Ramachari: ವೈಶಾಖಗೆ ಬುದ್ಧಿ ಮಾತು ಹೇಳಿದ ಚಾರು: ರಾಮಾಚಾರಿ ಮೇಲೆ ಬಾಣ ಬಿಟ್ಟ ಅತ್ತಿಗೆ
ಆಚಾರ್ಯರ ಕುಟುಂಬ ಎಂದರೆ ಸಂತೋಷದಿಂದ ಒಬ್ಬರಿಗೆ ಒಬ್ಬರು ಹೊಂದಾಣಿಕೆ ಮಾಡಿಕೊಂಡು ಸಹಾಯ ಮಾಡಿಕೊಂಡು ಇರುತ್ತಿದ್ದರು. ಆದರೆ ಅಪರ್ಣ ನಿಧನದ ನಂತರ ಏನೇನೋ ಗಲಾಟೆಗಳು ನಡೆದವು. ಇದರಿಂದ ಈಗ ನಾರಾಯಣ ಆಚಾರ್ಯರ ಮನೆಯಲ್ಲಿ ನೆಮ್ಮದಿ ಎನ್ನುವುದೇ ಇಲ್ಲದಂತಾಗಿದೆ. ಕೋದಂಡ ಎರಡನೇ ಮದುವೆ ಮಾಡಿಕೊಂಡು ವೈಶಾಖಳನ್ನ ಕರೆದುಕೊಂಡು ಬಂದ ಮೇಲೆ ನಾರಾಯಣ ಆಚಾರ್ಯರ ಮನೆ ಕುರುಕ್ಷೇತ್ರದಂತಾಗಿದೆ.
ವೈಶಾಖಗೆ ತನ್ನ ಗಂಡನನ್ನೇ ಎಲ್ಲರೂ ಹೊಗಳಬೇಕು, ಅವನಿಗೆ ಮನೆಯ ಜವಾಬ್ದಾರಿಯನ್ನೆಲ್ಲ ಕೊಡಬೇಕು ಅನ್ನುವ ಉದ್ದೇಶ. ತಾಯಿ ಮಗ ಹಾಗೂ ತಂದೆಯ ನಡುವೆ ತಂದು ಇಡುವ ಕೆಲಸ ಮಾಡಿದ್ದಾಳೆ. ಜೊತೆಗೆ ಮೈದುನನ ಮೇಲೆ ಅಪಾರ ದ್ವೇಷವಿದ್ದು ಅವನನ್ನು ಹೇಗಾದರೂ ಮಾಡಿ ಸಿಕ್ಕಿ ಹಾಕಿಸಿಬೇಕು. ಮನೆಯವರ ದೃಷ್ಟಿಯಲ್ಲಿ ಕೆಟ್ಟವನನ್ನಾಗಿ ಮಾಡಬೇಕು ಎಂದು ಹಠ ತೊಟ್ಟಿದು ಆತನ ಚಲನವಲನಗಳ ಮೇಲೆ ವೈಶಾಖ ಕಣ್ಣಿಟ್ಟಿದ್ದಾಳೆ.

ಸದ್ಯಕ್ಕೆ ರಾಮಾಚಾರಿ ಯಾವುದಕ್ಕೂ ಸಹ ಸಿಕ್ಕಿ ಬೀಳದ ಕಾರಣ, ಚಾರು ಹಾಗೂ ರಾಮಾಚಾರಿಯ ಸಂಬಂಧದ ಮೇಲೆ ವೈಶಾಖಗೆ ಅನುಮಾನ ಬಂದಿದೆ. ಹೇಗಾದರೂ ಮಾಡಿ ರಾಮಾಚಾರಿ ಹಾಗೂ ಚಾರು ನಡುವಿನ ಸಂಬಂಧ ಏನು ಎಂದು ತಿಳಿದುಕೊಳ್ಳಬೇಕು, ಅದಕ್ಕಾಗಿ ಏನಾದರೂ ಮಾಸ್ಟರ್ ಪ್ಲಾನ್ ಮಾಡಬೇಕು ಎಂದುಕೊಂಡು ವೈಶಾಖ ತನ್ನ ತಂಗಿ ಖುಷಿಯನ್ನ ಮನೆಗೆ ಕರೆದುಕೊಂಡು ಬಂದಿದ್ದಾಳೆ.
ವೈಶಾಖಗೆ ಬೈದ ಚಾರು
ಪಾರ್ಕಿಗೆ ಬಂದಿರುವ ಚಾರು, ವೈಶಾಖಾಗೆ ಜೋರು ಮಾಡಲೇಬೇಕು ಎಂದುಕೊಂಡು ಇದ್ದಾಳೆ. ಆದರೆ ಸಾನ್ವಿ, ಚಾರುಗೆ ಅವಳು ದೊಡ್ಡ ಬಾಯಾಳಿ ನೀನು ಹೋಗಿ ಸುಮ್ಮನೆ ಅವಳ ಕೈಯಲ್ಲಿ ಬೈಯಿಸಿಕೊಂಡು ಬರಬೇಡ ಎಂದು ಹೇಳಿದ್ದಾಳೆ. ನಾನೇನು ಬೈಸಿಕೊಂಡು ಬರುವುದಿಲ್ಲ, ನಾನು ಅವಳಿಗೆ ಸರಿಯಾದ ಪಾಠ ಕಲಿಸಿ ಬರುತ್ತೇನೆ ಎಂದು ಚಾರು ವೈಶಾಖ ಇರುವಲ್ಲಿಗೆ ಬಂದಿದ್ದಾಳೆ. ಇದೇ ವೇಳೆ ವೈಶಾಖ, ಚಾರುವನ್ನು ಅವಮಾನಿಸಲು ನೋಡಿದಾಗ ಚಾರು, ವೈಶಾಖಳಿಗೆ ಸರಿಯಾದ ರೀತಿಯಲ್ಲಿ ಬೈದಿದ್ದಾಳೆ.

ನೀನು ಒಳ್ಳೆಯ ಮನೆಗೆ ಸೊಸೆಯಾಗಿ ಬಂದಿದ್ದೀಯ, ಆದರೆ ಮನೆಹಾಳು ಮಾಡುವ ಕೆಲಸ ಯಾಕೆ ಮಾಡುತ್ತಿದ್ದೀಯಾ ಎಂದಿದ್ದಾಳೆ. ಅತ್ತೆ ಜಾನಕಿ ಹಾಗೂ ಮಾವನವರನ್ನು ನೀನು ಚೆನ್ನಾಗಿ ನೋಡಿಕೊಳ್ಳಬೇಕು. ಅವರಿಗೆ ಏನಾದರೂ ಎದುರು ಉತ್ತರ ಕೊಟ್ಟರೆ ನಿನ್ನ ಕಥೆ ನೆಟ್ಟಗಿರುವುದಿಲ್ಲ ಎಂದು ಚಾರು, ವೈಶಾಖಗೆ ಬೈದಿದ್ದಾಳೆ. ಇದೇ ವೇಳೆ ಚಾರು ಬಳಿ ಬಯಸಿಕೊಂಡ ಮೇಲೆ ವೈಶಾಖ ಯೋಚನೆ ಮಾಡಿದ್ದಾಳೆ. ಅರೇ ನಾನು ಅವಳ ಮುಂದೆ ಮಂಕಾಗಿ ಹೋದೆನಾ? ಅವಳು ಅಷ್ಟು ಮಾತನಾಡಿದರು, ನಾನು ಯಾಕೆ ಮಾತನಾಡಲಿಲ್ಲ ಎಂದುಕೊಂಡಿದ್ದಾಳೆ.
ಮನೆಗೆ ತಂಗಿ ಕರೆ ತಂದ ವೈಶಾಖ
ವೈಶಾಖ ಮನೆಗೆ ತನ್ನ ತಂಗಿ ಖುಷಿಯನ್ನು ಕರೆದುಕೊಂಡು ಬಂದಿದ್ದಾಳೆ. ರಾಮಾಚಾರಿಯನ್ನು ಎಲ್ಲರೂ ಹೊಗಳುತ್ತಾರೆ, ನಾವು ಮನೆಯಲ್ಲಿ ಯಾರಿಗೂ ಹೇಳದೇ ಮದುವೆ ಮಾಡಿಕೊಂಡು ಬಂದಿದ್ದಕ್ಕೆ ಯಾವುದಾದರೂ ಒಂದು ನೆಪ ಮಾಡಿಕೊಂಡು ತೆಗಳುತ್ತಿದ್ದಾರೆ. ನೀನು ಬಂದು ರಾಮಾಚಾರಿಯ ಮೇಲೆ ಕಣ್ಣಿಡು. ಅವನಿಗೂ ಹಾಗೂ ಚಾರು ಇರುವ ಸಂಬಂಧದ ಬಗ್ಗೆ ತಿಳಿದುಕೋ, ನಾನು ಎಲ್ಲವನ್ನು ಸಹ ಮನೆಯವರ ಮುಂದೆ ತೆರೆದಿಡುತ್ತೇನೆ, ಎಂದು ತಂಗಿ ಖುಷಿಗೆ ವೈಶಾಖ ಹೇಳಿಕೊಟ್ಟಿದ್ದಾಳೆ.

ವೈಶಾಖ ಮೇಲೆ ಚಾಡಿ ಹೇಳಿದ ಅಜ್ಜಿ
ನಾರಾಯಣ ಆಚಾರ್ಯರು ಮನೆಗೆ ಬಂದ ಕೂಡಲೇ ಅಜ್ಜಿ ವೈಶಾಖ ಏನು ಮಾಡುತ್ತಿದ್ಧಾಳೆ ಎಂದು ಹೇಳಿದ್ದಾರೆ. ಇದಕ್ಕೆ ಆಚಾರ್ಯರು ತಾಯಿಗೆ ಸಮಾಧಾನ ಮಾಡಿದ್ದಾರೆ. ಎಲ್ಲಿ ಎಲ್ಲರೂ ನನಗೆ ಹೇಗೆ ಪ್ರಾಮುಖ್ಯತೆ ಕೊಡುತ್ತೀರೋ ಅದೇ ರೀತಿ ವೈಶಾಖ ಅವಳ ಗಂಡನ ಮೇಲೆ ಅಷ್ಟು ಪ್ರೀತಿಯನ್ನು ಇಟ್ಟಿದ್ದಾಳೆ. ಅದಕ್ಕಾಗಿ ಈ ರೀತಿ ತಿಳಿದುಕೊಳ್ಳುವುದು ಬೇಡ.
ಅಲ್ಲಿಗೆ ಬಂದಂತಹ ವೈಶಾಖ ನನ್ನ ಮೇಲೆ ಚಾಡಿ ಹೇಳಿ ಮಾವನ ದೃಷ್ಟಿಯಲ್ಲಿ ನನ್ನನ್ನ ಕೆಟ್ಟವಳನ್ನಾಗಿ ಮಾಡಬೇಕು ಎಂದು ಕೊಂಡಿದ್ದೀರಾ ನಿಮಗೆ ಮಾನ ಮರ್ಯಾದೆ ಇಲ್ವಾ ಎಂದೆಲ್ಲ ಕೂಗಾಡಿದ್ದಾಳೆ. ರಾಮಾಚಾರಿ ಮಧ್ಯ ಪ್ರವೇಶ ಮಾಡಿದ್ದಕ್ಕೆ ಮನೆಯಲ್ಲಿ ಸಾಲದು ಎಂಬಂತೆ ರಸ್ತೆಯಲ್ಲಿ ಸಹ ನನಗೆ ಗೌರವವಿಲ್ಲ. ಅವಳ್ಯಾರು ಚಾರು ನನ್ನನ್ನೇ ಪ್ರಶ್ನೆ ಮಾಡುತ್ತಾಳೆ. ನಮ್ಮ ಮನೆಯಲ್ಲಿ ನಡೆದ ವಿಷಯವೆಲ್ಲ ಅವಳಿಗೆ ಹೇಗೆ ಗೊತ್ತಾಯಿತು. ನಿನಗೂ ಚಾರುಗೂ ಏನು ಸಂಬಂಧ ಎಂದು ರಾಮಾಚಾರಿಯನ್ನೇ ಪ್ರಶ್ನೆ ಮಾಡಿದ್ದಾಳೆ.


Click it and Unblock the Notifications











