Ramachari Serial: ಚಾರುಲತಾಗೆ ಸತ್ಯ ಹೇಳಿದ ರಾಮಾಚಾರಿ
ರಾಮಾಚಾರಿ ಮನೆಯವರು ಚಾರು ಉಳಿಸಿರುವ ಪ್ರಾಣ ನಮಗೆ ಬೇಕಾಗಿಲ್ಲ ನಾವೇ ಬೇಕಾದರೆ ತಗೆದುಕೊಳ್ಳುತ್ತೇವೆ ಎಂದು ಹೇಳಿ ಮನೆಯ ಒಳಗೆ ಹೋಗುತ್ತಾರೆ. ಇದರಿಂದ ರಾಮಾಚಾರಿ ಕುಸಿದು ಕೆಳಗೆ ಬಿದ್ದು ಚಾರು ಮಾಡಿದ ಸಹಾಯವನ್ನು ನೆನಸಿಕೊಳ್ಳುತ್ತಾನೆ.
ಈ ಕಡೆ ಮಾನ್ಯತಾ ಶರ್ಮಿಳಾ ಮತ್ತು ಆಕೆಯ ಮಗಳನ್ನು ಮನೆಯಿಂದ ಹೊರಗೆ ಕಳಿಸಲು ಪ್ಲಾನ್ ಮಾಡಿದ್ದಾಳೆ. ಪೂಜೆಯ ಬುಟ್ಟಿಯನ್ನು ಹಿಡಿದುಕೊಂಡು ಶರ್ಮಿಳಾ ಮುಂದೆ ಬಂದ ಮಾನ್ಯತಾ ಯಾವಾಗಲೂ ಈ ಮನೆಗೆ ಒಳ್ಳೆಯದಾಗಲಿ ಎಂದು ಅನ್ನುತ್ತಿಯಲ್ಲ ನನ್ನ ಮಗಳಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿಸಿಕೊಂಡು ಬಾ ಎಂದು ಹೇಳಿದ್ದಾಳೆ. ಇದಕ್ಕೆ ಶರ್ಮಿಳಾ ನಾನು ಯಾವಾಗಲೂ ಅದನ್ನೇ ಕೇಳುವುದು ದೇವರ ಬಳಿ ನಿಮಗೆ ಒಳ್ಳೆಯ ಬುದ್ಧಿ ಕೊಡಲಿ ಈ ಮನೆಗೆ ಒಳ್ಳೆಯದಾಗಲಿ ಎಂದು ಹೇಳಿ ಜೈಶಂಕರಿಗೆ ಹೇಳಿ ಮನೆಯಿಂದ ದೇವಸ್ಥಾನಕ್ಕೆ ಹೊರಟಿದ್ದಾರೆ.

ಶೈಲೂ ಎಂದುಕೊಂಡು ನಿಜ ಹೇಳಿಬಿಟ್ಟ ರಾಮಾಚಾರಿ
ಈ ಕಡೆ ಶೈಲೂ ರೂಪದಲ್ಲಿ ಇರುವ ಚಾರುಲತಾ ಬಳಿ ರಾಮಾಚಾರಿ ಮಾತನಾಡುತ್ತಾ ಇದ್ದಾನೆ. ಈ ವೇಳೆ ಮಾನ್ಯತಾ ಮಾಡಿದ ರಂಪದ ಬಗ್ಗೆ ಮಾತನಾಡುತ್ತಾ ನಮ್ಮ ಪಾಲಿನ ದೇವರಾಗಿ ಬಂದು ನಮ್ಮ ಕುಟುಂಬವನ್ನು ಚಾರು ಮೇಡಂ ಉಳಿಸಿದರು ಎಂದು ರಾಮಾಚಾರಿ ಹೇಳಿದ್ದಾನೆ. ಇದನ್ನು ಕೇಳಿಸಿಕೊಳ್ಳುತ್ತಿರುವ ಚಾರುಗೆ ಬಹಳ ಆಶ್ಚರ್ಯವಾಗಿದೆ. ರಾಮಾಚಾರಿಗೆ ನೀವು ಅವರ ಪಾಲಿಗೆ ದೇವರಾಗಿ ಎಂದು ಶೈಲೂ ಹೇಳಿದ್ದಾಳೆ. ಅದಕ್ಕೆ ರಾಮಾಚಾರಿ ನನಗೆ ಇವಾಗ ಇರುವ ಕಷ್ಟಗಳನ್ನು ಪರಿಹಾರ ಮಾಡಿಕೊಂಡರೆ ಸಾಕು ಅದುಬಿಟ್ಟು ಮತ್ತೊಂದು ಸಮಸ್ಯೆ ಸೃಷ್ಟಿ ಮಾಡಲಾರೆ ಎನ್ನುತ್ತಾನೆ.

ಚಾರುಗೆ ಸತ್ಯ ಹೇಳಿಬಿಟ್ಟ ರಾಮಾಚಾರಿ
ಇನ್ನೂ ಹೀಗೆ ಮಾತನಾಡುತ್ತಾ ನಾನು ಮಹಾ ಅಪರಾಧ ಮಾಡಿಬಿಟ್ಟೆ ಚಾರು ಮೇಡಂಗೆ ಶಾಶ್ವತವಾಗಿ ಕಣ್ಣು ಬರೋದಿಲ್ಲ ಅವರನ್ನು ನಾನು ಕತ್ತಲೆಗೆ ತಳ್ಳಿಬಿಟ್ಟೆ ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ಶೈಲೂ ರೂಪದಲ್ಲಿರುವ ಚಾರು ಕೆಳಗೆ ಕುಸಿದು ಬಿದ್ದಿದ್ದಾಳೆ ಅಯ್ಯೋ ಎಂದು ಗೋಳಾಡುತ್ತಿದ್ದಾಳೆ. ರಾಮಾಚಾರಿ ಪದೇ-ಪದೇ ಫೋನ್ ಮಾಡುತ್ತಿದ್ದರು ಸಹ ತಗೆಯದೇ ಅಳುತ್ತಿದ್ದಾಳೆ. ನಾನು ವಿಹಾನ್ ಬಳಿ ನಂಗೆ ಪರ್ಮನೆಂಟ್ ಆಗಿ ಕಣ್ಣು ಬರೋದಿಲ್ಲ ಎಂದು ಸುಳ್ಳು ಹೇಳಿ ನಿನ್ನ ಮದುಗೆ ಆಗಬೇಕು ಎಂದು ಕೊಂಡಿದೆ ಅದು ಈ ಜನ್ಮದಲ್ಲಿ ಸಾಧ್ಯವಾಗೋದಿಲ್ಲ ಎಂದು ಗೋಳಾಡುತ್ತಿದ್ದಾಳೆ. ನಾನು ಹೇಳಿದ ಸುಳ್ಳೇ ನನ್ನ ಪರ್ಮನೆಂಟ್ ಆಗಿ ಕಣ್ಣು ಹೋಗಲು ಕಾರಣವಾಯಿತು ಎಂದು ಅಳುತ್ತಾ ಇದ್ದಾಳೆ.

ವಿಹಾನ್ ಜೊತೆಗೆ ಎಂಗೇಜ್ಮೆಂಟ್ ಮಾಡಲು ಮಾನ್ಯತಾ ತಯಾರಿ
ವಿಹಾನ್ ಜೊತೆಗೆ ಎಂಗೇಜ್ಮೆಂಟ್ ಮಾಡಲು ಮಾನ್ಯತಾ ತಯಾರಿ ಮಾಡುತ್ತಿದ್ದಾಳೆ. ಇದು ಚಾರುಗೆ ಮುಜುಗರವನ್ನು ತರುತ್ತಿದೆ. ವಿಹಾನ್ ಜೊತೆಗೆ ಸುಳ್ಳು ಹೇಳಿ ಚಾರುಲತಾ ಎಂಗೇಜ್ಮೆಂಟ್ ಮಾಡಲಾಗುತ್ತಿದೆ. ಆದರೆ ಇದು ಜೈ ಶಂಕರ್ ಗೆ ಸ್ವಲ್ಪವೂ ಕೂಡ ಇಷ್ಟ ಇಲ್ಲ. ಸತ್ಯವನ್ನು ಹೇಳಿ ಎಂಗೇಜ್ಮೆಂಟ್ ಮಾಡು ಎಂದು ಜೈಶಂಕರ್ ಮಾನ್ಯತಾಗೆ ಸಲಹೆ ನೀಡುತ್ತಿದ್ದಾರೆ. ಆದರೆ ಮಾನ್ಯತಾ ಇದಕ್ಕೆ ಒಪ್ಪುತ್ತಿಲ್ಲ ಇನ್ನೂ 15 ದಿನಗಳಾದ ನಂತರ ನಾನು ನನ್ನ ಅಳಿಯನಿಗೆ ಸತ್ಯವನ್ನು ಹೇಳುತ್ತೇನೆ ಎಂದು ಹೇಳಿದ್ದಾಳೆ.

ಒಡೆದು ಹೋಗಿದೆ ಚಾರು ಮನಸ್ಸು
ಸತ್ಯವನ್ನು ತಿಳಿದುಕೊಂಡ ಚಾರುಲತಾಳ ಮನಸ್ಸು ಒಡೆದು ಹೋಗಿದೆ ರಾಮಾಚಾರಿಯ ಜೊತೆ ಬಾಳಬೇಕು ಎಂದು ಕನಸು ಕಟ್ಟಿಕೊಂಡಿದ್ದು ನುಚ್ಚುನೂರಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾಳೆ. ನಿನ್ನ ಬಾಳ ಸಂಗಾತಿಯಾಗಿ ಬಂದು ನಿನ್ನ ಬಾಳಿನಲ್ಲಿ ಬೆಳಕು ತರಬೇಕೆಂದು ಕೊಂಡಿದ್ದೆ ಆದರೆ ನನ್ನ ಬಾಳೇ ಕತ್ತಲೆಗೆ ಹೋಗಿದೆ ಎಂದು ಚಾರು ಅಳುತ್ತಿದ್ದಾಳೆ. ವಿಹಾನ್ ಜೊತೆಗೆನಾ ಎಂಗೇಜ್ಮೆಂಟ್ ಮುರಿತುಕೊಳ್ಳಲು ಚಾರು ಯಾವ ರೀತಿ ಪ್ಲಾನ್ ಮಾಡುತ್ತಾಳೆ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











