Ramachari serial: ರಾಮಾಚಾರಿಗೆ ಚಾರು ಮುಂದೆ ಸವಾಲ್ ಹಾಕಿದ ಮಾನ್ಯತಾ
ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಗುರುಗಳು ತನ್ನ ಗಂಡನಿಗೆ ಸತ್ಯವನ್ನ ಹೇಳಿಬಿಡು ಸಂಸಾರದಲ್ಲಿ ಸುಳ್ಳು ಹೇಳುವುದು ಸರಿಯಲ್ಲ ಅದೇ ಸುಳ್ಳು ನಿನ್ನ ಸಂಸಾರದ ಪಾಲಿಗೆ ಮುಳುವಾದರೆ ಚೆನ್ನಾಗಿ ಇರಲ್ಲ ಎಂದು ಬುದ್ಧಿಯನ್ನು ಚಾರುಗೆ ಹೇಳಿ ಆಶ್ರಮದಿಂದ ಕಳುಹಿಸಿದ್ದಾರೆ.
ಈ ಕಡೆ ರಾಮಾಚಾರಿ ಚಾರುವನ್ನು ಆಶ್ರಮದಿಂದ ಕರೆದುಕೊಂಡು ಮರಳಿ ಮನೆಗೆ ಹೊರಟಿದ್ದಾನೆ. ಗುರುಗಳು ಹೇಳಿದ ಮಾತು ಚಾರು ಕಿವಿಯಲ್ಲಿ ಉಳಿದುಕೊಂಡಿದೆ. ಕಣ್ಣು ಕಾಣುತ್ತಿರುವ ವಿಷಯವನ್ನ ತಿಳಿದು ಖುಷಿಯಾಗಿದ್ದಾರೆ. ಗುರುಗಳ ಬಳಿ ಇದನ್ನು ಕೇಳಲು ಹೋಗಿದ್ದಾರೆ. ಗುರುಗಳು ಆ ಹುಡುಗಿಗೆ ಕಣ್ಣು ಕಾಣಿಸುತ್ತಿದೆ ಅವಳ ಉದ್ದೇಶ ಒಳ್ಳೆಯದಾಗಿದ್ದರಿಂದ ನಾನು ಸಹ ಅವಳಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮಲ್ಲಿರುವ ಸೀಕ್ರೆಟ್ ರಿವಿಲ್ ಆಗಬಾರದು ಎಂದು ಗುರುಗಳು ಆಶ್ರಮದ ವಾಸಿಗಳಿಗೆ ಹೇಳಿದ್ದಾರೆ.

ಮನೆಯಲ್ಲಿ ಶರ್ಮಿಳ ಜೈ ಶಂಕರ್ ಬಳಿ ಉದ್ಯಮಿ ಪ್ರಕಾಶ್ ಬೇನಿಯವರ ಬಗ್ಗೆ ಮಾತನಾಡುತ್ತಿದ್ದಾಳೆ. ಆಳಕ್ಕೆ ಇಳಿದು ನೋಡಿದರೆ ಅವರ ವರ್ತನೆ ಯಾಕೋ ಸರಿಯಾಗಿ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದಾಳೆ. ಅಲ್ಲಿಗೆ ಬಂದ ಮಾನ್ಯತಾ ಶರ್ಮಿಳಾಗೆ ಬೈದಿದ್ದಾಳೆ. ನನ್ನ ಮಗಳ ಮದುವೆಯನ್ನು ನೀನು ಹಾಳು ಮಾಡಲು ಬರಬೇಡ ಎಂದು ಶರ್ಮಿಳಾಗೆ ಬೈಯುತ್ತಿದ್ದಾಳೆ.
ನಮ್ಮ ಮತ್ತು ಅವರ ಸ್ಟೇಟಸ್ ಮ್ಯಾಚ್ ಆಗುತ್ತದೆ, ನನ್ನ ಮಗಳನ್ನು ಮದುವೆಯಾಗಲು ಬಿಸಿನೆಸ್ ಮ್ಯಾನ್‌ಗಳು ನಿಂತಿದ್ದಾರೆ ಎಂದು ಶರ್ಮಿಳಾಗೆ ಮಾನ್ಯತಾ ಬೈಯುತ್ತಿದ್ದಾಳೆ. ನಿನಗೆಲ್ಲಿ ಇದೆಲ್ಲಾ ಅರ್ಥ ಆಗಬೇಕು ನಾನು ಮದುವೆ ಮಾಡಿದರೆ ನಮ್ಮ ಸ್ಟೇಟಸ್‌ಗೆ ಮ್ಯಾಚ್ ಆಗುವಂತವರನ್ನು ಎಂದು ಹೇಳುತ್ತಿದ್ದಾಳೆ. ಇದರಿಂದ ಜೈ ಶಂಕರ್‌ಗೂ ಕೂಡ ಬೇಸರವಾಗಿದೆ. ನೀನು ಹೊಂದಿಕೊಂಡು ಹೋಗೋಣ ಎಂದು ಕರೆದಿದ್ದು ಎಂದು ಜಯಶಂಕರ್ ಮಾನ್ಯತಾಗೆ ಬುದ್ಧಿ ಹೇಳಿದ್ದಾರೆ.
ಈ ಕಡೆ ರಾಮಾಚಾರಿ ಚಾರುವನ್ನು ಕರೆದುಕೊಂಡು ಜಯಶಂಕರ್ ಮನೆಯ ಬಳಿ ಬಂದಿದ್ದಾನೆ. ಅಲ್ಲಿಗೆ ಮನೆಯಿಂದ ಜೈ ಶಂಕರ್ ಹಾಗೂ ಮಾನ್ಯತಾ ಹೊರಗೆ ಬಂದಿದ್ದಾರೆ. ಅವರ ಹಿಂದೆಯೇ ಶರ್ಮೀಳಾ ಮತ್ತು ಆದ್ಯಾ ಸಹ ಬಂದಿದ್ದಾರೆ. ಅಲ್ಲಿಗೆ ಬಂದ ಚಾರು ಮತ್ತು ರಾಮಾಚಾರಿಯನ್ನು ಕಂಡು ಜೈ ಶಂಕರ್ ಖುಷಿಪಟ್ಟಿದ್ದಾರೆ. ಕೆಲಸ ಏನಾಯಿತು ಎಂದು ಜಯಶಂಕರ್ ರಾಮಾಚಾರಿಯನ್ನ ಕೇಳಿದ್ದಾರೆ. ಆದರೆ ರಾಮಾಚಾರಿ ಬೇಸರದಿಂದ ವಿಫಲವಾಗಿದೆ ಸರ್ ಎಂದು ಹೇಳಿದ್ದಾನೆ.
ಮಾನ್ಯತಾ ಈ ಮಾತನ್ನ ಕೇಳಿ ತುಂಬಾ ಕೋಪ ಮಾಡಿಕೊಂಡಿದ್ದಾಳೆ. ರಾಮಾಚಾರಿ ಏನೇನು ನಾಟಕ ಮಾಡಿಕೊಂಡು ನನ್ನ ಮಗಳ ಬಾಳನ್ನೇ ಹಾಳು ಮಾಡಿದೆ, ನನಗೆ ಗೊತ್ತಿತ್ತು ನೀನು ಇದೇ ರೀತಿ ಹೇಳುತ್ತೀಯಾ ಎಂದು ಸುಮ್ಮನೆ ನಮ್ಮ ಸಮಯವನ್ನು ವ್ಯರ್ಥ ಮಾಡಿದೆ ಎಂದು ಮಾನ್ಯತಾ ರಾಮಾಚಾರಿಗೆ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾಳೆ. ಇದನ್ನು ಕೇಳಿಸಿಕೊಂಡ ಚಾರು ಬೇಸರದಿಂದ ನನ್ನ ಹಣೆಬರಹದಲ್ಲಿ ಬರೆದಿದ್ದರೆ ಅದು ಹಾಗೆ ಆಗುತ್ತದೆ ಎಂದು ಅಮ್ಮನಿಗೆ ಸಮಾಧಾನ ಮಾಡಿದ್ದಾಳೆ.
ಇನ್ನು ರಾಮಾಚಾರಿಗೆ ಬೈಯುತ್ತಿರುವ ಮಾನ್ಯತಾ ನನ್ನ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಹುಡುಗನನ್ನು ನಾನು ಹುಡುಕಿದ್ದೇನೆ ಅವನನ್ನು ಮದುವೆ ಮಾಡುತ್ತೇನೆ ಅವನು ಹಾಕುವ ವಾಚ್‌ಗೂ ಸಹ ನೀನು ಬಾಳುವುದಿಲ್ಲ ಎಂದು ರಾಮಾಚಾರಿಯನ್ನು ಅವಮಾನಿಸುತ್ತಿದ್ದಾಳೆ. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿರುವ ರಾಮಾಚಾರಿಗೆ ತುಂಬಾನೇ ಬೇಸರವಾಗಿದೆ. ರಾಮಾಚಾರಿ ಜೈ ಶಂಕರ್ ಗೆ ಕೈಮುಗಿದು ಅಲ್ಲಿಂದ ತನ್ನ ಮನೆಗೆ ಹೊರಟಿದ್ದಾನೆ.
ಮನೆಗೆ ಬಂದಿರುವ ರಾಮಾಚಾರಿ ತಂದೆಯನ್ನ ನೋಡಿ ತುಂಬಾ ಖುಷಿ ಪಟ್ಟಿದ್ದಾನೆ. ಮಗನಿಗೆ ಸ್ವಲ್ಪ ಬುದ್ಧಿಯನ್ನು ಹೇಳಿದ್ದಾರೆ. ದೀಪಾನೆ ಈ ಮನೆಯ ಸೊಸೆ ನನ್ನ ಮಗ ನನಗೆ ಕೊಟ್ಟಿರುವ ಮಾತನ್ನ ಮೀರೋದಿಲ್ಲ ಎಂದು ರಾಮಾಚಾರಿ ಬಳಿ ಹೇಳಿದ್ದಾರೆ. ರಾಮಾಚಾರಿ ಚಾರುಗೆ ಕೊಟ್ಟಿರುವ ಮಾತನ್ನು ನೆನೆಸಿಕೊಂಡು ಬೇಸರ ಮಾಡಿಕೊಳ್ಳುತ್ತಿದ್ದಾನೆ. ರಾಮಾಚಾರಿ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಂತಿದ್ದಾನೆ.


Click it and Unblock the Notifications











