾ ಬೇಸರವಾಗಿದೆ. ಆದರೆ ಚಾರು ಮಾತ್ರ ನೀನು ನನ್ನ ಗಂಡ ಅದಕ್ಕಾಗಿ ನಾನು ಈ ರೀತಿ ನಿನ್ನ ಬಳಿ ನಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು ಸಹ ರಾಮಾಚಾರಿ ಮನಸ್ಸು ಒಪ್ಪುತ್ತಿಲ್ಲ.
ನೀವು ಹೀಗೆ ಹಿಂದೆ ಬಂದರೆ ಎಲ್ಲರಿಗೂ ಅನುಮಾನ ಬರುತ್ತದೆ ಇನ್ನೊಂದು ತಿಂಗಳು ನೀವು ಸುಮ್ಮನೆ ಇರಿ ಒಂದು ಅಂತ್ಯ ಕಂಡ ಮೇಲೆ ಭಗವಂತ ಮತ್ತೊಂದು ಮಾರ್ಗವನ್ನು ತೋರಿಸುತ್ತಾನೆ ಎಂದು ರಾಮಾಚಾರಿ ಚಾರುಗೆ ಖಡಕ್ಕಾಗಿ ಹೇಳಿದ್ದಾನೆ. ಇದಕ್ಕೆ ಚಾರು ಸಹ ಆಗಲಿ ಎಂದು ಒಪ್ಪಿಕೊಂಡು ಇದ್ದಾಳೆ.

ನಿನ್ನ ಹೆಂಡತಿಯಾದವಳನ್ನು ಪಟಾಯಿಸುವುದು ಹೇಗೆ ಎಂದು ನೀನೇ ವಿಕಾಸ್ ಬಾನೇರಿಗೆ ಐಡಿಯಾವನ್ನು ಕೊಟ್ಟು ಬಂದಿದ್ದೀಯಲ್ಲ ಯಾಕೆ ಚಾರುವಿಂದ ಬಿಡಿಸಿಕೊಳ್ಳಬೇಕು ಎಂದ ಎಂದು ಸಾನ್ವಿ ರಾಮಾಚಾರಿ ಗೆ ಕೋಪದಿಂದ ಕೇಳಿದ್ದಾಳೆ. ಇದಕ್ಕೆ ರಾಮಾಚಾರಿ ನಾನು ಮಾನವೀಯತೆಯ ಪಾಠವನ್ನು ಕಲಿಸಲು ಐಡಿಯಾವನ್ನು ಕೊಟ್ಟಿದ್ದೇನೆ ನನ್ನ ಹೆಂಡತಿಯ ಬಗ್ಗೆ ನನಗೆ ಚೆನ್ನಾಗಿ ನಂಬಿಕೆ ಇದೆ ಎಂದು ಹೇಳಿ ಹೊರಟಿದ್ದಾನೆ.
ಆದರೆ ಸಾನ್ವಿ ರಾಮಾಚಾರಿ ನಿನಗೆ ಚಾರು ಸುಳ್ಳು ಹೇಳಿ ಮದುವೆಯಾದಳು ಎಂಬುವುದು ಗೊತ್ತಾದರೆ ನಿನ್ನ ಮನಸ್ಥಿತಿ ಹಾಗೂ ಅಭಿಪ್ರಾಯ ಇದೇ ರೀತಿ ಇರುತ್ತದಾ ಎಂದು ತನ್ನಲ್ಲೇ ತಾನು ಪ್ರಶ್ನೆಯನ್ನ ಮಾಡಿಕೊಂಡಿದ್ದಾಳೆ. ನಿಮಗೆ ಚಾರು ಮೇಲೆ ಅದೆಷ್ಟು ನಂಬಿಕೆ ಇದೆ ಎಂದು ಸಾನ್ವಿ ಖುಷಿಯನ್ನು ಪಟ್ಟಿದ್ದಾಳೆ.
ವಿಕಾಸ್ ಮಾನ್ಯತಾ ಗೆ ಮೆಸೇಜ್ ಮಾಡಿ ಒಂದು ಲೊಕೇಶನ್ ಕಳಿಸುತ್ತೇನೆ ಅಲ್ಲಿಗೆ ಬನ್ನಿ ನಿಮ್ಮ ಮಗಳು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳುವ ಸಮಯ ಎಂದು ಮೆಸೇಜ್ ಮಾಡಿದ್ದಾನೆ ಇದಕ್ಕೆ ಜೈಶಂಕರ್‌ನನ್ನು ಮಾನ್ಯತಾ ಕರೆದಿದ್ದಾಳೆ. ಆದರೆ ಜೈ ಶಂಕರ್ ನನಗೆ ಮೀಟಿಂಗ್ ಇದೆ ನೀನು ಹೋಗಿ ಬಾ ಎಂದು ಮಾನ್ಯತಾಳನ್ನು ಕಳಿಸಿದ್ದಾನೆ. ಈ ಕಡೆ ಚಾರುಗೂ ಸಹ ಮೆಸೇಜ್ ಬಂದಿದ್ದು ಲೊಕೇಶನ್ ಗೆ ಹೋಗಲು ಸಿದ್ದಳಾಗಿದ್ದಾಳೆ.
ರಾಮಾಚಾರಿಯ ತಾಯಿ ಜಾನಕಿ ಬಂದು ಜನಿವಾರವನ್ನು ಏಕೆ ಬಿಚ್ಚಿದೆ ಎಂದು ಕೇಳಿದ್ದಕ್ಕೆ ಬನಿಯನ್ ಸಮೇತ ಬಂತು ಅದಕ್ಕೆ ಬೇರೆ ಜನಿವಾರ ಹಾಕಿಕೊಂಡೆ ಎಂದು ರಾಮಾಚಾರಿ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾನೆ ಆದರೆ ತನ್ನ ತಂಗಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಪೂಜೆ ಮಾಡಲು ಬಂದಾಗ ಶೃತಿ ಅಣ್ಣ ಆರು ಎಳೆಯ ಜನಿವಾರ ಧರಿಸಿರುವುದನ್ನು ನೋಡಿ ಶಾಕ್ ಆಗಿದ್ದಾಳೆ.


Click it and Unblock the Notifications











