Ramachari serial: ರಾಮಾಚಾರಿ ಪಡೆಯಲು ಸೂಸೈಡ್ ಮಾಡಿಕೊಳ್ಳಲು ಹೋದ ಚಾರು!
ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಚಾರುಲತಾಳನ್ನು ಬೆಟ್ಟದ ಮೇಲೆ ಕರೆದುಕೊಂಡು ಹೋಗಿದ್ದಾನೆ. ಚಾರು ಇವತ್ತು ತರು ಮಾಡಿ ರಾಮಾಚಾರಿ ತನ್ನವನಾಗಿ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದಾಳೆ.
ಮುರಾರಿ ರಾಮಾಚಾರಿಗೆ ಫೋನ್ ಮಾಡಿದ್ದಾನೆ. ಹೋದ ಕೆಲಸ ಏನಾಯಿತು ಎಂದು ಮುರಾರಿ ಕೇಳಿದ್ದಾನೆ. ಇದಕ್ಕೆ ರಾಮಾಚಾರಿ ಚಾರು ಮೇಡಂಗೆ ಕಣ್ಣು ಬರಲಿಲ್ಲ ಎಂದು ಬೇಸರದಿಂದ ಹೇಳಿದ್ದಾನೆ. ಇದರಿಂದ ಮುರಾರಿಗೂ ಸಹ ಬೇಸರವಾಗಿದೆ. ಹುಷಾರಾಗಿ ಚಾರು ಮೇಡಂನನ್ನು ನೋಡಿಕೊಳ್ಳಿ ಎಂದು ಮುರಾರಿ ರಾಮಾಚಾರಿಗೆ ಹೇಳಿದ್ದಾನೆ. ನನಗೆ ಇದ್ದ ಕೊನೆಯ ಭರವಸೆಯೂ ಹೋಯಿತು ಎಂದು ಮುರಾರಿ ಆ ಬಳಿ ರಾಮಾಚಾರಿ ಹೇಳಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದಾನೆ.

ರಾಮಾಚಾರಿ ಮುರಾರಿ ಬಳಿ ಮಾತನಾಡುತ್ತಾ ಚಾರು ಕಡೆ ಗಮನವನ್ನು ನೀಡಲಿಲ್ಲ. ಚಾರು ಬೆಟ್ಟದಿಂದ ಕೆಳಗಡೆ ಇಳಿದುಕೊಂಡು ಹೋಗುತ್ತಿದ್ದಾಳೆ. ನಂತರ ಮುರಾರಿ ಚಾರುಲತಾಳನ್ನು ಹುಷಾರಾಗಿ ನೋಡಿಕೋ ಎಂದು ಹೇಳಿದ್ದಕ್ಕೆ ಚಾರುಲತಾಳ ಕಡೆ ಗಮನವನ್ನು ರಾಮಾಚಾರಿ ಹರಿಸಿದ್ದಾನೆ. ಇನ್ನು ಚಾರು ಬೆಟ್ಟದಿಂದ ಕೆಳಗಡೆ ಹೋಗುತ್ತಿದ್ದನ್ನು ನೋಡಿದ ರಾಮಾಚಾರಿಗೆ ತುಂಬಾ ಭಯವಾಗಿದೆ. ಅಲ್ಲಿಂದ ಓಡಿ ಬಂದಿದ್ದಾನೆ. ಚಾರು ಮೇಡಂ ಎಂದು ಕರೆಯುತ್ತಿದ್ದರೂ ಸಹ ಚಾರು ಯಾವುದೇ ರೆಸ್ಪಾನ್ಸ್ ಮಾಡುತ್ತಿಲ್ಲ.
ರಾಮಾಚಾರಿಯನ್ನು ಪಡೆದುಕೊಳ್ಳಲೇಬೇಕು ಎಂದುಕೊಂಡಿರುವ ಚಾರುಲತಾ ಬೆಟ್ಟದ ಕೆಳಗಡೆ ಬೀಳಲು ಹೋಗುತ್ತಿದ್ದಾಳೆ. ರಾಮಾಚಾರಿ ಎಷ್ಟೇ ಕರೆಯುತ್ತಿದ್ದರೂ ಸಹ ಚಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದೇ ವೇಳೆ ತನ್ನ ತಾಯಿ ತನಗೆ ಬೇರೆ ಹುಡುಗನ ಜೊತೆ ಮದುವೆ ಮಾಡುತ್ತಿರುವುದು ಸಹ ಚಾರುಗೆ ಸ್ವಲ್ಪವೂ ಇಷ್ಟ ಇಲ್ಲ.

ಇನ್ನು ನನಗೆ ನೀನು ಬೇಕೇ ಬೇಕು ರಾಮಾಚಾರಿ ನಾನು ತೆಗೆದುಕೊಳ್ಳುವ ನಿರ್ಣಯ ನಮ್ಮ ಅಮ್ಮನಿಗೆ ಬೇಸರವನ್ನ ತರಿಸಿದರೂ ಸಹ ನಿನ್ನಂತೆ ಯಾರೂ ಸಹ ನನ್ನನ್ನು ನೋಡಿಕೊಳ್ಳಲು ಸಾಧ್ಯ ಇಲ್ಲ ಎಂದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಬೆಟ್ಟವನ್ನು ಇಳಿದು ಹೋಗುತ್ತಿದ್ದಾಳೆ. ರಾಮಾಚಾರಿ ಎಷ್ಟೇ ಕೂಗಿದರೂ ಸಹ ಚಾರು ಮಾತ್ರ ಹಿಂದೆ ತಿರುಗಿ ನೋಡುತ್ತಿಲ್ಲ. ರಾಮಾಚಾರಿಗೆ ಚಾರು ನಡತೆಯಿಂದ ತುಂಬಾನೇ ಭಯವಾಗಿದೆ.
ಈ ಕಡೆ ಚಾರು ನನಗೆ ಕಣ್ಣು ಕಾಣುವುದಿಲ್ಲ ಇನ್ನು ಕಣ್ಣು ಕಾಣದೆ ಇರುವವಳನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೆ ನಿನ್ನಷ್ಟು ಚೆನ್ನಾಗಿ ನೋಡಿಕೊಳ್ಳುವವರು ಯಾರು ಇಲ್ಲ ಅದಕ್ಕಾಗಿ ನಾನು ಸಾಯುತ್ತೇನೆ ಎಂದು ಹೇಳುತ್ತಿರುತ್ತಾಳೆ. ಮೇಡಂ ನಿಮ್ಮ ಕಣ್ಣಿಗೆ ಕಣ್ಣಾಗಿ ನಾನು ಇರುತ್ತೇನೆ ನಿಮಗೆ ಯಾವಾಗಲೂ ಜೊತೆಯಾಗಿ ಇದ್ದು ಸಹಾಯವನ್ನ ಮಾಡುತ್ತೇನೆ ಎಂದು ರಾಮಾಚಾರಿ ಹೇಳುತ್ತಾನೆ.
ಚಾರು ನೀನು ಮದುವೆಯಾಗುವವರೆಗೂ ನನ್ನನ್ನು ನೋಡಿಕೊಳ್ಳುತ್ತೀಯ ನಂತರ ಯಾರು ನೋಡಿಕೊಳ್ಳುತ್ತಾರೆ ಎಂದು ಚಾರು ರಾಮಾಚಾರಿಗೆ ಪ್ರಶ್ನೆಯನ್ನು ಮಾಡುತ್ತಾಳೆ. ಇನ್ನು ಆಯ್ತು ಮೇಡಂ ನಿಮ್ಮ ಮಾತನ್ನು ಕೇಳುತ್ತೇನೆ ಎಂದು ಚಾರುಲತಾ ಇರುವ ಬಳಿಗೆ ರಾಮಾಚಾರಿ ಬಂದಿದ್ದಾನೆ. ಇದೇ ವೇಳೆ ನಾಟಕ ಮಾಡಿಕೊಂಡು ಚಾರು ರಾಮಾಚಾರಿಯನ್ನ ಮುಟ್ಟಿ ಮುಟ್ಟಿ ನೋಡುತ್ತಿದ್ದಾಳೆ. ರಾಮಾಚಾರಿ ಕಟ್ಟು ಎಂದು ಅರಿಶಿಣದ ದಾರವನ್ನು ರಾಮಾಚಾರಿ ಕೈಗೆ ಚಾರು ಕೊಟ್ಟಿದ್ದಾಳೆ. ಒಂದು ಕ್ಷಣ ರಾಮಾಚಾರಿ ಯೋಚನೆ ಮಾಡುತ್ತಾ ನಿಂತಿದ್ದಾನೆ. ರಾಮಾಚಾರಿ ಚಾರುಮಾತಿಗೆ ಕಟ್ಟು ಬಿದ್ದು ಅರಿಶಿಣದ ದಾರವನ್ನು ಚಾರುಗೆ ಕಟ್ಟುತ್ತಾನಾ ಎಂಬುದೇ ಕುತೂಹಲವಾಗಿದೆ.


Click it and Unblock the Notifications











