ವಿಕಾಸ್ ತಾಯಿಯ ಮಾತು ಕೇಳಿ ರಾಮಾಚಾರಿ ಶಾಕ್!

By ಶೃತಿ ಹರೀಶ್ ಗೌಡ
Colors Kannada Ramachari serial Written Update on the March 23rd episode

ರಾಮಾಚಾರಿ ನಡೆದ ಎಲ್ಲಾ ಘಟನೆಗಳನ್ನು ನೆನಪಿಸಿಕೊಂಡು ಯೋಚನೆ ಮಾಡುತ್ತಿದ್ದಾನೆ. ಅಲ್ಲಿಗಕಾದಿದೆ.ದ ಮುರಾರಿ ನೀನು ಯೋಚನೆ ಮಾಡಿದರೆ ಏನು ಫಲವಿಲ್ಲ ಆದಷ್ಟು ಬೇಗ ಹೋಗಿ ವಿಕಾಸ್ ಮನೆಯವರಿಗೆ ನಡೆದ ಎಲ್ಲಾ ಘಟನೆ ತಿಳಿಸು ಎಂದಿದ್ದಾನೆ. ಇದಕ್ಕೆ ರಾಮಾಚಾರಿ ನಾನೇನು ತುಂಬಾ ಇಷ್ಟಪಟ್ಟು ಮದುವೆಯಾಗಿಲ್ಲ ಇದು ಅನಿವಾರ್ಯದ ಮದುವೆ ಎಂದು ತಿಳಿಸಿದ್ದಾನೆ.

ಇದಕ್ಕೆ ಮುರಾರಿ ಅನಿವಾರ್ಯವೋ ಒತ್ತಡವೋ ಆದರೆ ಒಮ್ಮೆ ತಾಳಿ ಕಟ್ಟಿದರೆ ಮುಗಿಯಿತು ಎಂದು ತಾಳಿಯ ಮಹತ್ವದ ಬಗ್ಗೆ ರಾಮಾಚಾರಿಗೆ ಹೇಳಿದ್ದಾನೆ. ನಾನು ಹಾಕಿದ್ದ ಪರಿಸ್ಥಿತಿಯಲ್ಲಿ ಚಾಲು ಪ್ರಾಣ ಉಳಿಸಲು ತಾಳಿ ಕಟ್ಟಿದೆ ಎಂದು ರಾಮಾಚಾರಿ ಹೇಳಿದ್ದಕ್ಕೆ ನಿನ್ನ ಹೆಂಡತಿಯನ್ನು ಬೇರೆಯವರು ಮದುವೆಯಾದರೆ ಏನು ಚೆನ್ನ ಎಂದು ಮುರಾರಿ ರಾಮಾಚಾರಿ ಬಳಿ ಹೇಳಿದ್ದಾನೆ.

ಎಲ್ಲವನ್ನು ಯೋಚನೆ ಮಾಡಿದ ರಾಮಾಚಾರಿ ವಿಕಾಸ ಬಾನೇಲಿಗೆ ಹೇಗಾದರೂ ಮಾಡಿ ಸುದ್ದಿ ತಿಳಿಸಿ ಮದುವೆಯನ್ನ ಮುರಿದುಕೊಳ್ಳಬೇಕು ಎಂದು ವಿಕಾಸ್ ಬಾನೇರಿಯ ಮನೆಯ ಕಡೆ ಹೊರಟಿದ್ದಾನೆ. ಆಸೆ ವಿಕಾಸ್ಕುಟುಂಬ ಹೋದ ರಾಮಾಚಾರಿಗೆ ಏನು ಒಂದು ಶಾಕ್ ಕಾದಿದೆ.

ರಾಮಾಚಾರಿ ವಿಕಾಸ್ ಬಾನೇರಿಯ ಮನೆಗೆ ಬಂದಿದ್ದಾನೆ ಈ ವೇಳೆ ವಿಕಾಸ್ ಬಾನೇರಿ ಮನೆಯಲ್ಲಿ ಇರಲಿಲ್ಲ ಇದಕ್ಕೆ ಅವರ ತಾಯಿ ವಿಕಾಸ್ ಮನೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ತುಂಬಾ ಅರ್ಜೆಂಟಾಗಿ ಮಾತನಾಡಬೇಕಿತ್ತು ಯಾವಾಗ ಬರುತ್ತಾರೆ ಎಂದು ರಾಮಾಚಾರಿ ಕೇಳಿದ್ದಾನೆ ಅದಕ್ಕೆ ವಿಕಾಸ್ ತಾಯಿ ಫೋನ್ ನಂಬರ್ ಕೊಡ್ಲಾ ಎಂದು ಹೇಳಿದ್ದಾರೆ ಇದಕ್ಕೆ ಬೇಡ ಎಂದು ರಾಮಾಚಾರಿ ಹೇಳಿ ಅಲ್ಲಿಂದ ಹೊರಡುತ್ತಿದ್ದಾನೆ.

ಇದೇ ವೇಳೆ ರಾಮಾಚಾರ್ಯನು ನಿಲ್ಲಿಸಿದ ವಿಕಾಸ ತಾಯಿ ಹೇಗಾದರೂ ಮಾಡಿ ಮದುವೆಯನ್ನು ನಿಲ್ಲಿಸು ಎಂದು ಹೇಳಿದ್ದಾರೆ. ನಿಮ್ಮ ಮಗನ ಮದುವೆಯನ್ನು ನೀವೇ ಹೇಳಿದ್ದು ಎನ್ನುತ್ತಿದ್ದೀರಿ ಏಕೆ ಎಂದು ರಾಮಾಚಾರಿ ಕೇಳಿದ್ದಾನೆ. ಇದಕ್ಕೆ ಅವನು ನೀವೊಂದು ಕೊಂಡಷ್ಟು ಒಳ್ಳೆಯವನು ಅಲ್ಲ ನನ್ನಂತೆ ಆ ಹೆಣ್ಣು ನರಕ ಅನುಭವಿಸುವುದು ಬೇಡ ಅವಳು ಮದುವೆಯಾಗಿ ಬಂದರೆ ಯಾವುದೇ ಸುಖ ಪಡುವುದಿಲ್ಲ ಎಂದು ವಿಕಾಸ್ ತಾಯಿ ರಾಮಾಚಾರಿಗೆ ತಿಳಿಸಿದ್ದಾರೆ.

ಚಾರು ಮನೆಯವರ ಮುಂದೆ ವಿಕಾಸ್ ಡ್ರಾಮಾ
ವಿಕಾಸ್ ಮಾತಿಗೆ ಮರುಳಾದ ಕುಟುಂಬ

ಚಾರು ಮನೆಗೆ ಬಂದಿರುವ ವಿಕಾಸ್ ಬಾನೇರಿ ಮನೆಯವರೆಲ್ಲರಿಗೂ ಮೆಚ್ಚುಗೆಯಾಗುವಂತೆ ಡ್ರಾಮಾವನ್ನು ಮಾಡಿದ್ದಾನೆ. ನಾನು ನಿಮ್ಮ ಮನೆಗೆ ಬಂದಾಗ ಚಾರು ತುಂಬಾ ಇಷ್ಟ ಆಗಿ ಅವಳ ಜೊತೆಗೆ ಮಿಸ್ ಬಿಹೇವ್ ಮಾಡಿಬಿಟ್ಟೆ ಎಂದಾಗ ಜೈಶಂಕರ್ ಕೋಪದಿಂದ ಎನು ಎಂದು ಕೇಳಿದ್ದಾನೆ. ಅದಕ್ಕೆ ಚಾರು ಕೈಗೆ ಮುತ್ತು ಕೊಟ್ಟೆ ಅದರಿಂದ ಚಾರುಗೆ ತುಂಬಾ ಬೇಸರವಾಗಿದೆ ಎಂದು ಡ್ರಾಮಾ ಮಾಡಿದ್ದಾನೆ.

ಮಂಡಿಯೂರಿ ಚಾರು ಕೈ ಹಿಡಿದುಕೊಂಡು ಚಾರು ನಾನು ಮಾಡಿದ ಕೆಲಸ ನಿನಗೆ ಬೇಸರ ತರಿಸಿದಾಗ ಸಾರಿ ಚಾರು ಎಂದು ಹೇಳಿದ್ದಾನೆ. ಇದಕ್ಕೆ ಚಾರು ಕ್ಷಮಿಸಿದ್ದೇನೆ ಎಂದು ಹೇಳಿದ್ದಾಳೆ. ಆದರೆ ಚಾರುಗೆ ಮನೆಯವರ ಮಾತಿಗೆ ತುಂಬಾ ಕೋಪ ಬರುತ್ತಿರುತ್ತಿರುತ್ತದೆ. ನಂತರ ಮನೆಯವರು ವಿಕಾಸ್ ಬಾನೇರಿಯನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ರಾಮಾಚಾರಿ ವಿಕಾಸ್ ಬಾನೇರಿ ಮನೆಯಿಂದ ವಾಪಸ್ ಮನೆಗೆ ಬರುತ್ತಿರುವಾಗ ಜೈಶಂಕರ್ ಕರೆ ಮಾಡಿದ್ದಾನೆ. ರಾಮಾಚಾರಿ ನೀವು ನೋಡಿರುವ ಹಾಗೂ ನುಡಿದಿರುವಂತೆ ನನ್ನ ಮಗಳು ಹಾಗೂ ಅಳಿಯನ ಜಾತಕ ಮ್ಯಾಚ್ ಆಗಿದೆ ಅದೇ ರೀತಿ ನಡೆಯುತ್ತಿದೆ ಎಂದು ಹೇಳಿದ್ದಾನೆ.ಇದನ್ನೆಲ್ಲ ಕೇಳಿಸಿಕೊಂಡ ರಾಮಾಚಾರಿ ವಿಕಾಸ್ ಬಾನೇರಿ ತಾಯಿ ವಿಕಾಸ್ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಳ್ಳುತ್ತಾ ಇರುತ್ತಾನೆ.

ಇನ್ನೂ ಜೈಶಂಕರ್ ನನ್ನದೊಂದು ಆಸೆ ಇದೆ ಚಾರು ಹಾಗೂ ವಿಕಾಸ್ ಬಾನೇರಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಬೇಕು ಎಂಬುದು ಎಂದು ಹೇಳಿದ್ದಾನೆ ಇದಕ್ಕೆ ರಾಮಾಚಾರಿಯನ್ನು ಜೊತೆಗೆ ಇರುತ್ತೀರಾ ತಾನೇ ಎಂದು ಕೇಳಿದ್ದಾನೆ. ಇದಕ್ಕೆ ರಾಮಾಚಾರಿ ಆಗಲಿ ಸಾರ್ ಮಾಡಿಕೊಡೋಣ ಎಂದು ಹೇಳಿದ್ದಾನೆ.

More from Filmibeat

English summary
Colors Kannada Ramachari serial Written Update on the March 23rd episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X