Ramachari: ದೀಪಾ- ರಾಮಾಚಾರಿ ಎಂಗೇಜ್ಮೆಂಟ್ ಕ್ಯಾನ್ಸಲ್: ವೈಶಾಖ ನಾಟಕ ಜೋರು
ರಾಮಾಚಾರಿ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್ ಮೂಲಕ ವೀಕ್ಷಕರನ್ನು ಮನರಂಜಿಸುತ್ತಿದೆ. ದೀಪಾ ಹಾಗೂ ರಾಮಾಚಾರಿ ಎಂಗೇಜ್ಮೆಂಟ್ ಹೇಗೆ ಕ್ಯಾನ್ಸಲ್ ಆಗುತ್ತದೆ ಎಂದು ಎಲ್ಲರೂ ಸಹ ಕಾಯುತ್ತಿದ್ದರು. ಇದಕ್ಕಾಗಿ ಮುರಾರಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಅವನೇ ಸೂತ್ರಧಾರನಾಗಿ ಈಗ ರಾಮಾಚಾರಿ ಹಾಗೂ ದೀಪ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಸಿ ಚಾರು ಎಂಗೇಜ್ಮೆಂಟ್ ರಾಮಾಚಾರಿ ಮಾಡಿಸುವ ರೀತಿ ಮಾಡುತ್ತಿದ್ದಾನೆ.
ಈ ಕಡೆ ವೈಶಾಖ ಮನೆಯಲ್ಲಿ ದಿನಕ್ಕೊಂದು ತಂಟೆ ತೆಗೆದು ಗಂಡ ಹೆಂಡತಿ ಇಬ್ಬರೇ ಇರುವಂತೆ ನಡೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿ ಎರಡನೇ ಒಲೆ ಹಚ್ಚಿದ ವೈಶಾಖಗೆ ರಾಮಚಾರಿ ಹಾಗೂ ಜಾನಕಿ ಬುದ್ಧಿ ಹೇಳಿದ್ದಾರೆ. ಇದಕ್ಕೆ ವೈಶಾಖ, ರಾಮಾಚಾರಿಗೆ ಬೈದಿದ್ದಾಳೆ. ಅತ್ತಿಗೆಗೆ ಬುದ್ಧಿ ಹೇಳಲು ಬರುತ್ತೀಯಾ, ನೀನೇನು ಈ ಮನೆಯ ಯಜಮಾನನ ಎಂದೆಲ್ಲಾ ಕೇಳಿದ್ದಾಳೆ.

ಇದನ್ನೆಲ್ಲಾ ಕೇಳಿಸಿಕೊಂಡ ಅಜ್ಜಿ ಹೌದು ನನ್ನ ಪರವಾಗಿ ನನ್ನ ಮೊಮ್ಮಗ ಮಾತನಾಡಿದ್ದಾನೆ. ನೀನು ಮನೆಯಲ್ಲಿ ಎರಡನೇ ಒಲೆ ಹಚ್ಚುವುದು ಸರಿ ಇಲ್ಲ, ಬೇಕಾದರೆ ಅಡುಗೆ ಮನೆಯಲ್ಲಿ ಹೋಗಿ ನಿನಗೆ ಇಷ್ಟವಾದ ಅಡುಗೆ ಮಾಡಿಕೋ ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿ ಹೇಳಿದಕ್ಕಾಗಿ ವೈಶಾಖ ಆಯ್ತು ನಾನು ಇನ್ನೂ ಮಾತು ಮುಂದುವರಿಸುವುದಿಲ್ಲ. ಮನೆಯಲ್ಲಿರುವ ಅಡುಗೆ ಕೋಣೆಯಲ್ಲಿ ಬಳಸಿಕೊಳ್ಳುತ್ತೇನೆ ಎಂದು ಅಲ್ಲಿಂದ ಹೋಗಿದ್ದಾಳೆ.
ಗಂಡ ಹೆಂಡತಿಗೆ ಮಾತ್ರ ಅಡುಗೆ
ಈ ಕಡೆ ವೈಶಾಖ ಅಡುಗೆ ಮನೆಗೆ ಹೋದವಳೇ ತನಗೂ ಹಾಗೂ ತನ್ನ ಗಂಡ ಕೋದಂಡಗೆ ಬೇಕಾದಷ್ಟು ಮಾತ್ರ ಅಡುಗೆ ಮಾಡಿಕೊಂಡಿದ್ದಾಳೆ. ಮನೆಯವರು ಯಾರಿಗೂ ಸಹ ಅಡುಗೆ ಮಾಡಿಲ್ಲ. ಶ್ರುತಿ ಹೋಗಿ ಅಡುಗೆ ಕೋಣೆಯಲ್ಲಿ ನೋಡಿದಾಗ ಅಲ್ಲಿ ಊಟ ಇಲ್ಲ ಎಂದು ಬಂದಿದ್ದಾಳೆ. ಜಾನಕಿಯ ಬಳಿ ಬಂದು ಅಮ್ಮ ಇಂದು ನಾವೆಲ್ಲರೂ ಉಪವಾಸ ಮಲಗಬೇಕು. ಅತ್ತಿಗೆ ಅವರಿಬ್ಬರಿಗೆ ಮಾತ್ರ ಅಡುಗೆಯನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾಳೆ.

ಇದೇ ವೇಳೆ ವೈಶಾಖ ರೂಮಿಗೆ ಹೋದಂತಹ ಜಾನಕಿ ಇದೇ ನಮ್ಮ ನಮಗೂ ಕೂಡ ಅಡುಗೆ ಮಾಡಿಲ್ಲ ಎಂದು ಕೇಳಿದ್ದಾಳೆ. ಅದಕ್ಕೆ ನಾನೇನು ಅಡುಗೆ ಕೆಲಸದವಳಲ್ಲ, ನಾನು ನನ್ನ ಗಂಡನಿಗೆ ಹಾಗೂ ನನಗೂ ಬೇಕಾದಷ್ಟು ಮಾತ್ರ ಅಡುಗೆ ಮಾಡಿಕೊಂಡಿದ್ದೇನೆ, ನಿಮಗೆ ಬೇಕಾದರೆ ನೀವು ಮಾಡಿಕೊಂಡು ತಿನ್ನಿ ನಿಮ್ಮ ಮಾತಿಗೆ ಬೆಲೆಕೊಟ್ಟು ಎರಡು ಒಲೆ ಉರಿಸದೇ ಒಂದೇ ಒಲೆಯಲ್ಲಿ ಅಡುಗೆ ಮಾಡಿದ್ದೇನೆ ಎಂದು ಹೇಳಿದ್ದಾಳೆ.
ತಾಯಿಗೆ ಬೈದ ಕೋದಂಡ
ಕೋದಂಡ ತನ್ನ ಹೆಂಡತಿಯದ್ದೇ ಸರಿ ಎಂದು ವಾದ ಮಾಡಿದ್ದಾನೆ. ಅವಳು ಅಡುಗೆ ಮಾಡಿದರೆ ಉಪ್ಪು ಸರಿ ಇಲ್ಲ ಖಾರ ಸರಿ ಇಲ್ಲ ಎಂದು ನೀವು ಅವಳನ್ನು ಬೈಯ್ಯುವುದರ ಬದಲು ನೀವೇ ಅಡುಗೆ ಮಾಡಿಕೊಂಡು ತಿನ್ನಿ, ಇದರಲ್ಲೂ ಸಹ ಜಗಳವನ್ನು ತೆಗೆಯಬೇಡಿ ಎಂದು ತನ್ನ ತಾಯಿ ಜಾನಕಿಗೆ ಕೋದಂಡ ಹೇಳಿದ್ದಾನೆ. ಮಗನ ಮಾತನ್ನು ಕೇಳಿಸಿಕೊಂಡ ಜಾನಕಿಗೆ ತುಂಬಾ ಬೇಸರವಾಗಿ ಅಳು ಬಂದಿದೆ. ಇದೇ ವೇಳೆ ವೈಶಾಖ ನಾನೇ ಒಂದು ಬಟ್ಟಲು ಸಾಂಬಾರ್ ಕೊಡುತ್ತೇನೆ ಎಂದು ಕೊಂಕಾಡಿದ್ದಾಳೆ. ಏನು ಬೇಡ ಎಂದುಕೊಂಡು ಜಾನಕಿ ಸುಮ್ಮನೆ ಬಂದಿದ್ದಾಳೆ.

ಅಣ್ಣ ಅತ್ತಿಗೆಗೆ ಸ್ವಲ್ಪ ಹೇಳು ಎಲ್ಲರ ಜೊತೆಗೂ ಹೊಂದಿಕೊಳ್ಳದೇ ಕಿತ್ತಾಡುತ್ತಾರೆ ಎಂಬುದಕ್ಕೆ ಕೋದಂಡ ರಾಮಾಚಾರಿಗೆ ಬೈದಿದ್ದಾನೆ. ನನ್ನ ಹೆಂಡತಿಯ ಬಗ್ಗೆ ಮಾತನಾಡಲು ಬರಬೇಡ ಅವಳು ಸರಿಯಾಗಿ ಇದ್ದಾಳೆ. ನಾನು ಕಷ್ಟದಲ್ಲಿದ್ದಾಗ ಯಾರು ಸಹ ನನ್ನ ಬಗ್ಗೆ ಮಾತನಾಡಲಿಲ್ಲ ಎಲ್ಲರೂ ನಿನ್ನ ಕಷ್ಟಕ್ಕೆ ಸ್ಪಂದಿಸುವವರೇ ಆಗಿದ್ದರು. ಆಗ ನನ್ನ ಕಷ್ಟಕ್ಕೆ ಸ್ಪಂದಿಸಿದವಳು ಎಂದರೆ ಅವಳು ನನ್ನ ವೈಶಾಖ ಅವಳೇ ನನ್ನ ಪ್ರಪಂಚ ನೀವೇ ಅವಳಿಗೆ ಹೊಂದಿಕೊಂಡು ಹೋಗಿ ಎಂದು ರಾಮಾಚಾರಿಗೆ ಕೋದಂಡ ಬೈದಿದ್ದಾನೆ.
ದೀಪಾ ಎಂಗೇಜ್ಮೆಂಟ್ ತಡೆದ ಮುರಾರಿ
ಮುರಾರಿ, ಪದ್ಮನಾಭ ಅವರ ಮನೆಗೆ ಹೋಗಿದ್ದು ಅಲ್ಲಿ ತುಳಸಿ ಬಳಿ ಮಾತನಾಡಿ ದೀಪಾಳ ಎಂಗೇಜ್ಮೆಂಟ್‌ಗೆ ಕರೆದಿದ್ದಾನೆ. ದೀಪಾಳಿಗೆ ಶುಕ್ರವಾರ ಅನ್ನುವುದು ಆಗಿ ಬರೋದಿಲ್ಲ ಅಂದು ಎಂಗೇಜ್ಮೆಂಟ್ ಮಾಡಿದರೆ ರಾಮಾಚಾರಿ ಜೊತೆ ದೀಪ ಹೊಂದಿಕೊಂಡು ಹೋಗದೆ ಬರಿ ಜಗಳವಾಡುತ್ತಾ ಇರುತ್ತಾರೆ. ಇದು ಬೇಕಾ ಎಂದೆಲ್ಲಾ ಹೆದರಿಸಿದ್ದಾನೆ.
ದೀಪಾ ಹಾಗೂ ರಾಮಾಚಾರಿಯ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಸಿದ್ದಾನೆ. ಈ ಕಡೆ ಚಾರು ವೈಶಾಖಾಗೆ ಬುದ್ಧಿಯನ್ನ ಕಲಿಸಬೇಕು ಎಂದುಕೊಂಡು ಪಾರ್ಕಿಗೆ ಬಂದಿದ್ದಾಳೆ.


Click it and Unblock the Notifications











