Ramachari: ರಾಮಾಚಾರಿ ಎಷ್ಟೇ ದೂರ ದೂರ ಹೋದರು ಬಿಡದ ಚಾರು

ಮನೆಯವರೆಲ್ಲರೂ ಸಹ ರಾಮಾಚಾರಿಯ ಮೇಲೆ ಭರವಸೆಯನ್ನು ಇಟ್ಟಿದ್ದಾರೆ ಇದನ್ನು ಉಳಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ರಾಮಾಚಾರಿ ಇದ್ದಾನೆ. ಆದರೆ ಚಾರು ಮಾತ್ರ ರಾಮಾಚಾರಿಯೇ ನನ್ನ ಗಂಡ ಎಂದು ಅಂದುಕೊಂಡು ರಾಮಾಚಾರಿಯ ಹಿಂದೆಯೇ ಬಿದ್ದಿದ್ದಾಳೆ. ಇದು ರಾಮಾಚಾರಿಗೆ ಸಹಿಸಲು ಕಷ್ಟವಾಗುತ್ತಿದೆ. ಚಾರು ಹಠಮಾರಿತನದಿಂದ ತನ್ನನ್ನು ಒಲಿಸಿಕೊಳ್ಳುತ್ತಿದ್ದಾಳೆ ಎಂದು ರಾಮಾಚಾರಿಗೆ ಅನಿಸಿದೆ. ಅವನು ಗೊಂದಲದಲ್ಲಿದ್ಧಾನೆ.

ಚಾರುವನ್ನು ರಾಮಾಚಾರಿ ಎಷ್ಟೇ ದೂರ ಮಾಡಿಕೊಳ್ಳಬೇಕು ಎಂದರು ಸಹ ಆಗುತ್ತಿಲ್ಲ. ಇದಕ್ಕಾಗಿ ನಾನಾ ರೀತಿಯಲ್ಲಿ ಕಸರತ್ತು ನಡೆಸಿ ಸೋಲು ಕಂಡಿದ್ದಾನೆ. ತಾನೇ ಕಟ್ಟಿರುವ ತಾಳಿಯನ್ನು ಬಿಚ್ಚಲು ಹೋದಾಗ ಚಾರು ವಿಷವನ್ನು ಕುಡಿಯುವ ನಾಟಕವಾಡಿದಳು. ನಾಟಕವೆಂದು ತಿಳಿಯದ ರಾಮಾಚಾರಿ ಅವಳನ್ನು ಉಳಿಸಬೇಕು ಎಂದು ಹೋಗಿ ಮಾನ್ಯತಾ ಬಳಿ ಬೈಯಿಸಿಕೊಳ್ಳುವುದು ತಪ್ಪಲಿಲ್ಲ. ಅಲ್ಲಿಯೂ ಸಹ ರಾಮಾಚಾರಿ ಅವಮಾನವನ್ನು ಅನುಭವಿಸುವಂತೆ ಆಯಿತು.

Colors Kannada Ramachari serial Written Update on may 5th episode

ನಿಜವಾಗಿಯೂ ವಿಷ ಕುಡಿದ ಚಾರು

ರಾಮಾಚಾರಿ ನನಗೆ ನಾನಾಗಿರಲು ಬಿಡಿ ಎಂದು ಚಾರು ಬಳಿ ಹೇಳಿದ್ದಾನೆ. ಆದರೆ ಚಾರು ಮಾತ್ರ ರಾಮಾಚಾರಿಯನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ರಾಮಾಚಾರಿ ಚಾರುಗೆ ಬೆನ್ನು ಮಾಡಿ ಹೊರಟಿದ್ದಾನೆ. ಈ ವೇಳೆ ಚಾರು, ರಾಮಾಚಾರಿ ಬಳಿ ವಿಷ ಕುಡಿಯುತ್ತೇನೆ ಎಂದು ಹೇಳುತ್ತಿದ್ದಾಳೆ. ಆದರೆ ರಾಮಾಚಾರಿ ತಿರುಗಿ‌ ನೋಡದಂತೆ ಪಾರ್ಕಿನಿಂದ ಹೊರಗೆ ಹೋಗುತ್ತಿದ್ದಾನೆ.

ಮುರಾರಿ ಹೇಳುತ್ತಿದ್ದರು ಸಹ ರಾಮಾಚಾರಿ ಕೇಳುತ್ತಿಲ್ಲ. ನೋಡೋ‌ ವಿಷ ಕುಡಿದು ಸಾಯುತ್ತೇನೆ ಎಂದೆಲ್ಲ ಅನ್ನುತ್ತಿದ್ದಾರೆ ಎಂದರು ರಾಮಾಚಾರಿ ಸಾಯೋರು‌ ಯಾರು ಹೇಳಿ ಸಾಯೋದಿಲ್ಲ ಬಾ ಎಂದು ಮುರಾರಿಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಚಾರು ನಿಜವಾಗಿಯೂ ವಿಷವನ್ನು ತಗೆದುಕೊಂಡಿದ್ದಾಳೆ.

ಕೆಳಗೆ ಬಿದ್ದ ಚಾರುಲತಾ

ಚಾರು ವಿಷ ಕುಡಿದು ಕೆಳಗೆ ಬಿದ್ದಿದ್ದಾಳೆ. ರಾಮಾಚಾರಿ ತಿರುಗಿ ನೋಡದ್ದನ್ನು ಸಾನ್ವಿ ನೋಡಿದ್ದು, ಅವನು ತಿರುಗಿಯು ಸಹ ನೋಡಿಲ್ಲ ಇವಳು ನೋಡಿದ್ರೆ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ ಎಂದು ಅಂದುಕೊಂಡಿದ್ದಾಳೆ. ಈಗ ಮಾನ್ಯತಾ‌ಗೆ ಫೋನ್ ಮಾಡೋಣ ಅಂದ್ರೆ ವಿಷಯ ತಿಳಿದ ಮಾನ್ಯತಾ ಏನು ಮಾಡುತ್ತಾಳೋ ಎಂಬ ಭಯ ಆವರಿಸಿದೆ.

Colors Kannada Ramachari serial Written Update on may 5th episode

ಈಗ ಸಾನ್ವಿಗೆ ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ. ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾಳೆ. ಚಾರು ವಿಷಯ ಕುಡಿದಿರುವ ಹಿನ್ನೆಲೆಯಲ್ಲಿ ಯಾಕೆ ಕುಡಿದಳು ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗಲಿದ್ದು, ಚಾರು ಮತ್ತು ರಾಮಾಚಾರಿ ಮದುವೆಯಾಗಿರುವ ವಿಷಯ ತಿಳಿಯುತ್ತಾ ಕಾದು ನೋಡಬೇಕಾಗಿದೆ.

ಮದುವೆ ವಿಷಯ ತಿಳಿದರೆ ಗತಿಯೇನು..?!

ಚಾರು ಹಾಗೂ ರಾಮಾಚಾರಿ ಮದುವೆ ವಿಷಯ ತಿಳಿದು ಹೋದರೆ ನಾರಾಯಣಾಚಾರ್ಯ ತಡೆದುಕೊಳ್ಳುವುದಿಲ್ಲ. ದೀಪಾ, ರಾಮಾಚಾರಿ ಮೇಲೆ ಪ್ರಾಣವನ್ನು ಇಟ್ಟಿಕೊಂಡಿದ್ದು, ಅವಳು ಕನಸು ಕಟ್ಟಿದ್ದು ನುಚ್ಚು‌ನೂರಾಗಲಿದೆ. ಮನೆಯಲ್ಲಿ ಮೊದಲೇ ಚಾರು ಕಂಡರೆ ಆಗೋದಿಲ್ಲ ಮನೆಯೂ ಸಹ ಹೊಡೆದು ಹೋಗಲಿದೆ. ಇದೆಲ್ಲವನ್ನೂ ಯೋಚಿಸಿಯೇ ರಾಮಾಚಾರಿ, ಚಾರುನಿಂದ ದೂರವಾಗಲು ಯೋಚನೆ ಮಾಡಿದ್ದಾನೆ. ಆದರೆ ಚಾರು ಮಾತ್ರ ರಾಮಾಚಾರಿಯಿಂದ ದೂರ ಹೋಗುತ್ತಿಲ್ಲ.

ಇನ್ನು ರಾಮಾಚಾರಿ ಧಾರಾವಾಹಿಯನ್ನು ಪ್ರೇಕ್ಷಕರು ಇಷ್ಟಪಟ್ಟು ನೋಡುತ್ತಿದ್ದಾರೆ. ಧಾರಾವಾಹಿಗೆ ಅಭಿಮಾನಿ ಬಳಗವೂ ಇದೆ. ಆದರೂ ಕೆಲವೊಮ್ಮೆ ಕಥೆಯನ್ನು ರಬ್ಬರ್ ರೀತಿ ಎಳೆದು ಎಳೆದು ವೀಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತಿದ್ಧಾರೆ. ಇದು ಸಹಜವಾಗಿಯೇ ಕೆಲವರ ಬೇಸರಕ್ಕೆ ಕಾರಣವಾಗಿದೆ. ಬಹಳ ದಿನಗಳಿಂದ ಚಾರು ತಾಳಿ ತೆಗೆಯುವ ವಿಚಾರದ ಸುತ್ತಾ ಕಥೆ ಗಿರಕಿ ಹೊಡೆಯುತ್ತಿದೆ. ಅದರಿಂದ ಹೊರ ಬರುತ್ತಲೇ ಇಲ್ಲ. ಇದೇ ಕಾರಣಕ್ಕೆ ಕೆಲವೊಮ್ಮೆ ಧಾರಾವಾಹಿ ವೀಕ್ಷಕರಿಗೆ ಬೋರ್ ಎನಿಸತೊಡಗಿದೆ.

More from Filmibeat

English summary
Colors Kannada Ramachari serial Written Update on may 5th episode. here details about Charulata got tired of Ramachari's stubbornness and drank poison. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X