Ramachari: ವೈಶಾಖ ಕಣ್ಣೇದುರಲ್ಲಿ ಚಾರು ಕಳಿಸಿದ ವಿಡಿಯೋ: ಭಯ ಭೀತನಾಗಿರುವ ರಾಮಾಚಾರಿ
ರಾಮಾಚಾರಿ ಹಾಗೂ ಮುರಾರಿ ಇಬ್ಬರು ಸಹ ಫೋನ್ ಪಾಸ್ವರ್ಡ್ ಗೊತ್ತಾಗದೇ ಫೋನ್ ಲಾಕ್ ಓಪನ್ ಮಾಡಲು ಸಾಧ್ಯವಾಗದೇ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಹೇಗಾದರೂ ಮಾಡಿ ಚಾರು ಕಳಿಸಿರುವ ವಿಡಿಯೋ ಡಿಲೀಟ್ ಮಾಡಲೇಬೇಕು ಎಂದು ಅವರಿಬ್ಬರು ವೈಶಾಖಳ ಫೋನನ್ನು ಕದ್ದುಕೊಂಡು ಹೋಗಿದ್ದಾನೆ. ವೈಶಾಖ ಬಳಿ ಬಂದು ಅಜ್ಜಿ ಕೋದಂಡನ ಫೋನ್ ಇದಿಯಾ ಎಂದು ಕೇಳಿದ್ದಾಳೆ.
ಸ್ವಲ್ಪ ಡೇಟಾವನ್ನು ಆನ್ ಮಾಡು ನಾನು ಒಂದು ರಿಲ್ಸ್ ಮಾಡಿದ್ದೇನೆ ಅದನ್ನು ಅಪ್ಲೋಡ್ ಮಾಡಬೇಕು ಎಂದು ಅಜ್ಜಿ ವೈಶಾಖ ಬಳಿ ಕೇಳಿದ್ದಾರೆ. ಇದಕ್ಕೆ ಮೊಬೈಲ್ ಚಾರ್ಜ್‌ಗೆ ಹಾಕಿದ್ದು ಅಲ್ಲಿ ಇಲ್ಲದಿರುವುದು ಕಂಡುಬಂದಿದೆ. ಇದೇ ವೇಳೆ ಮನೆಯಲ್ಲಿ ವೈಶಾಖ ರಗಳೆ ಶುರು ಮಾಡಿದ್ದಾಳೆ. ಮನೆಯಲ್ಲಿ ಇರುವ ಯಾರೋ ನನ್ನ ಫೋನನ್ನು ಕದ್ದಿದ್ದಾರೆ, ನನ್ನ ಗಂಡ ಪ್ರೀತಿಯಿಂದ ಅದನ್ನ ಕೊಟ್ಟಿದ್ದರು ಎಂದು ಗಲಾಟೆ ಮಾಡಿದ್ದಾಳೆ.

ಶೃತಿ ನೀನೇನಾದರೂ ನನ್ನ ಫೋನ್ ಅನ್ನು ಕದ್ದ ಎಂದು ಕೇಳಿದ್ದಾಳೆ. ಇದಕ್ಕೆ ಅಜ್ಜಿ ವೈಶಾಖಗೆ ಬೈದು ತನ್ನ ಫೋನಿಂದ ಕೋದಂಡನ ಫೋನಿಗೆ ಕರೆ ಮಾಡಿದ್ದಾರೆ, ಈ ವೇಳೆ ನಂಬರ್ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿದಾಗ ವೈಶಾಖ ಬಂದು ಫೋನ್ ಮಾಡಿದ್ದಾಳೆ.
ಮುರಾರಿಗೆ ಕಳ್ಳನ ಪಟ್ಟ
ವೈಶಾಖ ಫೋನ್ ಮಾಡಿದಾಗ ವೈಶಾಖಳ ಫೋನ್ ಮನೆಯಲ್ಲಿ ರಿಂಗ್ ಆಗುತ್ತದೆ. ಇದರಿಂದ ವೈಶಾಖ ಅದೇ ರೀತಿ ಫೋನ್ ಮಾಡಿಕೊಂಡು ರಾಮಾಚಾರಿ ಹಾಗೂ ಮುರಾರಿ ಇರುವ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ಮುರಾರಿ ಸಿಕ್ಕಿ ಬಿದ್ದಿದ್ದಾನೆ. ಮುರಾರಿ ಬಳಿ ತನ್ನ ಫೋನ್ ಇರುವುದನ್ನು ನೋಡಿದ ವೈಶಾಖ, ನಿನಗೆ ಏಕೆ ಈ ರೀತಿ ಕೆಟ್ಟು ಬುದ್ಧಿ ಬಂತು , ಉಂಡ ಮನೆಯಲ್ಲಿ ಕಳ್ಳತನ ಮಾಡುವುದು ಎಂದು ಮುರಾರಿಗೆ ಕಳ್ಳನ ಪಟ್ಟವನ್ನು ಕಟ್ಟಿದ್ದಾಳೆ.

ಇದಕ್ಕೆ ಅಲ್ಲೇ ಇದ್ದ ನಾರಾಯಣ ಆಚಾರ್ಯರು, ಮುರಾರಿಯನ್ನು ಈ ಮನೆ ಮಗನ ರೀತಿ ನೋಡಿಕೊಂಡಿದ್ದೇವೆ. ಅವನಿಗೆ ಆ ರೀತಿ ಬುದ್ಧಿ ಇಲ್ಲ ಎಂದಿದ್ದಾರೆ. ಇದಕ್ಕೆ ವೈಶಾಖ ಕೊಂಕು ನುಡಿದಿದ್ದಾಳೆ. ಈ ವೇಳೆ ಮುರಾರಿ ಸಮಜಾಯಿಸಿ ನೀಡಿದ್ದಾನೆ. ರಾಮಾಚಾರಿಗೆ ನನ್ನ ಫೋನ್ ಚಾರ್ಜ್ ಹಾಕಲು ಕೊಟ್ಟಿದ್ದೆ. ಅವನು ಅಲ್ಲಿ ಹಾಕದೆ ನಿಮ್ಮ ರೂಮಿನಲ್ಲಿ ಹಾಕಿದ್ದಾನೆ ಎಂದು ತಿಳಿದುಕೊಂಡು ನಾನು ಫೋನ್ ತೆಗೆದುಕೊಂಡೆ ಎಂದು ಹೇಳಿದ್ದಾನೆ. ಆದರೂ ಸಹ ವೈಶಾಖ, ಮುರಾರಿಗೆ ಬೈದಿದ್ದಾಳೆ. ಇದಕ್ಕೆ ನಾರಾಯಣ ಆಚಾರ್ಯರು ಈ ರೀತಿಯಲ್ಲ ಮಾತನಾಡಬೇಡ ಎಂದಿದ್ದಾರೆ.
ಚಾರು ಕಳಿಸಿದ ವಿಡಿಯೋ ವೈಶಾಖ ಕೈಲಿ
ರಾಮಾಚಾರಿ ಹಾಗೂ ಮುರಾರಿ ಇಬ್ಬರು ಏನನ್ನೋ ಬಚ್ಚಿಡುತ್ತಿದ್ದಾರೆ ಎಂದು ವೈಶಾಖಾಗೆ ಬಲವಾಗಿ ಅನ್ನಿಸಿದೆ. ನನ್ನ ಗಂಡನ ಫೋನ್‌ನಲ್ಲಿ ಏನೋ ಇದೆ, ಅದಕ್ಕೆ ಈ ರೀತಿ ಫೋನ್ ಹಿಂದೆ ಬಿದ್ದಿದ್ದಾರೆ ಎಂದು ತಿಳಿದುಕೊಂಡಿದ್ದಾಳೆ. ಇದಕ್ಕಾಗಿ ಮೊಬೈಲ್‌ನಲ್ಲಿ ಯಾವ ರಹಸ್ಯ ಅಡಗಿದೆ ಎಂಬುದನ್ನು ತಿಳಿದುಕೊಳ್ಳಲು ಚೆಕ್ ಮಾಡುತ್ತಿದ್ದಾಳೆ. ಈ ವೇಳೆ ಚಾರು ಕಳಿಸಿರುವ ವಿಡಿಯೋ ವೈಶಾಖ ಕಣ್ಣಿಗೆ ಬಿದ್ದಿದೆ.

ನಂತರ ಪ್ರೊಫೈಲ್‌ನಲ್ಲಿ ಯಾವ ಪಿಚ್ಚರ್ ಇದೆ ಎಂದು ನೋಡಿದ್ದಾಳೆ. ಅದು ಚಾರು ಫೋಟೋ ಆಗಿರುವುದರಿಂದ ಈ ಚಾರು ಏಕೆ ನನ್ನ ಗಂಡನಿಗೆ ವಿಡಿಯೋ ಕಳುಹಿಸಿದ್ದಾಳೆ ಎಂದುಕೊಂಡಿದ್ದಾಳೆ. ವಿಡಿಯೋದಲ್ಲಿ ಏನಿದೆ ಎಂದು ನೋಡಿ ನಂತರ ಇವರ ಬಂಡವಾಳವನ್ನ ಬಯಲು ಮಾಡುತ್ತೇನೆ ಎಂದು ವೈಶಾಖ ವಿಡಿಯೋವನ್ನು ಡೌನ್ಲೋಡ್‌ಗೆ ಹಾಕಿದ್ದಾಳೆ. ಇದೆಲ್ಲವನ್ನು ನೋಡುತ್ತಿರುವ ರಾಮಾಚಾರಿ ಹಾಗೂ ಮುರಾರಿ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ಕೊಂಡು ಪೇಚಿಗೆ ಸಿಲುಕಿದ್ದಾರೆ.
ವಿಕಾಸ್ ಜೊತೆ ಹೋಗಲು ಚಾರು ನಿರಾಕರಣೆ
ಚಾರುಗೆ ವಿಕಾಸ್ ಜೊತೆಗೆ ಶಾಪಿಂಗ್ ಹೋಗಲು ತುಂಬಾ ಬೇಸರವಾಗುತ್ತಿದೆ. ಇದಕ್ಕೆ ಮಾನ್ಯತಾ ಬಳಿ ಅಮ್ಮ ನಾನು ಅವನ ಜೊತೆ ಶಾಪಿಂಗ್‌ಗೆ ಹೋಗೋದಿಲ್ಲ ಅವನು ಒಬ್ಬನೇ ಹೋಗಿ ಬರಲಿ ಎಂದಿದ್ದಾಳೆ. ಇದಕ್ಕೆ ಮಾನ್ಯತಾ ತುಂಬಾ ಫೋರ್ಸ್ ಮಾಡಿ ಹೋಗು ಎಂದಿದ್ದಕ್ಕೆ ನೋಡಿ ಅಮ್ಮ, ನಾನು ಮದುವೆಯಾಗಿ ಹೋಗುತ್ತೇನೆ, ಆಗ ನಿಮ್ಮ ಜೊತೆ ಟೈಮ್ ಸ್ಪೆಂಡ್ ಮಾಡಲು ಆಗುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾಳೆ.


Click it and Unblock the Notifications











