Ramachari: ಚಾರು ಕಳಿಸಿದ ವಿಡಿಯೋ‌ ನೋಡಾಯ್ತು ಶೃತಿ: ರಾಮಾಚಾರಿಗೆ ಕನ್ಫ್ಯೂಷನ್

By ಶೃತಿ ಹರೀಶ್ ಗೌಡ

ರಾಮಾಚಾರಿ, ಚಾರು ಕಳಿಸಿದ ವಿಡಿಯೋ ಎಲ್ಲಿದೆ ಎಂದು ಶ್ರುತಿ ಫೋನ್‌ನಲ್ಲಿ ಹುಡುಕಾಡಿದ್ದಾನೆ. ಆದರೆ ವಾಟ್ಸಪ್‌ನಲ್ಲಿ ಚಾರು ಕಳಿಸಿದ ವಿಡಿಯೋ ಇಲ್ಲದ ಕಾರಣ ತುಂಬಾ ಕೋಪ ಮಾಡಿಕೊಂಡಿದ್ದಾನೆ. ಈ ಚಾರು ಮೇಡಂಗೆ ಸೀರಿಯಸ್ನೆಸ್ ಇಲ್ಲ ಎಲ್ಲದರಲ್ಲೂ ಹುಡುಗಾಟ ಅಂತ ಬೇಸರ ಮಾಡಿಕೊಂಡಿದ್ದಾನೆ. ನಾನೇನಾದರೂ ಈಗ ಬೈಯಲು ಶುರು ಮಾಡಿದರೆ ಮನೆಯವರೆಲ್ಲರೂ ಈಗ ಎದ್ದು ಬರುತ್ತಾರೆ ಸುಮ್ಮನಾಗುತ್ತಾನೆ.

ಬೆಳಿಗ್ಗೆ ಎದ್ದು ಶೃತಿಗೆ ಮೊಬೈಲನ್ನು ಕೊಟ್ಟು ನೀನು ಜಾಸ್ತಿ ರಾತ್ರಿ ವೇಳೆ ಮೊಬೈಲ್ ನೋಡಬೇಡ ಎಂದು ಉಪದೇಶ ಮಾಡಿದ್ದಾನೆ. ಆದರೆ ಶ್ರುತಿಗೆ ರಾಮಾಚಾರಿ ಮಾಡುತ್ತಿರುವ ಉಪದೇಶದಿಂದ ತುಂಬಾ ಕೋಪ ಬಂದಿದೆ. ಇದಕ್ಕೆ ಶ್ರುತಿ ಮಾರ್ಮಿಕವಾಗಿ ಅದರಲ್ಲಿರುವ ವಿಡಿಯೋ ನೋಡಿದ ಮೇಲೆ ನನಗೆ ಬಂದ ನಿದ್ದೆಯೂ ಹಾರಿ ಹೋಯಿತು. ಈ ವೇಳೆ ರಾಮಾಚಾರಿ ಯಾವ ಬ್ಲ್ಯಾಕ್ಮೇಲ್ ವಿಷಯ ಎಂದು ಕೇಳಿದ್ದಾನೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬರುವ ವಿಡಿಯೋ ಎಂದು ಶ್ರುತಿ ಸುಳ್ಳು ಹೇಳಿದ್ದಾಳೆ.

Colors Kannada Ramachari serial Written Update on may 19th episode

ನಂತರ ದೀಪ ನಿನಗೆ ಏನಾದರೂ ಫೋನ್ ಮಾಡಿದ್ಲಾ ಎಂದು ರಾಮಾಚಾರಿ ಕೇಳಿದ್ದಾನೆ. ಇದಕ್ಕೆ ಶ್ರುತಿ ನಾನೇ ದೀಪಾಗೆ ಫೋನ್ ಮಾಡಿದ್ದೇನೆ. ಮನೆಯಲ್ಲಿ ಆಗುತ್ತಿರುವ ಕೆಲವೊಂದು ವಿಚಾರಗಳನ್ನ ಅವಳ ಬಳಿ ಮಾತನಾಡುವುದು ಇದೆ. ಬಿರುಗಾಳಿಯಿಂದಾಗಿ ಮನೆಗೆ ಒಂದು ಬೇಡದ ವಸ್ತು ಸೇರಿಕೊಂಡಿದೆ. ಯಾವ ಯಾವ ಸಮಯಕ್ಕೆ ಬರುತ್ತದೆ. ಅದನ್ನು ಒದ್ದು ಓಡಿಸಲು ದೀಪಾಳಿಂದ ಮಾತ್ರ ಸಾಧ್ಯ, ಅದಕ್ಕಾಗಿ ಅವಳನ್ನ ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ.

ಚಾರು ಭೇಟಿಯಾದ ರಾಮಾಚಾರಿ

ರಾಮಾಚಾರಿ, ಚಾರುವನ್ನ ಭೇಟಿಯಾಗಿ ಯಾಕೆ ನೀವು ಈ ರೀತಿಯ ಹುಡುಗಾಟವಾಡುತ್ತೀರಾ ಎಂದು ಕೇಳಿದ್ದಾನೆ. ಇದಕ್ಕೆ ಚಾರು ನಾನೇನು ಹುಡುಗಾಟ ಹಾಡುತ್ತಿಲ್ಲ, ಸತ್ಯವಾಗಲೂ ನಾನು ಶೃತಿಗೆ ಕಳಿಸಿದ್ದೆ. ವಿಡಿಯೋ ನೋಡಿ ಡಿಲೀಟ್ ಮಾಡಿರಬೇಕು ಎಂದು ಹೇಳಿದ್ದಾಳೆ. ಇದೇ ವೇಳೆ ಶೃತಿಗೆ ಕಳಿಸಿರುವ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ತೋರಿಸಿದ್ದಾಳೆ ಇಲ್ಲಿ ನೋಡು ರಾಮಾಚಾರಿ ಶ್ರುತಿ ವಿಡಿಯೋವನ್ನು ನೋಡಿರುವುದಕ್ಕೆ ಬ್ಲೂ ಟಿಕ್ ಇದೆ ಎಂದು ಹೇಳಿದ್ದಾಳೆ.

ಮುರಾರಿ ಒಂದುವೇಳೆ ಶ್ರುತಿ ಮೊಬೈಲ್ ತೆಗೆದುಕೊಂಡು ವಿಡಿಯೋವನ್ನು ಡಿಲೀಟ್ ಮಾಡಿರಬೇಕು. ಒಮ್ಮೆ ಮುರಾರಿ ವಿಚಾರಿಸು ಎಂದು ಕೇಳಿದ್ದಾಳೆ. ಇದೆ ವೇಳೆ ರಾಮಾಚಾರಿ, ಮುರಾರಿಗೆ ಕಾಲ್ ಮಾಡಿ ನೀನು ಶ್ರುತಿ ಮೊಬೈಲ್ ತೆಗೆದುಕೊಂಡು ವಿಡಿಯೋ ಡಿಲೀಟ್ ಮಾಡಿದ್ಯಾ ಎಂದು ಹೇಳಿದ್ದಾನೆ. ಇದಕ್ಕೆ ಮುರಾರಿ ಇಲ್ಲ ಎಂದು ಹೇಳಿದ್ದಾನೆ. ನಂತರ ರಾಮಾಚಾರಿಗೆ ತುಂಬಾ ಟೆನ್ಶನ್ ಆಗಿದೆ. ನಾನು ಶೃತಿಯನ್ನು ನೇರವಾಗಿ ಕೇಳುತ್ತೇನೆ ಎಂದು ಪಾರ್ಕ್‌ನಿಂದ ಬಂದಿದ್ದಾನೆ.

Colors Kannada Ramachari serial Written Update on may 19th episode

ದೀಪಾಳನ್ನು ಭೇಟಿಯಾದ ಶೃತಿ

ಶೃತಿ ಇತ್ತ ದೀಪಳನ್ನು ಭೇಟಿಯಾಗಿದ್ದಾಳೆ. ಇದೇ ವೇಳೆ ನೀನು ನಮ್ಮ ಮನೆಗೆ ಬೇಗ ಮದುವೆ ಮಾಡಿಕೊಂಡು ಬಂದರೆ ನಮ್ಮ ಮನೆಗೆ ಒಳ್ಳೆಯದು ಎಂದು ಹೇಳಿದ್ದಾಳೆ. ಇದಕ್ಕೆ ದೀಪ ಶಾಸ್ತ್ರ ಸಂಪ್ರದಾಯ ಎಂದು ನಾರಾಯಣ ಆಚಾರ್ಯರೇ ಮದುವೆಯನ್ನ ಮುಂದೆ ಹಾಕಿದ್ದಾರೆ ಈಗ ನಾನು ಯಾವ ರೀತಿ ಕೇಳಲಿ ಎಂದು ಹೇಳಿದ್ದಾಳೆ. ಇದಕ್ಕೆ ಶ್ರುತಿನೇ ಐಡಿಯಾವನ್ನು ನೀಡಿದ್ದಾಳೆ, ಕೋದಂಡ ಅಣ್ಣ ಸಂಪ್ರದಾಯ ಬದ್ಧವಾಗಿ ಮದುವೆಯಾಗಿ ಬಂದಿದ್ದಾನಾ? ಹೆಂಡತಿ ಕಳೆದುಕೊಂಡ 6 ತಿಂಗಳ ಒಳಗೆ ಮದುವೆ ಮಾಡಿಕೊಂಡು ಬಂದಿದ್ದಾನೆ. ಅವನಿಗೆ ಇಲ್ಲದ ಸಂಪ್ರದಾಯ ನಿಮಗೆ ಏಕೆ ಎಂದು ಎಂದು ಶ್ರುತಿ, ದೀಪಾಗೆ ಹೇಳಿಕೊಟ್ಟಿದ್ದಾಳೆ.

ನೀನು ಹೇಳಿಕೊಡುತ್ತಿರುವ ಐಡಿಯಾ ಸರಿಯಾಗೇ ಇದೆ. ನಾನು ಅಪ್ಪ ಅಮ್ಮನನ್ನ ಕರೆದುಕೊಂಡು ಇದೇ ಮಾತನ್ನ ಕೇಳುತ್ತೇನೆ, ಎಂದು ದೀಪಾ, ಶ್ರುತಿ ಬಳಿ ಹೇಳಿದ್ದಾಳೆ.‌ ಅವರು ನಿನ್ನ ಮದುವೆಗೆ ಒಪ್ಪಲಿಲ್ಲ ಎಂದರೆ ನೀನು ವಿಷ ಕುಡಿಯುತ್ತೇನೆ, ಬಾವಿಗೆ ಬೀಳುತ್ತೇನೆ ಎಂದು ನಾಟಕವನ್ನು ಆಡು ಆಗ ಅವರು ಒಪ್ಪಿಕೊಳ್ಳುತ್ತಾರೆ. ನೀನು ಬಂದರೆ ಮನೆಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ ಎಂದು ಶ್ರುತಿ ಹೇಳಿದ್ಧಾಳೆ.

More from Filmibeat

English summary
Colors Kannada Ramachari serial Written Update on may 19th episode.here is details about Ramachari tells charu that shruthi has no video in her phone, but charu doesn't believe him. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X