Ramachari serial: ಚಾರುಲತಾಳನ್ನು ಮದುವೆಯಾದ ರಾಮಾಚಾರಿ!

By ಶೃತಿ ಹರೀಶ್ ಗೌಡ

ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಕೈಯಲ್ಲಿದ್ದ ತಾಳಿಯನ್ನು ರಾಮಾಚಾರಿ ತನ್ನ ಕೈಗೆ ತೆಗೆದುಕೊಂಡಿದ್ದಾನೆ. ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾನೆ. ರಾಮಾಚಾರಿ ನಿನಗೆ ಇಷ್ಟವಿಲ್ಲದಿದ್ದರೆ‌ ಬಿಡು ಬೇಡ ನಾನು ಸಾಯುತ್ತೇನೆ ಕಣ್ಣಿಲ್ಲದೆ ನನಗೆ ಬದುಕೋದು ತುಂಬಾ ಕಷ್ಟ ಎಂದು ತಿಳಿದಿದೆ ಎಂದು ರಾಮಾಚಾರಿಗೆ ಚಾರು ಹೇಳುತ್ತಿದ್ದಾಳೆ. ಈ ಕಡೆ ರಾಮಾಚಾರಿ ಗೊಂದಲಕ್ಕೆ ಸಿಲುಕಿದ್ದಾನೆ. ಅಪ್ಪನಿಗೆ ರಾಮಾಚಾರಿ ಕೊಟ್ಟ ಮಾತು ಸಹ ನೆನೆಪಿಗೆ ಬರುತ್ತಿದೆ .ಆದರೆ ಏನು ಮಾಡಲಾಗದ ಪರಿಸ್ಥಿತಿ ರಾಮಾಚಾರಿಗೆ ಬಂದಿದೆ.

ಚಾರುಲತಾ ಮಾತುಗಳನ್ನು ಕೇಳಿಸಿಕೊಂಡ ರಾಮಾಚಾರಿ ಚಾರುಗೆ ತಾಳಿಯನ್ನು ಕಟ್ಟಿದ್ದಾನೆ. ಕಾಯಾ, ವಾಚಾ , ಮನಸ ನಿನ್ನ ಜೊತೆಗೆ ಇರುತ್ತೇನೆಂದು ಹೇಳಿದ್ದಾನೆ. ಇದರಿಂದ ಚಾರುಲತಾಗೆ ತುಂಬಾ ಸಂತೋಷವಾಗಿದೆ. ನೀನು ಕಣ್ಣೀರು ಹಾಕುವ ಅಗತ್ಯವಿಲ್ಲ ಎಂದು ರಾಮಾಚಾರಿ ಚಾರುಗೆ ಹೇಳುತ್ತಿದ್ದಾನೆ. ಅದೇ ರೀತಿ ತನ್ನ ಕೈಯಿಂದ ಚಾರು ಕಣ್ಣನ್ನು ಒರೆಸಿದ್ದಾನೆ. ಚಾರು ರಾಮಾಚಾರಿಯನ್ನು ತಬ್ಬಿಕೊಂಡು ಅಳುತ್ತಿದ್ದಾಳೆ. ಆದರೆ ರಾಮಾಚಾರಿಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ನಿನ್ನ ಕಣ್ಣಾಗಿ ಇರುತ್ತೇನೆ ಎಂದು ಮಾತು ಕೊಟ್ಟ ಮೇಲೆ ನಡೆಸಿಕೊಡುವುದು ರಾಮಾಚಾರಿಯ ಕರ್ತವ್ಯವಾಗಿದ್ದು ಚಾರು ಕುತ್ತಿಗೆಗೆ ರಾಮಾಚಾರಿ ತಾಳಿಯನ್ನ ಕಟ್ಟಿದ್ದಾನೆ.

ವಾಪಸ್ ಯಾತ್ರೆಯನ್ನ ಮುಗಿಸಿಕೊಂಡು ಆಚಾರ್ಯರು ಮನೆಗೆ ಬಂದಿದ್ದಾರೆ. ಇದನ್ನು ನೋಡಿದ ಜಾನಕಿಗೆ ತುಂಬಾ ಖುಷಿಯಾಗಿದೆ. ಅಜ್ಜಿ ಹಾಗೂ ಜಾನಕಿ ಓಡೋಡಿ ಬಂದು ನಾರಾಯಣ ಆಚಾರ್ಯರ ಯೋಗ ಕ್ಷೇಮವನ್ನ ವಿಚಾರಿಸುತ್ತಿದ್ದಾರೆ. ಸಂತಸದಿಂದ ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಚಾರ್ಯರು ತಮ್ಮ ಹಿರಿಯ ಸೊಸೆಯನ್ನು ಕೇಳಿಕೊಳ್ಳುತ್ತಿದ್ದಾರೆ. ಅದೇ ವೇಳೆ ಜಾನಕಿ ಹಾಗೂ ಅಜಯ್ ಶ್ರುತಿ ಕಣ್ಣೀರು ಹಾಕಿ ಫೋಟೋ ಕಡೆ ಕೈ ತೋರಿಸಿದ್ದಾರೆ.

Colors Kannada Ramachari Written Update on February 23rd episode

ಫೋಟೋವನ್ನು ನೋಡಿದ ನಾರಾಯಣಚಾರ್ಯರಿಗೆ ದುಃಖದ ಕಟ್ಟೆ ಹೊಡೆದಿದೆ. ನಿನ್ನನ್ನು ಉಳಿಸಿಕೊಳ್ಳಬೇಕು ಎಂದು ಎಷ್ಟೆಷ್ಟೋ ಪ್ರಯತ್ನ ಮಾಡಿದರೂ ವಿಧಿಯಾಟವೇ ಬೇರೆ ಇತ್ತು, ನೀನು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋದೆಯಾ ಎಂದು ಕಣ್ಣೀರನ್ನು ಹಾಕುತ್ತಿದ್ದಾರೆ. ಅವರೆಲ್ಲರೂ ಸಹ ಅಳುತ್ತಿದ್ದಾರೆ. ನಾರಾಯಣ ಆಚಾರ್ಯರಿಗೆ ಮನೆಯವರು ಸಮಾಧಾನ ಮಾಡಿದ್ದಾರೆ.

ಈ ಕಡೆ ಚಾರು ಬಳಿ ರಾಮಾಚಾರಿ ಪ್ರಾಮಿಸ್ ತೆಗೆದುಕೊಂಡಿದ್ದಾನೆ. ಜವಾಬ್ದಾರಿ ಮುಗಿದ ಬಳಿಕ ನಾನೇ ಜಗತ್ತಿಗೆ ನಿನ್ನನ್ನು ಹೆಂಡತಿ ಎಂದು ಪರಿಚಯಿಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಚಾರು ಸಹ ನಿನ್ನ ಮಾತಿಗೆ ನನ್ನ ಒಪ್ಪಿಗೆ ಇದೆ ಎಂದು ಪ್ರಾಮಿಸ್ ಮಾಡಿದ್ದಾಳೆ. ಈ ದೇವಿಗೆ ನಾವಿಬ್ಬರು ಮದುವೆಯಾಗಿರುವ ಸತ್ಯ ತಿಳಿದಿದೆ ಈ ದೇವಿಯ ಮೇಲಾಣೆಗೂ ಸಹ ನೀನು ಒಪ್ಪಿಕೊಳ್ಳುವವರೆಗೂ ನಾನು ನನ್ನ ಅಪ್ಪನ ಮನೆಯಲ್ಲಿ ಇರುತ್ತೇನೆ ಎಂದು ಚಾರು ರಾಮಾಚಾರಿಗೆ ಹೇಳಿದ್ದಾಳೆ.

Colors Kannada Ramachari Written Update on February 23rd episode

ಈ ಕಡೆ ಶೃತಿ ಚಾರು ಮೇಲೆ ಚಾಡಿಯನ್ನು ಹೇಳುತ್ತಿದ್ದಾಳೆ. ಚಾರುಲತಾ ಅಣ್ಣನ ಪ್ರಾಜೆಕ್ಟ್ ಕದ್ದಿದ್ದರಿಂದ ಅತ್ತಿಗೆಯ ಪ್ರಾಣ ಹೋಯಿತು ಎಂದು ಹೇಳುತ್ತಿದ್ದಾಳೆ. ಪದ್ಮನಾಭ ಮತ್ತು ದೀಪಾ ಚಾರು ಮೇಲೆ ರಾಮಾಚಾರಿ ತನ್ನ ಕರುಣೆಯನ್ನು ತೋರಿಸುವುದನ್ನು ಬಿಟ್ಟಿಲ್ಲ ಎಂದು ಅವರು ಇಲ್ಲದಾಗ ನಡೆದ ಎಲ್ಲಾ ವಿಷಯಗಳನ್ನು ನಾರಾಯಣ ಆಚಾರ್ಯರ ಬಳಿ ಹೇಳುತ್ತಿದ್ದಾರೆ. ನನ್ನ ಮದುವೆಯನ್ನು ನೀವೇ ಮಾಡಿಸಬೇಕು ನನಗೆ ನ್ಯಾಯವನ್ನು ನೀವೇ ಕೊಡಿಸಬೇಕು ಎಂದು ದೀಪ ನಾರಾಯಣ ಆಚಾರ್ಯರ ಮುಂದೆ ಕಣ್ಣೀರು ಹಾಕುತ್ತಿದ್ದಾಳೆ.

ಆಶ್ರಮದಲ್ಲಿ ಗುರುಗಳ ಕಾಲಿಗೆ ಬಿದ್ದು ರಾಮಾಚಾರಿ ಹಾಗೂ ಚಾರು ಆಶೀರ್ವಾದ ತೆಗೆದುಕೊಂಡಿದ್ದಾರೆ. ಆದಷ್ಟು ಬೇಗ ನಿನ್ನ ಗಂಡನಿಗೆ ಸತ್ಯವನ್ನ ಹೇಳು ಎಂದು ಗುರುಗಳು ಚಾರುಗೆ ಹೇಳಿದ್ದಾರೆ. ಮುಂದೇನಾಗುತ್ತದೆ ಎಂಬುವುದೇ ಇಲ್ಲಿರುವ ಟ್ವಿಸ್ಟ್ ಆಗಿದೆ.

More from Filmibeat

English summary
Colors Kannada serial Ramachari Written Update on February 23rd episode. Here is the details about ramachari marriage charulatha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X