ವಿಷ ಕುಡಿದಿರುವ ಚಾರು: ರಾಮಾಚಾರಿಗೆ ಶುರುವಾಯ್ತು ಸಂಕಷ್ಟ

By ಶೃತಿ ಹರೀಶ್ ಗೌಡ

ರಾಮಾಚಾರಿ ಧಾರಾವಾಹಿ ಕಥೆ ಸದ್ಯಕ್ಕೆ ಹೊಸದೊಂದು ತಿರುವು ಪಡೆದಿದೆ. ಚಾರು ಮದುವೆಯಲ್ಲಿ ನಿಂತಿದ್ದ ಭಾಗವನ್ನು ಈಗ ಮುಂದುವರಿಸಲಾಗಿದೆ. ಎಲ್ಲರೂ ಯಾವಾಗ ಚಾರು ಮತ್ತು ರಾಮಾಚಾರಿ ಮದುವೆಯಾಗಿರುವುದು ಗೊತ್ತಾಗುತ್ತೆ ಎಂದು ಕೇಳಿದ್ದರು. ಇದಕ್ಕೆ ಈಗ ಕಾಲ ಹತ್ತಿರವಾಗಿದೆ. ರಾಮಾಚಾರಿ ನೆಮ್ಮದಿ ಬೇಕು ಎಂದು ತನ್ನ ಫೋನನ್ನು ಸೈಲೆಂಟ್‌ಗೆ ಹಾಕಿ ಜಪ ತಪ ಪೂಜೆ ಎಂದು ಮಾಡುತ್ತಿದ್ದಾನೆ.

ಈ ಕಡೆ ಚಾರುನ ಸಾನ್ವಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಳೆ. ವೈದ್ಯರು ಚಾರು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವಳಿಗೆ ಚಿಕಿತ್ಸೆ ಕೊಡಬೇಕು ಅಂದರೆ ಪೊಲೀಸರಿಗೆ ಕಂಪ್ಲೇಟ್ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸಾನ್ವಿ ಒಪ್ಪುತ್ತಿಲ್ಲ ಆದರೂ ಸಹ ವೈದ್ಯರು ಪೊಲೀಸರಿಗೆ ಬರ ಹೇಳಿದ್ದಾರೆ. ಇದೇ ವೇಳೆ ಪೊಲೀಸರು ಬಂದು ರಾಮಾಚಾರಿಯ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ.

Colors Kannada Ramachari serial Written Update on may 9th episode

ವಿಷ ಕುಡಿಯಲು ರಾಮಾಚಾರಿ ಕಾರಣ ಎಂದು ಪೊಲೀಸರಿಗೆ ತಿಳಿದಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಳ್ಳಬೇಕು ಎಂದುಕೊಂಡಿದ್ದಾರೆ. ಆದರೆ ಸಾನ್ವಿಗೆ ಇದರಿಂದ ತುಂಬಾ ಬೇಸರವಾಗಿದೆ. ರಾಮಾಚಾರಿಗೂ ಸಹ ಚಾರುವಿನಿಂದ ಸಂಕಷ್ಟಕ್ಕೆ ಬಂದಿದೆ ಎಂದು ತಿಳಿದುಕೊಂಡಿದ್ದಾಳೆ.

ಮಾನ್ಯತಾ, ಜೈ ಶಂಕರ್ ಬಳಿ ಮಗಳ ಬಗ್ಗೆ ಮಾತನಾಡುತ್ತಿದ್ದಾಳೆ. ಇತ್ತೀಚೆಗೆ ಚಾರು ಮನೆಗೆ ಸೇರುತ್ತಿಲ್ಲ ಎಂದು ಹೇಳುತ್ತಿದ್ದಾಳೆ. ಜೈ ಶಂಕರ್ ಸಹ ಚಾರು ಬಗ್ಗೆ ಕೇಳಿದ್ದಕ್ಕೆ ಅವಳು ಬೆಳಿಗ್ಗೆ ವಾಕ್‌ಗೆ ಹೋಗಿದ್ದಳು ಮತ್ತೆ ಮೆಸೇಜ್ ಮಾಡಿದ್ದಾಳೆ. ನಾನು ನನ್ನ ಸ್ನೇಹಿತರನ್ನು ಭೇಟಿಯಾಗಲು ಹೋಗಿದ್ದೇನೆ, ಮನೆಗೆ ಬರುವುದು ತಡವಾಗುತ್ತದೆ ಎಂದಿದ್ದಾಳೆ. ಇತ್ತೀಚಿಗೆ ಇವಳು ಯಾಕೆ ಈ ರೀತಿ ಮಾಡುತ್ತಿದ್ದಾಳೆ ನಮ್ಮಿಂದ ಏನನ್ನಾದರೂ ಮುಚ್ಚಿಟ್ಟಿದ್ದಾಳೆ ಎಂಬ ಅನುಮಾನ ನನಗೆ ಬರುತ್ತಿದೆ ಎಂದು ಮಾನ್ಯತಾ ಹೇಳಿದ್ದಾಳೆ.

ಸಾವು ಬದುಕಿನ ಮದುವೆ ಚಾರು ಹೋರಾಟ

ಇತ್ತ ಸಾವು ಬದುಕಿನ ಮಧ್ಯೆ ಚಾರು ಹೋರಾಟ ನಡೆಸುತ್ತಿದ್ದಾಳೆ. ಸಾನ್ವಿಗೆ ತಾನು ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ರಾಮಾಚಾರಿಗೆ ಫೋನ್ ಮಾಡುತ್ತಿದ್ದರು ಸಹ ಪಿಕ್ ಮಾಡುತ್ತಿಲ್ಲ. ಇದರಿಂದಾಗಿ ಅವನಿಗೆ ಸತ್ಯವನ್ನು ಹೇಳಲು ಆಗುತ್ತಿಲ್ಲ. ಡಾಕ್ಟರ್ ಬಳಿ ಪೊಲೀಸರಿಗೆ ನೀವು ಹೇಳಬಾರದಿತ್ತು ಎಂದು ಸಾನ್ವಿ ಹೇಳಿದ್ದಾಳೆ. ಇದಕ್ಕೆ ಡಾಕ್ಟರ್ ಸ್ವಲ್ಪ ಖಾರವಾಗಿಯೇ ಮಾತನಾಡಿದ್ದಾರೆ.

Colors Kannada Ramachari serial Written Update on may 9th episode

ಮುರಾರಿಗೆ ಸುದ್ದಿ ತಿಳಿಸಿದ ಸಾನ್ವಿ

ಸಾನ್ವಿ, ಚಾರು ವಿಷ ಕುಡಿದ ಸುದ್ದಿಯನ್ನು ಮುರಾರಿಗೆ ಹೇಳಿದ್ದಾಳೆ. ಇದರಿಂದಾಗಿ ಮುರಾರಿ ತುಂಬಾ ಭಯಭೀತನಾಗಿದ್ದಾನೆ. ಇನ್ನೇನು ಪೊಲೀಸರು ರಾಮಾಚಾರಿ ಮನೆಗೆ ಬರಬಹುದು ಎಂದು ಸಾನ್ವಿ ಹೇಳಿದ್ದಕ್ಕೆ ಮುರಾರಿ ತುಂಬಾನೇ ಭಯ ಪಟ್ಟುಕೊಂಡಿದ್ದಾನೆ. ರಾಮಾಚಾರಿಗೆ ಫೋನ್ ಮಾಡಿ ಸುದ್ದಿ ತಿಳಿಸಬೇಕು ಅಂದ್ರು ರಾಮಾಚಾರಿ ಫೋನ್ ಪಿಕ್ ಮಾಡುತ್ತಿಲ್ಲ.

ಶೃತಿ ಫೋನ್‌ಗೆ ಫೋನ್ ಮಾಡಿದ ಮುರಾರಿ ರಾಮಾಚಾರಿ ಬಳಿ ಚಾರು ವಿಷ ಕುಡಿದ ಘಟನೆಯನ್ನ ಹೇಳಿದ್ದಾನೆ.‌ ಇದರಿಂದಾಗಿ ರಾಮಾಚಾರಿಗೂ ತುಂಬಾ ಭಯವಾಗಿದೆ. ಹೋದ ಬಾರಿ ಬ್ಲಾಕ್‌ಮೇಲ್ ಮಾಡಿದಂತೆ ಈ ಬಾರಿಯು ಮಾಡಿದ್ದಾರೆ ಎಂದು ನಾನು ತಿಳಿದುಕೊಂಡೆ ಎಂದು ರಾಮಾಚಾರಿ ಹೇಳಿದ್ದಾನೆ. ಏನಾದರೂ ಚಾರು ಸತ್ತು ಹೋದರೆ ನಿಮ್ಮ ಮದುವೆ ಗುಟ್ಟಾಗಿ ಉಳಿಯುವುದಿಲ್ಲ ಎಂದು ಮುರಾರಿ, ರಾಮಾಚಾರಿಗೆ ಹೇಳಿದ್ದಾನೆ. ರಾಮಾಚಾರಿಗೆ ಮುರಾರಿ ಹೇಳಿದ ಮಾತಿನಿಂದ ತುಂಬಾ ಭಯವಾಗಿದೆ.

ರಾಮಾಚಾರಿ ಮಾತು ಕದ್ದು ಕೇಳಿದ ವೈಶಾಖ

ರಾಮಾಚಾರಿಗೆ ಕೇಡು ಬಯಸುತ್ತಿರುವ ಅತ್ತಿಗೆ ವೈಶಾಖ, ರಾಮಾಚಾರಿ ಹಾಗೂ ಮುರಾರಿ ಇಬ್ಬರ ಮಾತು ಕದ್ದು ಕೇಳಿಸಿಕೊಳ್ಳುತ್ತಿದ್ದಾಳೆ. ರಾಮಾಚಾರಿ ಯಾವುದೋ ಸಂದಿಗ್ಧ ಪರಿಸ್ಥಿತಿಗೆ ಸಿಕ್ಕಿ ಬಿದ್ದಿದ್ದಾನೆ ಎಂದುಕೊಂಡು ಖುಷಿಪಡುತ್ತಿದ್ದಾಳೆ. ರಾಮಾಚಾರಿ ಹೇಗಾದರೂ ಸಿಕ್ಕಿಬಿದ್ದು ಅವನ ಮಾನ ಮರ್ಯಾದೆ ಹೋಗಬೇಕು ಅನ್ನುವುದೇ ವೈಶಾಖಗೆ ಖುಷಿ ಕೊಡುವ ವಿಚಾರವಾಗಿದೆ.

More from Filmibeat

English summary
Colors Kannada Ramachari serial Written Update on may 9th episode.here is details about Ramachari and charu in hospital, police enquiries sanvi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X