Ramachari: ದೀಪಾ - ರಾಮಾಚಾರಿ ಎಂಗೇಜ್ಮೆಂಟ್‌ಗೆ ಡೇಟ್ ಫಿಕ್ಸ್ : ಏನು ಮಾಡ್ತಾಳೆ ಚಾರು?

By ಶೃತಿ ಹರೀಶ್ ಗೌಡ

ರಾಮಾಚಾರಿ ಈಗ ಅಡ್ಡ ಕತ್ತರಿಯಲ್ಲಿ ಸಿಲುಕಿದ್ದಾನೆ. ಪದ್ಮನಾಭ ಮಾವನ ಮನೆಯವರು ಇಷ್ಟು ಬೇಗ ಬಂದು, ದೀಪಾ ಜೊತೆಗೆ ಎಂಗೇಜ್ಮೆಂಟ್ ಡೇಟ್ ಫಿಕ್ಸ್ ಮಾಡುತ್ತಾರೆ ಎಂದು ರಾಮಾಚಾರಿ ಅಂದುಕೊಂಡಿರಲಿಲ್ಲ. ಆದರೆ ಶ್ರುತಿಗೆ ರಾಮಾಚಾರಿ ಹಾಗೂ ಚಾರು ಮೇಲೆ ಅನುಮಾನ ಬಂದಿದೆ. ದೀಪಾಗೆ ತಾನೇ ಹೇಳಿಕೊಟ್ಟು ಪದ್ಮನಾಭ ಫ್ಯಾಮಿಲಿ ಎಂಗೇಜ್ಮೆಂಟ್ ಡೇಟ್ ಫಿಕ್ಸ್ ಮಾಡುತ್ತಾರೆಂದು ಎಣಿಸಿರಲಿಲ್ಲ.

ಈಗ ಎಲ್ಲರ ಮಾತಿಗೂ ಕಟ್ಟು ಬಿದ್ದಿರುವ ನಾರಾಯಣ ಆಚಾರ್ಯರು, ದೀಪಾ ಹಾಗೂ ರಾಮಾಚಾರಿ ಎಂಗೇಜ್ಮೆಂಟ್‌ಗೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ರಾಮಾಚಾರಿ ಈಗ ಧರ್ಮ ಸಂಕಟಕ್ಕೆ ಸಿಲುಕಿದ್ದಾನೆ. ಆ ಕಡೆ ಚಾರು ಈ ಕಡೆ ದೀಪಾ ಏನಪ್ಪಾ ಮಾಡುವುದು ಎಂದು ಅವನು ಯೋಚನೆ ಮಾಡುತ್ತಿದ್ದಾನೆ.

Colors Kannada Ramachari serial Written Update on may 23rd episode

ಆಚಾರ್ಯರು ರಾಮಾಚಾರಿಯ ಎಂಗೇಜ್ಮೆಂಟ್ ಅನ್ನು ದೀಪ ಜೊತೆ ಫಿಕ್ಸ್ ಮಾಡಿದ್ದಕ್ಕೆ ಮನೆಯಲ್ಲಿ ಎಲ್ಲರೂ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಯಾರನ್ನು ಸಹ ಕರಕೊಂಡು ಬರುವುದಿಲ್ಲ ನನ್ನ ಮಗ ನನ್ನ ಮಾತನ್ನ ಉಳಿಸುತ್ತಾನೆ ಎಂದು ನಾರಾಯಣ ಆಚಾರ್ಯರು ಇದೇ ವೇಳೆ ಹೇಳಿದ್ದಾರೆ. ವೈಶಾಖ, ನಾರಾಯಣ ಆಚಾರ್ಯರ ಮಾತಿಗೆ ಕೋಪಗೊಂಡು ಮಧ್ಯೆ ಮಾತನಾಡಲು ಹೋಗಿ ಮಾವನ ಬಳಿ ಬೈಸಿಕೊಂಡಿದ್ದಾಳೆ.

ರಾಮಾಚಾರಿ ಎಂಗೇಜ್ಮೆಂಟ್ ಫಿಕ್ಸ್

ಇನ್ನು ರಾಮಾಚಾರಿ ಕುಟುಂಬದವರಿಗೆ ಎಂಗೇಜ್ಮೆಂಟ್‌ಗೆ ಹೇಳಲು ಬರುತ್ತಿದ್ದಾಗ ಮನೆಯಲ್ಲಿ ಕಲಹವಾಗುವುದು ಚಾರುಗೆ ಕೇಳಿಸಿದೆ. ಇದರಿಂದಾಗಿ ಮನೆಯ ಹೊರಗಡೆ ನಿಂತುಕೊಂಡು ಏನು ಆಗುತ್ತಿದೆ ಎಂದು ತಿಳಿದುಕೊಳ್ಳುತ್ತಿದ್ದಾಳೆ. ಈ ವೇಳೆ ಅಲ್ಲಿಗೆ ಬಂದ ಮುರಾರಿ ಎಲ್ಲಾ ವಿಷಯವನ್ನು ಚಾರು ಬಳಿ ಹೇಳಿದ್ದಾನೆ. ರಾಮಾಚಾರಿಯನ್ನ ಮದುವೆಯಾಗಲು ದೀಪ ಜೊತೆ ಎಂಗೇಜ್ಮೆಂಟ್‌ ಮಾಡಬೇಕು ಎಂದು ನಿರ್ಧರಿಸಲು ಅವರ ಕುಟುಂಬದವರು ಮನೆಗೆ ಬಂದಿದ್ದಾರೆ ಎಂದು ತಿಳಿಸಿದ್ದಾನೆ.

Colors Kannada Ramachari serial Written Update on may 23rd episode

ಚಾರು ಮಾತ್ರ ಈಗ ತುಂಬಾ ಶಾಕ್‌ಗೆ ಒಳಗಾಗಿದ್ದಾಳೆ. ನನ್ನ ಜೊತೆ ಮದುವೆ ಮಾಡಿಕೊಂಡಿರುವ ರಾಮಾಚಾರಿ ಹೇಗೆ ದೀಪ ಜೊತೆಗೆ ಎಂಗೇಂಜ್ಮೆಂಟ್‌ ಮಾಡಿಕೊಳ್ಳುತ್ತಾನೆ ಎಂದು ಮುರಾರಿ ಬಳಿ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಮುರಾರಿ ನಿಮ್ಮನ್ನ ಮದುವೆ ಆಗುವ ಮುಂಚೆ ರಾಮಾಚಾರಿ ತನ್ನ ತಂದೆಗೆ ಮಾತನ್ನ ಕೊಟ್ಟಿದ್ದನು. ನಾನು ದೀಪಾಳನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದ ಎಂದು ಎಂದು ತಿಳಿಸಿದ್ದಾನೆ.

ರಾಮಾಚಾರಿ ಮನೆಯಲ್ಲಿ ಸಂಭ್ರಮ

ವೈಶಾಖ ಆಡುವ ಕೊಂಕು ಮಾತುಗಳಿಂದ ಬೇಸತ್ತಿರುವ ಶ್ರುತಿ ಈಗ ದೀಪಾ ಬೇಗ ಮದುವೆ ಮಾಡಿಕೊಂಡು ಮನೆಗೆ ಬರಲಿ ಎಂದು ಅಂದು ಕೊಂಡು ತುಂಬಾ ಸಂಭ್ರಮಪಟ್ಟು ದೀಪಾ ಬಾಯಿಗೆ ಸಿಹಿಯನ್ನು‌ ಹಾಕಿದ್ದಾಳೆ. ‌ಈಗ ರಾಮಾಚಾರಿ ಮನೆಯಲ್ಲಿ ಎರಡು ಕುಟುಂಬದವರು ಸಹ ಸಂಭ್ರಮದಿಂದ ಇದ್ದಾರೆ. ರಾಮಾಚಾರಿ ಮಾತ್ರ ಎಂಗೇಜ್ಮೆಂಟ್ ಡೇಟ್‌ನ್ನು ಮುಂದೆ ಹಾಕಿ ಎಂದು ತಂದೆಯನ್ನು ‌ಕೇಳಿದ್ದಾನೆ.

ಅಂದೇ ಜೈ ಶಂಕರವರ್ ಅವರ ಮಗಳ ಎಂಗೇಜ್ಮೆಂಟ್ ಇದೆ. ನಾನು ಎಂಗೇಜ್ಮೆಂಟ್‌ ಮಾಡಿಸಲು ಹೋಗಬೇಕು ಎಂದು ಹೇಳಿದ್ದಾನೆ. ಇದಕ್ಕೆ ನಾರಾಯಣ ಆಚಾರ್ಯರು ಇಲ್ಲಿ ರಾಮಾಚಾರಿ ನಿನ್ನ ಎಂಗೇಜ್ಮೆಂಟ್ ಆಗಲಿ ಅಲ್ಲಿ ಮುರಾರಿ ಹೋಗಿ ಚಾರು ಎಂಗೇಜ್ಮೆಂಟ್ ಮಾಡಿಸುತ್ತಾನೆ. ಆಗ ಎರಡು ಮನೆಯಲ್ಲೂ ಸಹ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ. ರಾಮಾಚಾರಿ ತಂದೆ ಮಾತಿಗೆ ಒಪ್ಪಿಕೊಂಡಿದ್ದಾನೆ.

ಚಾರಿ ಮನೆಗೆ ಎಂಟ್ರಿ ಕೊಟ್ಟ ಚಾರು

ರಾಮಾಚಾರಿ ಮನೆಗೆ ಚಾರು ಎಂಟ್ರಿ ಕೊಟ್ಟಿದ್ದಾಳೆ. ಎಲ್ಲರಿಗೂ ನಮಸ್ತೆ ನಾನು ನನ್ನ ಎಂಗೇಜ್ಮೆಂಟ್‌ಗೆ ಕರೆಯಲು ಬಂದಿದ್ದೇನೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ದೀಪಾ ನನ್ನ ಮಾವ . ಅಂದು ನನ್ನ ಹಾಗೂ ಮಾವನ ಎಂಗೇಜ್ಮೆಂಟ್ ನಡೆಯಲಿದೆ ಎಂದು ಹೇಳಿ ಜಗಳವನ್ನ ತೆಗೆದಿದ್ದಾಳೆ. ಇದಕ್ಕೆ ಚಾರು ಮಾರ್ಮಿಕವಾಗಿ ಕೂಸು ಹುಟ್ಟುವ ಮುನ್ನವೇ ಕುಲಾಯಿ ಒಲೆಸಿದ್ರಂತೆ ಎಂದು ಹೇಳಿದ್ದಾಳೆ. ಇದಕ್ಕೆ ಮನೆಯವರೆಲ್ಲರೂ ಸಹ ಶಾಕ್ ಆಗಿದ್ದಾರೆ.

More from Filmibeat

English summary
Colors Kannada Ramachari serial Written Update on may 23rd episode. here is details about Ramachari and deepa engagement fix, but charu decides to cancel the engagement. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X