Ramachari: ಸಾವು ಬದುಕಿನ ನಡುವೆ ಚಾರು ಹೋರಾಟ: ರಾಮಾಚಾರಿ ಕೈಗೆ ಬಿತ್ತು ಕೋಳ
ರಾಮಾಚಾರಿ, ಚಾರು ಕುತ್ತಿಗೆಗೆ ತಾಳಿ ಕಟ್ಟಿದ ದಿನದಿಂದಲೂ ಸಹ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಿದ್ದಾನೆ. ಈಗ ಚಾರುಯಿಂದ ಪೊಲೀಸ್ ಸ್ಟೇಷನ್‌ಗೂ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಾರುವಿನ ಬಂಧನವನ್ನು ಬಿಡಿಸಿಕೊಳ್ಳಲು ರಾಮಾಚಾರಿ ಕೈಯಲ್ಲಿ ಆಗುತ್ತಿಲ್ಲ. ಒಂದು ಸುಳ್ಳು ಮುಚ್ಚಲು ಇನ್ನೊಂದು ಸುಳ್ಳನ್ನು ರಾಮಾಚಾರಿ ಹೇಳಿಕೊಂಡು ಬಂದನು. ಕೋದಂಡನ ಎರಡನೇ ಮದುವೆಯಾಗುವವರೆಗೂ ಎಲ್ಲವೂ ಚೆನ್ನಾಗಿ ಇತ್ತು.
ಮನೆಗೆ ಬಂದ ಹೊಸ ಅತ್ತಿಗೆ ಅಪರ್ಣಳಾಂತೆ ಸಾಧುವಾಗದೇ ರಾಮಾಚಾರಿ ಪಾಲಿಗೆ ಜಗಳಗಂಟಿ ಅತ್ತಿಗೆಯಾಗಿದ್ದಾಳೆ. ರಾಮಾಚಾರಿಗೆ ಸದಾ ಕಾಲವೂ ಕೇಡು ಬಯಸುತ್ತಾ ರಾಮಾಚಾರಿಯನ್ನು ಹಂಗಿಸಲು , ಅವನ ಮರ್ಯಾದೆಯನ್ನು ಕಳೆಯಲು ಚಾರು ವಿಷ ಕುಡಿದ ವಿಷಯ ಸಿಕ್ಕಿದೆ.

ರಾಮಾಚಾರಿ, ಮುರಾರಿ ಬಳಿ ಮಾತನಾಡುವಾಗ ಕದ್ದು ಕೇಳಿಸಿಕೊಳ್ಳುತ್ತಿರುವ ವೈಶಾಖ ಎನೋ ಯಡವಟ್ಟು ಆಗಿದೆ ಎಂದು ತಿಳಿದುಕೊಂಡಿದ್ದಾಳೆ. ರಾಮಾಚಾರಿಯಿಂದ ಚಾರು ವಿಷವನ್ನು ಕುಡಿದಿದ್ದಾಳೆ ಎಂಬುದನ್ನು ತಿಳಿದು ಖುಷಿಯಾಗಿದ್ದಾಳೆ. ಈಗ ರಾಮಾಚಾರಿ ಮುಖವಾಡವನ್ನು ಕಳಚುವ ಪ್ರಯತ್ನದಲ್ಲಿ ವೈಶಾಖ ಇದ್ದಾಳೆ.
ರಾಮಾಚಾರಿ ಮನೆಗೆ ಬಂದ ಪೊಲೀಸರು
ಇದೀಗ ರಾಮಾಚಾರಿ ಮನೆಗೆ ಪೊಲೀಸರು ಬಂದು ರಾಮಾಚಾರಿ ಯಾರು ಎಂದು ಕೇಳಿದ್ದಾರೆ. ಈ ವೇಳೆ ರಾಮಾಚಾರಿ ಏನು ಮಾತನಾಡದ್ದನ್ನು ನೋಡಿ ಇವನೇ ರಾಮಾಚಾರಿ ಎಂದು ನಿನ್ನಿಂದ ಒಂದು ಹುಡುಗಿ ವಿಷ ಕುಡಿದಿದ್ದಾಳೆ, ಇದಕ್ಕೆ ನೀನೇ ಕಾರಣ ಎಂದು ಸಹ ಹೇಳಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಹೇಳಿದ ಮಾತನ್ನು ಕೇಳಿದ ಮನೆಯವರಿಗೆ ತುಂಬಾ ಶಾಕ್ ಆಗಿದೆ.
ರಾಮಾಚಾರಿಯನ್ನು ಯಾರು ವಿಷ ಕುಡಿದರು ಹೇಳು ಎಂದು ಕೇಳುತ್ತಿದ್ದಾರೆ. ಈ ಕಡೆ ಶೃತಿ, ಜಾನಕಿ, ಅಜ್ಜಿ ಕಣ್ಣೀರನ್ನು ಹಾಕುತ್ತಿದ್ದಾರೆ. ಆದರೆ ವೈಶಾಖಗೆ ಮಾತ್ರ ಸಿಹಿಯನ್ನು ತಿಂದಷ್ಟು ಖುಷಿಯಾಗಿದೆ. ಇದಕ್ಕೆ ಏನನ್ನು ಮಾತನಾಡದೆ ಸುಮ್ಮನೆ ಒಳಗೆ ಖುಷಿ ಪಡುತ್ತಿದ್ದಾಳೆ. ರಾಮಾಚಾರಿಯನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವಾಗ ಮೂವರು ಕಣ್ಣೀರು ಹಾಕಿ ಪೊಲೀಸರನ್ನು ಬೇಡಿಕೊಂಡಿದ್ದಾರೆ. ಈ ವೇಳೆ ರಾಮಾಚಾರಿ ಮನೆಯವರಿಗೆ ಸಮಾಧಾನ ಮಾಡಿದ್ದಾನೆ.

ಮನೆಯಲ್ಲಿ ರಂಪ ಮಾಡಿದ ವೈಶಾಖ
ರಾಮಾಚಾರಿಯನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಮಧ್ಯೆ ಕೋದಂಡ ಮಾತನಾಡಲು ಹೋಗಿದ್ದಕ್ಕೆ ನೀವು ಏನನ್ನು ಮಾತನಾಡಬೇಡಿ ಎಂದು ವೈಶಾಖ ತಡೆದಿದ್ದಾಳೆ. ಇದೇ ವೇಳೆ ಮನೆಯಲ್ಲಿ ರಂಪ ಮಾಡುತ್ತಿದ್ದಾಳೆ. ಮೊದಲನೇ ಮಗ ಮಾಡಿದರೆ ಅದು ತಪ್ಪು ಎರಡನೇ ಮಗ ಕಾಣದಂತೆ ಏನೋ ಒಂದು ತಪ್ಪನ್ನ ಮಾಡಿದ್ದಾನೆ, ಅದರ ಪರಿಣಾಮವಾಗಿ ಆ ಹುಡುಗಿ ವಿಷಯ ಕೊಂಡಿದ್ದಾಳೆ ಎಂದು ಹೀಯಾಳಿಸುತ್ತಿದ್ದಾಳೆ. ಜಾನಕಿಗೆ ಕೋಪ ಬಂದರು ಸಹ ಏನು ಮಾತನಾಡದ ಪರಿಸ್ಥಿತಿಯಲ್ಲಿ ಇದ್ದಾಳೆ.
ಚಾರು ನೋಡಲು ಬಂದ ರಾಮಾಚಾರಿ
ಪೊಲೀಸರು ರಾಮಾಚಾರಿ ಬಳಿ ಚಾರು ಯಾವುದಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಕೇಳಿದ್ದಾರೆ. ಇದಕ್ಕೆ ರಾಮಾಚಾರಿ ನನಗೆ ಒಬ್ಬರ ಪ್ರಾಣ ತೆಗೆಯುತ್ತಿದ್ದೇನೆ ಎಂದು ಪಶ್ಚಾತಾಪ ಕಾಡುತ್ತಿದೆ ಎಂದು ಹೇಳಿದ್ದಾನೆ. ಇದೇ ವೇಳೆ ಪೊಲೀಸರು ರಾಮಾಚಾರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸಾನ್ವಿಯು ಸಹ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾಳೆ. ಪರಿಸ್ಥಿತಿ ಸದ್ಯಕ್ಕೆ ಕೈಮೀರಿ ಹೋಗಿದ್ದು ಸಾನ್ವಿ ಬಳಿ ಏನು ಉಳಿದಿಲ್ಲ. ಪೊಲೀಸರು ರಾಮಾಚಾರಿಯನ್ನ ವಿಚಾರಣೆ ಮಾಡುತ್ತಿದ್ದಾರೆ.
ಚಿಂಟುಗೆ ಬಿತ್ತು ಚಾರು ಸತ್ತ ಕನಸು
ಈ ಕಡೆ ಚಾರು ತಮ್ಮ ಚಿಂಟುಗೆ ಚಾರು ಸತ್ತಿರುವ ಕನಸು ಬಿದ್ದಿದೆ. ಮುಂಜಾನೆಯ ಕನಸು ನಿಜವಾಗುತ್ತದೆ ಎಂದು ಭಯದಿಂದ ಚಿಂಟು ಅಳುತ್ತಿದ್ದಾನೆ. ಚಿಂಟುಗೆ ಬಿದ್ದ ಕನಸಿನ ಬಗ್ಗೆ ತಿಳಿದ ಮಾನ್ಯತಾಗೂ ಕೂಡ ಭಯವಾಗಿದೆ. ಚಾರುಗೆ ಎಷ್ಟೇ ಫೋನ್ ಮಾಡಿದರು ಸಹ ಚಾರು ತೆಗೆಯುತ್ತಿಲ್ಲ. ಈ ವೇಳೆ ಸಾನ್ವಿಗೆ ಫೋನ್ ಮಾಡಲು ಹೋಗುತ್ತಿದ್ದಾಳೆ. ಈ ಕಡೆ ಚಾರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು ಪೊಲೀಸರು ಚಾರು ಅಪ್ಪ ಅಮ್ಮನ ನಂಬರ್ ಅನ್ನು ತೆಗೆದುಕೊಂಡಿದ್ದಾರೆ.


Click it and Unblock the Notifications











