Ramachari: ದೊಡ್ಡ ಗಂಡಾಂತರದಿಂದ ಪಾರಾದ ರಾಮಾಚಾರಿ ಈಗ ಸಹೋದರಿ ಕೈಗೆ ಸಿಕ್ಕಿಬಿದ್ದನಾ?

By ಶೃತಿ ಹರೀಶ್ ಗೌಡ

ಚಾರು ಕಳಿಸಿರುವ ವಿಡಿಯೋವನ್ನು ಶ್ರುತಿ ಹಾಗೂ ಕೋದಂಡನ ಮೊಬೈಲ್‌ನಲ್ಲಿ ಡಿಲೀಟ್ ಮಾಡಲು ರಾಮಾಚಾರಿ ಹರ ಸಾಹಸ ಪಟ್ಟಿದ್ದಾನೆ. ರಾಮಾಚಾರಿ ದೆಸೆಯಿಂದ ಮುರಾರಿ ಕಳ್ಳ ಎಂಬ ಪಟ್ಟವನ್ನು ಕಟ್ಟಿಕೊಳ್ಳುವಂತಾಯಿತು. ಏನೋ ಒಂದು ಸುಳ್ಳು ಹೇಳಿ ಅದನ್ನು ರಾಮಾಚಾರಿ ಮ್ಯಾನೇಜ್ ಮಾಡಿದ್ದಾನೆ. ಈಗ ವೈಶಾಖ ಮೊಬೈಲ್‌ನಲ್ಲಿರುವ ಇರುವ ವಿಡಿಯೋವನ್ನು ಡಿಲೀಟ್ ಮಾಡಲು ಉಪಾಯ ಹುಡುಕಿದ್ದಾನೆ.

ರಾಮಾಚಾರಿಗೆ ಮಾತ್ರ ಯಾವಾಗ ನಾನು ವೈಶಾಖ ಅತ್ತಿಗೆ ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ಡಿಲೀಟ್ ಮಾಡುತ್ತೇನೆ ಎಂಬ ಭಯ ಶುರುವಾಗಿದೆ. ವಿಡಿಯೋ ಡೌನ್ಲೋಡ್ ಆಗಿದೆ. ಇನ್ನೇನು ಅದನ್ನು ವೈಶಾಖ ನೋಡಬೇಕು ಎಂದು ಅಷ್ಟರಲ್ಲಿ ಮುರಾರಿ ಶಂಕು, ಜಾಗಟೆಯನ್ನ ಬಾರಿಸಿ ವೈಶಾಖಳ ಗಮನವನ್ನು ಬೇರೆ ಕಡೆಗೆ ಸೆಳೆದಿದ್ದಾನೆ.

Colors Kannada Ramachari serial Written Update on may 18th episode

ಯಾರಪ್ಪ ಈ ರೀತಿಯಾಗಿ ಶಬ್ದವನ್ನು ಮಾಡುತ್ತಿದ್ದಾರೆ ಎಂದು ನೋಡಲು ವೈಶಾಖ ಹಾಲ್‌ಗೆ ಬಂದಿದ್ದಾಳೆ. ಮನೆಯವರೆಲ್ಲರೂ ಸಹ ಮುರಾರಿ ಬಳಿಗೆ ಬಂದು ಕೇಳಿದ್ದಾರೆ. ನಾರಾಯಣ ಆಚಾರ್ಯರು ಏನಪ್ಪಾ ಈ ರೀತಿ ಸೌಂಡ್ ಮಾಡುತ್ತಿದ್ದೀಯಾ ಎಂದು ಮುರಾರಿ ಬಳಿ ಕೇಳಿದ್ದಾರೆ. ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳೆಲ್ಲವೂ ಸಹ ಓಡಿ ಹೋಗಲಿ ಎಂದು ಈ ರೀತಿಯಾಗಿ ನಾನು ಮಾಡುತ್ತಿದ್ದೇನೆ ಎಂದು ಮುರಾರಿ ಹೇಳಿದ್ದಾನೆ.

ವೈಶಾಖ ಕೈಗೆ ಸಿಕ್ಕಿಬಿದ್ದ ಚಾರಿ

ಅಂತೂ ಇಂತೂ ಹರಸಾಹಸವನ್ನು ಮಾಡಿ ರಾಮಾಚಾರಿಯಿಂದ ಮೊಬೈಲ್‌ನಲ್ಲಿ ಚಾರು ಕಳಿಸಿದ ವಿಡಿಯೋವನ್ನು ಡಿಲೀಟ್ ಮಾಡಿದ್ದಾನೆ. ವೈಶಾಖ ಎಲ್ಲಾ ಕಡೆ ಕಣ್ಣಾಡಿಸಿದ್ದಾಳೆ. ಅಲ್ಲಿ ರಾಮಾಚಾರಿ ಇಲ್ಲದಿರುವುದನ್ನು ಕಂಡು ಮನೆಯವರೆಲ್ಲರೂ ಸಹ ಇಲ್ಲೇ ಇದ್ದಾರೆ, ರಾಮಾಚಾರಿ ಮಾತ್ರ ಎಲ್ಲಿಗೆ ಹೋದ ನನ್ನ ರೂಮ್‌ಗೆ ಹೋಗಿದ್ದಾನೆ ಎಂದುಕೊಂಡು ಓಡಿ ಹೋಗಿದ್ದಾಳೆ.

Colors Kannada Ramachari serial Written Update on may 18th episode

ಈ ವೇಳೆ ರಾಮಾಚಾರಿ ವಿಡಿಯೋ ಡಿಲೀಟ್ ಮಾಡಿ ಇನ್ನೇನು ರೂಮಿನಿಂದ ಹೊರಬರಬೇಕು ಎನ್ನುವಷ್ಟರಲ್ಲಿ ವೈಶಾಖ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೇ ವೇಳೆ ವೈಶಾಖ, ರಾಮಾಚಾರಿಗೆ ಯಾಕೆ ಬಂದೆ ಎಂದು ಪ್ರಶ್ನೆ ಮಾಡಿದ್ದಾಳೆ. ನಾನು ಅಣ್ಣ ರೂಮಿನಲ್ಲಿ ಜಾಗಟೆಯನ್ನು ಇಟ್ಟಿದ್ದೆ ಅದನ್ನು ತೆಗೆದುಕೊಂಡು ಹೋಗಲು ಬಂದೆ ಎಂದು ರಾಮಾಚಾರಿ ಸುಳ್ಳು ಹೇಳಿದ್ದಾನೆ. ಆ ಕ್ಷಣಕ್ಕೆ ವೈಶಾಖ ಏನು ಮಾಡಬೇಕು ಎಂದು ತಿಳಿಯದೆ ಸುಮ್ಮನೆ ನಿಂತಿದ್ದಾಳೆ.

ರಾಮಾಚಾರಿ ಮೇಲೆ ಅನುಮಾನ

ವೈಶಾಖಗೆ ರಾಮಾಚಾರಿ ಹಾಗೂ ಚಾರು ಮೇಲೆ ಸ್ವಲ್ಪ ಅನುಮಾನ ಶುರುವಾಗಿದೆ. ಇದಕ್ಕಾಗಿ ಗಂಡ ಬಂದ ತಕ್ಷಣವೇ ರಾಮಾಚಾರಿಯ ಮೇಲೆ ವೈಶಾಖ ಚಾಡಿ ಹೇಳುತ್ತಿದ್ದಾಳೆ. ಅವನು ಹಾಗೂ ಚಾರು ಸೇರಿಕೊಂಡು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಹೇಳಿದ್ದಾಳೆ. ಇದಕ್ಕೆ ಕೋದಂಡ ಅವರು ಏನಾದರೂ ಮಾಡಿಕೊಳ್ಳಲಿ ನಮಗೇನು ನಾವಿಬ್ಬರು ಚೆನ್ನಾಗಿರಬೇಕು ಎಂದು ಹೇಳಿದ್ದಾನೆ. ಆದರೂ ಸಹ ವೈಶಾಖ, ಕೋದಂಡನಿಗೆ ಅವರ ಅಮ್ಮನ ಮೇಲೆ ಸಹ ಚಾಡಿ ಹೇಳಿ ನನಗೆ ನೀನೇ ಎಲ್ಲಾ ಎನ್ನುವಂತೆ ಮಾಡಿದ್ದಾಳೆ.

Colors Kannada Ramachari serial Written Update on may 18th episode

ಶೃತಿ ಮೊಬೈಲ್‌ಗಾಗಿ ರಾಮಾಚಾರಿ ಹುಡುಕಾಟ

ರಾಮಾಚಾರಿ ಹೇಗೋ ವೈಶಾಖ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಡಿಲೀಟ್ ಮಾಡಿ ನಿಟ್ಟಿಸಿರು ಬಿಟ್ಟಿದ್ದಾನೆ. ಶ್ರುತಿ ಬಳಿ ಇರುವ ವಿಡಿಯೋವನ್ನು ಡಿಲೀಟ್ ಮಾಡಬೇಕು ಎಂದುಕೊಂಡು ಅವಳ ಮೊಬೈಲ್‌ಗಾಗಿ ರಾಮಾಚಾರಿ ಹುಡುಕಾಟ ನಡೆಸುತ್ತಿದ್ದಾನೆ. ಈ ವೇಳೆ ಚಾರು ಸಹ ರಾಮಾಚಾರಿ ಫೋನ್ ಮಾಡಿ ವಿಡಿಯೋ ಡಿಲೀಟ್ ಮಾಡಿದ ವಿಚಾರದ ಬಗ್ಗೆ ಕೇಳುತ್ತಿದ್ದಾಳೆ. ಅತ್ತಿಗೆ ಮೊಬೈಲ್‌ನಲ್ಲಿ ಇದ್ದ ವಿಡಿಯೋ ಡಿಲೀಟ್ ಆಗಿದೆ. ಈಗ ಶ್ರುತಿ ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ಡಿಲೀಟ್ ಮಾಡಬೇಕು ಎಂದು ರಾಮಾಚಾರಿ ಹೇಳಿದ್ದಾನೆ.

ಅಜ್ಜಿಯ ಕಾಲ ಬಳಿ ಬಂದಾಗ ಕಾಲು ತಾಕಿದ ಹಿನ್ನೆಲೆ ಅಜ್ಜಿ ಮೇಲಕ್ಕೆ ಎದ್ದಿದ್ದಾರೆ. ಶ್ರುತಿ ವಿಡಿಯೋ ನೋಡಬೇಕು ಎಂದು ಹಿತ್ತಲ ಕಡೆ ಹೋಗಿದ್ದಾಳೆ ಎಂದು ಹೇಳಿದಾಗ ರಾಮಾಚಾರಿ ಶ್ರುತಿಯ ಬಳಿ ಓಡೋಡಿ ಬಂದಿದ್ದಾನೆ. ಶೃತಿಗೆ ರಾಮಾಚಾರಿ ಬೈದು ಮೊಬೈಲನ್ನು ತೆಗೆದುಕೊಂಡಿದ್ದಾನೆ. ಈ ವೇಳೆ ಅಣ್ಣನಿಗೆ ಒಂದೇ ಸಲ ಮದುವೆಯಾಗಬೇಕು ಎಂದು ಮಾರ್ಮಿಕವಾಗಿ ಶ್ರುತಿ ನುಡಿದು ಹೋಗಿದ್ದಾಳೆ.

More from Filmibeat

English summary
Colors Kannada Ramachari serial Written Update on may 18th episode. here is details about Ramachari deleted video from vaushaka phone. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X