Ramachari: ರಾಮಾಚಾರಿ ಹುಟ್ಟುಹಬ್ಬ ಆಚರಿಸಲು ಚಾರು ಕಾತುರ: ಮನೆ ಬಗ್ಗೆ ರಾಮಾಚಾರಿಗೆ ಚಿಂತೆ

By ಶೃತಿ ಹರೀಶ್ ಗೌಡ

ರಾಮಾಚಾರಿ ಮನೆಯಲ್ಲಿ ದಿನದಿಂದ ದಿನಕ್ಕೆ ಗೊಂದಲಗಳು ಸೃಷ್ಟಿಯಾಗುತ್ತಿದೆ. ಯಾಕೆಂದರೆ ಬಂದಿರುವ ವೈಶಾಖ ಗಂಡನ ಹತ್ತಿರ ಒಂದು ತರಹ ಇದ್ದರೆ ಮನೆಯವರ ಬಳಿ ಇನ್ನೊಂದು ತರಹ ಇದ್ದಾಳೆ. ಬೇಕು ಬೇಕು ಅಂತಲೇ ಗಂಡನನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿರುವ ರೀತಿ ಇದೆ. ಅದಕ್ಕಾಗಿ ಯಾವಾಗಲೂ ಮನೆಯವರ ಬಗ್ಗೆ ನಯವಾಗಿ ಚಾಡಿಯನ್ನು ಹೇಳುತ್ತಾ ಬಂದಿದ್ದಾಳೆ.

ಹೆಂಡತಿಯ ಮಾತನ್ನೇ ನಂಬಿಕೊಂಡಿರುವ ಕೋದಂಡ ಮನೆಯವರ ಮೇಲೆ ರೇಗಾಡಿದ್ದಾನೆ. ಅಮ್ಮ ಹಾಗೂ ಅಜ್ಜಿಯ ಮೇಲು ಸಹ ಕೂಗಾಡಿದ್ದಾನೆ. ಇದು ಜಾನಕಿಗೆ ದೊಡ್ಡ ಆಘಾತವನ್ನೇ ತಂದಿದೆ. ಅಜ್ಜಿ ಜಾನಕಿಗೆ ಸಮಾಧಾನ ಮಾಡಿದರೂ ಸಹ ಕಣ್ಣೀರನ್ನು ಸುರಿಸುತ್ತಿದ್ದಾರೆ. ನನ್ನ ಮಗ ಈ ರೀತಿ ಮಾಡಿದ ಎಂದು ದುಃಖವನ್ನು ಪಡುತ್ತಿದ್ದಾರೆ. ಅಲ್ಲಿಗೆ ಬಂದ ರಾಮಾಚಾರಿಯನ್ನ ನೋಡಿ ಕಣ್ಣೀರಾಗಿದ್ದಾರೆ.

Colors Kannada Ramachari serial Written Update on may 1st episode

ರಾಮಾಚಾರಿಯನ್ನು ನೋಡಿದ ಜಾನಕಿ ಕೈಹಿಡಿದುಕೊಂಡು ಇದ್ದ ಮೊದಲನೇ ಮಗ ಈ ರೀತಿ ಮಾಡಿದ ನೀನು ಎಲ್ಲವನ್ನು ಸರಿ ಮಾಡುತ್ತೀಯಾ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ. ನಂತರ ಅಜ್ಜಿ, ರಾಮಾಚಾರಿಯ ಮೇಲೆ ನಿನಗೆ ನಂಬಿಕೆ ಇರಲಿ ಅವನು ಯಾವತ್ತೂ ಸುಳ್ಳು ಹೇಳೋದಿಲ್ಲ, ಹೊರಗೊಂದು ಒಳಗೊಂದು ಮಾಡೋದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ರಾಮಾಚಾರಿ ತನ್ನ ಮೇಲೆ ತನಗೆ ಕೋಪ ಬಂದಿದ್ದು ಮನೆಯವರನ್ನು ಮಲಗಲು ಹೇಳಿದ್ದಾನೆ.

ರಾಮಾಚಾರಿ ಬರ್ತ್‌ಡೇ ಚಾರು ಪ್ಲಾನ್

ಚಾರು, ರಾಮಾಚಾರಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಬಹಳ ಖುಷಿಯಿಂದ ಇದ್ದಾಳೆ. ಇದಕ್ಕಾಗಿ ಸಾನ್ವಿಗೆ ಫೋನ್ ಮಾಡಿ ಕೇಕ್ ತರಲು ಹೇಳಿದ್ದಾಳೆ. ಸಾನ್ವಿ, ಚಾರು ಕಾಲನ್ನ ಎಳೆದಿದ್ದಾಳೆ. ನಿನಗೆ ಇಷ್ಟೊತ್ತಿನಲ್ಲಿ ಕೇಕ್ ತಿನ್ನಬೇಕು ಎಂದು ಯಾಕೆ ಅನಿಸಿದೆ ಎಂದಿದ್ದಾಳೆ. ಇದಕ್ಕೆ ನನಗೆ ತಿನ್ನಲು ಅಲ್ಲ ನನ್ನ ಗಂಡನ ಹುಟ್ಟುಹಬ್ಬವಿದೆ, ಅದಕ್ಕಾಗಿ ದೊಡ್ಡ ಕೇಕನ್ನು ತೆಗೆದುಕೊಂಡು ನೀನು ಬಾ ಎಂದಿದ್ದಾಳೆ.

Colors Kannada Ramachari serial Written Update on may 1st episode

ನಾನು ರಾಮಾಚಾರಿ ಹೊರಗಡೆ ಕರೆದುಕೊಂಡು ಬರುತ್ತೇನೆ ನೀನು ಕೇಕ್ ತರುವ ಕೆಲಸವನ್ನು ಮಾಡು ಎಂದು ಸಾನ್ವಿಗೆ ಹೇಳಿದ್ದಾಳೆ. ಕೇಕ್‌ ಮೇಲೆ ದೊಡ್ಡದಾಗಿ ಹುಟ್ಟು ಹಬ್ಬದ ಶುಭಾಶಯಗಳು ಗಂಡ ಎಂದು ಬರೆಸು ಎಂದಿದ್ದಾಳೆ. ಆದರೆ ಸಾನ್ವಿಗೆ ರಾಮಾಚಾರಿ ಹೊರಗೆ ಬಂದು ಕೇಕ್ ಕಟ್ ಮಾಡುತ್ತಾನೆ ಎಂಬ ಭರವಸೆ ಇಲ್ಲ. ಚಾರು ಮಾತ್ರ ರಾಮಾಚಾರಿ ಕೈಯಲ್ಲಿ ನಾನು ಕೇಕ್ ಕಟ್ ಮಾಡಿಸುತ್ತೇನೆ ಎಂದು ಸಾನ್ವಿ ಬಳಿ ಹೇಳಿದ್ದಾಳೆ.

ಗಂಡನ ಕಿವಿ ಚುಚ್ಚಿದ ವೈಶಾಖ

ಸಮಯ ಸಿಕ್ಕಾಗಲಿಲ್ಲ ನಾರಾಯಣ ಆಚಾರ್ಯರ ಮನೆಗೆ ಕೋದಂಡನ ಎರಡನೇ ಮಡದಿಯಾಗಿ ಬಂದಿರುವ ವೈಶಾಖ ಕಿವಿ ಚುಚ್ಚುವ ಕೆಲಸವನ್ನ ಮಾಡುತ್ತಿದ್ದಾಳೆ. ಈಗಲೂ ಸಹ ಕೋದಂಡ ಕೋಪವಾಗಿ ಇದ್ದು ಅದನ್ನು ನೋಡಿದ ವೈಶಾಖ ನೀವು ಹೀಗೆ ಇರಬೇಡಿ, ನನಗೆ ನೋಡಲು ಆಗುವುದಿಲ್ಲ ಅಷ್ಟು ಕೋಪವಿದ್ದರೆ ನನಗೆ ಎರಡು ಹೊಡೆಯಿರಿ ಎಂದು ಹೇಳಿದ್ದಾಳೆ. ನಂತರ ಮುಂದುವರೆದು ಈ ಮನೆಯಲ್ಲಿ ಇಬ್ಬರು ಮಕ್ಕಳಿಗೂ ಒಂದೇ ತರ ನೋಡೋದಿಲ್ಲ ಎಂದು ಕಿವಿ ಚುಚ್ಚಿದ್ದಾಳೆ.

Colors Kannada Ramachari serial Written Update on may 1st episode

ಮೊದಲನೇ ಮಗನಿಗಿಂತ ಎರಡನೇ ಮಗನ ಮೇಲೆ ಪ್ರೀತಿ ಹೆಚ್ಚು ನಾನು ಈ ಮನೆಗೆ ಬಂದ ಕೂಡಲೇ ಇದೆಲ್ಲವೂ ನನಗೆ ತಿಳಿಯಿತು ಎಂದು ಹೇಳಿದ್ದಾಳೆ. ಇದಕ್ಕೆ ಕೋದಂಡ ಹೌದು ಈ ಮನೆಯಲ್ಲಿ ರಾಮಾಚಾರಿಗೆ ಜವಾಬ್ದಾರಿಯನ್ನು ಕೊಡಲಾಗಿದೆ, ಅವನಿಗೆ ಮನೆಯ ಜವಾಬ್ದಾರಿ ದೇವರ ಸೇವೆ ಮಾಡುವ ಜವಾಬ್ದಾರಿ ಅವನಿಗೆ ನೀಡಲಾಗಿದೆ ಎಂದು ಹೆಂಡತಿಯ ಬಳಿ ಹೇಳಿದ್ದಾನೆ. ಇದಕ್ಕೆ ಮತ್ತಷ್ಟು ಉಪ್ಪು ಖಾರವನ್ನ ಬೆರೆಸಿ ವೈಶಾಖ, ಕೋದಂಡನಿಗೆ ಕೋಪವನ್ನ ತರಿಸಿದ್ದಾಳೆ.

More from Filmibeat

English summary
Colors Kannada Ramachari serial Written Update on may 1st episode. here details about charu plans to ramachari birthday. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X