Ramachari: ನೂರಾರು ಪ್ರಶ್ನೆ ಕೇಳುತ್ತಿರುವ ವೈಶಾಖ: ಬೇಕಂತಲೆ ರಾಮಾಚಾರಿಗೆ ಅವಮಾನ

By ಶೃತಿ ಹರೀಶ್ ಗೌಡ

ರೂಮಿನಲ್ಲಿ ಚಾರುವನ್ನು ನೋಡಿದ ರಾಮಾಚಾರಿಗೆ ಬಹಳ ಸಿಟ್ಟು ಬಂದಿದೆ. ಏನು ಮೇಡಂ ನೀವು ನನಗೆ ನೆಮ್ಮದಿ ಕೊಡೋದೆ ಇಲ್ಲ ಎಂದು ಹೇಳಿದ್ದಾನೆ. ನೀವು ಹೀಗೆ ಮಾಡುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ. ಮನೆಯಲ್ಲಿ ಈಗಲೇ ಉರಿಯುತ್ತಿರುವ ಬೆಂಕಿ ಇನ್ನೂ ಹಾರಿಲ್ಲ. ಅದಕ್ಕೆ ತುಪ್ಪ ಸುರಿವ ಕೆಲಸವನ್ನು ಮಾಡಬೇಡಿ ಎಂದು ಚಾರುಗೆ ರಾಮಾಚಾರಿ ಬೈದಿದ್ದಾನೆ.

ಮೊದಲು ಯಾರಾದರೂ ನೋಡುವ ಮುಂಚೆ ನೀವು ರೂಮಿನಿಂದ ಹೊರಗೆ ಹೋಗಿ ಎಂದು ಚಾರುವನ್ನು ಕೈಹಿಡಿದು ಕರೆದುಕೊಂಡು ಬರುತ್ತಿದ್ದಾನೆ. ಈ ವೇಳೆ ವೈಶಾಖ ಮನೆಯಲ್ಲಿ ಎಲ್ಲರನ್ನು ಸಹ ಹಾಲ್‌ಗೆ ಕರೆದಿದ್ದಾಳೆ. ಚಾರುವನ್ನ ನೋಡಿದ ಮನೆಯವರಿಗೆ ಶಾಕ್ ಆಗಿದೆ. ಈ ಕಡೆ ರಾಮಾಚಾರಿ ಹಾಗೂ ಚಾರುಗೂ ಕೂಡ ತುಂಬಾನೇ ಶಾಕ್ ಆಗಿದೆ. ಏನು ಮಾತನಾಡಬೇಕು ಎಂದು ಯಾರಿಗೂ ತಿಳಿಯುತ್ತಿಲ್ಲ.

Colors Kannada Ramachari serial Written Update on may 3rd episode

ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ವೈಶಾಖ, ರಾಮಾಚಾರಿಗೆ ಬೇಕು ಬೇಕು ಅಂತಲೇ ಅವಮಾನದ ಮಾತುಗಳನ್ನ ಆಡುತ್ತಿದ್ದಾಳೆ. ಏನು ರಾಮಾಚಾರಿ ಇಷ್ಟು ಹೊತ್ತಿನಲ್ಲಿ ನಿನ್ನ ರೂಮಿನಲ್ಲಿ ಓರ್ವ ಹುಡುಗಿ ಇದ್ದಾಳೆ, ಎಂದರೆ ಏನು ಅರ್ಥ ನೀನೇ ಕರೆದುಕೊಂಡು ಬಂದೆಯೋ ಎಂದೆಲ್ಲ ಮಾತನಾಡುತ್ತಿದ್ದಾಳೆ. ಇದೆಲ್ಲವನ್ನು ಸಹ ಸಾನ್ವಿ ಕಿಟಕಿಯಿಂದಲೇ ಕೇಳಿಸಿಕೊಳ್ಳುತ್ತಿದ್ದಾಳೆ. ಸಾನ್ವಿಗೆ ಭಯವಾಗುತ್ತಿದೆ.

ಚಾರು ರೂಮ್‌ಗೆ ಬಂದ ಜೈ ಶಂಕರ್

ರಾಮಾಚಾರಿ ಮನೆಗೆ ಚಾರು ಬಂದಿದ್ದಾಳೆ. ಇನ್ನೂ ಸರ್ವೇಶ ಹಾಗೂ ಚಿಂಟು ಇಬ್ಬರು ಹೋಗಿದ್ದಾರೆ. ಈ ವೇಳೆ ಚಾರು ಅಲ್ಲಿ ಇಲ್ಲದ್ದನ್ನು ಕಂಡು ಸುಮ್ಮನೆ ಆಗಿದ್ದಾರೆ. ಆದರೆ, ಜೈ ಶಂಕರ್ ಬಳಿ ಮಾನ್ಯತಾ ಏನೇನೋ ಹೇಳಿ ಪ್ರಶ್ನೆ ಮಾಡುವಂತೆ. ಇದಕ್ಕಾಗಿ ಜಯಶಂಕರ್ ಚಾರುವನ್ನು ಪ್ರಶ್ನೆ ಮಾಡಲು ರೂಂಗೆ ಬಂದಿದ್ದಾರೆ. ಆದರೆ ರೂಮಿನಲ್ಲಿ ಚಾರು ಮಲಗಿರುವಂತೆ ಚಿಂಟು ಎಲ್ಲಾ ಅರೇಂಜ್‌ಮೆಂಟ್ ಮಾಡಿದ್ದಾನೆ.

Colors Kannada Ramachari serial Written Update on may 3rd episode

ಮಾನ್ಯತಾ ಹಾಗೂ ಜೈ ಶಂಕರ್ ರೂಮಿಗೆ ಬಂದಾಗ ಅಕ್ಕ ಗಾಡ ನಿದ್ರೆಯಲ್ಲಿ ಇದ್ದಾಳ ಅವಳನ್ನು ಎಬ್ಬಿಸಲು ಹೋಗಬೇಡಿ ಎಂದೆಲ್ಲ ಹೇಳಿದ್ದಾನೆ. ಆದರೆ ಸರ್ವೇಶನಿಗೆ ಎಲ್ಲಿ ಅವರು ಎಬ್ಬಿಸಿ ನಮ್ಮ ಸುಳ್ಳು ಹೊರಗೆ ಬರುತ್ತದೆ ಎಂದು ಭಯವಾಗುತ್ತಿದೆ. ಇದೇ ವೇಳೆ ಜೈ ಶಂಕರ್‌ಗೆ ಚಿಂಟು ಹೇಳಿದ ಮಾತೇ ಸರಿ ಎನಿಸಿ ಬೆಳಿಗ್ಗೆ ಚಾರು ಬಳಿ ಮಾತನಾಡುತ್ತೇನೆ ಎಂದು ರೂಮಿಂದ ಹಾಲು ತೆಗೆದುಕೊಂಡು ವಾಪಸ್ ಹೋಗಿದ್ದಾರೆ.

ಕೊಂಕು ಮಾತನಾಡಿದ ವೈಶಾಖ

ರಾಮಾಚಾರಿ ಹಾಗೂ ಚಾರು ಇಬ್ಬರು ಸಿಕ್ಕಿ ಬಿದ್ದಿದ್ದು, ಆಚಾರ್ಯರು ಇದೇನು ರಾಮಾಚಾರಿ ಎಂದು ಕೇಳಿದ್ದಾರೆ. ಇದಕ್ಕೆ ವೈಶಾಖಳೇ ಮಧ್ಯ ಪ್ರವೇಶ ಮಾಡಿ ನಿಮ್ಮ ಮಗನಿಗೆ ಒಂದು ನ್ಯಾಯ ನನ್ನ ಗಂಡನಿಗೆ ಒಂದು ನ್ಯಾಯ ಎಂದೆಲ್ಲ ಮಾತನಾಡಿದ್ದಾಳೆ. ಕಿವಿ ಕಿತ್ತರು ಕಿರಿ ಮಗನ ಮೇಲೆ ಪ್ರೀತಿ ಎಂಬಂತೆ ನೀವು ಇಲ್ಲಿ ಮಾಡುತ್ತಿದ್ದೀರಿ ಎಂದು ಹೇಳಿದ್ದಾಳೆ.

Colors Kannada Ramachari serial Written Update on may 3rd episode

ಇದಕ್ಕೆ ಮಧ್ಯ ಪ್ರವೇಶ ಮಾಡಿದ ಅಜ್ಜಿ ಮೊದಲು ಏನೇನು ತಿಳಿದುಕೊಳ್ಳೋಣ ನಮ್ಮ ನಮ್ಮಲ್ಲೇ ನಾವು ಮಾತನಾಡಿಕೊಂಡರೆ ಸತ್ಯ ಏನು ಎಂದು ತಿಳಿಯೋದಿಲ್ಲ ಅಂದಿದ್ದಾರೆ. ಆದರೆ ಅಜ್ಜಿಯ ಮಾತಿಗೂ ಸಹ ವೈಶಾಖ ಕೊಂಕು ಆಡಿದ್ದಾಳೆ. ಅಂಗೈ ಉಣ್ಣಿಗೂ ಕನ್ನಡಿ ಬೇಕಾ ಅಜ್ಜಿ ಎಂದು ಹೇಳಿದ್ದಾಳೆ. ಇದಕ್ಕೆ ನಾರಾಯಣ ಆಚಾರ್ಯರು ಹೌದು ಒಮ್ಮೊಮ್ಮೆ ಹುಣ್ಣಿಗೂ ಕನ್ನಡಿ ಬೇಕಾಗುತ್ತದೆ. ನಾವು ತಿಳಿದುಕೊಂಡಿದ್ದಷ್ಟೇ ಸತ್ಯವಲ್ಲ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ಬಾಯಿ ತೆರೆದ ಚಾರು

ಎಲ್ಲರೂ ಕೇಳುತ್ತಿರುವ ಪ್ರಶ್ನೆಗೆ ಉತ್ತರವನ್ನು ನೀಡಲು ಚಾರು ಬಾಯಿ ತೆಗೆದಿದ್ದಾಳೆ. ನೀವು ಈಗ ಹೇಳಿದ್ದೆಲ್ಲವು ಸತ್ಯ ಎಂದು ಒಗಟಿನಂತೆ ಮಾತನಾಡಿದ್ದಾಳೆ. ಇದನ್ನು ನೋಡಿದ ಸಾನ್ವಿಗೆ ಎಲ್ಲಿ ಚಾರು ಸತ್ಯವನ್ನು ಹೇಳಿಬಿಡುತ್ತಾಳೆ ಎಂದು ಭಯವಾಗಿದೆ. ನಂತರ ಶಾರು ಉಲ್ಟಾ ಮಾತನಾಡಿದ್ದಾಳೆ. ರಾಮಾಚಾರಿಗೂ ಸಹ ಚಾರು ಬಾಯಿಮುಚ್ಚಿಸಿದ್ದಾಳೆ. ನಾನು ಮಾತನಾಡುತ್ತೇನೆ ರಾಮಾಚಾರಿ ನೀನು ಸುಮ್ಮನೆ ಇರು ಎಂದಿದ್ದಾಳೆ.

More from Filmibeat

English summary
Colors Kannada Ramachari serial Written Update on may 3rd episode. here details about charulatha and ramachari in trouble, ramachari thinking about vyshaka speech, charu in confusing. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X