Ramachari serial: ಜೈಶಂಕರ್‌ನನ್ನು ಮನೆಗೆ ಕರೆದುಕೊಂಡು ಹೋದ ಮಾನ್ಯತಾ!
ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ತನ್ನನ್ನು ಅತ್ಯಾಚಾರ ಮಾಡಲು ಬಂದ ಬನವಾಸಿಗೆ ಚಾರು ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸಿದ್ದಾಳೆ. ಆತ್ಮವಿಶ್ವಾಸವನ್ನು ತುಂಬಿಕೊಂಡು ಬನವಾಸಿವನ್ನು ಆಶ್ರಮದಿಂದ ಹೊಡೆದು ಓಡಿಸಿದ್ದಾಳೆ.
ರಾಮಾಚಾರಿ ತನ್ನ ಪೂಜೆಯನ್ನೆಲ್ಲಾ ಮುಗಿಸಿಕೊಂಡು ಆಶ್ರಮಕ್ಕೆ ಬಂದಿದ್ದಾನೆ. ಈ ಕಡೆ ಗುರೂಜಿಯವರು ಕೊನೆ ಹಂತದ ಪೂಜೆಯನ್ನ ಮಾಡುತ್ತಿದ್ದಾರೆ. ಇದು ನಾನು ಮಾಡುತ್ತಿರುವ ಕೊನೆಯ ಹಂತದ ಪೂಜೆಯಾಗಿದೆ ಫಲ ದೇವರಿಗೆ ಬಿಟ್ಟಿದ್ದು ಎಂದು ರಾಮಾಚಾರಿಗೆ ಗುರೂಜಿ ಹೇಳಿದ್ದಾರೆ. ಚಾರುಲತಾ ಹಣೆಗೆ ವಿಭೂತಿಯನ್ನು ಇಟ್ಟು ಎರಡು ಕಣ್ಣುಗಳಿಗೂ ಔಷಧಿಯನ್ನ ಕಟ್ಟಿ ಮಲಗಿಸಿದ್ದಾರೆ. ಹಾಗೆ ಮಂತ್ರವನ್ನ ಹೇಳಿದ್ದಾರೆ ಈ ವೇಳೆ ರಾಮಾಚಾರಿ ದೇವರೇ ಚಾರುಗೆ ಬೇಗ ಕಣ್ಣು ಬರಲಿ ಎಂದು ಪ್ರಾರ್ಥನೆಯನ್ನ ಮಮಾಡಿಕೊಂಡಿದ್ದಾನೆ.
ಈ ಕಡೆ ರಾಮಾಚಾರಿ ಚಾರುಗೆ ಕಣ್ಣು ಬರಲಿ ಎಂದು ಪ್ರಾರ್ಥನೆ ಸಲ್ಲಿಸುವಾಗ ದೇವರೇ ನನಗೆ ಕಣ್ಣು ಬಂದು ನಾನು ರಾಮಾಚಾರಿಯ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ ಹೇಳಿಕೊಳ್ಳಬೇಕು ಎಂದು ನೋಡುತ್ತಿರುವ ಚಾರುಲತಾಗೆ ಶಾಕ್ ಆಗಿದೆ. ರಾಮಾಚಾರಿ ನಾನು ಬರಿ ಗೆಳೆತನದ ಹಾಗೂ ಮಾನವೀಯತೆಯ ದೃಷ್ಟಿಯಿಂದ ಚಾರುಲತಾರನ್ನು ನೋಡುತ್ತಿದ್ದೇನೆ ಎಂದು ಹೇಳುತ್ತಿರುವುದು ಚಾರುಗೆ ಬೇಸರವನ್ನ ತಂದಿದೆ. ಆದರೂ ಸಹ ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಚಾರು ಮನಸಿನಲ್ಲಿ ಅಂದುಕೊಂಡಿದ್ದಾಳೆ.
ಇನ್ನು ಗುರೂಜಿ ನೀನು ಮದುವೆಯಾಗುವ ಹುಡುಗಿಯ ಎಂದು ಕೇಳಿದ್ದಕ್ಕೆ ನಾನು ಮಾಡಿರುವ ಪಾಪ ನನ್ನನ್ನು ಕಾಡುತ್ತಿದೆ ಪಾಪದಿಂದ ವಿಮೋಕ್ತಿ ಪಡೆಯಲು ನಾನು ಇವರಿಗೆ ಇಷ್ಟು ಸೇವೆಯನ್ನ ಮಾಡುತ್ತಿದ್ದೇನೆ. ಇವರಿಗೆ ಕಣ್ಣು ಬಂದ ಮೇಲೆ ಅವರ ಪಾಡಿಗೆ ಅವರು ನನ್ನ ಪಾಡಿಗೆ ನಾನು ಇರುತ್ತೇನೆ ಎಂದು ಗುರೂಜಿಯ ಬಳಿಯು ಸಹ ರಾಮಾಚಾರಿ ಹೇಳುತ್ತಿರುವುದು ಚಾರುಗೆ ತುಂಬಾ ಬೇಸರ ತಂದಿದೆ

ಮತ್ತೆ ವಾಪಸ್ ಮನೆಗೆ ಕರೆದುಕೊಂಡು ಹೋದ ಕಿರಾತಕಿ
ಮನೆಗೆ ಬಂದಿರುವ ಮಾನ್ಯತಾ ಜೈ ಶಂಕರ್ ಹಳೆಯದನ್ನೆಲ್ಲ ನೆನಪಿಸಿಕೊಂಡು ನಗುವಾಗ ಅವರ ನಗುವಿನಲ್ಲಿ ಭಾಗಿಯಾಗಿದ್ದಾಳೆ. ಮಾನ್ಯತಾ ಬಂದುದ್ದನ್ನು ನೋಡಿದ ಶರ್ಮಿಳಾಗೆ ಹಾಗೆ ಸ್ವಮಗಿದೆ. ಯಾಕೆ ಇಲ್ಲಿಗೆ ಬಂದಿದ್ದಾಳೆ ಎಂದುಕೊಂಡಿದ್ದಾಳೆ. ಅವರು ಮಾತನಾಡಲು ಆಸ್ಪದವನ್ನು ಕೊಡದೆ ತಾನೇ ಮಾತನಾಡುತ್ತಿದ್ದಾಳೆ. ಜೈ ಶಂಕರ್ ನೀನು ಯಾಕೆ ಇಲ್ಲಿಗೆ ಬಂದೆ ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಈ ವೇಳೆ ಗಂಡ ಎಲ್ಲಿರುತ್ತಾನೋ ಹೆಂಡತಿ ಅಲ್ಲಿ ಇರುವುದೇ ಧರ್ಮ ಅಲ್ಲವೇ ಎಂದು ಮಾನ್ಯತಾಂಕರಿಗೆ ಹೇಳಿದ್ದಾಳೆ. ಈ ಮಾತು ಕೊಂಚ ಶಾಕ್ ನೀಡಿದೆ ನಂತರ ಇವಾಗ ನಿನಗೆ ಅರ್ಥವಾಯಿತಾ ಎಂದು ಮಾನ್ಯತಾಗೆ ಜೈ ಶಂಕರ್ ಹೇಳಿದ್ದಾರೆ. ಗಂಡ ಹೆಂಡತಿಯ ಜಗಳ ಸರ್ವೆ ಸಾಮಾನ್ಯ ನೀವಾದರೂ ಬುದ್ಧಿ ಹೇಳಬಹುದು, ಮನೆ ಬಿಟ್ಟು ಬಂದಿದ್ದೀರಾ ಎಂದು ನಾಟಕವನ್ನು ಆಡುತ್ತಿದ್ದಾಳೆ.

ಚಾರು ಮುಂದಿಟ್ಟುಕೊಂಡು ಆಟವಾಡಿದ ಮಾನ್ಯತಾ
ಈ ಕಡೆ ಮಾನ್ಯತಾ ಶರ್ಮಿಳಾಗೆ ಶಾಕ್ ನೀಡುತ್ತಿದ್ದಾಳೆ. ಶರ್ಮಿಳ ನೀನಾದರೂ ಹೇಳಬಹುದು ಅಲ್ಲವೇ ನೀನು ಯಾಕೆ ಮನೆ ಬಿಟ್ಟು ಬಂದೆ, ನೀನು ಬಂದೆ ಎಂದು ಅವರು ಬಂದಿದ್ದಾರೆ, ನೀನು ನಾನು ಹೋಗುವುದಿಲ್ಲ ನಿಮಗೆಷ್ಟು ಹಕ್ಕು ಇದೆಯೋ ನನಗೂ ಅಷ್ಟೇ ಹಕ್ಕು ಇದೆ ಎಂದು ಪಟ್ಟು ಹಿಡಿಯಬೇಕಿತ್ತು ಎಂದು ಶರ್ಮಿಳಾಗೆ ಮಾನ್ಯತಾ ಹೇಳಿಕೊಟ್ಟಿದ್ದಾಳೆ. ಮಾನ್ಯತಾ ಈ ಮಾತು ಸ್ವಲ್ಪ ಶಾಕ್ ಅನ್ನು ನೀಡಿದಂತೆ ಆಗಿದೆ ನಾವು ಏನು ಹೇಳಿದರು ನೀವು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಅದಕ್ಕಾಗಿ ನಾವು ಮನೆ ಬಿಟ್ಟು ಬಂದ್ವಿ ಎಂದು ಶರ್ಮಿಳ ಹೇಳಿದ್ದಾಳೆ.

ಮಾನ್ಯತಾ ಬ್ಲಾಕ್‌ಮೇಲ್
ನಾವೀಗ ಕಚ್ಚಾಡಿಕೊಂಡು ಇದ್ದರೆ ಕಣ್ಣು ಕಳೆದುಕೊಂಡಿರುವ ಚಾರುಗೆ ತುಂಬಾ ಬೇಸರವಾಗುತ್ತದೆ ಅವಳಿಗೋಸ್ಕರವಾದರೂ ನಾವೆಲ್ಲರೂ ಜೊತೆಯಾಗಿ ಇರಬೇಕು ಎಂದು ಚಾರು ವಿಷಯವನ್ನು ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ತಂತ್ರವನ್ನು ಮಾನ್ಯತಾ ಮಾಡುತ್ತಿದ್ದಾಳೆ. ಇನ್ನು ಚಾರುಗೋಸ್ಕರವಾದರೂ ಮನೆಗೆ ಹೋಗಬೇಕು ಎಂದು ಜೈ ಶಂಕರ್ ತೀರ್ಮಾನ ಮಾಡಿದ್ದು ವಾಪಸ್ ಮನೆಗೆ ಹೋಗಿದ್ದಾನೆ. ಇನ್ನು ಜೈ ಶಂಕರ್ ಬಳಿ ಮಾನ್ಯತಾ ತನ್ನ ಮಗಳ ಮದುವೆಯ ಪ್ರಸ್ತಾಪ ಮಾಡಿದ್ದು ಚಾರುಗೆ ನಾನು ಉತ್ತಮ ಹುಡುಗನನ್ನೇ ತಂದು ಮದುವೆ ಮಾಡುತ್ತೇನೆ ಎಂದು ಜೈ ಶಂಕರ್ ನ ಕೆಲಸ ಎನಿಮಿಯಾದ ಮಗನನ್ನು ಮದುವೆ ಮಾಡುವುದಾಗಿ ಹೇಳಿರುವುದು ಜೈಶಂಕರ್‌ಗೆ ಇಷ್ಟವಿಲ್ಲ. ಚಾರು ರಾಮಾಚಾರಿ ಅನ್ನು ಯಾವ ರೀತಿ ಮದುವೆಯಾಗುತ್ತಾಳೆ ಚಾರುಗೆ ಕಣ್ಣು ಬರುತ್ತಾಎಂಬುವುದೇ ಕುತೂಹಲವಾಗಿದೆ.


Click it and Unblock the Notifications











