Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!

By ಶೃತಿ ಹರೀಶ್ ಗೌಡ

ಸಾನ್ವಿ, ಚಾರುಲತಾ ಅನ್ನು ರೆಡಿ ಮಾಡುತ್ತಾ ಇದ್ದಾಳೆ. ಈ ನಡುವೆ ಚಾರುಲತಾ ಬಳಿ ನಿಜವಾಗಿಯೂ ನೀನು ವಿಹಾನ್ ಮದುವೆಯಾಗಲು ಒಪ್ಪಿಕೊಂಡು ನಿನ್ನ ಕನಸುಗಳನ್ನೆಲ್ಲ ನುಚ್ಚುನೂರು ಮಾಡಿಕೊಂಡೆ ಎಂದು ಹೇಳುತ್ತಿದ್ದಾಳೆ. ಆದರೆ ಚಾರುಲತಾ, ಸಾನ್ವಿಗೆ ನಾನು ನನ್ನ ಕಣ್ಣು ಕಳೆದುಕೊಂಡು ಸರ್ವಸ್ವವವನ್ನು ಕಳೆದುಕೊಂಡಿದ್ದೇನೆ ನಾನು ರಾಮಾಚಾರಿಗೆ ತಕ್ಕನಾದ ಹೆಂಡತಿಯಲ್ಲ ಆದ್ದರಿಂದ ನನ್ನ ನಿರ್ಧಾರವನ್ನು ನಾನು ಬದಲಿಸಿಕೊಂಡಿದ್ದೇನೆ ಎಂದು ಹೇಳಿದ್ದಾಳೆ.

ಇನ್ನು 15 ದಿನಗಳಲ್ಲಿ ಕಣ್ಣು ಬರುತ್ತದೆ ಎಂದು ಹೇಳಿದ್ದಕ್ಕೆ ಚಾರು ನನಗೆ ಪರ್ಮನೆಂಟಾಗಿ ಕಣ್ಣು ಬರುವುದಿಲ್ಲ ಎಂಬ ಸತ್ಯ ನನಗೆ ತಿಳಿದಿದೆ ಎಂದು ಸಾನ್ವಿಗೆ ಶಾಕ್ ಕೊಟ್ಟಿದ್ದಾಳೆ. ಚಾರುಲತಾ ಇರುವ ಜಾಗಕ್ಕೆ ಬಂದ ಮಾನ್ಯತಾ ಏನಕ್ಕೆ ಸಾನ್ವಿ ಚಾರು ಅಳುತ್ತಿದ್ದಾಳೆ ಎಂದು ಕೇಳಿದ್ದಾಳೆ. ಅಮ್ಮ ಇದು ಸಂತೋಷದ ಕಣ್ಣೀರು ನಾನು ವಿಹಾನ್ ಅನ್ನು ಮದುವೆಯಾಗಲು ಒಪ್ಪಿದ್ದಕ್ಕೆ ಸಂತೋಷದಿಂದ ಕಣ್ಣೀರು ಹಾಕುತ್ತಿದ್ದೇನೆ ಎಂದು ಚಾರು ತಿಳಿಸಿದ್ದಾಳೆ.

ವಿಹಾನ್‌ಗೆ ಮೊದಲು ಸತ್ಯವನ್ನು ತಿಳಿಸು ಅವನ ಮನಸಿನಲ್ಲಿ ಏನು ಇದೆ ಎಂಬುದನ್ನು ತಿಳಿದುಕೊಂಡು ಎಂಗೇಜ್ಮೆಂಟ್ ಮಾಡಿಕೊಂಡರೆ ಸರಿಯಾಗುತ್ತದೆ ಎಂದು ಮಾನ್ಯತಾ ಬಳಿ ಚಾರುಲತಾ ಹೇಳಿದ್ದಾಳೆ. ಆದರೆ ಮಾನ್ಯತಾ ಇನ್ನು ಸ್ವಲ್ಪ ದಿನ ಬಿಟ್ಟುಕೊಂಡು ನಾನು ಸತ್ಯವನ್ನ ಹೇಳುತ್ತೇನೆ ಅಲ್ಲಿಯ ತನಕ ನೀನು ಏನನ್ನು ಹೇಳದೆ ಸುಮ್ಮನೆ ಒಳ್ಳೆಯದಕ್ಕೆ ಎಂದು ಮಾನ್ಯತಾ ಚಾರುಲತಾಳ ಬಾಯಿ ಮುಚ್ಚಿಸಿದ್ದಾಳೆ.

ರಾಮಾಚಾರಿಗೆ ತಲುಪಿತು ಚಾರು ಮದುವೆ ಸುದ್ದಿ

ರಾಮಾಚಾರಿಗೆ ತಲುಪಿತು ಚಾರು ಮದುವೆ ಸುದ್ದಿ

ಈ ಕಡೆ ರಾಮಾಚಾರಿಗೆ ಬಬ್ಲು ಹಾಗೂ ಸ್ವಾಮಿ ಇಬ್ಬರು ಕರೆ ಮಾಡಿ ಚಾರುಲತಾ ಮದುವೆಯ ಬಗ್ಗೆ ಪ್ರಸ್ತಾಪವನ್ನ ಮಾಡಿದ್ದಾರೆ ನಾಳೆ ಚಾರುಲತಾ ಎಂಗೇಜ್ಮೆಂಟ್ ನಡೆಯಲಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳದ ರಾಮಾಚಾರಿ ಇದು ನನಗೆ ಸಂಬಂಧ ಪಡೆದ ವಿಷಯ ಇನ್ಮುಂದೆ ಈ ವಿಚಾರವಾಗಿ ನನಗೆ ಫೋನ್ ಮಾಡಬೇಡಿ ಎಂದು ನಿಷ್ಠುರವಾಗಿ ಹೇಳಿ ಫೋನ್ ಕಟ್ ಮಾಡಿದ್ದಾನೆ. ರಾಮಾಚಾರಿ ನಿಷ್ಟುರದ ಮಾತುಗಳು ಬಬ್ಲು ಹಾಗೂ ಸಾನ್ವಿಗೆ ಬೇಸರ ಮಾಡಿದರೆ ರಾಮಾಚಾರಿಯ ಮನೆಯವರಿಗೆ ತುಂಬಾ ಸಂತಸ ಉಂಟು ಮಾಡಿದೆ.

ತಲೆ ಕೆಡೆಸಿಕೊಳ್ಳದ ರಾಮಾಚಾರಿ

ತಲೆ ಕೆಡೆಸಿಕೊಳ್ಳದ ರಾಮಾಚಾರಿ

ಚಾರು ಪರ್ಮೆಂಟಾಗಿ ನಿನ್ನನ್ನು ಮನಸ್ಸಿನಿಂದ ಕಿತ್ತು ಹಾಕುವ ಮಾತು ಆಡುತ್ತಿದ್ದಾಳೆ ಎಂದು ಸಾನ್ವಿ ಹೇಳಿದರೆ ಒಳ್ಳೆಯದೇ ಆಯಿತು ಎಂದು ರಾಮಾಚಾರಿ ಹೇಳಿದ್ದಾನೆ. ನಾನು ನಮ್ಮ ಮನೆಯವರಿಗಾಗಿ ಮಾಡಿರುವ ಹಾಗೂ ನೀಡಿರುವ ಕಷ್ಟಗಳೇ ಹೆಚ್ಚಾಗಿವೆ ಇನ್ಮುಂದೆ ನಾನು ನನ್ನ ಫ್ಯಾಮಿಲಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ನೀವು ಚಾರು ವಿಷಯ ಇಟ್ಟುಕೊಂಡು ನನಗೆ ಫೋನ್ ಮಾಡಬೇಡಿ ಎಂದು ರಾಮಾಚಾರಿ ಸಾನ್ವಿಗೆ ಹೇಳಿದ್ದಾನೆ.

ಮನೆಗೆ ಬಂದ ವಿಹಾನ್‌ಗೆ ಸುಳ್ಳು ಹೇಳಿದ ಮಾನ್ಯತಾ

ಮನೆಗೆ ಬಂದ ವಿಹಾನ್‌ಗೆ ಸುಳ್ಳು ಹೇಳಿದ ಮಾನ್ಯತಾ

ಮನೆಗೆ ಬಂದ ವಿಹಾನ್‌ಗೆ ಮಾನ್ಯತಾ ಒಂದು ಸಣ್ಣ ಸುಳ್ಳನ್ನ ಹೇಳಿದ್ದಾಳೆ. ವಿಹಾನ್ ಗೆ ಹೋಗಿದ್ದಾಗ ಒಂದು ಸಣ್ಣ ಆಕ್ಸಿಡೆಂಟ್ ಆಗಿದೆ ಎಂದು ಮಾನ್ಯತಾ ಹೇಳಿದ್ದಾಳೆ. ಕೆಮಿಕಲ್ ಬಿದ್ದು ಚಾರು ಕಣ್ಣಿಗೆ ಸ್ವಲ್ಪ ಮಂಜಾಗಿದೆ ಎಂದು ಮಾನ್ಯತಾ ಸುಳ್ಳು ಹೇಳಿದ್ದಾಳೆ ಇನ್ನೂ 15 ದಿನಗಳಲ್ಲಿ ಕಣ್ಣು ಸರಿಯಾಗಿ ಕಾಣಿಸಲಿದೆ ಎಂದು ಡಾಕ್ಟರ್ ಹೇಳಿದ್ದಾಗಿ ಸುಳ್ಳು ಹೇಳಿದ್ದು ಜೈ ಶಂಕರ್‌ಗೆ ಯಾಕೋ ಸರಿಯಾಗಿ ಕಾಣಿಸಲಿಲ್ಲ. ಏನು ಮಾಡುತ್ತಿರುವುದು ಸರಿಯಲ್ಲ ಮಾನ್ಯತಾ ಎಂದು ಹೆಂಡತಿಗೆ ಜೈ ಶಂಕರ್ ಹೇಳಿದ್ದಾನೆ.

ವಿಹಾನ್‌ಗೆ ಸತ್ಯ ಹೇಳಿದ ಚಾರು

ವಿಹಾನ್‌ಗೆ ಸತ್ಯ ಹೇಳಿದ ಚಾರು

ವಿಹಾನ್ ಚಾರುಲತಾ ಬಳಿ ತಾನು ಪ್ರೀತಿಸುತ್ತಿರುವ ವಿಷಯವನ್ನು ಹೇಳಿ ಮದುವೆ ಮುರಿದುಕೊಳ್ಳಲು ಬಂದಿದ್ದಾನೆ. ಆದರೆ ಚಾರುಲತಾ ತನಗೆ ಸಂಪೂರ್ಣವಾಗಿ ಕಣ್ಣು ಕಾಣದ ವಿಷಯವನ್ನು ಹೇಳಿ ವಿಹಾನ್‌ಗೆ ಶಾಕ್ ಕೊಟ್ಟಿದ್ದಾಳೆ. ವಿಹಾನ್ ಚಾರುಲತಾ ಹೇಳಿದ್ದ ಮಾತನ್ನ ಕೇಳಿ ಅತ್ತೆ ಹೇಳಿದ ಸುಳ್ಳು ಕಣ್ಮುಂದೆ ಬಂದಿದೆ. ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದೇ ಕುತೂಹಲವಾಗಿದೆ.

More from Filmibeat

English summary
Colors Kannada serial Ramachari Written Update on February 3rd episode. Here is the details about charulatha requests manyata to inform vihan about her blindness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X