Ramachari: ಆಸ್ಪತ್ರೆಗೆ ಬಂದ ನಾರಾಯಣ ಆಚಾರ್ಯರು: ಹೊರಬೀಳುತ್ತಾ ಮದುವೆಯ ಸತ್ಯ?
ಮನೆಯಲ್ಲಿ ವೈಶಾಖ ರಾಮಾಚಾರಿಯ ಹೆಸರನ್ನು ಹೇಳಿಕೊಂಡು ರಂಪ ರಾಮಾಯಣ ಮಾಡುತ್ತಿದ್ದಾಳೆ. ಮಗ ಮಾಡಿದ ಕೆಲಸಕ್ಕೆ ಏನಂತ ಬಾಯಿ ಮುಚ್ಚಿಕೊಂಡು ಇದ್ದೀರಾ ಎಂದಿದ್ದಾಳೆ. ಜಾನಕಿ ನನಗೆ ಇಬ್ಬರು ಮಕ್ಕಳು ಎರಡು ಕಣ್ಣು ಎಂದು ಹೇಳಿದ್ದಾಳೆ. ಈ ವೇಳೆ ಶ್ರುತಿ ಅಡ್ಡಬಾಯಿ ಯಾಕೆ ನೀವು ಗೋಡೆ ಕಟ್ಟಲು ಬರಬೇಡಿ ಎಂದು ಹೇಳಿದ್ದಕ್ಕೆ ಶೃತಿ ಕೆನ್ನೆಗೆ ವೈಶಾಖ ಬಾರಿಸಿದ್ದಾಳೆ.
ಕೋದಂಡನ ಬಳಿ ಜಾನಕಿ ನಿನ್ನ ತಮ್ಮನನ್ನು ಬಿಡಿಸಿಕೊಂಡು ಬರೋಣ ಎಂದು ಕೇಳಿದ್ದಾಳೆ. ಇದಕ್ಕೆ ವೈಶಾಖ ನಾನು ನನ್ನ ಗಂಡನನ್ನು ಪೊಲೀಸ್ ಸ್ಟೇಷನ್ ಮೆಟ್ಟಿಲನ್ನು ಹತ್ತಲು ಬಿಡುವುದಿಲ್ಲ ಎಂದು ಹೇಳಿದ್ದಾಳೆ. ಹೆಂಡತಿಯ ಮಾತನ್ನು ಕೇಳುತ್ತಿರುವ ಕೋದಂಡ ಏನು ಮಾತನಾಡದೇ ಸುಮ್ಮನೆ ನಿಂತುಕೊಂಡಿದ್ದಾನೆ. ಇದೇ ವೇಳೆ ಜಾನಕಿಗೆ ತುಂಬಾ ಬೇಸರವಾಗಿದೆ. ನೀನು ಬರೆದಿದ್ದರೆ ಏನಂತೆ, ನಾನು ನನ್ನ ಮಗನನ್ನ ಬಿಡಿಸಿಕೊಂಡು ಬರುತ್ತೇನೆ ಎಂದು ಅಲ್ಲಿಂದ ಹೊರಟಿದ್ದಾಳೆ.

ಕೋದಂಡ ತನ್ನ ಮಾತನ್ನು ಕೇಳಿದ್ದಕ್ಕೆ ವೈಶಾಖಗೆ ತುಂಬಾ ಖುಷಿಯಾಗಿದೆ. ಗಂಡನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾಳೆ. ಅಜ್ಜಿ ಹಾಗೂ ಶೃತಿಗೆ ಕೋದಂಡ ನಡೆದುಕೊಂಡ ರೀತಿಗೆ ತುಂಬಾ ಬೇಸರವಾಗಿದೆ. ಈ ಕಡೆ ದೀಪಾ ಮನೆಯಲ್ಲಿ ಕೋದಂಡನ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ ರಾಮಾಚಾರಿಗೂ ಸಹ ಹೀಗೆ ಮಾಡಿದ್ದಾನೆ ಎಂದು ಮಾತನಾಡಿದ್ದಾರೆ.
ಆಸ್ಪತ್ರೆ ಬಳಿ ಹೋದ ಆಚಾರ್ಯರು
ನಾರಾಯಣ ಆಚಾರ್ಯರು ತಮ್ಮ ಮಗನನ್ನ ಬಿಡಿಸಿಕೊಂಡು ಬರಲು ಆಸ್ಪತ್ರೆಯ ಬಳಿ ಹೋಗುತ್ತಿದ್ದಾರೆ. ಇದೇ ವೇಳೆ ಪೊಲೀಸರು ರಾಮಾಚಾರಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಆ ಹುಡುಗಿ ನಿನ್ನಿಂದ ಯಾಕೆ ವಿಷವನ್ನು ಕುಡಿದಳು ಹೇಳು ಎಂದು ಕೇಳುತ್ತಿದ್ದಾರೆ ಆದರೆ ರಾಮಾಚಾರಿ ಮೌನವಾಗಿ ಇದ್ದಾನೆ. ಇದೇ ವೇಳೆ ಆಸ್ಪತ್ರೆಯ ಬಳಿ ನಾರಾಯಣ ಆಚಾರ್ಯರು ಹಾಗೂ ಜಾನಕಿ ಬಂದಿದ್ದಾರೆ.
ನಾರಾಯಣ ಆಚಾರ್ಯರು ನನ್ನ ಮಗ ಏನು ಮಾಡಿಲ್ಲ ಎಂದು ನನ್ನ ಹೃದಯ ಹೇಳುತ್ತಿದೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಆದರೆ ಪೊಲೀಸರು ಕೇಳುತ್ತಿರುವ ಪ್ರಶ್ನೆಗೆ ರಾಮಾಚಾರಿಯ ಬಳಿ ಉತ್ತರವಿಲ್ಲ. ಇದಕ್ಕೆ ಪೊಲೀಸರು ನಿಮ್ಮ ಮಗನ ಮುಖದಲ್ಲಿ ಕಾಣುತ್ತಿರುವ ಭಯ ಅವನು ತಪ್ಪು ಮಾಡಿದ್ದಾನೆ ಎಂಬುದನ್ನು ತೋರಿಸುತ್ತಿದೆ ಎಂದು ನಾರಾಯಣ ಆಚಾರ್ಯರು ಮುಂದೆ ಹೇಳಿದ್ದಾರೆ.

ಸಾನ್ವಿಗೆ ಫೋನ್ ಮಾಡಿದ ಜೈ ಶಂಕರ್
ಚಿಂಟುಗೆ ಚಾರು ಸತ್ತಿರುವ ರೀತಿ ಕನಸು ಬಿದ್ದಿದೆ. ಇದಕ್ಕೆ ಅಳುತ್ತಾ ಕುಳಿತಿದ್ದಾನೆ ಈ ವೇಳೆ ಚಿಂಟು ಬಳಿ ಬಂದಿರುವ ಜೈ ಶಂಕರ್ ಅವರು ಸಾನ್ವಿಗೆ ಫೋನ್ ಮಾಡಿದ್ದಾರೆ. ಈ ವೇಳೆ ಸಾನ್ವಿ ಸುಳ್ಳನ್ನ ಹೇಳಿದ್ದಾಳೆ ನಾವು ಪರಿಮಳ ಎಂಬ ಹಳೆಯ ಸ್ನೇಹಿತೆಯ ಮನೆಗೆ ಹೋಗುತ್ತಿದ್ದೇವೆ ಎಂದಿದ್ದಾಳೆ. ಚಾರು ಫೋನ್ ಯಾಕೆ ಸ್ವಿಚ್ ಆಫ್ ಎಂದು ಕೇಳಿದ್ದಕ್ಕೆ ನನಗೆ ಗೊತ್ತಿಲ್ಲ ನಾನು ಪರಿಮಳ ಮನೆಗೆ ಹೋಗಿ ಚಾರು ಕೈಯಲ್ಲಿ ಫೋನ್ ಮಾಡಿಸುತ್ತೇನೆ ಎಂದು ಜೈ ಶಂಕರ್ ಹಾಗೂ ಮಾನ್ಯತಾ ಇಬ್ಬರ ಬಳಿಯೂ ಹೇಳಿದ್ದಾಳೆ.
ಮದುವೆ ರಹಸ್ಯ ಬಯಲಾಗುತ್ತಾ?
ನಾರಾಯಣ ಆಚಾರ್ಯರು ವಿಷ ಕುಡಿದಿರುವ ಹುಡುಗಿ ಯಾರು ಎಂಬುದನ್ನು ನಾನು ನೋಡಬೇಕು ಎಂದು ಹೇಳಿದ್ದಾರೆ. ಜಾನಕಿ ಸಹ ಹೌದು ನಾನು ಸಹ ಹುಡುಗಿಯನ್ನ ನೋಡಬೇಕು ಎಂದಿದ್ದಾರೆ. ಇದಕ್ಕೆ ನಾರಾಯಣ ಆಚಾರ್ಯರು ನಾವು ಹೆಣ್ಣು ಇದ್ದೇವೆ ಅದು ಏನು ಆಗಿದೆ ಎಂಬುದನ್ನು ಕೇಳೋಣ ಎಂದು ಚಾರಿಗೆ ಧೈರ್ಯವನ್ನು ತುಂಬಿ ಆಸ್ಪತ್ರೆಯ ಒಳಗೆ ಹೋಗುತ್ತಿದ್ದಾರೆ.
ರಾಮಾಚಾರಿ ಕುಟುಂಬದವರ ಜೊತೆಗೆ ಪೊಲೀಸರು ಸಹ ಒಳಗೆ ಹೋಗುತ್ತಿದ್ದಾರೆ. ಮುರಾರಿ ಸಹ ನಾರಾಯಣ ಆಚಾರ್ಯರು ಹಾಗೂ ಜಾನಕಿ ಬಂದಿರುವುದಕ್ಕೆ ಗಾಬರಿ ಯಾಗಿದ್ದಾನೆ ಎಲ್ಲಿ ರಹಸ್ಯವಾಗಿರುವ ಮದುವೆ ಎಲ್ಲರಿಗೂ ತಿಳಿದುಬಿಡುತ್ತದೋ ಎಂಬ ಟೆನ್ಶನ್ ನಲ್ಲಿ ಇದ್ದಾನೆ. ಈಗ ರಾಮಾಚಾರಿ ಚಾರು ಮುಖವನ್ನು ನಾರಾಯಣ ಆಚಾರ್ಯರು ನೋಡಿದರೆ ತಾವು ಇಬ್ಬರು ಮದುವೆ ಮಾಡಿಕೊಂಡ ಸತ್ಯವನ್ನ ಹೇಳಬೇಕಾದ ಅನಿವಾರ್ಯತೆ ಎದುರಾಗಿದೆ.


Click it and Unblock the Notifications











