Ramachari: ಸಿಕ್ಕಿಹಾಕಿಕೊಂಡ ರಾಮಾಚಾರಿ ಹಾಗೂ ಚಾರು: ಮನೆಯವರಿಗೆಲ್ಲ ಶಾಕ್
ರಾಮಾಚಾರಿಯನ್ನು ಬೆಟ್ಟದಷ್ಟು ಪ್ರೀತಿ ಮಾಡುತ್ತಿರುವ ಚಾರು ತನ್ನ ಗೆಳತಿ ಸಾನ್ವಿ ಜೊತೆಗೆ ಕೇಕ್‌ನ್ನು ತೆಗೆದುಕೊಂಡು ರಾಮಾಚಾರಿಯ ಮನೆಗೆ ಹೋಗಿದ್ದಾಳೆ. ಇದೇ ವೇಳೆ ಹಿಂಬಾಗಲಿನ ಮೂಲಕ ಹೋಗಲು ಪ್ರಯತ್ನ ಮಾಡಿದ್ದಾಳೆ. ಹಿಂಬಾಗಲು ಲಾಕ್ ಆಗಿರುವ ಕಾರಣ ಅದನ್ನು ತೆಗೆಯಲು ಸಹ ಪ್ಲಾನ್ ಮಾಡಿದ್ದಾಳೆ. ಕೈಯಲ್ಲಿ ಯಾವುದೋ ಒಂದು ಚೂಪಾದ ಆಯುಧವನ್ನು ಹಿಡಿದು ಡೋರ್ ಅನ್ನ ಓಪನ್ ಮಾಡಿದ್ದಾಳೆ.
ರಾತ್ರಿ ವೇಳೆ ಅದ್ಯಾವುದೋ ಕಾರಣಕ್ಕೆ ಎದ್ದಿರುವ ವೈಶಾಖ ಮನೆಯ ಡೋರ್ ಸೌಂಡ್ ಆಗುವುದನ್ನ ಕೇಳಿ ಅಲ್ಲಿಗೆ ಬಂದಿದ್ದಾಳೆ. ಯಾರೋ ಕಳ್ಳ ಬಂದಿರಬೇಕು ಅಂದುಕೊಂಡು ಸುಮ್ಮನೆ ನಿಂತಿದ್ದಾಳೆ ನಂತರ ಡೋರ್ ಓಪನ್ ಆದ ಬಳಿಕ ಯಾರು ಬರದೇ ಇದ್ದಾಗ ದೆವ್ವ ತೆಗೆದಿರಬಹುದು ಎಂದು ಭಯಭೀತಳಾಗಿದ್ದಾಳೆ. ನಂತರ ಮರೆಯಲ್ಲಿ ನಿಂತುಕೊಂಡು ಯಾರು ಬರಬಹುದು ಎಂದು ಕಾದಿದ್ದಾಳೆ.

ಈ ವೇಳೆ ಸಾನ್ವಿಗೆ ಚಾರು ಧನ್ಯವಾದಗಳನ್ನು ಹೇಳಿದ್ದಾಳೆ. ಇಲ್ಲಿತನಕ ಬಂದು ನನಗೆ ಸಹಾಯ ಮಾಡಿದ್ದಕ್ಕಾಗಿ ಲವ್ ಯೂ ಎಂದು ಸಾನ್ವಿಗೆ ಹೇಳಿದ್ದಾಳೆ. ಸಾನ್ವಿ ಖುಷಿಯಿಂದ ಏನು ಆಗದೆ ಇದ್ದರೆ ಸಾಕು ಎಂದು ದೇವರ ಬಳಿ ಪ್ರಾರ್ಥನೆ ಮಾಡಿದ್ದಾಳೆ. ಸಾನ್ವಿ ಬಳಿ ಮಾತನಾಡಿಕೊಂಡು ಒಳಗೆ ಬರುವಷ್ಟರಲ್ಲಿ ಅವಿತುಕೊಂಡಿರುವ ವೈಶಾಖ, ಚಾರು ಅನ್ನು ನೋಡಿದ್ದಾಳೆ.
ಚಾರು ನೋಡಿದ ವೈಶಾಖ
ಈ ಮನೆಗೆ ಹುಡುಗಿ ಯಾಕೆ ಬಂದಿದ್ದಾಳೆ. ನನ್ನ ಗಂಡನನ್ನು ಅಂತೂ ಹುಡುಕಿಕೊಂಡು ಬಂದಿಲ್ಲ. ಇನ್ನೂ ಶ್ರುತಿಯನ್ನು ಹುಡುಕಿ ಬಂದಿದ್ದಾಳಾ ಎಂದು ವೈಶಾಖ ಅನುಮಾನಿಸಿದ್ದಾಳೆ. ರಾಮಾಚಾರಿ ರೂಮಿಗೆ ಚಾರು ಹೋದದ್ದನ್ನು ನೋಡಿ ಶಾಕ್ ಆಗಿದ್ದಾಳೆ. ನನ್ನ ಗಂಡನಿಗೆ ಅವಮಾನ ಮಾಡುತ್ತಾನೆ, ಇವನ ಮರ್ಯಾದೆಯನ್ನು ಕಳೆಯಲೇಬೇಕು ಎಂದು ವೈಶಾಖ ನಿರ್ಧಾರ ಮಾಡಿದ್ದಾಳೆ.

ನನ್ನ ಗಂಡನಿಗೆ ಮರ್ಯಾದೆ ಕೊಡದವರ ಮರ್ಯಾದೆಯನ್ನು ನಾನು ಸಹ ಕಳೆಯುತ್ತೇನೆ. ರಾಮಾಚಾರಿ ಏನು ಎಂದು ಎಲ್ಲರಿಗೂ ತಿಳಿಯಲಿ ಎಂದು ವೈಶಾಖ ಪ್ಲಾನ್ ಮಾಡಿದ್ದಾಳೆ. ರಾಮಾಚಾರಿ ರೂಮಿಗೆ ಚಾರು ಹೋಗುವುದನ್ನೇ ಕಾಯುತ್ತಾ ಇರುವ ವೈಶಾಖ ಎಲ್ಲರನ್ನೂ ಕರೆದು ರಂಪ ಮಾಡಲು ಇದೇ ಸೂಕ್ತ ಸಮಯ ಎಂದುಕೊಂಡಿದ್ದಾಳೆ. ಇದಕ್ಕಾಗಿ ಮನೆಯವರನ್ನು ಕರೆಯಬೇಕು ಎಂದುಕೊಂಡಿದ್ದಾಳೆ.
ಚಾರು ನೋಡಿ ಮನೆಯವರಿಗೆ ಶಾಕ್
ರಾಮಾಚಾರಿ ರೂಮ್‌ಗೆ ಬಂದಿರುವ ಚಾರು ಹ್ಯಾಪಿ ಬರ್ಡ್ ಡೇ ನನ್ನ ಗಂಡ ಎಂದಿದ್ದಾಳೆ. ನಿನ್ನ ಜೊತೆಗೆ ಜೀವನ ಪೂರ್ತಿ ಇದ್ದು ಖುಷಿಯಿಂದ ಜೀವನವನ್ನು ಸಾಗಿಸಬೇಕು ಎಂದು ಅಂದಿದ್ದಾಳೆ. ಈ ವೇಳೆ ರಾಮಾಚಾರಿಯನ್ನು ಎಬ್ಬಿಸಿ ವಿಶ್ ಮಾಡಿದ್ದಾಳೆ. ಇದೇ ವೇಳೆ ವೈಶಾಖ ಮನೆಯವರನ್ನೆಲ್ಲರನ್ನೂ ಸಹ ಕೂಗಿ ಕರೆದಿದ್ದಾಳೆ. ಮನೆಯವರೆಲ್ಲರೂ ಚಾರುವನ್ನ ನೋಡಿ ಶಾಕ್ ಆಗಿದ್ದಾರೆ.

ನಾವು ಸಿಕ್ಕಿ ಬಿದ್ದೆವು ಎಂದುಕೊಂಡು ರಾಮಾಚಾರಿ ಹಾಗೂ ಚಾರುಲತಾ ಕೂಡ ಮನೆಯವರಂತೆಯೇ ಶಾಕ್ ಆಗಿದ್ದಾರೆ. ರಾಮಾಚಾರಿ ಹಾಗೂ ಚಾರು ನೋಡಿದ ಮನೆಯವರು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇವಳು ಈ ಸರಿ ರಾತ್ರಿಯಲ್ಲಿ ನಮ್ಮ ಮನೆಗೆ ಯಾಕೆ ಬಂದಳು ಎಂದು ರಾಮಾಚಾರಿಯ ಬಳಿ ಕೇಳಿದ್ದಾರೆ, ಇದಕ್ಕೆ ರಾಮಾಚಾರಿ ಮೌನವಾಗಿ ನಿಂತಿದ್ದಾನೆ.


Click it and Unblock the Notifications











