Ramachari: ಮನೆಯಲ್ಲಿ 2ನೇ ಒಲೆ ಹಚ್ಚಿದ ವೈಶಾಖ: ಚಾರುಗೆ ರಾಮಾಚಾರಿಯಿಂದ ಅಭಯ
ರಾಮಾಚಾರಿ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್‌ನ್ನು ಪಡೆದುಕೊಳ್ಳುತ್ತಿದೆ. ನಾರಾಯಣ ಆಚಾರ್ಯರು ತಮ್ಮ ಮಕ್ಕಳನ್ನ ಕೊಡು ಕುಟುಂಬದಂತೆ ನೋಡಿಕೊಂಡಿದ್ದರು. ಅಣ್ಣ ತಮ್ಮ ಇಬ್ಬರೂ ರಾಮ ಲಕ್ಷ್ಮಣರಂತೆ ಅನ್ಯೋನ್ಯವಾಗಿ ಇದ್ದರು. ಆದರೆ ಅಪರ್ಣ ಸತ್ತು ಹೋದ ನಂತರ ಕೋದಂಡ ಮತ್ತೊಂದು ಮದುವೆಯನ್ನು ಮಾಡಿಕೊಂಡು ಬಂದ ಮೇಲೆ ಮನೆಯಲ್ಲಿ ಹಲವು ಜಗಳ ನಡೆಯುತ್ತಿದೆ. ಮನೆಯಲ್ಲಿ ಅಶಾಂತಿ ಮನೆ ಮಾಡಿದೆ.
ಜಾನಕಿ ಸೊಸೆಗೆ ಹೊಂದಿಕೊಂಡು ಹೋಗಬೇಕು ಎಂದುಕೊಂಡಿದ್ದರೆ ವೈಶಾಖ ಮಾತ್ರ ಎಲ್ಲದರಲ್ಲೂ ಸಹ ತಪ್ಪು ಹಿಡಿದು ಕೊಂಕು ಮಾತನಾಡುವುದನ್ನು ಬಿಟ್ಟಿಲ್ಲ. ಆದರೆ ಕೋದಂಡ ಹೆಂಡತಿ ಮಾತನಾಡುತ್ತಿರುವುದಕ್ಕೆ ಒಂದೇ ಒಂದು ಮಾತನ್ನು ಸಹ ಎದುರಾಡುತ್ತಿಲ್ಲ. ನಾರಾಯಣ ಆಚಾರ್ಯರಿಗೆ ಈ ವಿಷಯ ತಿಳಿದರೆ ಸುಮ್ಮನೆ ರಾದ್ಧಂತವಾಗುತ್ತದೆ, ಎಂದು ವೈಶಾಖ ಏನೇ ಬೈದರು ಜಾನಕಿ ಸುಮ್ಮನಿದ್ದಾಳೆ.

ಕೋದಂಡ ಹೆಂಡತಿಗೆ ಅನುಸರಿಸಿಕೊಂಡು ಹೋಗು ಎಂದಿದ್ದಾನೆ. ಇದಕ್ಕೆ ವೈಶಾಖ ನಾನು ಅನುಸರಿಸಿಕೊಂಡು ಹೋಗಬೇಕಾ ಈ ಮನೆಯಲ್ಲಿ ನಿಮ್ಮ ಮೇಲೆ ತಾರತಮ್ಯ ನಡೆಯುತ್ತಿದೆ. ನಾನು ಅದನ್ನು ತಡೆಯುತ್ತೇನೆ ನಿಮ್ಮನ್ನ ರಾಮಾಚಾರಿಯ ಮುಂದೆ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿದ್ದಾಳೆ. ಎಲ್ಲರೂ ನಿಮಗೆ ಮರ್ಯಾದೆಯನ್ನು ಕೊಡಬೇಕು ಎಂದರೆ ನಾನು ಹೇಳಿದಂತೆ ನೀವು ಕೇಳಬೇಕು ಎಂದು ಗಂಡನ ಬಾಯಿ ಕಟ್ಟಿ ಹಾಕಿದ್ದಾಳೆ.
ಚಾರುಗೆ ಧೈರ್ಯ ಹೇಳಿದ ರಾಮಾಚಾರಿ
ಚಾರು ಮನೆಯಲ್ಲಿ ನಡೆಯುತ್ತಿರುವ ವಿಷಯಗಳನ್ನ ಹೇಳಲು ರಾಮಾಚಾರಿಯನ್ನ ಭೇಟಿಯಾಗಿದ್ದಾಳೆ. ನಮ್ಮ ಮನೆಯಲ್ಲಿ ಅಮ್ಮ ನೀನು ಬಂದು ಎಂಗೇಜ್ಮೆಂಟ್ ನಡೆಸಿಕೊಡುವುದು ಬೇಡ ಎಂದು ಹೇಳುತ್ತಿದ್ದಾಳೆ. ನಮ್ಮ ತಂದೆ ನಿಮ್ಮ ತಂದೆಗೆ ಕಾಲ್ ಮಾಡಿಕೊಡಬೇಕು ಎಂದು ಮಾತನಾಡುತ್ತೇನೆ ಎಂದಿದ್ದಕ್ಕೂ ಸಹ ಮಾಮ್ ಕೊಕ್ಕೆ ಹಾಕಿದ್ದಾಳೆ. ಇದರಿಂದ ನನಗೆ ತುಂಬಾ ಭಯವಾಗಿದೆ, ನೀನು ಮಾತ್ರ ನನ್ನ ಬೆರಳಿಗೆ ಉಂಗುರವನ್ನು ತೊಡಿಸಬೇಕು, ಇಲ್ಲದಿದ್ದರೇ ನಾನು ವಿಷವನ್ನ ಕುಡಿಯುತ್ತೇನೆ ಎಂದು ಚಾರು, ರಾಮಾಚಾರಿ ಬಳಿ ಹೇಳಿದ್ದಾಳೆ.

ರಾಮಾಚಾರಿ ಚಾರುಗೆ ನಾನು ಬಂದೇ ಬರುತ್ತೇನೆ, ಹೇಗಾದರೂ ಮಾಡಿ ನನ್ನ ಹಾಗೂ ದೀಪಾಳ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು, ಅಂದು ನಿಮ್ಮ ಎಂಗೇಜ್ಮೆಂಟ್ ನಾನು ನಡೆಸಿಕೊಡುತ್ತೇನೆ ಎಂದು ಹೇಳಿದ್ದಾನೆ. ಸಾವು ಎಲ್ಲದಕ್ಕೂ ಉತ್ತರವಲ್ಲ, ಮನೆಯಲ್ಲಿ ಇದ್ದರೂ ನೆಮ್ಮದಿ ಇಲ್ಲ, ಅಲ್ಲೇ ಜಗಳವನ್ನು ತಡೆದು ನಿಲ್ಲಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.
ಆಚಾರ್ಯರ ಮನೆಯಲ್ಲಿ ಎರಡೆರಡು ಒಲೆ
ನಾರಾಯಣ ಆಚಾರ್ಯರ ಮನೆಯಲ್ಲಿ ವೈಶಾಖ ಸಣ್ಣಪುಟ್ಟದ್ದಕ್ಕೂ ಜಗಳ ತೆಗೆದು ಮನೆಯನ್ನ ಒಡೆದು ಎರಡು ಹೋಳು ಮಾಡಬೇಕು ಎಂದುಕೊಂಡಿದ್ದಾಳೆ. ಆದರೆ ರಾಮಾಚಾರಿ ಹಾಗೂ ಜಾನಕಿಗೆ ವೈಶಾಖ ಮಾಡುತ್ತಿರುವುದು ಸ್ವಲ್ಪವೂ ಕೂಡ ಇಷ್ಟವಾಗಿಲ್ಲ. ಶೃತಿ, ಕೋದಂಡ ಹಾಗೂ ವೈಶಾಖಾಗೆ ಕಾಫಿ ತೆಗೆದುಕೊಂಡು ಹೋದಾಗ ಅಲ್ಲಿ ವೈಶಾಖ ಸ್ಟೌವ್ ಇಟ್ಕೊಂಡು ಕಾಫಿ ಮಾಡುತ್ತಿರುವುದು ಶ್ರುತಿಗೆ ಕಾಣಿಸಿದೆ, ನಂತರ ವೈಶಾಖ, ಶ್ರುತಿಗೆ ಬೈದು ಹೊರಗೆ ಕಳಿಸಿದ್ದಾಳೆ.
ಅಮ್ಮನ ಬಳಿ ಬಂದ ಶ್ರುತಿ ಅವರು ಬೇರೆ ಕಾಫಿ ಮಾಡಿಕೊಂಡು ಕುಡಿಯುತ್ತಿದ್ದಾರೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ವೈಶಾಖ ಅಲ್ಲಿಗೆ ಬಂದು ನೀನು ಚಾಡಿ ಹೇಳುವುದನ್ನು ಬಿಟ್ಟಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಜಾನಕಿ ಚಾಡಿ ಅಲ್ಲ, ಇದು ಏನಾದರೂ ನಾರಾಯಣ ಆಚಾರ್ಯರಿಗೆ ಗೊತ್ತಾದರೆ ತುಂಬಾ ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾಳೆ. ಮಧ್ಯ ಬಾಯಿ ಹಾಕಿದ ರಾಮಾಚಾರಿಯು ಸಹ ಅತ್ತಿಗೆಯ ಬಳಿ ಬೈಸಿಕೊಳ್ಳುವಂತಾಗಿದೆ.
ವಿಷಯ ತಿಳಿದುಕೊಂಡ ಚಾರು
ಚಾರುಗೆ ರಾಮಾಚಾರಿ ಬಾಡಿದ ಮುಖ ಯಾಕೋ ಬೇಸರವನ್ನ ತರಿಸಿದೆ. ಇದಕ್ಕಾಗಿ ಮುರಾರಿಗೆ ಕಾಲ್ ಮಾಡಿ ಕರೆಸಿಕೊಂಡು ಮನೆಯಲ್ಲಿ ಏನಾಯಿತು ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಮುರಾರಿ ವೈಶಾಖ ಅತ್ತಿಗೆ ಎಲ್ಲದಕ್ಕೂ ಸಹ ಜಗಳವನ್ನ ಮಾಡಿ ಮನೆಯಲ್ಲಿರುವ ನೆಮ್ಮದಿಯನ್ನ ಕದಡಿದ್ದಾಳೆ. ತನ್ನ ಗಂಡನನ್ನ ಬೇರೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ದಾರೆ ಎಂದೆಲ್ಲ ಹೇಳಿದ್ದಾನೆ.
ಜಾನಕಿ ಅಮ್ಮನಿಗೂ, ನಾರಾಯಣ ಆಚಾರ್ಯರಿಗೂ ಎದರು ಮಾತನಾಡಿ ಕಣ್ಣೀರು ಹಾಕಿಸಿದ್ದಾಳೆ ಎಂದು ಮುರಾರಿ ಹೇಳಿದ್ದಾನೆ. ಇದೆಲ್ಲವನ್ನು ಕೇಳಿಸಿಕೊಂಡ ಚಾರು, ವೈಶಾಖಾಗೆ ಬುದ್ಧಿ ಕಲಿಸಬೇಕು ಎಂದು ಯೋಚನೆ ಮಾಡಿದ್ದಾಳೆ.


Click it and Unblock the Notifications











