Ramachari serial: ಚಾರು ಜಾತಕ ಸರಿ ಹೊಂದುತ್ತದೆ ಎಂದ ರಾಮಾಚಾರಿ

By ಶೃತಿ ಹರೀಶ್ ಗೌಡ

ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಜಾತಕವನ್ನು ನೋಡಲು ರಾಮಾಚಾರಿ ಮನೆಗೆ ಬಂದಿದ್ದಾನೆ. ಇದು ಮಾನ್ಯತಾಗೆ ಸ್ವಲ್ಪವೂ ಇಷ್ಟ ಇಲ್ಲ. ಜೈ ಶಂಕರ್ ಒತ್ತಡಕ್ಕೆ ಮಣಿದು ಮಾನ್ಯತಾ ಸುಮ್ಮನೆ ಕುಳಿತಿದ್ದಾಳೆ.

ರಾಮಾಚಾರಿ ಮನೆಯಲ್ಲಿ ಬಂದು ಕುಳಿತುಕೊಂಡಿದ್ದಾನೆ. ಆದ್ಯಾಗೆ ಜೈ ಶಂಕರ್ ಜಾತಕವನ್ನು ರಾಮಾಚಾರಿಯ ಬಳಿ ತಂದು ಕೊಡಲು ಹೇಳಿದ್ದಾರೆ. ರಾಮಾಚಾರಿಗೆ ಜೈ ಶಂಕರ್ ಮರ್ಯಾದೆ ಕೊಟ್ಟು ಮಾತನಾಡಿಸುತ್ತಿದ್ದಾರೆ. ಇದಕ್ಕೆ ರಾಮಾಚಾರಿ ಬೇಡ ಸರ್ ಈ ರೀತಿಯೆಲ್ಲ ಮರ್ಯಾದೆ ಕೊಡುವುದು ಚೆನ್ನಾಗಿ ಇರೋದಿಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಈಗ ನೀನು ನಾರಾಯಣ ಆಚಾರ್ಯರ ಸ್ಥಾನದಲ್ಲಿ ಬಂದು ನಮಗೆ ಜಾತಕವನ್ನು ನೋಡುತ್ತಿದ್ದೀಯ ಅದಕ್ಕಾಗಿ ಅವರಿಗೆ ಕೊಡುವ ಮರ್ಯಾದೆಯನ್ನು ನಿನಗೂ ಸಹ ಕೊಡುತ್ತಿದ್ದೇವೆ ಎಂದು ಜಯಶಂಕರ್ ಹೇಳಿದ್ದಾರೆ.

Colors Kannada Ramachari Written Update on February 28th episode

ತುಂಬಾ ಡೀಪಾಗಿ ರಾಮಾಚಾರಿ ಜಾತಕವನ್ನ ಸ್ಟಡಿ ಮಾಡುತ್ತಿದ್ದಾನೆ. ಈ ಕಡೆ ಮಾನ್ಯತಾ ನೀನೇನಾದರೂ ಜಾತಕ ಸೆಟ್ ಆಗುವುದಿಲ್ಲ ಎಂದು ಹೇಳಿದರೆ ನಾನು ನಿನ್ನ ಉಸಿರನ್ನೇ ನಿಲ್ಲಿಸಿ ಬಿಡುತ್ತೇನೆ ಎಂದು ಮನಸ್ಸಿನೊಳಗೆ ಅಂದುಕೊಳ್ಳುತ್ತಿದ್ದಾಳೆ. ಚಾರು ಮಾತ್ರ ಅದೇನು ರಾಮಾಚಾರಿ ಇಷ್ಟೊಂದು ಡೀಪಾಗಿ ಸ್ಟಡಿ ಮಾಡುತ್ತಿದ್ದೀಯ ಜಾತಕ ಮ್ಯಾಚ್ ಆಗುವುದಿಲ್ಲ ಎಂದು ಹೇಳಲು ಯಾಕೆ ಇಷ್ಟು ಟೈಮ್ ತೆಗೆದುಕೊಳ್ಳುತ್ತಿದ್ದೀಯ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದಾಳೆ.

ರಾಮಾಚಾರಿ ಜಾತಕ ತುಂಬಾ ಚೆನ್ನಾಗಿ ಹೊಂದಿ ಬರುತ್ತಿದೆ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ಚಾರುಲತಾಗೆ ತುಂಬಾನೇ ಶಾಕ್ ಆಗಿದೆ. ರಾಮಾಚಾರಿ ಹೀಗೆ ಮಾಡಿಬಿಟ್ಟ ಎಂದುಕೊಂಡಿದ್ದಾಳೆ. ಆದರೆ ಮಾನ್ಯತಾಗೆ ಮಾತ್ರ ತುಂಬಾ ಖುಷಿಯನ್ನ ತಂದು ಕೊಟ್ಟಿದೆ. ಬಚಾವಾದೆ ನೀನು ಮ್ಯಾಚ್ ಆಗುತ್ತಿದೆ ಎಂದು ಹೇಳಿ ನಿನ್ನ ಉಸಿರನ್ನು ಕಾಪಾಡಿಕೊಂಡು ಬಿಟ್ಟೆ ಎಂದು ಮನಸ್ಸಿನಲ್ಲಿ ಮಾನ್ಯತಾ ಅಂದುಕೊಳ್ಳುತ್ತಿದ್ದಾಳೆ. ಈ ಕಡೆ ಅಳಿಯನ ಜಾತಕ ಮ್ಯಾಚ್ ಆಗುತ್ತದೆ ಎಂಬುದನ್ನು ಕೇಳಿದ ಜೈ ಶಂಕರ್ ಗೂ ಕೂಡ ತುಂಬಾ ಖುಷಿಯಾಗಿದೆ. ಈ ವಿಷಯವನ್ನು ಪ್ರಕಾಶ್ ಬಾನೇರಿ ಮನೆಯವರಿಗೆ ತಿಳಿಸಿದ್ದಾರೆ.‌

ರಾಮಾಚಾರಿ ಜಾತಕವನ್ನು ನೋಡಿ ಕೊಟ್ಟು ಮನೆಯಿಂದ ಹೊರಟಿದ್ದಾನೆ. ಈ ವೇಳೆ ಮನೆಯ ಒಳಗಿಂದ ಬಂದ ಚಾರುಲತಾ ರಾಮಚಾರಿಯನ್ನು ಜೋರಾಗಿ ಕೂಗಿದ್ದಾಳೆ. ಸ್ಕೂಟರ್‌ನ್ನು ನಿಲ್ಲಿಸಿ ಬಂದ ರಾಮಾಚಾರಿ ಚಾರು ಕೈಯನ್ನು ಹಿಡಿದುಕೊಂಡಿದ್ದಾನೆ. ಯಾಕೆ ಈ ರೀತಿ ಮಾಡಿದೆ ಎಂದು ಚಾರು ರಾಮಾಚಾರಿಯನ್ನ ಕೇಳುತ್ತಿದ್ದಾಳೆ. ರಾಮಾಚಾರಿ ಇಬ್ಬರ ಜಾತಕ ತುಂಬಾ ಚೆನ್ನಾಗಿ ಹೊಂದಾಣಿಕೆಯಾಗುತ್ತಿತ್ತು. ನನಗೆ ಸುಳ್ಳು ಹೇಳಲು ಆಗಲಿಲ್ಲ ಎಂದು ಹೇಳಿದ್ದಾನೆ. ವೃತ್ತಿ ಧರ್ಮದ ಬಗ್ಗೆ ಸುಳ್ಳು ಹೇಳಿ ನನಗೆ ಅಭ್ಯಾಸ ಇಲ್ಲ ಎಂದು ಚಾರುಗೆ ಹೇಳಿದ್ದಾನೆ.

Colors Kannada Ramachari Written Update on February 28th episode

ಈ ಕಡೆ ಚಾರು ತನ್ನ ತಾಳಿಯನ್ನ ತೋರಿಸಿ ನಿನ್ನ ಹೆಂಡತಿಯನ್ನು ಬೇರೆಯವರಿಗೆ ಮದುವೆ ಮಾಡುವುದು ಯಾವ ಧರ್ಮ ಎಂದು ಪ್ರಶ್ನೆಯನ್ನು ಮಾಡಿದ್ದಾಳೆ. ರಾಮಾಚಾರಿ ನಮಗೆ ಇದು ದೇವರೇ ಇಟ್ಟಿರುವ ಅಗ್ನಿಪರೀಕ್ಷೆಯಾಗಿದೆ, ನಮ್ಮಿಬ್ಬರ ತಾಳಿಯ ಸಂಬಂಧ ಗಟ್ಟಿಯಾಗಿ ಇದ್ದರೆ ಅದು ಎಂದೆಂದಿಗೂ ನೆರವೇರುತ್ತದೆ ಎಂದು ಹೇಳುತ್ತಿದ್ದಾನೆ. ಇದು ದೇವರೇ ನಮಗೆ ಕೊಟ್ಟಿರುವ ಪರೀಕ್ಷೆಯಾಗಿದ್ದು ಇದರಲ್ಲಿ ನಾನು ಪಾಸು ಮಾಡುತ್ತೇನೆ ಎಂಬುವುದೇ ದೊಡ್ಡ ಸವಾಲಾಗಿದೆ ಎಂದು ಚಾರುಗೆ ರಾಮಾಚಾರಿ ಹೇಳಿದ್ದಾನೆ.

ಈ ಕಡೆ ರಾಮಾಚಾರಿ ಚಾರು ಮನೆಗೆ ಹೋಗಿರುವುದಕ್ಕೆ ದೀಪಾಗೆ ತುಂಬಾ ಕೋಪ ಬಂದಿದೆ. ನಾರಾಯಣ ಚಾರ್ ಮುಂದೆ ತಂದೆ ಮಗಳು ನಿಂತುಕೊಂಡು ನೀವೇ ಹೀಗೆ ಮಾಡುವುದು ಸರಿ ಎಂದು ಹೇಳಿದ್ದಾರೆ. ಇದಕ್ಕೆ ನಾರಾಯಣಚಾರ್ಯರು ನನ್ನ ಮಗನ ಮೇಲೆ ನನಗೆ ನಂಬಿಕೆ ಇದೆ ನಿಮಗೆ ಇಲ್ಲದಿದ್ದರೆ ಏನು ಮಾಡಲಿ ಎಂದು ದೀಪಾಗೆ ಬೈದಿದ್ದಾರೆ.

More from Filmibeat

English summary
Colors Kannada serial Ramachari Written Update on February 28th episode. Here is the details about ramachari telling truth about charu and baneri jataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X