Ramachari Serial: ಕೊನೆಗೂ ಚಾರು ಮದುವೆ ಕ್ಯಾನ್ಸಲ್!

By ಶೃತಿ ಹರೀಶ್ ಗೌಡ

ವಿಹಾನ್ ಅತ್ತೆ ಬಳಿ ತಾನು ಪ್ರೀತಿ ಮಾಡುತ್ತಿರುವ ವಿಷಯವನ್ನು ಹೇಳಿ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಲು ಬಂದ ವಿಹಾನ್‌ಗೆ ಚಾರು ಹೇಳಿದ ಮಾತು ಕೇಳಿ ಹೇಗೋ ಎರಡು ಕುಟುಂಬದವರಿಗೂ ನೋವಾಗದಂತೆ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಲು ದಾರಿಯಾಯಿತು ಎಂದು ಚಾರುಲತಾ ಮಾತನ್ನು ಕೇಳಿಸಿಕೊಂಡು ಸುಮ್ಮನೆ ಇದ್ದಾನೆ. ಈ ಕಡೆ ಚಾರುಲತಾ ವಿಹಾನ್ ವಿಹಾನ್ ಎಂದು ಕರೆದಾಗ ಅವನು ಹೇಳು ಚಾರು ಎಂದಿದ್ದಾನೆ.

ಚಾರು ನನಗೆ ಕಣ್ಣು ಕಾಣೋದಿಲ್ಲ ನನ್ನ ಕಟ್ಟಿಕೊಂಡು ನೀನು ಏನು ಮಾಡುತ್ತೀಯ ಎಮೋಷನಲಿ‌ ಬ್ಲಾಕ್ ಮೇಲ್ ಆಗಿ ದಯವಿಟ್ಟು ನಿನ್ನ ನಿರ್ಧಾರವನ್ನು ಬದಲಿಸಿಕೊಳ್ಳಬೇಡ ಎಂದು ಚಾರು ವಿಹಾನ್ ಬಳಿ ಹೇಳಿದ್ದಾಳೆ. ನನಗಿಂತ ನಿನಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ ಎಂದು ಹೇಳುತ್ತಾಳೆ‌. ಇದನೆಲ್ಲಾ ಕೇಳಿದ ವಿಹಾನ್‌ಗೆ ಚಾರುಗೆ ಟೇಕ್ ಕೇರ್ ಹೇಳಿ ಬಂದಿದ್ದಾನೆ.

ಚಾರುಲತಾ ಮಾತು ಕೇಳಿದ ವಿಹಾನ್‌ಗೆ ಅತ್ತೆಯ ಮೇಲೆ ತುಂಬಾ ಕೋಪ‌ ಬಂದಿದೆ. ಮಾನ್ಯತಾ ಬಳಿ ಬಂದ ವಿಹಾನ್ ನಿಮ್ಮ ಸ್ವಾರ್ಥಕ್ಕಾಗಿ ಯಾಕೆ ಸುಳ್ಳು ಹೇಳಿದ್ರಿ ಚಾರುಲತಾಗೆ ಕಣ್ಣು ಕಾಣೋದಿಲ್ಲ ಎಂಬ ಸತ್ಯವನ್ನು ಮುಚ್ಚಿಟ್ಟು ನನಗೆ ಮದುವೆ ಮಾಡೋಕೆ ನೋಡಿದ್ದು ಸರಿನಾ ಎಂದು ಅತ್ತೆ ಬಳಿ ಕೇಳಿದ್ದಾನೆ. ಯಾವುದೇ ಕಾರಣಕ್ಕೂ ನಾನು ಚಾರುಲತಾಳನ್ನು ಮದುವೆಯಾಗೋದ್ದಕ್ಕೆ ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮಾಡಿದ ರೀತಿ ಮಾತಾಡಿ ಹೋಗಿದ್ದಾನೆ ಇದೆಲ್ಲವನ್ನೂ ಚಾರುಲತಾ ಸಹ ಕೇಳಿಸಿಕೊಂಡಿದ್ದಾಳೆ.

ವಿಹಾನ್ ಮಾತು ಕೇಳಿ ಕುಗ್ಗಿ ಹೋದ ಮಾನ್ಯತಾ

ವಿಹಾನ್ ಮಾತು ಕೇಳಿ ಕುಗ್ಗಿ ಹೋದ ಮಾನ್ಯತಾ

ವಿಹಾನ್ ಹೇಳಿದ ಮಾತು ನೆನಪಿಸಿಕೊಂಡು ಮಾನ್ಯತಾ ಕುಗ್ಗಿ‌ ಹೋಗಿದ್ದಾಳೆ. ಮಾನ್ಯತಾ ಬಳಿ ಬಂದ ಜೈಶಂಕರ್ ಸಹ ಸಮಾಧಾನ ಮಾಡಲು ನೋಡುತ್ತಿದ್ದಾರೆ ಆದರೆ ಮಾನ್ಯತಾ ಮಾತ್ರ ವಿಹಾನ್ ಎಷ್ಟು ನಿಷ್ಠುರವಾಗಿ ಮಾತನಾಡಿದ ಎಂದು ನೆನಪಿಸಿಕೊಳ್ಳುತ್ತಿದ್ದಾಳೆ. ಪ್ರತಿಯೊಬ್ಬ ಗಂಡನಿಗೂ ತನ್ನ ಹೆಂಡತಿ ಹೀಗೆ ಇರಬೇಕು ನನ್ನ ಜೊತೆ ಅಲ್ಲಿಗೆ ಬರಬೇಕು ಇಲ್ಲಿಗೆ ಬರಬೇಕು ಎಂಬೆಲ್ಲಾ ಆಸೆ ಇರುತ್ತದೆ ಅಂತಹ ಕನಸು ಇದ್ದು ಅದನ್ನು ಈಡೇರಿಸಿಕೊಳ್ಳದಿದ್ದರೆ ಏನು ಚೆಂದ ಅದನ್ನೇ ವಿಹಾನ್ ಮಾಡಿದ್ದಾನೆ ಎಂದು ಮಾನ್ಯತಾಗಿ ಜೈ ಶಂಕರ್ ತಿಳಿಸಿದ್ದಾರೆ.

ತಲೆ ಮೇಲೆ ಕಲ್ಲು ಹಾಕಿಕೊಂಡೆ ಎಂದ ಮಾನ್ಯತಾ

ತಲೆ ಮೇಲೆ ಕಲ್ಲು ಹಾಕಿಕೊಂಡೆ ಎಂದ ಮಾನ್ಯತಾ

ಈ ಕಡೆ ಚಾರುಲತಾ ರೂಮಿಗೆ ಬಂದ ಮಾನ್ಯತಾ ಮಗಳ ಬಳಿ ಬಂದು ಕುಳಿತಿದ್ದಾಳೆ. ಆಗ ಚಾರು ಅಮ್ಮ ನೀನು ಇಲ್ಲಿಗೆ ಏಕೆ ಬಂದೆ ಎಂದು ನನಗೆ ಗೊತ್ತಿದೆ ಎನ್ನುತ್ತಾಳೆ. ನಿನ್ನ ತಲೆಯ ಮೇಲೆ ನೀನೆ ಕಲ್ಲು ಹಾಕಿಕೊಂಡುಬಿಟ್ಟೆಯಲ್ಲ ಬೇಬಿ ಎಂದು ಮಾನ್ಯತಾ ಚಾರುಗೆ ಕೇಳಿದ್ದಾಳೆ. ಆಗ ಚಾರು ನನಗೆ ಸುಳ್ಳು ಹೇಳಿ ಇನ್ನೊಬ್ಬರ ಬದುಕನ್ನು ಹಾಳು ಮಾಡುವ ಹಕ್ಕಿಲ್ಲ ಅದಕ್ಕಾಗಿ ನಾನು ಸತ್ಯವನ್ನೇ ಹೇಳಿದೆ ಎಂದು ಮಾನ್ಯತಾಗೆ ಹೇಳಿದ್ದಾಳೆ ಇದನ್ನು ಕೇಳಿದ ಮಾನ್ಯತಾ ಕಣ್ಣೀರು ಹಾಕಿದ್ದಾಳೆ.

ಅವಧೂತರ ಬಳಿ ಹೋದ ರಾಮಾಚಾರಿ

ಅವಧೂತರ ಬಳಿ ಹೋದ ರಾಮಾಚಾರಿ

ರಾಮಾಚಾರಿ ಮನೆಗೆ ಮುರಾರಿ ಬಂದು ಅವಧೂತರು ನಮ್ಮ ದೇವಸ್ಥಾನಕ್ಕೆ ಬಂದಿದ್ದಾರೆ ಅವರ ಬಳಿ ಹೋಗೋಣ ಎಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಗುರುಗಳ ಬಳಿ ಹೋದ ರಾಮಾಚಾರಿ ಆಶೀರ್ವಾದ ತಗೆದುಕೊಂಡಿದ್ದಾನೆ. ಗುರುಗಳೇ ನನ್ನ ಗೆಳೆಯ ರಾಮಾಚಾರಿಗೆ ಅನಾಥ ಚಕ್ರದ ಬಗ್ಗೆ ತಿಳಿಸಿ ಎಂದು ಮುರಾರಿ ಹೇಳಿದಾಗ. ಗುರುಗಳು ರಾಮಾಚಾರಿ ಅನಾಥ ಚಕ್ರದ ಬಗ್ಗೆ ತಿಳಿದುಕೊಳ್ಳಲು ಬಂದಿದ್ದಾನೆ ಆದರೆ ಅವನೇ ಚಕ್ರವ್ಯೂಹದ ಒಳಗೆ ಸಿಲುಕಿದ್ದಾನೆ ಸಂಸಾರವೆಂಬ ಚಕ್ರ ಸಾಗದ ಹೊರೆತು ಏನನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅವಧೂತರ ಆಜ್ಞೆ ಪಾಲಿಸುತ್ತಾನಾ ರಾಮಾಚಾರಿ!

ಅವಧೂತರ ಆಜ್ಞೆ ಪಾಲಿಸುತ್ತಾನಾ ರಾಮಾಚಾರಿ!

ಅವಧೂತರು ಆಡುವ ಮಾತುಗಳು ರಾಮಾಚಾರಿಗೆ ಅರ್ಥವಾಗುವುದಿಲ್ಲ. ಏನು ಗುರುಗಳೇ ಬಹಳ ಮಾರ್ಮಿಕವಾಗಿ ಹೇಳುತ್ತಿದ್ದೀರಾ ಎಂದು ಕೇಳಿದ್ದಾನೆ. ಆಗ ಅವಧೂತರು ಚಿಕ್ಕಮಗಳೂರಿನಲ್ಲಿರುವ ಧಾತ್ರಿ ವನಕ್ಕೆ ಹೋಗು ಅಲ್ಲಿ ಬೆಳಕು ಸಿಗಲಿದೆ ಎಂದು ಹೇಳಿ ಋಣಮುಕ್ತವಾಗು ಎಂದು ಅಲ್ಲಿಂದ ಎದ್ದು ಅವಧೂತರು ಎದ್ದು ಹೋಗುತ್ತಾರೆ. ಅನಂತರ ರಾಮಾಚಾರಿಗೆ ಗುರುಗಳ ಮಾತು ಅರ್ಥವಾಗಿದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Colors Kannada serial Ramachari Written Update on February 6thrd episode. Here is the details about charulatha marriage cancelled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X