Ramachari serial: ರಾಮಾಚಾರಿ: ಚಾರು ಮೇಲೆ ಅತ್ಯಾಚಾರ ಮಾಡಲು ಬನವಾಸಿಯಿಂದ ಯತ್ನ!
ರಾಮಾಚಾರಿ ಧಾರಾವಾಹಿಯಲ್ಲಿ ಬನವಾಸಿ ಚಾರುಲತಾ ಮಲಗಿರುವ ಕೋಣೆಗೆ ಬಂದಿದ್ದಾನೆ. ಚಾರು ಮಲಗಿರುವುದನ್ನು ನೋಡಿ ಬಹಳ ಖುಷಿಪಟ್ಟಿದ್ದಾನೆ. ಯಾರು ಇಲ್ಲದನ್ನು ಕಂಡು ಆಕೆಯ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕಿದ್ದಾನೆ.
ಇನ್ನು ಚಾರು ಮೇಲೆ ನವಿಲುಗರಿ ತೆಗೆದುಕೊಂಡು ಪರಿಶಿಸುತ್ತಿದ್ದಾನೆ. ಈ ಸ್ಪರ್ಶಕ್ಕೆ ಚಾರು ನಿದ್ರಾವಸ್ಥೆಯಿಂದ ಮೇಲೆ ಎದ್ದಿದ್ದಾಳೆ. ಯಾರು ಯಾರು ಎಂದು ಕರೆದಾಗ ಬನವಾಸಿ ನಿನ್ನನ್ನು ತಿನ್ನಲು ಬಂದಿರುವ ಹುಲಿ ಎಂದು ಅಂದಿದ್ದಾನೆ. ಇದನ್ನು ಕೇಳಿಸಿಕೊಂಡ ಚಾರುಗೆ ತುಂಬಾ ಭಯವಾಗಿದೆ. ಮತ್ತೊಮ್ಮೆ ಯಾರು ಎಂದು ಕೇಳಿದ್ದಕ್ಕೆ ಚಿತ್ರದುರ್ಗದಲ್ಲಿ ನಿನ್ನ ಕಾಲಿಗೆ ಬಿದ್ದವನು ಎಂದು ಹೇಳಿದ್ದಾನೆ.
ಇದನ್ನು ಕೇಳಿಸಿಕೊಂಡ ಚಾರುಗೆ ಮತ್ತಷ್ಟು ಭಯವಾಗಿ ರಾಮಾಚಾರಿ ರಾಮಾಚಾರಿ ಎಂದು ಕೂಗಿಕೊಂಡಿದ್ದಾಳೆ. ಇಲ್ಲಿ ರಾಮಾಚಾರಿಯು ಇಲ್ಲ ಪ್ರೇಮಚಾರಿಯು ಇಲ್ಲ ನೀನು ನನ್ನ ಸ್ವತ್ತು ನಿನ್ನನ್ನು ಇವತ್ತು ತಿನ್ನದೇ ಬಿಡುವುದಿಲ್ಲ ಎಂದು ಬನವಾಸಿ ಹೇಳಿದ್ದಾನೆ. ಇನ್ನು ಚಾರುಗೆ ಹಿಂಸೆ ನೀಡಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾನೆ. ಇದರಿಂದ ತಪ್ಪಿಸಿಕೊಂಡು ಚಾರು ಹೋಗುತ್ತಿದ್ದರೂ ಸಹ ಬನವಾಸಿ ಬಿಡುತ್ತಿಲ್ಲ.

ಸಿಟ್ಟಿಗೆದ್ದ ಮಾನ್ಯತಾ
ಇನ್ನು ಮನೆಗೆ ಬಂದಿರುವ ಆದ್ಯಾ ಮತ್ತು ಶರ್ಮೀಳಾಗೆ ಮಾನ್ಯತಾ ಬೈಯುತ್ತಿದ್ದಾಳೆ. ನೀನು ನನ್ನ ಗಂಡನನ್ನು ನನ್ನಿಂದ ಕಿತ್ತುಕೊಂಡೆ ಎಂದು ಹೇಳುತ್ತಿದ್ದಾಳೆ. ಇದಕ್ಕೆ ಶರ್ಮಿಳಾ ಸಹ ಪ್ರತ್ಯುತ್ತರವಾಗಿ ನಾನೇನು ಗಂಡನನ್ನು ಕಿತ್ತುಕೊಂಡಿಲ್ಲ, ಮದುವೆ ಮಾಡಿಸಿಕೊಂಡೇ ಬಂದಿದ್ದೇನೆ ಎಂದಿದ್ದಾಳೆ. ನಿಮಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ನಮಗೂ ಇದೆ ಎಂದು ಶರ್ಮೀಳಾ ಮಾನ್ಯತಾಗೆ ಹೇಳಿದ್ದಾಳೆ. ಇದರಿಂದ ಮಾನ್ಯತಾ ಸಿಟ್ಟಿಗೆದ್ದಿದ್ದಾಳೆ.

ಮಾನ್ಯತಾ ಮಾತು ಕೇಳಿ ಶಾಕ್ ಆದ ಅಮ್ಮ ಮಗಳು
ಆದ್ಯಾ ಮತ್ತು ಶರ್ಮೀಳಾಳನ್ನು ಮನೆಯಿಂದ ಹೊರಗೆ ಹಾಕುವಂತೆ ಜೈ ಶಂಕರ್ ಗೆ ಮಾನ್ಯತಾ ಹೇಳಿದ್ದಾಳೆ. ಜೈಶಂಕರ್ ಮಾನ್ಯತಾ ಮಾತು ಕೇಳಿ ಸುಮ್ಮನೆ ಇದ್ದಾನೆ. ಇನ್ನು ಅಂತಸ್ತಿನ ಬಗ್ಗೆ ಮಾನ್ಯತಾ ಮಾತನಾಡಿದ್ದಾಳೆ. ಇದಕ್ಕೆ ಶರ್ಮೀಳಾ ಸಿಟ್ಟಿಗೆದ್ದಿದ್ದಾಳೆ. ಅಕ್ಕ ಯಾವಾಗಲೂ ಅಂತಸ್ತು ಅಂತಸ್ತು ಎಂದು ಮಾತನಾಡುತ್ತೀರಾ ಯಾರಿಗೂ ಏನು ಅಂತಸ್ತಿನಲ್ಲಿ ಕಡಿಮೆ ಇರುವುದಿಲ್ಲ ಎಂದಿದ್ದಾಳೆ. ನಾವು ಯಾವಾಗಲೂ ಮೋಸ ಮಾಡಿದ್ದೀರಿ ಎನ್ನುತ್ತೀರಲ್ಲ ನಾವೇನು ಮೋಸ ಮಾಡಿಲ್ಲ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದೀರಿ ಎಂದು ಶರ್ಮೀಳಾ ಮಾನ್ಯತಾಗೆ ಹೇಳಿದ್ದಾಳೆ. ಇನ್ನು ಮಾತುಕತೆ ಎಲ್ಲಾ ಆದಮೇಲೆ ಶರ್ಮೀಳಾ ಮತ್ತು ಆದ್ಯಾ ಮನೆಯಿಂದ ಹೊರಗೆ ಹೋಗಬೇಕು ನಾನು ಇಷ್ಟು ದಿನ ಮನೆಯಲ್ಲಿ ನಿಮ್ಮನ್ನ ಬಿಟ್ಟಿದ್ದೆ ತಪ್ಪು ಎಂದು ಮಾನ್ಯತಾ ತಿಳಿಸಿದ್ದಾಳೆ. ನಿಮಗೆ ಏನು ಸಮಸ್ಯೆ ಆಗಬಾರದು ಎಂದು ನಾನೇ ಬಟ್ಟೆಯನ್ನೆಲ್ಲ ಪ್ಯಾಕ್ ಮಾಡಿದ್ದೇನೆ ನೀವು ಇನ್ನು ಮನೆ ಬಿಟ್ಟು ಹೊರಡಬಹುದು ಎಂದು ಹೇಳಿದ್ದಾಳೆ. ಇನ್ನು ಮಾನ್ಯತಾ ಮಾತು ಕೇಳಿದ ಆದ್ಯಾ ಮತ್ತು ಶರ್ಮೀಳಾಗೆ ತುಂಬಾ ಶಾಕ್ ಆಗಿದೆ.

ಕಣ್ಣು ಬರಲಿ ಎಂದು ಪ್ರಾರ್ಥನೆ ಸಲ್ಲಿಕೆ
ರಾಮಾಚಾರಿ ಚಾರುಲತಾ ಒಳಿತಿಗೆ ಪೂಜೆಯನ್ನ ಕೈಗೊಂಡಿದ್ದಾನೆ. ಸುರಿಯುತ್ತಿರುವ ಜಲಪಾತದ ನಡುವೆ ನಿಂತು ಸ್ನಾನವನ್ನು ಮಾಡಿ ದೇವರಿಗೆ ಪೂಜೆಯನ್ನ ಕೈಗೊಂಡಿದ್ದಾನೆ. ಸರಿ ನೋಡಪ್ಪ ಎಷ್ಟು ವಿಚಿತ್ರ ಜೀವನ ನಾನು ಯಾರನ್ನು ದ್ವೇಷಿಸುತ್ತಿದ್ದೇನೆ ಇಂದು ಅವರಿಗಾಗಿಯೇ ಕಣ್ಣು ಬರಲಿ ಎಂದು ಪ್ರಾರ್ಥನೆಯನ್ನ ಸಲ್ಲಿಸುತ್ತಿದ್ದೇನೆ ಎಷ್ಟು ವಿಚಿತ್ರವಾಗಿದೆ ನೋಡು ಎಂದು ದೇವರ ಬಳಿ ಹೇಳಿಕೊಳ್ಳುತ್ತಿದ್ದಾನೆ. ದೇವರೇ ಮೇಡಂಗೆ ಕಣ್ಣು ಬಂದರೆ ಅಷ್ಟೇ ಸಾಕು ನನಗೆ ಕಾಡುತ್ತಿರುವ ಪಾಪಪ್ರಜ್ಞೆ ಕಡಿಮೆಯಾಗುತ್ತದೆ ಎಂದು ದೇವರಿಗೆ ಹೂಗಳ ಮೂಲಕ ಅರ್ಚನೆಯನ್ನ ಮಾಡುತ್ತಿದ್ದಾನೆ. ಈ ಕಡೆ ಚಾರು ಬನವಾಸಿ ಕೈಯಲ್ಲಿ ಸಿಲುಕಿ ಏನು ಮಾಡಬೇಕು ಎಂದು ಗೊತ್ತಾಗದೆ ಪರದಾಡುತ್ತಿದ್ದಾಳೆ. ಮುಂದೆ ಚಾರು ಯಾವ ರೀತಿ ಪಾರಾಗಲಿದ್ದಾಳೆ ಎಂಬುದೇ ಕಥೆಯಲ್ಲಿರುವ ಟ್ವಿಸ್ಟ್ ಆಗಿದೆ.


Click it and Unblock the Notifications











