Ramachari: ಆ್ಯಕ್ಷನ್ ಎಪಿಸೋಡ್‌ನಲ್ಲಿ ಹೀರೋ ಆದ ರಾಮಾಚಾರಿ
ರಾಮಾಚಾರಿ ಹಾಗೂ ಚಾರುವನ್ನು ಕಟ್ಟಿಹಾಕಲಾಗಿದೆ. ಇದು ರಾಮಾಚಾರಿಗೆ ಕಸಿವಿಸಿಯನ್ನು ತಂದಿದೆ. ರಾಮಾಚಾರಿಗೆ ವಿಕಾಸ್ ಬಾನೇರಿಯನ್ನು ಕಾಪಾಡಬೇಕು ಎನ್ನುವ ಹಂಬಲ ಹೆಚ್ಚಾಗಿದೆ ಆದರೆ ಚಾರು ಮಾತ್ರ ಈ ವಿಕಾಸ್ ಬಾನೇರಿ ಎನಾದ್ರು ಮಾಡಿರುತ್ತಾನೆ ಚನ್ನಾಗಿ ಪೆಟ್ಟು ತಿನ್ನಲಿ ಎಂದು ಅಂದಿದ್ದಾಳೆ.
ಇದಕ್ಕೆ ರಾಮಾಚಾರಿ ಆ ರೀತಿ ಎಲ್ಲ ಮಾತನಾಡಬಾರದು ನಾವು ಜೊತೆಯಲ್ಲಿ ಇದ್ದೇವೆ ಅವರನ್ನು ಕಾಪಾಡುವುದು ನಮ್ಮ ಧರ್ಮ ಎಂದು ಅನ್ನುತ್ತಾನೆ. ಚಾರು ಮಾತ್ರ ರಾಮಾಚಾರಿ ಜೊತೆಗೆ ಇರುವುದೇ ಖುಷಿಕೊಟ್ಟಿದೆ. ರಾಮಾಚಾರಿ ಇವರು ಈ ರೀತಿ ಕಟ್ಟುವ ಬದಲು ಮುಂದೆ ಕಟ್ಟಿದ್ದರೆ ಎಷ್ಟು ಚನ್ನಾಗಿ ಇರೋದು ಎಂದು ಹೇಳಿದ್ದಾಳೆ. ಚಾರುಲತಾ ಮಾತಿಗೆ ರಾಮಾಚಾರಿ ಕೋಪ ಮಾಡಿಕೊಂಡಿದ್ದಾನೆ.

ಈ ಕಡೆ ವಿಕಾಸ್ ಬಾನೇರಿ ನಾನೇ ಹೀರೋ ನನಗೆ ಯಾಕೆ ಹೊಡೆಯುತ್ತಾ ಇದ್ದೀರಾ ಎಂದು ರೌಡಿಗಳಿಗೆ ಹೇಳಿದರು ಸಹ ರೌಡಿಗಳು ನಂಬದೇ ಚನ್ನಾಗಿ ವಿಕಾಸ್ ಬಾನೇರಿಗೆ ಹೊಡೆತವನ್ನು ಕೊಡುತ್ತಾ ಇದ್ದಾರೆ. ಈ ಕಡೆ ರಾಮಾಚಾರಿ ಹಗ್ಗವನ್ನು ಬಿಡಿಸಿಕೊಳ್ಳಲು ಪ್ರಯತ್ನವನ್ನು ಮಾಡುತ್ತಿದ್ದಾನೆ.
ಹಗ್ಗವನ್ನು ಬಿಚ್ಚಿಕೊಂಡು ಬಂದ ರಾಮಾಚಾರಿ ರೌಡಿಗಳಿಗೆ ಚನ್ನಾಗಿ ಹೊಡೆದು ವಿಕಾಸ್ ಬಾನೇರಿಯನ್ನು ಕಾಪಾಡಿದ್ದಾನೆ. ಇದರಿಂದಾಗಿ ಚಾರುಲತಾ ಮುಂದೆ ಹೀರೋ ಪಟ್ಟವನ್ನು ಅಲಂಕರಿಸಿದ್ದಾನೆ. ಇದು ವಿಕಾಸ್ ಬಾನೇರಿಯ ಕೋಪಕ್ಕೆ ಕಾರಣವಾಗಿದೆ. ರಾಮಾಚಾರಿಯನ್ನು ಚಾರು ಹೊಗಳಿ ನಿಜವಾದ ಹೀರೋ ನೀನೇ ಎಂದು ಹೇಳುತ್ತಿದ್ದಾಳೆ.
ರಾಮಾಚಾರಿ ವಿಕಾಸ್‌ನ್ನು ಕಾಪಾಡಿದ್ದಕ್ಕೆ ಓಡೋಡಿ ಬಂದ ಚಾರು ರಾಮಾಚಾರಿಯನ್ನು ತಬ್ಬಿಕೊಂಡು ನೀನೇ ನಿಜವಾದ ಹೀರೋ ಎಂದಿದ್ದಾಳೆ. ಪ್ಲ್ಯಾನ್ ಮಾಡಿದ್ದು ಎಲ್ಲಾ ಉಲ್ಟಾ ಆಗಿದೆ. ನಾನು ಹೀರೋ ಆಗಬೇಕು ಎಂದು ಅಂದುಕೊಂಡಿದ್ರೆ ಹೀಗೆ ಆಯ್ತಲ್ಲ ಎಂದು ವಿಕಾಸ್‌ಗೆ ಹೊಟ್ಟೆ ಕಿಚ್ಚು ಆಗುತ್ತಿದೆ.

ಹೊಡೆತ ತಿಂದ ವಿಕಾಸ್ ರೌಡಿಯ ಬಳಿ ಬಂದಿದ್ದಾನೆ ಈ ವೇಳೆ ಜೋರಾಗಿ ಹೋರಾಟ ಮಾಡಿದ್ದೀರಾ ಹೀರೋ ಅಂದ್ರಾ ಎಂದು ಕೇಳಿದ್ದಾನೆ. ಇದಕ್ಕೆ ವಿಕಾಸ್ ಬಾನೇರಿ ರೌಡಿಯ ಮುಖಕ್ಕೆ ಮಂಗಳಾರತಿ ಮಾಡಿದ್ದಾನೆ. ನಿಮ್ಮ ಕಡೆಯವರು ನನ್ನನ್ನೇ ಹೊಡೆದರು. ಆ ರಾಮಾಚಾರಿ ನನ್ನ ಹುಡುಗಿ ಮುಂದೆ ಹೀರೋ ಆದ ನಿನಗೆ ಸುಪಾರಿಯನ್ನು ಕೊಟ್ಟಿದ್ದು ದಂಡ ಎಂದು ಹೇಳಿ ಬೈದಿದ್ದಾನೆ.
ರಾಮಾಚಾರಿ ಕಾಲೆಳೆಯಲು ಮುರಾರಿ ಹೋದಾಗ ಶೃತಿಗೆ ಮುರಾರಿ ಹಾಗೂ ರಾಮಾಚಾರಿ ಮದುವೆ ಆಗಿರುವ ಬಗ್ಗೆ ಗೊತ್ತಾಗಿದೆ. ಅಲ್ಲಿಗೆ ಬಂದ ಶೃತಿ ಅಣ್ಣನಿಗೆ ಮದುವೆ ಆಗಿದ್ಯಾ, ನಮಗೆ ಯಾರಿಗೂ ತಿಳಿಯದಂತೆ ಎಂದು ಪ್ರಶ್ನೆಯನ್ನು ಮಾಡಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ನಾರಾಯಣ ಆಚಾರ್ಯರು, ಜಾನಕಿ ಎಲ್ಲರೂ ಬಂದಿದ್ದಾರೆ. ಎನೋ ರಾಮಾಚಾರಿ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.
ಅಜ್ಜಿ ಗಂಡನ ಹೆಸರನ್ನು ಹೆಸರಿಡಿದು ಕೂಗಬಾರದು ಎಂದು ಮಾನ್ಯತಾ ಬಳಿ ಹೇಳಿದ್ದಕ್ಕೆ ಮಾನ್ಯತಾ ಅತ್ತೆ ಮಾವನಿಗೆ ಬೈದು ಹೋಗಿದ್ದಾಳೆ.ಇದೇ ವೇಳೆ ಅಲ್ಲೇ ಇದ್ದ ಚಾರು ಯಾಕೆ ಹೆಸರಿಡಿದು ಕರೆಯಬಾರದು ಎಂದು ಕೇಳಿದ್ದಾಳೆ. ಗಂಡನ ಆಯಸು ಕಡಿಮೆ ಆಗುತ್ತದೆ ಎಂದು ಅಜ್ಜಿ ಹೇಳಿದ್ದಾರೆ. ಇದಕ್ಕಾಗಿ ರಾಮಾಚಾರಿಯನ್ನು ಯಾವ ಹೆಸರಿನಿಂದ ಕರೆಯಬೇಕು ಎಂದು ಚಾರು ಯೋಚನೆ ಮಾಡುತ್ತಿದ್ದಾಳೆ.
ಇದೇ ವೇಳೆ ಸರ್ವೇಶ್ ಮತ್ತು ಚಿಂಟು ಸಹಾಯವನ್ನು ಪಡೆದುಕೊಂಡು ಅವರು ರೀ, ಯಜಮಾನ್ರೆ, ಡಿಯರ್, ಹಬ್ಬಿ ಎಂದೆಲ್ಲ ಕರೆಯಬಹುದು ಎಂದು ಸಲಹೆ ನೀಡಿದ್ದಾರೆ.ಆದರೆ ಚಾರುಗೆ ಇದ್ಯಾವುದು ಸಹ ಇಷ್ಟವಾಗುತ್ತಿಲ್ಲ. ಇಬ್ಬರನ್ನೂ ಹೊರಗೆ ಕಳಿಸಿ ತಾನೇ ಏನೆಂದು ಕರೆಯಬೇಕು ಎಂದು ಯೋಚನೆಯನ್ನು ಮಾಡುತ್ತಿದ್ದಾಳೆ.


Click it and Unblock the Notifications











