Ramachari: ವೈಶಾಖ ಬಳಿ ಚಾರು ಬದಲಾಗಿ ಕ್ಷಮೆ ಕೇಳಿದ ರಾಮಾಚಾರಿ: ಚಾರುಗೆ ಚಾರಿ ಕ್ಲಾಸ್

By ಶೃತಿ ಹರೀಶ್ ಗೌಡ

ರಾಮಾಚಾರಿಗೆ ಈಗ ಚಾರು ಮಾಡಿರುವ ಕೆಲಸದಿಂದ ಮಹಾ ಆಪತ್ತೆ ಒದಗಿ ಬಂದಿತ್ತು ಅದನ್ನು ಹೇಗಾದರೂ ಮಾಡಿ ಪರಿಹಾರ ಮಾಡಬೇಕು ಎಂದುಕೊಂಡು ವೈಶಾಖಳನ್ನ ಹೊರಗೆ ಕರೆದುಕೊಂಡು ಬಂದು ಮಾತನಾಡಿಸುತ್ತಿದ್ದಾನೆ. ವೈಶಾಖ ಮಾತ್ರ ರಾಮಾಚಾರಿಯ ಬಳಿ 108 ಪ್ರಶ್ನೆಗಳನ್ನ ಕೇಳುತ್ತಿದ್ದಾಳೆ. ಆ ಚಾರು ಯಾರು ನನಗೆ ಬೈಯೋದಕ್ಕೆ ಅವಳೇನು ಈ ಮನೆ ಸೊಸೆಯ ಎಂದೆಲ್ಲ ಜೋರಾಗಿ ಕೇಳುತ್ತಿದ್ದಾಳೆ.

ಇದಕ್ಕೆ ರಾಮಾಚಾರಿ ಮೆತ್ತಗೆ ಮಾತನಾಡಿ ಅತ್ತಿಗೆ ಮನೆಯಲ್ಲಿ ಚಾರು ಹೆಸರು ತೆಗೆದಾಗಲಿಲ್ಲ ಏನಾದರೂ ಒಂದು ಜಗಳ ಆಗುತ್ತಿದೆ ದಯವಿಟ್ಟು ಈಗ ಆಗುತ್ತಿರುವುದೇ ಸಾಕು ಮತ್ತೊಮ್ಮೆ ಜಗಳ ಆಗುವ ರೀತಿ ಮಾತನಾಡಬೇಡಿ ಕೇಳುತ್ತಿದ್ದಾನೆ. ಇದಕ್ಕೆ ವೈಶಾಖ ನನಗೆ ಆ ಚಾರು ಏನೆಲ್ಲಾ ಮಾತನಾಡಿದಳು ಗೊತ್ತಾ ಎಂದೆಲ್ಲಾ ರಾಮಾಚಾರಿಗೆ ಹೇಳುತ್ತಿದ್ದಾಳೆ.

Colors Kannada Ramachari serial Written Update on May 31st episode

ಅವರಿಗೆ ಸಂಯಮ ಕಡಿಮೆ ಏನೇನು ಮಾತನಾಡುತ್ತಾರೆ. ನಾನು ಚಾರು ಬಳಿ ಚಾಡಿಯನ್ನು ಹೇಳಿಲ್ಲ ಎಂದು ಅತ್ತಿಗೆಯನ್ನ ಸಮಾಧಾನ ಮಾಡುತ್ತಿದ್ದಾನೆ. ಆದರೆ ವೈಶಾಖ ಮಾತ್ರ ಜೋರಾಗಿ ಮಾತನಾಡುತ್ತ ರಾಮಾಚಾರಿಗೆ ಬಯ್ಯುತ್ತಿದ್ದಾಳೆ. ದಯವಿಟ್ಟು ನಿಮಗೆ ಕೈ ಮುಗಿಯುತ್ತೇನೆ ನಾನು ಚಾರು ಬಳಿ ಮಾತನಾಡಿ ನಿಮ್ಮ ತಂಟೆಗೆ ಬರದಂತೆ ಮಾಡುತ್ತೇನೆ ಎಂದು ಹೇಳಿದ ಮೇಲೆ ಆಯ್ತು ಎಂದು ವೈಶಾಖ ಒಪ್ಪಿಕೊಂಡಿದ್ದಾಳೆ.

ವೈಶಾಖ ಹಾಗೂ ಖುಷಿ ಇಬ್ಬರು ಕುಳಿತುಕೊಂಡು ಚಾರು ಮಾತು ರಾಮಾಚಾರಿಯ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ ಆ ಚಾರು ಹಾಗೂ ರಾಮಾಚಾರಿಗೂ ಏನು ಸಂಬಂಧ ಎಂದು ನಾವು ತಿಳಿದುಕೊಳ್ಳಬೇಕು ಎಂದು ವೈಶಾಖ ಹೇಳಿದಾಗ ಖುಷಿ ಆಕೆಯ ಅಡ್ರೆಸ್ ಹಾಗೂ ಫೋನ್ ನಂಬರನ್ನು ಕಳಿಸು ಮಿಕ್ಕಿದ್ದನ್ನ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಇದಕ್ಕೆ ವೈಶಾಖ ಆಯ್ತು ಎಂದು ಚಾರು ಮನೆಯ ಅಡ್ರೆಸ್ ಹಾಗೂ ಆಫೀಸ್ ಆಡ್ರೆಸ್ ಎರಡನ್ನು ಕೊಟ್ಟಿದ್ದಾಳೆ.

ಅಡ್ರೆಸ್ ತಗೆದುಕೊಂಡ ಖುಷಿ ನಾನೇ ಹೋಗುತ್ತೇನೋ ಅಥವಾ ಬೇರೆಯವರನ್ನು ಕಳಿಸುತ್ತೇನೆ. ನನ್ನ ಬುದ್ಧಿವಂತಿಕೆಗೆ ಆ ಚಾರು ಮರುಳಾಗಿ ಅವಳ ಹಾಗೂ ರಾಮಾಚಾರಿ ನಡುವೆ ಇರುವ ಸಂಬಂಧದ ಬಗ್ಗೆ ಹೇಳಿಕೊಳ್ಳಬೇಕು ಆ ರೀತಿ ನಾನು ಮಾಡುತ್ತೇನೆ ಎಂದು ತನ್ನ ಅಕ್ಕ ವೈಶಾಖಾಗೆ ಪ್ರಾಮಿಸ್ ಮಾಡಿದ್ದಾಳೆ. ಭಾವನನ್ನ ಮನೆಯವರ ಮುಂದೆ ಒಳ್ಳೆಯವರನ್ನಾಗಿ ಮಾಡಿ ರಾಮಾಚಾರಿಗೆ ಚಳ್ಳೆಹಣ್ಣು ತಿನ್ನಿಸುತ್ತೇನೆ ಎಂದು ಹೇಳಿದ್ದಾಳೆ.

ರಾಮಾಚಾರಿಯ ಮನೆಗೆ ಪದ್ಮನಾಭ ಕುಟುಂಬ ಬಂದು ರಾಮಾಚಾರಿ ಹಾಗೂ ದೀಪಾಳ ಎಂಗೇಜ್ಮೆಂಟನ್ನು ಮುಂದಕ್ಕೆ ಹಾಕೋಣ ಎಂದು ನಾರಾಯಣ ಆಚಾರ್ಯರ ಮುಂದೆ ಹೇಳುತ್ತಿದ್ದಾರೆ. ಯಾಕೆ ನಾರಾಯಣ ಆಚಾರ್ಯರು ತಲೆಯ ಮೇಲೆ ಕುಳಿತು ನೀವೇ ತಾನೇ ಎಂಗೇಜ್ಮೆಂಟ್ ಗೆ ದಿನಾಂಕವನ್ನು ನಿಗದಿ ಮಾಡಿಸಿದ್ದು ಈಗ ಏನು ಆಯಿತು ಎಂದೆಲ್ಲ ಕೇಳುತ್ತಿದ್ದಾರೆ.

ಭಾನುವಾರ ಆದರೆ ಎಲ್ಲರೂ ಬರುತ್ತಾರೆ ಅದಕ್ಕಾಗಿ ಎಂಗೇಜ್ಮೆಂಟ್ ಅನ್ನು ರಜಾದ ದಿನ ಮಾಡೋಣ ಎಂದು ಪದ್ಮನಾಭ ಸಮಾಜಾಯಿಷಿ ನೀಡುತ್ತಿದ್ದಾನೆ. ನಂತರ ದೀಪಾಳಿಗೆ ಶುಕ್ರವಾರ ಆಗಿ ಬರುವುದಿಲ್ಲ ಅದಕ್ಕಾಗಿ ಎಂಗೇಜ್ಮೆಂಟ್ ಅನ್ನು ಮುಂದಕ್ಕೆ ಹಾಕೋಣ ಎಂದು ನಾರಾಯಣ ಆಚಾರ್ಯರ ಮುಂದೆ ಹೇಳಿದಾಗ ದೀಪಾ ಜಾತಕ ತೆಗೆದುಕೊಂಡು ಬಾ ನೋಡೋಣ ಎಂದು ಹೇಳಿದ್ದಾರೆ.

ಚಾರುಗೆ ರಾಮಾಚಾರಿ ಬೈದಿದ್ದಾನೆ ವೈಶಾಖ ಅತ್ತಿಗೆಗೆ ಆ ರೀತಿ ಮಾತನಾಡು ಎಂದು ಯಾರು ಹೇಳಿದರು ಎಂದೆಲ್ಲ ಕೇಳಿದ್ದಾನೆ. ಇದಕ್ಕೆ ನನ್ನ ಗಂಡನ ಕುಟುಂಬಕ್ಕೆ ತೊಂದರೆ ಕೊಟ್ಟರೆ ನಾನು ಯಾರನ್ನು ಬಿಡುವುದಿಲ್ಲ ಎಂದು ಚಾರು ಹೇಳಿದ್ದಾಳೆ. ನನಗೆ ನಾನು ಸೊಸೆಯಾಗಿ ಬಂದ ಮೇಲೆ ಅವಳಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಚಾರು ಹೇಳಿದ್ದಾಳೆ.

ದಯವಿಟ್ಟು ನಿಲ್ಲಿಸಿ ಎಂದು ರಾಮಾಚಾರಿ ಚಾರುವಿನ ಬಳಿ ಹೇಳಿದ್ದಾನೆ. ಸಂಸಾರ ಎಂಬುದು ರಣರಂಗವಲ್ಲ ಎಂದು ಚಾರುಗೆ ಬುದ್ಧಿಯನ್ನ ಹೇಳಿದ್ದಾನೆ.ಈ ವೇಳೆ ಚಾರು ಶುಕ್ರವಾರ ಎಂಗೇಜ್ಮೆಂಟ್ ಇದೆ ನೀನು ಬಂದು ತಡೆಯದಿದ್ದರೆ ನಾನು ವಿಷ ಕುಡಿಯುತ್ತೇನೆ ಎಂದು ರಾಮಾಚಾರಿಗೆ ಚಾರು ಹೇಳಿದ್ದಾಳೆ.

More from Filmibeat

English summary
Colors Kannada serial Ramachari here details about Ramachari explain the problem about vaishaka padmanabha comes to narayana achar home cancelled the engagement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X