Ramachari: ಜನಿವಾರದ ಬಗ್ಗೆ ಪ್ರಶ್ನೆ: ಏನೋ ಒಂದು ಸಬೂಬು ಹೇಳಿದ ಚಾರಿ!
ರಾಮಾಚಾರಿ ಪದೇ ಪದೇ ತನ್ನ ಕುಟುಂಬದವರ ಮುಂದೆ ಸಿಕ್ಕಿ ಬೀಳುತ್ತಿದ್ದಾನೆ ಪೂಜೆ ಮಾಡಲು ಕುಳಿತುಕೊಂಡ ರಾಮಾಚಾರಿಯ ಜನಿವಾರವನ್ನು ಅವನ ತಂಗಿ ಶ್ರುತಿ ನೋಡಿದ್ದಾಳೆ. ಇದೇ ಸಂದರ್ಭದಲ್ಲಿ ತನ್ನ ಅಪ್ಪನ ಬಳಿ ಹೋಗಿ ರಾಮಾಚಾರಿ ಅಣ್ಣ ಆರು ಎಳೆಯ ಜನಿವಾರವನ್ನ ಧರಿಸಿದ್ದಾನೆ ಎಂದು ಹೇಳಿದ್ದಾಳೆ. ಇದರಿಂದ ನಾರಾಯಣ ಆಚಾರ್ಯರಿಗೆ ತುಂಬಾ ಶಾಕ್ ಆಗಿದೆ.
ರಾಮಾಚಾರಿ ಪೂಜೆ ಮಾಡುತ್ತಿರುವಲ್ಲಿಗೆ ಬಂದ ನಾರಾಯಣ ಆಚಾರ್ಯರು ಹಾಗೂ ಕುಟುಂಬದವರು ಜನಿವಾರದ ಕಡೆ ನೋಡಿದ್ದಾರೆ. ಈ ವೇಳೆ ರಾಮಾಚಾರಿಯನ್ನ ಪ್ರಶ್ನೆ ಮಾಡಿದ್ದಾರೆ ಅಂದು ನೀನು ಆಂಜನೇಯನಿಗೆ ಪೂಜೆ ಮಾಡು ಎಂದಿದ್ದಕ್ಕೆ ಮಾನಸಿಕವಾಗಿ ಮದುವೆಯಾಗಿದೆ ಎಂದೇ. ಅದನ್ನು ನಾವೆಲ್ಲರೂ ಒಪ್ಪಿಕೊಂಡೆವು ಜನಿವಾರದ ವಿಷಯದಲ್ಲಿ ಆ ರೀತಿ ಹೇಳಬೇಡ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.

ಇದಕ್ಕೆ ರಾಮಾಚಾರಿ ಯಾವುದೋ ಒಂದು ಉತ್ತರವನ್ನು ನೀಡಿ ತಪ್ಪಿಸಿಕೊಂಡಿದ್ದಾನೆ ಆದರೆ ನಾರಾಯಣ ಆಚಾರ್ಯರು ನಮ್ಮ ಶಾಸ್ತ್ರ ಸಂಪ್ರದಾಯವನ್ನು ಬಿಡಬೇಡ ಹೊಸತನ ಅಳವಡಿಸಿಕೊಳ್ಳುವಾಗ ನಮ್ಮನ್ನು ಒಂದು ಮಾತು ಕೇಳು ಈಗ ಹೋಗಿ ಆರು ಎಳೆಯ ಜನಿವಾರ ಬಿಚ್ಚಿ ಮೂರು ಎಳೆಯ ಜನಿವಾರವನ್ನು ಧರಿಸಿಕೊಂಡು ಬಾ ಎಂದು ಮಗನಿಗೆ ತಾಕೀತು ಮಾಡಿದ್ದಾರೆ.
ಚಾರುವನ್ನು ಇಂಪ್ರೆಸ್ ಮಾಡಲು ವಿಕಾಸ್ ಬಾನೇರಿ ಹೋಗಿದ್ದಾನೆ ಹುಡುಗನನ್ನು ಎಳೆದುಕೊಂಡು ಬಂದು ಟ್ಯಾಂಕ್ ಬಳ್ಳಿ ಚೆನ್ನಾಗಿ ಸೋಪನ್ನು ಹಾಕಿ ಹುಡುಗನಿಗೆ ಸ್ನಾನವನ್ನು ಮಾಡಿಸುತ್ತಿದ್ದಾನೆ. ಇದನ್ನೆಲ್ಲಾ ಮಾನ್ಯತಾ ಜೈ ಶಂಕರ್ ಗೆ ವಿಡಿಯೋ ಕಾಲ್ ಮಾಡುವ ಮುಖಾಂತರ ತೋರಿಸಿ ನಮ್ಮ ಅಳಿಯನಿಗೆ ಬಡವರ ಬಗ್ಗೆ ಕಾಳಜಿ ಇದೆ ಎಂದು ಹೇಳಿದ್ದಾಳೆ. ಆದರೆ ಚಾರು ಮಾತ್ರ ಇದು ತೋರಿಕೆಗೆ ತೋರುತ್ತಿರುವ ಪ್ರೀತಿ ಆಗಿದೆ ಎಂದು ಹೇಳಿದ್ದಾಳೆ.
ಇದೇ ವೇಳೆ ಅಲ್ಲಿಂದ ಜನರು ನಮ್ಮ ಹುಡುಗನನ್ನು ಕಳ್ಳ ಬಂದು ಕದ್ದು ಹೋಗುತ್ತಿದ್ದಾನೆ ಎಂದು ತಪ್ಪಾಗಿ ಭಾವಿಸಿ ವಿಕಾಸ್ ಬಾನಿಗೆ ಹೊಡೆತ ಕೊಡಲು ಶುರು ಮಾಡಿದ್ದಾರೆ. ಇದನ್ನೆಲ್ಲವನ್ನು ಜೈ ಶಂಕರ್ ನೋಡಿ ಬೇಸರ ಮಾಡಿ ಕೊಂಡಿದ್ದಾರೆ. ಚಾರು ಮತ್ತು ಮಾನ್ಯತಾ ಸಹ ಇದನ್ನೆಲ್ಲಾ ನೋಡುತ್ತಿದ್ದಾರೆ ಮಾನ್ಯತಾ ಟೆನ್ಶನ್ ಮಾಡಿಕೊಂಡಿದ್ದಾಳೆ. ಮನೆಗೆ ಬಂದ ವಿಕಾಸ್‌ಗೆ ಅವರ ಅಮ್ಮ ಉಪ್ಪಿನ ಶಾಖವನ್ನು ಕೊಟ್ಟಿದ್ದಾರೆ.

ರಾಮಾಚಾರಿಗೆ ಚಾರು ಫೋನ್ ಮಾಡಿದ್ದಾಳೆ, ಇದೇ ವೇಳೆ ವಿಕಾಸ್‌ಗೆ ಯಾರು ಆ ಡಬ್ಬ ಐಡಿಯಾವನ್ನು ಕೊಟ್ಟರೋ ಗೊತ್ತಿಲ್ಲ ಎಂದು ನಗುತ್ತಾ ಇದ್ದಾಳೆ. ಆದರೆ ರಾಮಾಚಾರಿ ಚಾರುಗೆ ನಮ್ಮ ಶತ್ರು ಸಹ ಕೆಳಗೆ ಜಾರಿ ಬಿದ್ದರು ನಾವು ಹಾಡಿಕೊಳ್ಳಬಾರದು ಎಂದು ಹೇಳಿದ್ದಾನೆ. ಆದರೆ ಅವನು ತೋರಿಕೆಗಾಗಿ ಮಾಡಿದ ಕೆಲಸಕ್ಕೆ ತಕ್ಕ ಪಾಠವನ್ನು ಜನರು ಕಲಿಸಿದ್ದಾರೆ ಎಂದು ಹೇಳಿದ್ದಾಳೆ.
ರಾಮಾಚಾರಿಯನ್ನು ಮೀಟ್ ಆದ ವಿಕಾಸ್ ಬಾನೇರಿ ಅಲ್ಲಿ ನಡೆದ ಪ್ರತಿಯೊಂದು ವಿಚಾರವನ್ನು ತಿಳಿಸಿದ್ದಾನೆ. ಇದಕ್ಕೆ ರಾಮಾಚಾರಿ ನೀವು ಹೇಳದೆ ಕೇಳದೆ ಆ ಹುಡುಗನನ್ನು ಕರೆದುಕೊಂಡು ಬಂದಿದ್ದು ತಪ್ಪು ನೀವು ಹೇಳಿ ಕರೆದುಕೊಂಡು ಬರಬೇಕಾಗಿತ್ತು ಎಂದು ಹೇಳಿದ್ದಾನೆ.
ಇದೊಂದೇ ನಾನು ಮಾಡಿದ ತಪ್ಪು ಎಂದು ಹೇಳಿದ್ದಾನೆ ಮುಂದೆ ಇಂತಹ ತಪ್ಪನ್ನು ಮಾಡಬೇಡಿ ಎಂದು ರಾಮಾಚಾರಿ ವಿಕಾಸ್ ಗೆ ಹೇಳಿದ್ದಾನೆ. ಇದೇ ವೇಳೆ ಇನ್ನೊಂದು ಐಡಿಯಾವನ್ನ ಕೊಡುವಂತೆ ರಾಮಾಚಾರಿ ಬಳಿ ಕೇಳಿದ್ದಕ್ಕೆ ನನ್ನ ಬಳಿ ಐಡಿಯಾ ಇಲ್ಲ ಎಂದು ರಾಮಾಚಾರಿ ಹೇಳಿದ್ದಾನೆ.
ಇನ್ನು ವಿಕಾಸ್ ಬಾನೇರಿಗೆ ಚಾರುವನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ಪ್ಲ್ಯಾನ್ ಮಾಡಿದ್ದಾನೆ. ಇನ್ನು ರಾಮಾಚಾರಿ ಸಹ ಜೊತೆಗೆ ಬರುತ್ತಿದ್ದಾನೆ ಎಂದು ತಿಳಿದಿರುವ ಚಾರುಗೆ ತುಂಬಾ ಖುಷಿಯಾಗಿದೆ. ಮನೆಯವರ ಜೊತೆಯಲ್ಲಿ ನನಗೆ ಇವತ್ತು ಖುಷಿಯಾಗಿದೆ ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ ಮಾನ್ಯತಾ ಸಹ ಇದನ್ನು ಕೇಳಿ ತುಂಬಾ ಸಂತೋಷಪಟ್ಟಿದ್ದಾಳೆ ಆದರೆ ಕೊನೆಯಲ್ಲಿ ರಾಮಾಚಾರಿ ಸಹ ಬರುತ್ತಿದ್ದಾನೆ ಎಂದು ಹೇಳಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾಳೆ.


Click it and Unblock the Notifications











