Ramachari serial: ಚಾರುವನ್ನು ಕೊಲ್ಲಲು ಯತ್ನಿಸಿದನಾ ರಾಮಾಚಾರಿ!?
ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಧಾತ್ರಿ ವನದಲ್ಲಿ ಚಾರುಲತಾಗೆ ಕಣ್ಣು ಬರೋದಕ್ಕೆ ಗುರೂಜಿ ಪೂಜೆಯನ್ನು ಮಾಡುತ್ತಿದ್ದಾರೆ. ರಾಮಾಚಾರಿ ಚಾರುಲತಾಗೆ ಕಣ್ಣು ಬರಲಿ ಎಂದು ಪ್ರಾರ್ಥನೆಯನ್ನು ಸಲ್ಲಿಸಿದ್ದಾನೆ. ಚಾರು ರಾಮಾಚಾರಿಯ ಸಾಂಗತ್ಯವನ್ನು ಬಯಸಿದ್ದಾಳೆ.
ಚಾರುಲತಾಳ ಕಣ್ಣು ಬರಿಸಲು ಗುರೂಜಿ ಅವರು ತಲೆಯ ಮೇಲೆ ನೀರನ್ನು ಹಾಕಿದ್ದಾರೆ ಅದು ಸಹ ಹಿಮದ ನೀರಾಗಿದ್ದು ಚಾರುಲತಾಗೆ ತುಂಬಾ ಕಷ್ಟವಾಗುತ್ತಿದೆ. ಚಾರುಲತಾಳ ಕಷ್ಟವನ್ನು ನೋಡುತ್ತಿರುವ ರಾಮಾಚಾರಿಯ ಕಣ್ಣಲ್ಲಿ ನೀರು ಬರುತ್ತಿದೆ. ಮೇಡಂ ದಯವಿಟ್ಟು ಸ್ವಲ್ಪ ಸಹಿಸಿಕೊಳ್ಳಿ ಇನ್ನೇನು ಆಯಿತು ಎಂದು ಚಾರುಗೆ ರಾಮಾಚಾರಿ ಧೈರ್ಯವನ್ನು ತುಂಬುತ್ತಾ ಇದ್ದಾನೆ. ಈ ಕಡೆ ಚಾರು ರಾಮಾಚಾರಿ ನನ್ನ ಕೈಯಲ್ಲಿ ಆಗುತ್ತಿಲ್ಲ ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದ್ದಾಳೆ.
ಇನ್ನು ಗಾಳಿ ಜೋರಾಗಿ ಬೀಸುತ್ತಿದೆ ಗುರುಗಳೇ ನಮ್ಮ ಕೈಯಲ್ಲೇ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಆಶ್ರಮದ ವಾಸಿಗಳು ಹೇಳಿದಾಗ ಗುರುಗಳು ಇದೆಲ್ಲವೂ ಒಂದು ರೀತಿಯಲ್ಲಿ ಒಳ್ಳೆಯದೇ ಆಗುತ್ತಿದೆ ಎಂದು ಹೇಳಿದ್ದಾರೆ. ಪಂಚೇಂದ್ರಿಯಗಳು ಮತ್ತಷ್ಟು ಚುರುಕುಗೊಳ್ಳಲು ಇದೊಂದು ಕ್ರಿಯೆ ಯಾಗಿದೆ ಇದೆಲ್ಲವನ್ನು ಚಾರು ತಡೆದುಕೊಳ್ಳಲೇಬೇಕು ಎಂದು ಗುರೂಜಿ ಹೇಳಿದ್ದಾರೆ.

ಚಾರುಗೆ ಸಂಕಷ್ಟ ತಂದ ರಾಮಾಚಾರಿ
ಈ ಕಡೆ ದುಷ್ಟ ಬನವಾಸಿ, ಚಾರುಲತಾಗಾಗಿ ಕಾಯುತ್ತಿದ್ದಾನೆ. ಒಬ್ಬಳೇ ಸಿಕ್ಕಿದರೆ ಸಾಕು ಅವಳನ್ನು ನಾನು ನನ್ನ ಆಸೆ ತೀರಿಸಿಕೊಂಡು ಕೊಲ್ಲಬೇಕು ಎಂದುಕೊಂಡಿದ್ದಾನೆ. ಇದಕ್ಕಾಗಿ ತೆರೆ ಮರೆಯಲ್ಲಿ ಆಶ್ರಮದ ತುಂಬೆಲ್ಲ ಓಡಾಡಿಕೊಂಡು ಇದ್ದಾನೆ. ಅಂತಹ ಸಮಯ ಬಂದರೆ ನಾನು ಚಾರುವನ್ನು ಬಿಡುವುದಿಲ್ಲ ಎಂದು ಸಂಕಲ್ಪವನ್ನು ಮಾಡಿದ್ದಾನೆ. ಈ ಕಡೆ ರಾಮಾಚಾರಿ ಚಾರುಲತಾ ಇರುವ ಜಾಗಕ್ಕೆ ಬಂದು ಒಂದು ಹಂಡೆಯ ಬಳಿ ನೀಡಿರುವ ಜಾಗದಲ್ಲಿ ಚಾರು ನಿಂತಿದ್ದಾಳೆ. ಚಾರು ತಲೆಯನ್ನು ಹಿಡಿದು ಅಂಡೆಯ ಒಳಗೆ ಪೂರ್ತಿ ಅದ್ದಿದ್ದಾನೆ. ಇದು ಚಾರುಲತಾಗೆ ಸಂಕಷ್ಟಕ್ಕೆ ದೂಡಿದಂತೆ ಆಗಿದೆ. ಕೊನೆಗೆ ಹೇಗೋ ಚಾರುಲತಾಳೇ ತನ್ನ ಶಕ್ತಿಯನೆಲ್ಲ ಒಗ್ಗೂಡಿಸಿ ಜೋರಾಗಿ ತಳ್ಳಿದ್ದಾಳೆ. ಯಾರು ಯಾರು ಎಂದು ಕೂಗಿದ್ದಾಳೆ ಆಗ ರಾಮಾಚಾರಿ ಮೇಡಮ್ ನಾನೇ ಎಂದು ಹೇಳಿದ್ದಾನೆ.

ಚಾರುಗೆ ಉತ್ತರ ನೀಡಿದ ರಾಮಾಚಾರಿ
ಈ ಕಡೆ ರಾಮಾಚಾರಿಗೆ ಚಾರು ಏಕೆ ನನ್ನನ್ನು ಸಾವಿನ ಬಾಯಿಗೆ ತೆಗೆದುಕೊಂಡು ಹೋದೆ ರಾಮಾಚಾರಿ ನನ್ನನ್ನು ನೀನು ಸಾಯಿಸಲು ಪ್ರಯತ್ನ ಪಟ್ಟೆಯ ಎಂದು ಕೇಳಿದ್ದಾಳೆ. ಯಾಕೆ ಉತ್ತರವಾಗಿ ರಾಮಾಚಾರಿ ಇಲ್ಲ ಮೇಡಂ ನಿಮ್ಮನ್ನು ನಾನ್ಯಾಕೆ ಸಾಯಿಸಲಿ ಗುರುಗಳು ಇದನ್ನು ಮಾಡು ಎಂದು ಹೇಳಿದರು ಅದಕ್ಕಾಗಿ ನಾನು ಮಾಡಿದೆ ಎಂದು ಹೇಳಿದ್ದಾನೆ. ನೋಡಿ ರಾತ್ರಿ ಒಬ್ಬಳೇ ಮಲಗಲು ಭಯ ಎಂದು ಹೇಳಿದ್ದೀರಿ ಈಗ ನನ್ನನ್ನೇ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ದೂರಕ್ಕೆ ತಳ್ಳಿ ನಿಮ್ಮನ್ನು ನೀವು ರಕ್ಷಿಸಿ ಕೊಂಡಿರಿ ಎಂದು ಹೇಳಿದ್ದಾನೆ.

ಚಾರು ಎಲ್ಲಿಂದ ಬಂತು ಆ ಶಕ್ತಿ
ರಾಮಾಚಾರಿ ಮಾತನ್ನು ಕೇಳಿಸಿಕೊಂಡ ಚಾರು ಹೌದು ರಾಮಾಚಾರಿ ನೀನು ಹೇಳಿದ್ದು ನಿಜ ನನಗೆ ಈ ಶಕ್ತಿ ಎಲ್ಲಿಂದ ಬಂತು ಎಂದು ಕೇಳಿದ್ದಾಳೆ. ಅದೇ ಮೇಡಂ ನೀವು ಕಷ್ಟಕ್ಕೆ ದುಡಿದಾಗ ನಿಮ್ಮನ್ನು ನೀವು ರಕ್ಷಿಸಿ ಕೊಂಡಿರಿ ಅಲ್ಲಿಯೇ ಶಕ್ತಿ ಬಂತು ಎಂದು ರಾಮಾಚಾರಿ ಹೇಳಿದ್ದಾನೆ ಇದನ್ನು ಕೇಳಿದ ಚಾರು ತುಂಬಾ ಖುಷಿಪಟ್ಟಿದ್ದಾಳೆ. ಇನ್ಮುಂದೆ ನಿಮಗೆ ನೀವೇ ರಕ್ಷಣೆಯಾಗಿರುತ್ತೀರಿ ಮೇಡಂ ಎಂದು ರಾಮಾಚಾರಿ ಹೇಳಿದ್ದಾನೆ ಹೌದು ರಾಮಾಚಾರಿ ಎಂದು ಚಾರು ತನ್ನ ಬಗ್ಗೆ ಆಶ್ಚರ್ಯ ಪಟ್ಟುಕೊಂಡಿದ್ದಾಳೆ.

ಚಾರು ನೆನೆಸಿಕೊಂಡು ಬೇಸರವಾಗಿರುವ ಮಾನ್ಯತಾ
ಆಧ್ಯಾ ವಿಹಾನ್ ಜೊತೆ ಮಾತನಾಡುವುದನ್ನು ಕೇಳಿಸಿಕೊಂಡ ಮಾನ್ಯತಾಗಿ ತುಂಬಾ ಹೊಟ್ಟೆ ಉರಿ ಬಂದಿದೆ. ನನ್ನ ಮಗಳು ಕಣ್ಣು ಕಳೆದುಕೊಂಡು ಜೀವನವನ್ನೇ ಕತ್ತಲೆ ಮಾಡಿಕೊಂಡಿದ್ದಾಳೆ. ಇಲ್ಲಿ ಇವಳು ಲವ್ ಮಾಡಿಕೊಂಡು ಬಹಳ ಖುಷಿಯಿಂದ ಇದ್ದಾಳೆ ಇದೆಲ್ಲವನ್ನು ನೋಡುವ ಕರ್ಮ ನನಗೆ ಬಂದಿದೆ ಎಂದು ಮಾನ್ಯತಾ ಬೇಸರ ಮಾಡಿಕೊಂಡಿದ್ದಾಳೆ. ವಿಹಾನ್ ಆಧ್ಯಾಳನ್ನು ಪ್ರೀತಿಸುತ್ತಿರುವ ವಿಷಯ ಮಾನ್ಯತಾಗೆ ಗೊತ್ತಾದರೆ ಮುಂದೆ ಏನಾಗಲಿದೆ ಎಂಬುದೇ ಕುತೂಹಲವಾಗಿದೆ.


Click it and Unblock the Notifications











