Ramachari: ಪ್ರಾಣಾಪಾಯದಿಂದ ಪಾರಾದ ಚಾರು: ಚಾರು ಹಠಕ್ಕೆ ಮಣಿದ ರಾಮಾಚಾರಿ
ಆಚಾರ್ಯರು ಹಾಗೂ ಜಾನಕಿ ಇಬ್ಬರು ಸಹ ವಿಷ ಕುಡಿದಿರುವ ಹುಡುಗಿ ಯಾರು ಎಂದು ನಾವು ನೋಡಬೇಕು ಎಂದು ಆಸ್ಪತ್ರೆಯ ಒಳಗೆ ಬಂದಿದ್ದಾರೆ. ಈ ವೇಳೆ ಸಾನ್ವಿ ಕದ್ದು ನೋಡುವಾಗ ಜಾನಕಿ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾಳೆ. ನೀನು ಚಾರು ಫ್ರೆಂಡ್ ಅಲ್ವಾ ಎಂದು ಪ್ರಶ್ನೆಯನ್ನ ಜಾನಕಿ ಮಾಡಿದ್ದಾಳೆ. ಇದಕ್ಕೆ ಸಾನ್ವಿ ಹೌದು ಎಂದು ಹೇಳಿದ್ದಾಳೆ.
ಅಷ್ಟರಲ್ಲಿ ಡಾಕ್ಟರ್ ಇವರೇ ವಿಷ ಕುಡಿದ ಹುಡುಗಿಯನ್ನು ತಂದು ಆಸ್ಪತ್ರೆಗೆ ಸೇರಿಸಿದ್ದು ಎಂದು ಹೇಳಿದ್ದಾರೆ. ಈ ವೇಳೆ ಜಾನಕಿ ನಿನಗೆ ಆ ಹುಡುಗಿ ಗೊತ್ತಾ ಎಂದು ಕೇಳಿದ್ದಾರೆ. ಇದಕ್ಕೆ ನಾರಾಯಣ ಆಚಾರ್ಯರು ಬೇಡದ ಪ್ರಶ್ನೆಯನ್ನು ಯಾಕೆ ಕೇಳುತ್ತೀಯಾ ಈ ಹುಡುಗಿಗೆ ಯಾರು ಏನು ಎಂದು ಗೊತ್ತಿದೆ ವಿಷ ಕುಡಿದಿದ್ದಾಳೆ ಎಂದು ಸೇರಿಸಿದ್ದಾಳೆ ಎಂದಿದ್ದಾರೆ. ಜಾನಕಿ, ಸಾನ್ವಿ ಬಳಿ ಮಾತನಾಡುವಾಗ ರಾಮಾಚಾರಿ ಕೈಯನ್ನು ಅಡ್ಡ ಹಿಡಿದುಕೊಂಡು ಹೇಳಬೇಡ ಎಂದು ಸನ್ನೆ ಮಾಡಿದ್ದಾನೆ.

ಈ ಕಡೆ ಮುರಾರಿ ಸಹ ರಾಮಾಚಾರಿ ಸಿಕ್ಕಿ ಬೀಳುತ್ತಾನೆ ಎಂದು ಟೆನ್ಷನ್‌ನಲ್ಲಿ ಇದ್ದಾನೆ. ಆಚಾರ್ಯರು ಹೋಗಿ ಚಾರು ಮುಖವನ್ನ ನೋಡಿ ಬಿಟ್ಟರೆ ನೀನು ಇರುವ ಸತ್ಯವನ್ನೆಲ್ಲ ಹೇಳಬೇಕಾಗುತ್ತದೆ ಎಂದು ಮುರಾರಿ ರಾಮಾಚಾರಿಯ ಬಳಿ ಹೇಳಿದ್ದಾನೆ. ಇದಕ್ಕೆ ರಾಮಾಚಾರಿ ಕೋಪದಿಂದ ನನಗೆ ಮತ್ತಷ್ಟು ಭಯವನ್ನ ಹುಟ್ಟಿಸಬೇಡ ಎಂದು ಹೇಳಿದ್ದಾನೆ.
ಹೆಂಡತಿ ಎಂದು ಒಪ್ಪಿಕೊಂಡ ಚಾರಿ
ಪೊಲೀಸರು ಚಾರು ಬಳಿ ಹೋದಾಗ ನಾನು ರಾಮಾಚಾರಿಯ ಬಳಿ ಮಾತನಾಡಬೇಕು ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ನೀವು ಅವಕಾಶ ಮಾಡಿಕೊಡಿ ರಾಮಾಚಾರಿ ನನ್ನ ಮಾತನ್ನು ಪೂರ್ಣವಾಗಿ ಕೇಳದೆ ಹೋದದ್ದಕ್ಕೆ ನಾನು ವಿಷ ಕುಡಿದು ಬಿಟ್ಟೆ ಎಂದು ಹೇಳಿದ್ದಾಳೆ. ಇದೆ ವೇಳೆ ಹೊರಗಡೆ ಬಂದ ಪೊಲೀಸರು ರಾಮಾಚಾರಿಯನ್ನ ಚಾರು ಬಳಿಗೆ ಕಳಿಸಿದ್ದಾರೆ. ರಾಮಾಚಾರಿ ಒಳಗೆ ಬಂದಾಗ ಯಾಕೆ ಮೇಡಂ ಈ ರೀತಿ ಮಾಡಿದಿರಿ ನೀವು ವಿಷ ಕುಡಿಯುವುದಿಲ್ಲ ಎಂದು ನಾನು ಅಲ್ಲಿಂದ ಬಂದುಬಿಟ್ಟೆ ಎಂದು ಹೇಳಿದ್ದಾನೆ.
ನಿನಗೆ ನಾನು ಏನಾಗಬೇಕು ಎಂದು ಚಾರು, ರಾಮಾಚಾರಿ ಬಳಿ ಕೇಳಿದ್ದಕ್ಕೆ ನನ್ನ ಹೆಂಡತಿ ಎಂದು ರಾಮಾಚಾರಿ ಹೇಳಿದ್ದಾನೆ. ಇಷ್ಟು ಹೇಳಿದರೆ ಸಾಲುವುದಿಲ್ಲ ನೀನು ನನಗೆ ಪ್ರಾಮಿಸ್ ಮಾಡು ಎಂದು ಚಾರು ಪ್ರಾಮಿಸ್ ಮಾಡಿಸಿಕೊಂಡಿದ್ದಾಳೆ. ಪರಿಸ್ಥಿತಿಯನ್ನ ನೋಡಿಕೊಂಡು ನಾನೇ ನನ್ನ ಕುಟುಂಬದವರ ಜೊತೆ ಮಾತನಾಡುತ್ತೇನೆ ಯಾವುದೇ ಕಾರಣಕ್ಕೂ ನಿನ್ನನ್ನು ಕೈ ಬಿಡುವುದಿಲ್ಲ ಎಂದು ಚಾರುಗೆ ರಾಮಾಚಾರಿ ತಾಳಿಯನ್ನು ಹಿಡಿದುಕೊಂಡು ಪ್ರಾಮಿಸ್ ಮಾಡಿದ್ದಾನೆ.

ಗಂಡನ ಕಿವಿ ಚುಚ್ಚಿದ ವೈಶಾಖ
ವೈಶಾಖ, ರಾಮಾಚಾರಿಯ ಬಗ್ಗೆ ಚುಚ್ಚಿ ಮಾತನಾಡುತ್ತಿದ್ದಾಳೆ. ಇದೆ ವೇಳೆ ಕೋಡಂಡ ನಾವ್ಯಾರೋ ಇಷ್ಟು ದಿನ ಒಗ್ಗಟ್ಟಾಗಿ ಎಲ್ಲವನ್ನು ಎದುರಿಸುತ್ತಿದ್ದವು. ಇಂದು ನಾನು ತಪ್ಪು ಮಾಡಿದೆ ಅನಿಸುತ್ತಿದೆ ಎಂದು ವೈಶಾಖ ಬಳಿಯಲ್ಲಿ ಹೇಳಿದ್ದಾನೆ. ಇದಕ್ಕೆ ವೈಶಾಖ ಉಪ್ಪು ಮೆಣಸು ಎಲ್ಲವನ್ನ ಸೇರಿಸಿ ಚಾಡಿಯನ್ನ ಹೇಳಿದ್ದಾಳೆ. ವೈಶಾಖ ಹೇಳುತ್ತಿರುವ ಪ್ರತಿ ಮಾತಿಗೂ ಸಹ ಕೋದಂಡ ಕೋಲೆ ಬಸವನಂತೆ ತಲೆಕುಣಿಸುತ್ತಿದ್ದಾನೆ.
ರಾಮಾಚಾರಿಗೆ ತೊಡಿಸಿರುವ ಕಿರೀಟವನ್ನು ಕೆಳಗೆ ಬೀಳಿಸಬೇಕು ಎಂದರೆ ಅವನು ಮಾಡುವ ತಪ್ಪನ್ನು ನಾವು ಎತ್ತಿ ತೋರಿಸಬೇಕು. ಈ ದಿನ ನೀವು ಒಳ್ಳೆಯದನ್ನೇ ಮಾಡಿದ್ದೀರಿ. ಅವರು ಯಾರು ಸಹ ನೀವು ಮದುವೆ ಮಾಡಿಕೊಂಡು ಬಂದಾಗ ನಿಮ್ಮ ಪರ ನಿಲ್ಲಲಿಲ್ಲ ಎಂದು ಕೋಪ ಬರುವಂತೆ ವೈಶಾಖ ಮಾತನಾಡಿದ್ದಾಳೆ. ಕೋದಂಡನ ಅಭಿಪ್ರಾಯವನ್ನೇ ಬದಲಾಯಿಸಿಕೊಳ್ಳುವಂತೆ ಮಾಡಿದ್ದಾಳೆ.
ಚಾರು ಬಳಿ ಹೋದ ಆಚಾರ್ಯರು
ಟೆನ್ಷನ್‌ನಲ್ಲಿ ಮುರಾರಿ, ಸಾನ್ವಿ, ಚಾರು ನರ್ಸ್ ಬರುವುದನ್ನೇ ಕಾಯುತ್ತಿದ್ದ ನಾರಾಯಣ ಆಚಾರ್ಯರು ನರ್ಸ್ ಬಂದ ಕೂಡಲೇ ನಾವು ಪೇಶೆಂಟ್‌ನ ನೋಡಬಹುದಾ ಎಂದು ಕೇಳಿದ್ದಾರೆ. ಇದಕ್ಕೆ ನರ್ಸ್ ಹೌದು ನೋಡಬಹುದು ಎಂದು ಹೇಳಿದ್ದಾರೆ. ನಾರಾಯಣ ಆಚಾರ್ಯರು ಹಾಗೂ ಜಾನಕಿ, ಚಾರು ಇರುವ ರೂಂಗೆ ಹೋಗಿದ್ದಾರೆ.
ಈ ವೇಳೆ ಮುರಾರಿ, ಸಾನ್ವಿ ಹಾಗೂ ರಾಮಾಚಾರಿಗೆ ಟೆನ್ಶನ್ ಆಗಿದೆ. ಸಾನ್ವಿ, ಚಾರು ಹಠಮಾರಿ ಹೆಣ್ಣು ಈಗ ಹೇಗಿದ್ದರೂ ಚಾನ್ಸ್ ಸಿಕ್ಕಿದೆ, ಎಂದು ನಿಮ್ಮಿಬ್ಬರ ಮದುವೆಯಾಗಿರುವ ವಿಚಾರವನ್ನು ನಾರಾಯಣ ಆಚಾರ್ಯರಿಗೆ ತಿಳಿಸಿ ಬಿಟ್ಟರೆ ಏನು ಗತಿ ಎಂದು ಹೇಳಿದ್ದಾಳೆ. ಇದಕ್ಕೆ ರಾಮಾಚಾರಿ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾನೆ.


Click it and Unblock the Notifications











