Ramachari: ರಾಮಾಚಾರಿಗೆ ಕಳೆದಿಲ್ಲ ಕಂಟಕ: ಹೇಗೆ ಡಿಲೀಟ್ ಮಾಡ್ತಾನೆ ವಿಡಿಯೋ?

By ಶೃತಿ ಹರೀಶ್ ಗೌಡ

ರಾಮಾಚಾರಿ ಈಗ ಧರ್ಮ ಸಂಕಟದಲ್ಲಿ ಸಿಲುಕಿದ್ದಾನೆ. ಮೊಬೈಲ್ ಕೋದಂಡನ ಬಳಿ ಇಲ್ಲ ಎಂಬುದನ್ನು ಕೇಳಿ ಶಾಕ್ ಆಗಿದ್ದಾನೆ.‌ ಸೊಂಟಕ್ಕೆ ಬಾಂಬ್ ಕಟ್ಟಿಕೊಂಡಂತ ಪರಿಸ್ಥಿತಿಯಲ್ಲಿ ಇದ್ದಾನೆ. ವೈಶಾಖ ಅತ್ತಿಗೆ ಏನಾದರೂ ವಿಡಿಯೋವನ್ನು ನೋಡಿದರೆ ಮನೆಯಲ್ಲಿ ರಣರಂಗವೇ ಸೃಷ್ಟಿಯಾಗುತ್ತದೆ ಎಂದು ರಾಮಾಚಾರಿಗೆ ಗೊತ್ತಿದೆ. ಹೇಗಾದರೂ ಮಾಡಿ ವಿಡಿಯೋವನ್ನು ಡಿಲೀಟ್ ಮಾಡಬೇಕು ಎಂದು ಮುರಾರಿ, ರಾಮಾಚಾರಿ ಬರ್ತಿದ್ದಾರೆ.

ನಾರಾಯಣ ಆಚಾರ್ಯರು, ವೈಶಾಖಳನ್ನ ಪ್ರಶ್ನೆ ಮಾಡುತ್ತಿದ್ದಾರೆ. ಬಾಯಿಗೆ ಬಂದ ರೀತಿ ಎಲ್ಲಾ ನೀನು ಮಾತನಾಡಿದ್ದು ಸರಿಯಲ್ಲ ವೈಶಾಖ ಎಂದು ಹೇಳುತ್ತಿದ್ದಾರೆ.‌ ಇದೇ ವೇಳೆ ಕೋದಂಡ ಯಾವ ರೀತಿ ನಡೆದುಕೊಂಡ ಎಂಬುದನ್ನು ವೈಶಾಖ ಬಳಿಯೇ ಹೇಳುತ್ತಿದ್ದಾರೆ. ಆದರೆ ಮಾವನ ಎದುರಿಗೆ ವೈಶಾಖ ಯಾವುದೇ ಮಾತನ್ನು ಮಾತನಾಡದೇ ಸುಮ್ಮನೆ ನಿಂತುಕೊಂಡಿದ್ದಾಳೆ.

Colors Kannada Ramachari serial Written Update on may 16th episode

ನಾನು ಈ ಮನೆಯ ಯಜಮಾನ ನನ್ನ ಸ್ಥಾನವನ್ನ ನಂತರ ಕೋದಂಡನೇ ತುಂಬುತ್ತಾನೆ. ಆದರೆ ತಮ್ಮನನ್ನು ಪೊಲೀಸರು ಎಳೆದುಕೊಂಡು ಹೋಗುವಾಗ ಅವನು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡದೆ ಸುಮ್ಮನೆ ಇದ್ದಿದ್ದು ಸರಿಯಲ್ಲ ಎಂದು ವೈಶಾಖ ಬಳಿ ನಾರಾಯಣ ಆಚಾರ್ಯರು ಹೇಳಿದ್ದಾರೆ. ಇದಕ್ಕೆ ವೈಶಾಖ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

ಇದೇ ವೇಳೆ ಅಲ್ಲಿಗೆ ಬಂದ ರಾಮಾಚಾರಿ, ವೈಶಾಖ ಪರ ಮಾತನಾಡಿದ್ದಾನೆ. ಅಣ್ಣ ಆ ರೀತಿ ಮಾಡಿದ್ದು ಸರಿಯಾಗಿದೆ. ನಾನು ಜೈಲಿಗೆ ಹೋಗಿದ್ದರೆ ನನ್ನನ್ನು ಬಿಡಿಸಿಕೊಂಡು ಬರಲು ಬೇಕಾಗಿತ್ತು. ಇದಕ್ಕಾಗಿ ಅಣ್ಣ ಆ ರೀತಿ ಮಾಡಿದ್ದಾನೆ ಎಂದು ಕೋದಂಡನನ್ನು ಸಮರ್ಥಿಸಿಕೊಂಡಿದ್ದಾನೆ. ಇದೇ ವೇಳೆ ನಾರಾಯಣ ಆಚಾರ್ಯರು, ವೈಶಾಖಗೆ ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ.

Colors Kannada Ramachari serial Written Update on may 16th episode

ವಿಡಿಯೋ ಡಿಲೀಟ್ ಮಾಡುವುದು ಹೇಗೆ?

ರಾಮಾಚಾರಿಗೆ ಈಗ ವೈಶಾಖ ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ಡಿಲೀಟ್ ಮಾಡುವುದು ಹೇಗೆ ಎಂಬ ಚಿಂತೆ ಶುರುವಾಗಿದೆ. ಇದಕ್ಕಾಗಿ ಮುರಾರಿ ಒಂದು ಸೂಪರ್ ಡೂಪರ್ ಐಡಿಯಾ ರಾಮಾಚಾರಿಯ ಬಳಿ ಇಟ್ಟಿದ್ದಾನೆ. ಆದರೆ ರಾಮಾಚಾರಿಗೆ ಮೊಬೈಲ್ ಅನ್ನು ಕದಿಯುವುದು ಸರಿ ಇಲ್ಲ ಎಂದು ಅನಿಸಿದೆ. ಮುರಾರಿ ನೀನೇನು ಕದಿಯಬೇಡ ನಾನೇ ಮೊಬೈಲ್ ಕದಿಯುತ್ತೇನೆ ಎಂದು ಹೇಳಿದ್ದಾನೆ.

ಇದೇ ಸರಿಯಾದದ್ದು ಎಂದುಕೊಂಡ ರಾಮಾಚಾರಿ ವೈಶಾಖ ಬಳಿ ಹೋಗಿ ಅತ್ತಿಗೆ ನೀವು ಬಂದ ಮೇಲೆ ಅಣ್ಣ ನೆಮ್ಮದಿಯಾಗಿ ಇದ್ದಾನೆ ಎಂದು ಮಾತನಾಡಿದ್ದಾನೆ. ಆದರೆ ವೈಶಾಖ ಇದಕ್ಕೂ ಸಹ ಕೊಂಕು ನುಡಿದು ನನಗೆ ನೆಮ್ಮದಿ ಎಂಬುದೇ ಹಾರಿ ಹೋಗಿದೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ಮುರಾರಿ ಮೊಬೈಲನ್ನ ಕದ್ದುಕೊಂಡು ಹೊರಗೆ ಹೋಗಿದ್ದಾನೆ. ಈ ವೇಳೆ ರಾಮಾಚಾರಿ ಮಾತನ್ನು ತಿರುಗಿಸಿ ಮುರಾರಿ ಇರುವ ಜಾಗಕ್ಕೆ ಬಂದಿದ್ದಾನೆ.

Colors Kannada Ramachari serial Written Update on may 16th episode

ಮೊಬೈಲ್ ಪಾಸ್‌ವಾರ್ಡ್ ಗೊತ್ತಿಲ್ಲದೇ ಪರದಾಟ

ಹೇಗೋ ಮೊಬೈಲ್‌ ಕದ್ದು ತಂದಿರುವ ಮುರಾರಿ ಈಗ ಮೊಬೈಲ್ ಪಾಸ್‌ವರ್ಡ್ ಗೊತ್ತಿಲ್ಲದೇ ಇಬ್ಬರು ಕಂಗಾಲಾಗಿದ್ದಾರೆ. ಆದರೆ ಯಾವುದೇ ಪಾಸ್‌ವರ್ಡ್ ಗೊತ್ತಾಗದೇ ರಾಮಾಚಾರಿಗೆ ತುಂಬಾ ಟೆನ್ಶನ್ ಆಗಿದೆ. ಅಷ್ಟರಲ್ಲಿ ಬಕೆಟ್ ತೆಗೆದುಕೊಂಡು ವೈಶಾಖ ಬಂದಿದ್ದಾಳೆ. ವೈಶಾಖವನ್ನು ನೋಡಿದ ರಾಮಾಚಾರಿ ಹಾಗೂ ಮುರಾರಿ ಹಲ್ಲು ಕಿರಿದಿದ್ದಾರೆ. ಇದಕ್ಕೂ ಸಹ ವೈಶಾಖ ಇಬ್ಬರಿಗೂ ಬೈದಿದ್ದಾಳೆ.

ಸಾನ್ವಿ ಪ್ರಶ್ನೆಗೆ ಚಾರು ಉತ್ತರ

ಚಾರು ಬಳಿ ಸಾನ್ವಿ ಹಲವು ಪ್ರಶ್ನೆ ಕೇಳುತ್ತಿದ್ದಾಳೆ. ನಿನ್ನ ಮನೆಯವರು ರಾಮಾಚಾರಿಯನ್ನ ಒಪ್ಪಿಕೊಳ್ಳಲ್ಲ, ನೀನು ಏನು ಮಾಡುತ್ತೀಯಾ ಎಂದಿಲ್ಲ ಕೇಳಿದ್ದಕ್ಕೆ ರಾಮಾಚಾರಿ ಬಳಿ ಬಿಸಿನೆಸ್ ಐಡಿಯಾಗಳು ಇವೆ. ನಾನು ರಾಮಾಚಾರಿಯನ್ನ ದೊಡ್ಡ ಬಿಸಿನೆಸ್‌ಮನ್ ಮಾಡಿ ಶ್ರೀಮಂತನನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾಳೆ. ನನ್ನ ತಂದೆಯು ಸಹ ಬಡವರಾಗಿದ್ದರು. ಅವರು ಮೇಲೆ ಬಂದರು. ಅವರಂತೆ ನಾನು ರಾಮಾಚಾರಿಯನ್ನ ಮಾಡುತ್ತೇನೆ ಎಂದು ಚಾರು, ಸಾನ್ವಿಗೆ ಉತ್ತರ ನೀಡಿದ್ದಾಳೆ.

More from Filmibeat

English summary
Colors Kannada Ramachari serial Written Update on may 16th episode. here is details about Ramachari in big trouble, murari planning how to take vaishaka cell phone. now more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X