Ramachari serial: ಹಲವಾರು ಸವಾಲು ಎದರಿಸುತ್ತಿರುವ ಚಾರು

By ಶೃತಿ ಹರೀಶ್ ಗೌಡ

ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಧಾತ್ರಿ ವನದಲ್ಲಿ ಹಲವಾರು ಪೂಜೆ ನಡೆಯುತ್ತಿದೆ.‌ ಈ ಕಡೆ ಬನವಾಸಿ ಚಾರುಲತಾಗೆ ಕಾಟಕೊಡಲು ಕಾಯುತ್ತಿದ್ದಾನೆ. ಚಾರು ಮಾತ್ರ ರಾಮಾಚಾರಿ ನೆರಳಲ್ಲಿ ಹಿತವಾಗಿದ್ದಾಳೆ.

ಚಾರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾಳೆ. ತನಗೆ ಕಣ್ಣು ಬರಲಿ ಎಂದು ರಾಮಾಚಾರಿ ಹೇಳುತ್ತಿರುವ ಎಲ್ಲವನ್ನು ಪಾಲಿಸುತ್ತಿದ್ದಾಳೆ. ಈಗ ರಾಮಾಚಾರಿ ಚಾರುಗಾಗಿ ಒಂದು ಹೊಸ ಸವಾಲನ್ನು ತಂದಿದ್ದಾನೆ. ಹಾಗೂ ರಾಮಾಚಾರಿ ಈಗಾಗಲೇ ಒಂದು ಪೂಜೆಯನ್ನ ಮುಗಿಸಿದ್ದಾರೆ. ಈಗ ಚಾರುಗೆ ಹಲವಾರು ಅನುಭವಗಳೊಂದಿಗೆ ಆತ್ಮವಿಶ್ವಾಸವನ್ನ ತುಂಬಿಕೊಳ್ಳಲಿ ಎಂದು ಮಡಿಕೆ ಒಡೆಯುವ ಒಂದು ಟಾಸ್ಕ್ ಅನ್ನ ಇಡಲಾಗಿದೆ. ಇನ್ನು ಚಾರುಗೆ ಮಡಿಕೆ ಹೊಡೆಯುವ ಟಾಸ್ಕ್ ನೀಡಲಾಗಿದ್ದು ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಚಾರು ಹೇಳುತ್ತಿದ್ದಾಳೆ.

ಚಾರುಲತಾಗೆ ಹಲವಾರು ಟಾಸ್ಕ್‌ಗಳನ್ನು ಇಡಲಾಗಿದೆ. ಮೊದಲನೇ ಮಡಿಕೆ ಒಡೆಯಬೇಕು ಎಂದು ರಾಮಾಚಾರಿ ಹೇಳಿದ್ದಾನೆ. ನನ್ನಿಂದ ಆಗುತ್ತಿಲ್ಲ ಎನ್ನುತ್ತಿರುವ ಚಾರುಗೆ ರಾಮಾಚಾರಿ ಧೈರ್ಯವನ್ನು ತುಂಬುತ್ತಿದ್ದಾನೆ. ಮೇಡಂ ಮೊದಲು ನೀವು ನಿಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ನಿಮ್ಮ ಬೇರೆ ಪಂಚೇಂದ್ರಿಯಗಳನ್ನು ಚುರುಕುಗೊಳಿಸಿ ಎಂದು ಹೇಳುತ್ತಾ ಶಕ್ತಿಯನ್ನು ತುಂಬಿದ್ದಾನೆ. ಎಲ್ಲವನ್ನು ಕೇಳುತ್ತಿರುವ ಚಾರು ಮಡಕೆಯನ್ನು ಹೊಡೆದಿದ್ದಾಳೆ.

ಹೆದರಿದ ಚಾರು

ಹೆದರಿದ ಚಾರು

ನಂತರ ಇನ್ನೊಂದು ಟಾಸ್ಕನ್ನ ಹೇಳಲಾಗಿದೆ. ಒಂದು ಬೆಂಕಿಯ ಪಂಜು ಇದ್ದು ಅದನ್ನು ದಾಟಿ ಬಾಲ್ ಗಳ ನಡುವೆ ನೀವು ಹೋಗಿ ನಂತರ ಅಲ್ಲಿ ಒಂದು ಗಂಟೆ ಸಿಗುತ್ತದೆ, ಅದನ್ನು ಹೊಡೆಯಿರಿ ನಂತರ ಒಂದು ಬಿಂದಿಗೆ ಸಿಗಲಿದೆ ಅದರಿಂದ ನೀರನ್ನು ತರಬೇಕು ಎಂದು ರಾಮಾಚಾರಿ ಟಾಸ್ಕನ್ನ ವಿವರಿಸಿದ್ದಾನೆ. ಈ ಟಾಸ್ಕ್ ಅನ್ನು ಕೇಳಿದ ಚಾರುಲತಾಗೆ ತುಂಬಾನೆ ಭಯವಾಗಿದೆ. ನನ್ನಿಂದ ಇದು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಇದೇ ವೇಳೆ ರಾಮಾಚಾರಿ ಅವಳಿಗೆ ಧೈರ್ಯವನ್ನ ತುಂಬಿದ್ದಾನೆ. ನೀವು ಎಲ್ಲವನ್ನು ನಿಮ್ಮ ಪಂಚೇಂದ್ರಿಯಗಳ ಮೇಲೆ ಕೇಂದ್ರೀಕರಿಸಿ ಮಾಡಿ ಎಲ್ಲಾ ಕೆಲಸವು ಸುಲಭವಾಗಿದೆ ಎಂದು ಹೇಳಿದ್ದಾನೆ.

ಚಪ್ಪಾಳೆ ತಟ್ಟಿದ ರಾಮಾಚಾರಿ

ಚಪ್ಪಾಳೆ ತಟ್ಟಿದ ರಾಮಾಚಾರಿ

ಆಶ್ರಮದಲ್ಲಿ ನೀಡಿದ ಎಲ್ಲಾ ಟಾಸ್ಕ್ ಗಳನ್ನು ಚಾರುಲತ ಗೆದ್ದಿದ್ದಾಳೆ. ಇದನ್ನು ನೋಡಿದ ರಾಮಾಚಾರಿ ಹಾಗೂ ಆಶ್ರಮದವರು ಚಪ್ಪಾಳೆಯನ್ನ ತಟ್ಟಿದ್ದಾರೆ. ಇದರಿಂದಾಗಿ ರಾಮಾಚಾರಿಗೆ ಹಾಗೂ ಚಾರುಲತಾಗೆ ಇಬ್ಬರಿಗೂ ಬಹಳಷ್ಟು ಸಂತೋಷವಾಗಿದೆ. ಇನ್ನು ಬಿಂದಿಗೆ ತೆಗೆದುಕೊಂಡು ನೀರು ತರಲು ಶಾರುಗೆ ಹೇಳಲಾಗಿದೆ. ಬಲ ಮತ್ತು ಎಡಕ್ಕೆ ತಿರುಗಿ ಹರಿಯುತ್ತಿರುವ ಹಳ್ಳದಲ್ಲಿ ನೀರನ್ನು ತರಲು ಹೇಳಲಾಗಿದೆ.

ವಿಹಾನ್ ನೋಡಿ ಶಾಕ್ ಆದ ಮಾನ್ಯತಾ

ವಿಹಾನ್ ನೋಡಿ ಶಾಕ್ ಆದ ಮಾನ್ಯತಾ

ಆದ್ಯಾ ಮನೆಗೆ ವಿಹಾನ್ ಬಂದಿದ್ದಾನೆ. ವಿಹಾನ್‌ಗೆ ಆರತಿ ಎತ್ತಿ ಆದ್ಯಾ ಸ್ವಾಗತವನ್ನು ಕೋರಿದ್ದಾರೆ. ಇದೆ ವೇಳೆ ಒಬ್ಬರನ್ನೊಬ್ಬರು ಮುಖ ನೋಡಿಕೊಂಡು ಮರೆತಿದ್ದಾರೆ. ಅಲ್ಲಿಗೆ ಬಂದ ಶರ್ಮಿಳ ನೆನಪಿಸುವ ಕೆಲಸವನ್ನ ಮಾಡಿದ್ದಾರೆ. ನಂತರ ಆದ್ಯಗೆ ಅಮ್ಮ ಆರತಿ ಎತ್ತುವಾಗ ನೀನು ಸಹ ಪಕ್ಕದಲ್ಲಿ ಇದ್ದರೆ ಚೆನ್ನಾಗಿತ್ತು ಎಂದು ಚೇಡಿಸಿದ್ದಾನೆ. ಅದು ಮದುವೆಯ ಸಮಯದಲ್ಲಿ ಎಂದು ಆಧ್ಯಾ ವಿಹಾನಿಗೆ ಹೇಳಿದ್ದಾಳೆ ನಂತರ ಇಬ್ಬರೂ ಸಹ ಮನೆಯ ಒಳಗೆ ಹೋಗಿದ್ದಾರೆ.

ಇನ್ನು ಒಳಗಡೆ ಬಂದ ವಿಹನ್ ಗೆ ಶಾಕ್ ಆಗಿದೆ. ಜೈ ಶಂಕರ್ ಹಾಗೂ ಮಾನ್ಯತಾ ಫೋಟೋವನ್ನು ನೋಡಿ ಆಧ್ಯಾಳನ್ನು ಇವರ ಫೋಟೋ ಯಾಕೆ ಇಲ್ಲಿದೆ ಎಂದು ಕೇಳಿದ್ದಾನೆ. ನಂತರ ವಿಹಾನ್‌ನನ್ನು ಮಾನ್ಯತಾ ಮತ್ತು ಜೈ ಶಂಕರ್ ನೋಡಿ ಮತ್ತಷ್ಟು ಶಾಕ್‌ಗೆ ಒಳಗಾಗಿದ್ದಾರೆ. ಮುಂದೆ ವಿಹಾನಿಗೆ ಆಧ್ಯಾ ಜೈ ಶಂಕರ್‌ನ ಎರಡನೇ ಹೆಂಡತಿಯ ಮಗಳು ಎಂದು ಗೊತ್ತಾಗಲಿದೆ. ಇದೇ ಕುತೂಹಲಕಾರಿಯಾಗಿದೆ.

More from Filmibeat

English summary
Colors Kannada serial Ramachari Written Update on February 13th episode. Here is the details about charulatha in trouble
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X