ರಾಮಾಚಾರಿಗೆ ಚಾರು‌ ಕಳಿಸಿದ ವಿಡಿಯೋ ತೋರಿಸಿದ‌ ಶೃತಿ: ಶಾಕ್ ಆದ ಚಾರಿ

By ಶೃತಿ ಹರೀಶ್ ಗೌಡ

ಚಾರು ಮನೆಗೆ ಬಂದವಳೇ ಮುಂದಿನ ವಾರ ನನ್ನ ಎಂಗೇಜ್ಮೆಂಟ್ ಇದೆ ಅದನ್ನು ರಾಮಾಚಾರಿ ಮಾಡಿಸಬೇಕು ಎಂದಿದ್ದಾಳೆ. ಇದಕ್ಕೆ ದೀಪಾ ಆಗುವುದಿಲ್ಲ ಆ ದಿನ ನನ್ನ ಹಾಗೂ ರಾಮಾಚಾರಿಯ ಎಂಗೇಜ್ಮೆಂಟ್ ನಡೆಯಲಿದೆ ಮಾವ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಚಾರು ಕೋಪ ಮಾಡಿಕೊಂಡಿದ್ದಾಳೆ. ಕೆಲವರು ಕೂಸು ಹುಟ್ಟುವ ಮುಂಚೆಯೇ ಕುಲಾವಿಯನ್ನು ಹೊಲೆಸಿಕೊಳ್ಳುತ್ತಾರೆ ಎಂದು ಚಾರು ಹೇಳಿದ್ದಾಳೆ.

ನಾನು ಇಲ್ಲಿ ರಾಮಾಚಾರಿ ಮನೆಯವರನ್ನ ಎಂಗೇಜ್ಮೆಂಟ್ ಗೆ ಕರೆಯಲು ಬಂದಿದ್ದೇನೆ ನಿನ್ನ ಮನೆಯವರನ್ನಲ್ಲಾ ಎಂದು ಹೇಳಿದ್ದಾಳೆ. ಇದೇ ವೇಳೆ ವೈಶಾಖ ಮಧ್ಯ ಪ್ರವೇಶಿಸಿ ನನ್ನ ಮೈದುನನ ಎಂಗೇಜ್ಮೆಂಟ್ ಇದೆ ಅಂದು, ನಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುತ್ತಿದ್ದು, ನೀನು ಎಂಗೇಜ್ಮೆಂಟ್ ಮುಗಿಸಿಕೊಂಡು ಬಂದು ನಿನ್ನ ಗಂಡನನ್ನು ಕರೆದುಕೊಂಡು ಬೇಕಾದರೆ ಆಶೀರ್ವಾದ ತೆಗೆದುಕೊಂಡು ಹೋಗು ನಮ್ಮ ಮನೆಯವರು ಯಾರು ಸಹ ಎಂಗೇಜ್ಮೆಂಟ್ ಗೆ ಬರುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾಳೆ.

Colors Kannada Ramachari serial Written Update on may 24th episode

ಇದಕ್ಕೆ ಚಾರು ಏನು ಮಾತನಾಡದೇ ನಾರಾಯಣ ಆಚಾರ್ಯರ ಬಳಿಗೆ ಬಂದು ನನ್ನ ಡ್ಯಾಡಿ ಹೇಳುತ್ತಾರೆ ನಾರಾಯಣ ಆಚಾರ್ಯರ ಮನೆಗೆ ಹೋದರೆ ಆಶೀರ್ವಾದವನ್ನು ಮರೆಯದೇ ತೆಗೆದುಕೊಂಡು ಬಾ ಎಂದು. ನೀವು ಮಾಡುವ ಆಶೀರ್ವಾದ ಅಷ್ಟು ಶ್ರೇಯಸ್ಕರವಾಗಿದೆ ಎಂದು, ನಾರಾಯಣ ಆಚಾರ್ಯರ ಬಳಿ ಬಂದು ಜಾನಕಿಯನ್ನು ಪಕ್ಕಕ್ಕೆ ಕರೆದುಕೊಂಡು ಬಂದು ಇಬ್ಬರ ಆಶೀರ್ವಾದವನ್ನು ಸಹ ತೆಗೆದುಕೊಂಡು ಮನೆಯಿಂದ ಹೊರಟಿದ್ದಾಳೆ.

ರಾಮಾಚಾರಿಗೆ ಬ್ಲಾಕ್ ಮೇಲ್

ಚಾರು ಹೊರಗೆ ಹೋಗುತ್ತಿದ್ದಾಗ ರಾಮಾಚಾರಿ ತಂದೆಯ ಬಳಿ ನಾನು ಅವರನ್ನ ಮನೆಯಿಂದ ಸ್ವಲ್ಪ ದೂರ ಬಿಟ್ಟು ಬರುತ್ತೇನೆ ಎಂದು ಹೇಳಿ ಬಂದಿದ್ದಾನೆ. ಚಾರು ಮತ್ತೊಮ್ಮೆ ರಾಮಾಚಾರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ. ನೀನು ಏನಾದರೂ ಅಂದು ಎಂಗೇಜ್ಮೆಂಟ್‌ಗೆ ಬಂದು ನನ್ನ ಕೈಗೆ ಉಂಗುರ ಹಾಕದಿದ್ದರೆ ವಿಷದ ಬಾಟಲ್ ಜೊತೆಯಲ್ಲೇ ಇರುತ್ತದೆ ಎಂದು ಹೇಳಿದ್ದಾಳೆ. ಚಾರು ಮಾತನ್ನು ಕೇಳಿದ ರಾಮಾಚಾರಿಗೆ ಶಾಕ್ ಆಗಿದೆ.

Colors Kannada Ramachari serial Written Update on may 24th episode

ರಾಮಾಚಾರಿಗೆ ವಿಡಿಯೋ ತೋರಿಸಿದ ಶೃತಿ

ಇತ್ತ ರಾಮಾಚಾರಿ ಹಾಗೂ ಮುರಾರಿ ಇಬ್ಬರು ಸಹ ಮಾತನಾಡುತ್ತಿದ್ದಾರೆ. ಇದೇ ವೇಳೆ ಮುರಾರಿ, ಚಾರು ಕಳಿಸಿದ ವಿಡಿಯೋವನ್ನು ಶ್ರುತಿ ನೋಡಿದ್ದಾಗಿ ತಿಳಿಸಿದ್ದಾನೆ. ನಾನು ಏನು ಮಾಡಬೇಕು ತಿಳಿಯುತ್ತಿಲ್ಲ ಎಂದು ರಾಮಾಚಾರಿ ಹೇಳುವಾಗ ಅಲ್ಲಿಗೆ ಬಂದ ಶ್ರುತಿ ಅಣ್ಣನನ್ನು ಪ್ರಶ್ನೆ ಮಾಡಿದ್ದಾಳೆ. ಅಣ್ಣ ನಿನಗೂ ಚಾರುಗೂ ಇರುವ ಸಂಬಂಧ ಏನು ರಾತ್ರೋ ರಾತ್ರಿ ಬಂದು ಅವಳು ಕೇಕ್ ಕಟ್ ಮಾಡಿಸುತ್ತಾಳೆ ಅಂತ ಹೇಳಿದ ನಂತರ ಚಾರು ಕಳಿಸಿದ ವಿಡಿಯೋವನ್ನು ನಾನು ನೋಡಿದ್ದೇನೆ ಎಂದು ತಿಳಿಸಿದ್ದಾಳೆ.

ದೀಪಾ ಈ ರೀತಿ ಹೇಳಿದ ಮಾತಿಗೆ ರಾಮಾಚಾರಿ ತುಂಬಾ ಶಾಕ್‌ಗೆ ಒಳಗಾಗಿದ್ದಾನೆ. ಇದೆ ವೇಳೆ ದೀಪಾ, ಅಣ್ಣನಿಗೆ ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ತೋರಿಸಿದ್ದಾಳೆ. ಅಣ್ಣ ನೀನು ನನ್ನ ಮೊಬೈಲನ್ನು ತೆಗೆದುಕೊಳ್ಳುತ್ತೀಯಾ ಎಂದು ನನಗೆ ಗೊತ್ತಿತ್ತು. ಅದಕ್ಕಾಗಿ ಚಾಟ್‌ನಲ್ಲಿ ಕ್ಲಿಯರ್ ಮಾಡಿ ಬೇರೆ ಫೋಲ್ಡರ್‌ನಲ್ಲಿ ಸೇವ್ ಮಾಡಿ ವಿಡಿಯೋವನ್ನು ಇಟ್ಟುಕೊಂಡಿದ್ದೆ ಎಂದಿದ್ದಾಳೆ.

ನೀನು ಯಾರಿಗೂ ಹೇಳದೇ ಚಾರುವನ್ನ ಮದುವೆಯಾಗಿದ್ದು ಏನಾದರೂ ಮನೆಯವರಿಗೆ ಗೊತ್ತಾದರೆ ಯಾವ ರೀತಿಯ ಅನಾಹುತವಾಗುತ್ತದೆ ಎಂದು ತಿಳಿದಿದ್ಯಾ ಎಂದು ಅಣ್ಣನಿಗೆ ಹೇಳಿದ್ದಾಳೆ. ರಾಮಾಚಾರಿ ಏನೇ ಸಮಜಾಯಿಷಿ ನೀಡಲು ಹೋಗುತ್ತಿದ್ದರು ಸಹ ಶೃತಿ ಕೇಳುತ್ತಿಲ್ಲ.

ದೀಪಾ ಮದುವೆಯಾಗು ಎಂದ ಶೃತಿ

ಶೃತಿ ತನ್ನ ಅಣ್ಣನಿಗೆ ಬುದ್ಧಿವಾದವನ್ನ ಹೇಳಿದ್ದಾಳೆ. ನಂತರ ನೀನು ದೀಪಾಳನ್ನೇ ಮದುವೆಯಾಗಬೇಕು. ಈಗ ಎಂಗೇಜ್ಮೆಂಟ್‌ಗೆ ಮಾತುಕತೆ ಮುಗಿದಿರುವುದು ನನಗೆ ಕೊಂಚ ನೆಮ್ಮದಿ ತಂದಿದೆ ಏನಾದರೂ ನೀನು ದೀಪಾಳನ್ನು ಮದುವೆಯಾಗದೆ ಇದ್ದರೆ, ನಾನು ನೀನು ಮದುವೆಯಾಗಿರುವ ಸತ್ಯವನ್ನು ರಿವೀಲ್ ಮಾಡುತ್ತೇನೆ ಎಂದು ರಾಮಾಚಾರಿಯ ಬಳಿ ಹೇಳಿದ್ದಾಳೆ.

ಈ ಕಡೆ ರಾಮಾಚಾರಿಯ ಎಂಗೇಜ್ಮೆಂಟ್ ಅನ್ನು ಹೇಗಾದರೂ ಮಾಡಿ ಕ್ಯಾನ್ಸಲ್ ಮಾಡಬೇಕು ಎಂದು ಮುರಾರಿ ಅಂದುಕೊಂಡಿದ್ದಾನೆ. ಇದನ್ನು ರಾಮಾಚಾರಿ ಬಳಿಯೂ ಸಹ ಹೇಳಿದ್ದಾನೆ. ಇದಕ್ಕೆ ರಾಮಾಚಾರಿ ಸಮ್ಮತಿ ನೀಡಿದ್ದು, ಹೇಗಾದರೂ ಮಾಡಿ ಮನೆಯವರಿಗೆ ತಿಳುವಳಿಕೆ ಹೇಳಿ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಸಬೇಕು ಇಲ್ಲದಿದ್ದರೆ ಚಾರು ವಿಷವನ್ನು ಎನರ್ಜಿ ಡ್ರಿಂಕ್ ರೀತಿ ಕುಡಿಯಲು ಸಿದ್ಧವಾಗುತ್ತಾಳೆ ಎಂದು ರಾಮಾಚಾರಿ ಬಳಿ ಮುರಾರಿ ಹೇಳಿದ್ದಾನೆ.

More from Filmibeat

English summary
Colors Kannada Ramachari serial Written Update on may 24th episode. here is details about Shruthi shows the video to Ramachari and asks him to Marry deepa. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X