Ramachari: ಸತ್ಯ ಹೇಳಿ ಬಿಡ್ತಾಳಾ ಚಾರು? ರಾಮಾಚಾರಿಗೆ ಟೆನ್ಶನ್ನೋ ಟೆನ್ಶನ್ನು..?!
ವೈಶಾಖ ರಾಮಾಚಾರಿ ಹಾಗೂ ಚಾರುವನ್ನು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಾಳೆ ಎಲ್ಲೋ ಕದ್ದಿ ಮುಚ್ಚಿ ಹೋಗಿ ಮದುವೆ ಮಾಡಿಕೊಂಡು ಬಿಟ್ಟಿದ್ದೀರಾ ಎಂದೆಲ್ಲ ಮೂದಲಿಸುತ್ತಿದ್ದಾಳೆ. ಇದೆಲ್ಲವನ್ನು ಕೇಳುತ್ತಿರುವ ರಾಮಾಚಾರಿಗೆ ಸತ್ಯ ಎಲ್ಲಿ ಗೊತ್ತಾಗುತ್ತದೆ ಎಂಬ ಭಯ ಆವರಿಸಿದೆ. ಆದರೆ ಚಾರು ಮಾತ್ರ ವೈಶಾಖಾಗೆ ಸರಿಯಾಗಿಯೇ ಮಾತನ್ನು ಆಡುತ್ತಿದ್ದಾಳೆ.
ಯಾರು ಯಾತಕ್ಕಾಗಿ ನಾನು ರಾಮಾಚಾರಿ ರೂಮಿಗೆ ಹೋದೆ ಎಂಬ ಬಗ್ಗೆ ಮನೆಯವರಿಗೆ ಉತ್ತರವನ್ನು ನೀಡುತ್ತಿದ್ದಾಳೆ ನಾನು ರಾಮಾಚಾರಿ ಫ್ರೆಂಡ್ಸ್ ಅದಕ್ಕಾಗಿ ನಾನು ರಾಮಾಚಾರಿ ಕೇಕ್ ಕಟ್ ಮಾಡಿಸಲು ಮನೆಗೆ ಬಂದೆ ನಿಮ್ಮ ಮನೆಯ ಮಗನ ಬರ್ತ್ ಡೇ ಬಗ್ಗೆ ನಿಮಗೆ ಗೊತ್ತಿಲ್ಲ ಎಂದೆಲ್ಲ ಹೇಳಿದ್ದಾಳೆ ಇದಕ್ಕೆ ವೈಶಾಖ ಹಿಂದಿನ ಬಾಗಿಲಿನಿಂದ ಬಂದಿದ್ದು ಯಾಕೆ ಎಂದೆಲ್ಲಾ ಕೇಳಿದ್ದಾಳೆ. ಕೊಡಬೇಕಾದರೆ ಹೀಗೆಲ್ಲಾ ಮಾಡಬೇಕಾಗುತ್ತದೆ ಎಂದು ಚಾರು ತಿರುಗೇಟು ನೀಡಿದ್ದಾಳೆ.

ಮನೆಯವರೆಲ್ಲರೂ ಸಹ ಚಾರು ಆಡುತ್ತಿರುವ ಮಾತನ್ನು ಕೇಳುತ್ತಿದ್ದಾರೆ ಹೇಳಿದ್ದಾಳೆ ಇದಕ್ಕೆ ಅಜ್ಜಿ ಸರಿ ಎಂದಿದ್ದಾರೆ ನಾನು ಕೇಕ್ ಅನ್ನ ಕಟ್ ಮಾಡಿಸಲು ತಂದೆ ಆಫೀಸ್ನವರೆಲ್ಲರೂ ಸಹ ಬರುತ್ತಿದ್ದರು ಅವರು ಬರೆದಿದ್ದೆ ಸರಿ ಆಯಿತು ಅವರು ಏನಾದರೂ ಬಂದಿದ್ದರೆ ನೀವು ಈ ರೀತಿ ತಲೆ ಬುಡ ಇಲ್ಲದ ಪ್ರಶ್ನೆ ಕೇಳಿ ರಾಮಾಚಾರಿ ಯ ಗೌರವವನ್ನು ಹಾಳು ಮಾಡುತ್ತಿದ್ದೀರಿ ಎಂದು ಚಾರು ಹೇಳಿದ್ದಾಳೆ.
ಚಾರು ಮಾತು ಕೇಳಿ ವೈಶಾಖ ಶಾಕ್
ಚಾರು ಈ ಕಡೆ ಮಾತನಾಡುತ್ತಿದ್ದರೆ ವೈಶಾಖ ಮಾತ್ರ ಏನೋ ಮಾಸ್ಟರ್ ಪ್ಲಾನ್ ಅನ್ನು ಮಾಡಿಕೊಂಡು ಕೇಕ್ ಅನ್ನ ತರಲು ಹೋಗಿದ್ದಾಳೆ ಕೇಕ್ ಮೇಲೆ ಹುಟ್ಟು ಹಬ್ಬದ ಶುಭಾಶಯಗಳು ನನ್ನ ಗಂಡ ಎಂದು ಚಾರು ಬರೆಸಿದ್ದಾಳೆ.

ಇದನ್ನೆಲ್ಲಾ ನೋಡಿದ ವೈಶಾಖ ಇದೇ ಸರಿಯಾದ ಸಮಯ ಗುಟ್ಟನ್ನ ರಟ್ಟು ಮಾಡಲು ನನಗೆ ಬಾಯಿಗೆ ಬಂದಂತೆ ಮಾತನಾಡುತ್ತಾಳೆ ಎಂದಿಲ್ಲ ಅಂದುಕೊಂಡಿದ್ದಾಳೆ. ಎಲ್ಲರ ಮುಂದೆ ಈಗ ರಾಮಾಚಾರಿ ಹಾಗೂ ಚಾರು ಮದುವೆಯ ಬಗ್ಗೆ ನಾನೇ ಹೇಳಬೇಕು ಎಂದಿಲ್ಲ ಪ್ಲಾನ್ ಮಾಡಿಕೊಂಡು ರೂಮಿನಿಂದ ಹಾಲ್ ಗೆ ವೈಶಾಖ ಬರುತ್ತಿದ್ದಾಳೆ. ಕೇಕ್ ಮೇಲೆ ಇರುವುದನ್ನು ಎಲ್ಲರಿಗೂ ತೋರಿಸಬೇಕು ಅಂದುಕೊಂಡಿದ್ದಾಳೆ.
ಚಳ್ಳೆ ಹಣ್ಣು ತಿನ್ನಿಸಿದ ಚಾರು
ಕೇಕ್‌ನ್ನು ಹಾಲ್‌ಗೆ ತರುವ ವೇಳೆ ಸಾನ್ವಿ ಮನೆಯ ಮೇಬ್ ಪ್ಲಗ್ ಅನ್ನು ತೆಗೆದು ಲೈಟ್ ಆಫ್ ಮಾಡಿದ್ದಾಳೆ. ಇದೆ ವೇಳೆ ಚಾರು ಕೇಕ್ ಮೇಲೆ ನನ್ನ ಗಂಡ ಎಂದು ಬರೆಸಿದ್ದ ಹೆಸರನ್ನು ಕಳಿಸಿ ಹಾಕಿದ್ದಾಳೆ. ನಂತರ ಲೈಟ್ ಆನ್ ಆಗಿದ್ದು ವೈಶಾಖ ಕೋದಂಡನಿಗೆ ಕೇಕ್ ಮೇಲೆ ಏನು ಬರೆದಿದೆ ಓದಿ ಎಂದು ಹೇಳಿದ್ದಾಳೆ. ಇದಕ್ಕೆ ಕೋದಂಡ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದಿದೆ ಎಂದಿದ್ದಾನೆ. ಸರಿಯಾಗಿ ಓದಿ ಎಂದಾಗಲು ಅದೇ ಇರುವುದು ಎಂದು ಕೋದಂಡ ಹೇಳಿದ್ದಾನೆ.

ಸಂಭ್ರಮದಿಂದ ಕೇಕ್ ಕಟ್
ಸದ್ಯಕ್ಕೆ ರಾಮಾಚಾರಿ ಹಾಗೂ ಚಾರು ಇಬ್ಬರು ಗುಟ್ಟಾಗಿ ಆಗಿರುವ ಮದುವೆ ರಹಸ್ಯ ರಟ್ಟಾಗಿಲ್ಲ ಚಾರು ಮಾಡಿದ ಮ್ಯಾನೇಜ್‌ನಿಂದ ಎಲ್ಲ ಸಹ ಸುಖಾಂತ್ಯ ಕಂಡಿದೆ ಮನೆಯವರ ಎದುರೇ ರಾಮಾಚಾರಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಇದು ಚಾರುಗೆ ಎಲ್ಲಿಲ್ಲದ ಖುಷಿಯನ್ನು ತಂದಿದೆ.
ಆದರೆ ರಾಮಾಚಾರಿ ಮಾತ್ರ ಚಾರು ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳಬೇಕು ಎಂದು ಯೋಚನೆಯನ್ನ ಮಾಡುತ್ತಿದ್ದಾನೆ ಇದಕ್ಕೆ ಮುರಾರಿ ಸುಮ್ಮನೆ ಇರುವಂತೆ ಹೇಳಿದ್ದಾನೆ. ಹುಟ್ಟು ಹಬ್ಬದ ದಿನವಾದರೂ ಒಳ್ಳೆಯ ಮಾತನಾಡು ಯಾವಾಗಲೂ ಸಂಬಂಧ ಮುರಿದುಕೊಳ್ಳುವ ಬಗ್ಗೆ ಯಾಕೆ ಯೋಚನೆ ಮಾಡುತ್ತೀಯಾ ಎಂದು ಮುರಾರಿ ಬುದ್ದಿಯನ್ನು ಹೇಳಿದ್ದಾನೆ.


Click it and Unblock the Notifications











